ಇನ್ಫಿನಿಕ್ಸ್‌ ಝೀರೋ 20 ಸ್ಮಾರ್ಟ್‌ಫೋನ್‌ ಲಾಂಚ್‌ಗೆ ಸಿದ್ಧತೆ: ಫೀಚರ್ಸ್‌ ಏನು?

|

ಜನಪ್ರಿಯ ಇನ್ಫಿನಿಕ್ಸ್‌ ಕಂಪೆನಿಯು ಸ್ಮಾರ್ಟ್‌ ಮೊಬೈಲ್‌ ತಯಾರಿಕಾ ಕಂಪೆನಿಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಇದರ ನಡುವೆ ಈಗ ಮಾರುಕಟ್ಟೆಗಳಲ್ಲಿ ಇನ್ಫಿನಿಕ್ಸ್‌ ಝೀರೋ ಸರಣಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಇನ್ಫಿನಿಕ್ಸ್‌ ಝೀರೋ 20 ಜೊತೆಗೆ ಇನ್ಫಿನಿಕ್ಸ್‌ ಝೀರೋ ಅಲ್ಟ್ರಾ 5G (Infinix Zero Ultra 5G ) ಅನ್ನು ಲಾಂಚ್‌ ಮಾಡಲು ಸಿದ್ಧತೆ ನಡೆಸಿದೆ. ಈ ಸ್ಮಾರ್ಟ್‌ಫೋನ್‌ಗಳು ಅಕ್ಟೋಬರ್ 5 ರಂದು ಜಾಗತಿಕವಾಗಿ ಅನಾವರಣಗೊಳ್ಳಲಿದೆ. ಆದರೆ ಇದಕ್ಕೂ ಮುನ್ನ ಇನ್ಫಿನಿಕ್ಸ್‌ಝೀರೋ 20 ಸ್ಮಾರ್ಟ್‌ಫೋನ್‌ನ ವಿಶೇಷ ಫೀಚರ್ಸ್‌ಗಳು ಲೀಕ್‌ ಆಗಿವೆ.

ಇನ್ಫಿನಿಕ್ಸ್‌

ಹೌದು, ಇನ್ಫಿನಿಕ್ಸ್‌ ಕಂಪೆನಿ ತನ್ನ ಇನ್ಫಿನಿಕ್ಸ್‌ ಝೀರೋ 20 ಸ್ಮಾರ್ಟ್‌ಫೋನ್‌ ಅನಾವರಣಕ್ಕೆ ವೇದಿಕೆ ಸಿದ್ಧಗೊಳಿಸಿಕೊಂಡಿದೆ. ಇದು 4G ಸ್ಮಾರ್ಟ್‌ಫೋನ್ ಆಗಿದ್ದು, ಮೀಡಿಯಾ ಟೆಕ್‌ ಹಿಲಿಯೋ G99 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಹಾಗೆಯೇ ಇದು ಮೂರು ಬಣ್ಣಗಳ ವೇರಿಯಂಟ್‌ನಲ್ಲಿ ಲಭ್ಯವಿರಲಿದೆ ಎಂದು ತಿಳಿದುಬಂದಿದೆ.

