ಇನ್ಫಿನಿಕ್ಸ್ ನೋಟ್‌ 12 (2023) ಸ್ಮಾರ್ಟ್‌ಫೋನ್‌ ಲಾಂಚ್‌; 50 ಎಂಪಿ ಕ್ಯಾಮೆರಾ ಆಯ್ಕೆ!

|

ಇನ್ಫಿನಿಕ್ಸ್ ಕಂಪೆನಿ ಬಜೆಟ್‌ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದ್ದು, ಆಕರ್ಷಕ ನೋಟವನ್ನು ಒಳಗೊಂಡಿವೆ. ಇದರ ನಡುವೆ ಹಲವು ಫೀಚರ್ಸ್‌ ಇರುವ ಸ್ಮಾರ್ಟ್‌ಫೋನ್ ಹಾಗೂ ಇನ್ನಿತರೆ ಗ್ಯಾಜೆಟ್‌ಗಳು ಗ್ರಾಹಕರಿಗೆ ಮೆಚ್ಚುಗೆ ಆಗಿವೆ. ಇದರ ಜೊತೆಗೆ ಮತ್ತೇ ಅತ್ಯುತ್ತಮ ಸ್ಮಾರ್ಟ್‌ಫೋನ್‌ ಲಾಂಚ್‌ ಮಾಡಿದೆ. ಅದುವೇ ಇನ್ಫಿನಿಕ್ಸ್ ನೋಟ್‌ 12 (Infinix Note 12 2023) ಸ್ಮಾರ್ಟ್‌ಫೋನ್‌. ಇದು 50 ಮೆಗಾಪಿಕ್ಸೆಲ್ ಕ್ಯಾಮೆರಾ ಫೀಚರ್ಸ್‌ ಪಡೆದಿದೆ.

ಸ್ಮಾರ್ಟ್‌ಫೋನ್‌

ಹೌದು, ಸ್ಮಾರ್ಟ್‌ಫೋನ್‌ ವಿಭಾಗದಲ್ಲಿ ಇನ್ಫಿನಿಕ್ಸ್ ಪ್ರಸ್ತುತ ಇನ್ಫಿನಿಕ್ಸ್ ನೋಟ್‌ 12 ಸ್ಮಾರ್ಟ್‌ಫೋನ್‌ ಅನ್ನು ಅನಾವರಣಗೊಳಿಸಿದೆ. ಈ ಡಿವೈಸ್‌ ಮೀಡಿಯಾ ಟೆಕ್‌ ಹಿಲಿಯೋ G99 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 33W ವೇಗದ ಚಾರ್ಜಿಂಗ್ ಬೆಂಬಲದ ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದೆ. 4G ಸ್ಮಾರ್ಟ್‌ಫೋನ್ ಆಗಿರುವ ಇದರಲ್ಲಿ ಎಸ್‌ಡಿ ಕಾರ್ಡ್‌ಮೂಲಕ ಬರೋಬ್ಬರಿ 2TB ವರೆಗೂ ಸಂಗ್ರಹಣೆ ಸಾಮರ್ಥ್ಯವನ್ನು ವಿಸ್ತರಣೆ ಮಾಡಿಕೊಳ್ಳಬಹುದಾಗಿದೆ. ಹಾಗಿದ್ರೆ ಇದರ ಫೀಚರ್ಸ್‌ ಏನು?, ಬೆಲೆ ಎಷ್ಟು? ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ.

ಡಿಸ್‌ಪ್ಲೇ ವಿವರ

ಡಿಸ್‌ಪ್ಲೇ ವಿವರ

ಇನ್ಫಿನಿಕ್ಸ್ ನೋಟ್‌ 12 (2023) ಸ್ಮಾರ್ಟ್‌ಫೋನ್ 6.7 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, ಇದು ವಾಟರ್‌ಡ್ರಾಪ್ ಶೈಲಿಯ ನಾಚ್ ರಚನೆ ಪಡೆದಿದೆ. ಇದರ ಡಿಸ್‌ಪ್ಲೇ ಫುಲ್‌ HD+ ಜೊತೆಗೆ 1,080x2,400 ಪಿಕ್ಸೆಲ್‌ ರೆಸಲ್ಯೂಶನ್‌ ಹೊಂದಿದೆ.

ಯಾವ ಪ್ರೊಸೆಸರ್?

ಯಾವ ಪ್ರೊಸೆಸರ್?

ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 12 ಆಧಾರಿತ XOS 10.6 ನಲ್ಲಿ ಕಾರ್ಯನಿರ್ವಹಿಸಲಿದ್ದು, ಮೀಡಿಯಾಟೆಕ್ ಹಿಲಿಯೋ G99 SoC ಹಾಗೂ ಮಾಲಿ-G57 MP2 GPU ನೊಂದಿಗೆ ಕೆಲಸ ಮಾಡಲಿದೆ. ಇದರ ಜೊತೆ 8GB RAM ಹಾಗೂ 256GB ಇಂಟರ್ನಲ್‌ ಸ್ಟೋರೇಜ್‌ ಆಯ್ಕೆ ಹೊಂದಿದ್ದು, ಎಸ್‌ಡಿ ಕಾರ್ಡ್‌ ಮೂಲಕ ‌2TB ವರೆಗೆ ಇಂಟರ್ನಲ್‌ ಸ್ಟೋರೇಜ್ ಅನ್ನು ಹೆಚ್ಚಿಗೆ ಮಾಡಿಕೊಳ್ಳಬಹುದಾಗಿದೆ.

50 ಮೆಗಾಪಿಕ್ಸೆಲ್ ಕ್ಯಾಮೆರಾ

50 ಮೆಗಾಪಿಕ್ಸೆಲ್ ಕ್ಯಾಮೆರಾ

ಇನ್ಫಿನಿಕ್ಸ್ ನೋಟ್‌ 12 (2023) ಟ್ರಿಪಲ್ ರಿಯರ್‌ ಕ್ಯಾಮೆರಾ ರಚನೆ ಪಡೆದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ f/1.6 ಜೊತೆಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸರ್‌ f/2.4 ಇರುವ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಜೊತೆಗೆ ಸೂಪರ್‌ ನೈಟ್‌ಮೋಡ್ ಆಯ್ಕೆಯನ್ನೂ ಇದರಲ್ಲಿ ನೀಡಲಾಗಿದೆ. ಹಾಗೆಯೇ ಸೆಲ್ಪಿಗಾಗಿ 16 ಮೆಗಾಪಿಕ್ಸೆಲ್ ಮುಂಬದಿ ಕ್ಯಾಮೆರಾವನ್ನು ಒಳಗೊಂಡಿದೆ.

ಬ್ಯಾಟರಿ ಹಾಗೂ ಇತರೆ

ಬ್ಯಾಟರಿ ಹಾಗೂ ಇತರೆ

ಇನ್ಫಿನಿಕ್ಸ್ ನೋಟ್‌ 12 (2023) ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, ಇದು 33W ವೇಗದ ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G ಸ್ಮಾರ್ಟ್‌ಫೋನ್ ಆಗಿರುವ ಇದು ಡ್ಯುಯಲ್ ಸಿಮ್, ಬ್ಲೂಟೂತ್ ಹಾಗೂ ಡ್ಯುಯಲ್ ಬ್ಯಾಂಡ್ ವೈ-ಫೈ,3. 5 ಎಂಎಂ ಹೆಡ್‌ಫೋನ್ ಜ್ಯಾಕ್, ಯುಎಸ್‌ಬಿ ಟೈಪ್-ಸಿ ಪೋರ್ಟ್ ಫೀಚರ್ಸ್‌ ಹೊಂದಿದೆ. ಈ ಸ್ಮಾರ್ಟ್‌ಫೋನ್ 164.4x76.5x7.8mm ಅಳತೆಯ ಜೊತೆಗೆ 195ಗ್ರಾಂ ತೂಕ ಪಡೆದಿದೆ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ಇನ್ಫಿನಿಕ್ಸ್ ನೋಟ್‌ 12 (2023) ನ 8GB RAM + 128GB ಸ್ಟೋರೇಜ್ ವೇರಿಯಂಟ್‌ಗೆ ಯುಎಸ್‌ನಲ್ಲಿ $199 ನಿಗದಿ ಮಾಡಲಾಗಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಸುಮಾರು 16,500ರೂ. ಗಳ ಆರಂಭಿಕ ಬೆಲೆ ಪಡೆಯಬಹುದು ಎನ್ನಲಾಗುತ್ತಿದೆ. ಆದರೆ, ಈ ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡುವ ಬಗ್ಗೆ ಕಂಪನಿಯು ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ. ಈ ಡಿವೈಸ್‌ ಆಲ್ಪೈನ್ ವೈಟ್, ಟಸ್ಕನಿ ಬ್ಲೂ, ವೋಲ್ಕಾನಿಕ್ ಗ್ರೇ ಬಣ್ಣಗಳಲ್ಲಿ ಲಭ್ಯವಿದೆ.

Best Mobiles in India

English summary
Infinix has gained popularity by introducing smart devices that offer a very stylish look. now Infinix has launched Note 12 (2023) smartphone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X