ಝೀರೋ ಸರಣಿ

ಈ ಝೀರೋ ಸರಣಿಯ ಸ್ಮಾರ್ಟ್‌ಫೋನ್‌ಗಳು AMOLED ಡಿಸ್‌ಪ್ಲೇ ಹೊಂದಿವೆ ಎನ್ನಲಾಗಿದ್ದು, 108 ಮೆಗಾಪಿಕ್ಸೆಲ್‌ ಕ್ಯಾಮೆರಾ ಹಾಗೂ 60 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಹೊಂದಿವೆಯಂತೆ. ಹಾಗೆಯೇ 8GB +256B ಇಂಟರ್‌ ಸ್ಟೋರೇಜ್‌ ಆಯ್ಕೆಯಲ್ಲಿ ಲಭ್ಯವಾಗಲಿವೆ ಎಂದು ವರದಿಯಾಗಿದ್ದು, 5,000mAh ಬ್ಯಾಟರಿ ಸಾಮರ್ಥ್ಯ ಈ ಸ್ಮಾರ್ಟ್‌ಫೋನ್‌ನಲ್ಲಿರಲಿದೆ. ಇದು ವೇಗದ ಚಾರ್ಜಿಂಗ್‌ ಬೆಂಬಲ ಪಡೆದಿದೆ. ಹಾಗಿದ್ರೆ ಲೀಕ್‌ ಆದ ಮಾಹಿತಿ ಪ್ರಕಾರ ಇದರ ಇನ್ನಷ್ಟು ಫೀಚರ್ಸ್‌ಗಳನ್ನು ಈ ಲೇಖನದಲ್ಲಿ ನೀಡಲಾಗಿದೆ ಓದಿರಿ.

ಡಿಸ್‌ಪ್ಲೇ ವಿಶೇಷತೆ

ಡಿಸ್‌ಪ್ಲೇ ವಿಶೇಷತೆ

ಈ ಇನ್ಫಿನಿಕ್ಸ್‌ ಸ್ಮಾರ್ಟ್‌ಫೋನ್ 6.7 ಇಂಚಿನ AMOLED ಡಿಸ್‌ಪ್ಲೇ ಜೊತೆಗೆ ಫುಲ್‌ HD+ ರೆಸಲ್ಯೂಶನ್ ಮತ್ತು ಸೆಲ್ಪಿ ಕ್ಯಾಮೆರಾಕ್ಕಾಗಿ ಪಂಚ್ ಹೋಲ್ ಆಯ್ಕೆ ಪಡೆದಿದೆ ಎನ್ನಲಾಗಿದೆ. 391ppi ಪಿಕ್ಸೆಲ್ ಸಾಂದ್ರತೆ ಇರುವ ಸ್ಕ್ರೀನ್‌ ಇದಾಗಿದ್ದು, 2400 x 1080 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿದೆಯಂತೆ. ಹಾಗೆಯೇ 16 ಮಿಲಿಯನ್ ಬಣ್ಣಗಳ ಆಯ್ಕೆ ಪಡೆದಿದೆ ಎಂದು ಮಾಹಿತಿ ತಿಳಿದುಬಂದಿದೆ.

ಪ್ರೊಸೆಸರ್‌ ಯಾವುವು?

ಪ್ರೊಸೆಸರ್‌ ಯಾವುವು?

ಇನ್ಫಿನಿಕ್ಸ್‌ ಝೀರೋ 20 ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೊ G99 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುತ್ತದಂತೆ. ಪೊಕೊ M5, ರೆಡ್ಮಿ 11 ಪ್ರೈಮ್‌ ಮತ್ತು ಮೊಟೊ G72 ಸೇರಿದಂತೆ ಇನ್ನಿತರ ಹಲವಾರು ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳು ಇದೇ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಸ್ಮಾ್ಟ್‌ಫೋನ್‌ 8GB +256B ಇಂಟರ್‌ ಸ್ಟೋರೇಜ್‌ ಆಯ್ಕೆಯಲ್ಲಿರಲಿದ್ದು, ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್ ಆಯ್ಕೆ ಮೂಲಕ 256 GB ವರೆಗೂ ವಿಸ್ತರಣೆ ಮಾಡಿಕೊಳ್ಳಬಹುದಾಗಿದೆ ಎನ್ನಲಾಗಿದೆ.

ಕ್ಯಾಮೆರಾ ಫೀಚರ್ಸ್‌

ಕ್ಯಾಮೆರಾ ಫೀಚರ್ಸ್‌

ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಪಡೆದಿದ್ದು, 108 ಮೆಗಾಪಿಕ್ಸೆಲ್‌ ಪ್ರಾಥಮಿಕ ಕ್ಯಾಮೆರಾ, 13 ಮೆಗಾಪಿಕ್ಸೆಲ್‌ ಸೆಕೆಂಡರಿ ಕ್ಯಾಮೆರಾ ಹಾಗೂ 2 ಮೆಗಾಪಿಕ್ಸೆಲ್‌ ಸಹಾಯಕ ಕ್ಯಾಮೆರಾ ಮೂಲಕ ಸುಂದರ ಚಿತ್ರಗಳನ್ನು ಸೆರೆ ಹಿಡಿಯಬಹುದಾಗಿದೆ ಎಂದು ಕೆಲವು ವರದಿಗಳಿಂದ ತಿಳಿದು ಬಂದಿದೆ. OIS ಬೆಂಬಲದೊಂದಿಗೆ 60MP ಸೆಲ್ಪಿ ಕ್ಯಾಮೆರಾ ಇರಲಿದ್ದು, ಎರಡು ಎಲ್‌ಇಡಿ ಫ್ಲ್ಯಾಷ್ ಲೈಟ್‌ ಈ ಕ್ಯಾಮೆರಾದ ಅಂದ ಹೆಚ್ಚಿಸಲಿವೆ ಎಂದು ಲೀಕ್‌ ಆದ ಮಾಹಿತಿಯಿಂದ ತಿಳಿದುಬಂದಿದೆ. ಜೊತೆಗೆ ಈ ಕ್ಯಾಮೆರಾದಲ್ಲಿ ಆಟೋ ಫ್ಲಾಶ್, ಆಟೋ ಫೋಕಸ್, ಫೇಸ್ ಡಿಟೆಕ್ಷನ್, ಟಚ್ ಟು ಫೋಕಸ್ ಫೀಚರ್ಸ್‌ ಇವೆಯಂತೆ.

ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ

ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ

5000 mAh ಬ್ಯಾಟರಿ ಸಾಮರ್ಥ ಇದರಲ್ಲಿದ್ದು, ಸ್ಮಾರ್ಟ್‌ಫೋನ್ ಅಲ್ಟ್ರಾ ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದಿದೆಯಂತೆ. ಕನೆಕ್ಟಿವಿಟಿ ಆಯ್ಕೆಯಲ್ಲಿ ಫೋನ್ ವೈ-ಫೈ, ಬ್ಲೂಟೂತ್ 5.2, ಜಿಪಿಎಸ್, ಗ್ಲೋನಾಸ್, ಇನ್ಫ್ರಾರೆಡ್ ಸೆನ್ಸಾರ್‌ ಹಾಗೂ ಯುಎಸ್‌ಬಿ ಟೈಪ್-ಸಿ ಪೋರ್ಟ್ ಒಳಗೊಂಡಿದೆ ಎಂದು ಹೇಳಲಾಗುತ್ತಿದೆ. ಇದು ಹಸಿರು, ಕಪ್ಪು ಮತ್ತು ಗೋಲ್ಡ್ ಕಲರ್‌ನಲ್ಲಿ ಲಭ್ಯವಾಗಲಿದ್ದು, ಸ್ಟಿರಿಯೊ ಸ್ಪೀಕರ್ ಸೆಟಪ್ ಮತ್ತು 3.5 ಎಂಎಂ ಆಡಿಯೊ ಜಾಕ್‌ನೊಂದಿಗೆ ಸಜ್ಜುಗೊಂಡಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಭದ್ರತೆ ದೃಷ್ಟಿಯಿಂದ ಸೈಡ್‌ ಮೌಂಟೆಂಡ್‌ ಫಿಂಗರ್‌ಪ್ರಿಂಟ್‌ ಸ್ಕ್ಯಾನರ್‌ ಆಯ್ಕೆ ಪಡೆದಿದೆ ಎಂದು ತಿಳಿದುಬಂದಿದೆ.

Best Mobiles in India

English summary
Infinix Zero Ultra 5G is all set to launch in global markets along with Infinix Zero 20. here we describe Infinix Zero 20 specs.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X