Subscribe to Gizbot

ಮಾರುಕಟ್ಟೆಗೆ ಮತ್ತೊಂದು ಬಜೆಟ್ ಬೆಲೆಯಲ್ಲಿ ಟಾಪ್ ಫೋನ್ ಲಗ್ಗೆ..!

Written By: Lekhaka

ಅಮೆರಿಕಾ ಮೂಲದ ಸ್ಮಾರ್ಟ್ ಫೋನ್ ತಯಾರಕ ಕಂಪನಿ ಇನ್ ಫೋಕಸ್ ಮಾರುಕಟ್ಟೆಗೆ ಹೊಸ ಸ್ಮಾರ್ಟ್ ಫೋನ್ ಲಾಂಚ್ ಮಾಡಿದೆ. ನೂತನವಾಗಿ ಇನ್ ಫೋಕಸ್ M7s ಫೋನ್ ಮಾರುಕಟ್ಟೆಯನ್ನು ಪ್ರವೇಶಿಸಿದ್ದು, ಇದೊಂದು ಬಜೆಟ್ ಡಿವೈಸ್ ಆಗಿದ್ದರೂ ಕೂಡ ಎಂಟ್ರಿ ಲೆವೆಲ್ ವಿಶೇಷತೆಗಳನ್ನು ಹೊಂದಿದೆ.!!

ಮಾರುಕಟ್ಟೆಗೆ ಮತ್ತೊಂದು ಬಜೆಟ್ ಬೆಲೆಯಲ್ಲಿ ಟಾಪ್ ಫೋನ್ ಲಗ್ಗೆ..!

ಇನ್ ಫೋಕಸ್ M7s ಸ್ಮಾರ್ಟ್ ಫೋನಿನಲ್ಲಿ 5.7 ಇಂಚಿನ ಡಿಸ್ ಪ್ಲೇಯನ್ನು ಕಾಣಬಹುದಾಗಿದ್ದು, HD+ ಗುಣಮಟ್ಟವನ್ನು ಹೊಂದಿದೆ ಎನ್ನಲಾಗಿದೆ.  , 18:9 ಅನುಪಾತ 2.5D ಕರ್ವಡ್ ಗ್ಲಾಸ್ ವಿನ್ಯಾಸವನ್ನು ಡಿಸ್ ಪ್ಲೇ ಹೊಂದಿದೆ.

3GB RAM/32 GB ಇಂಟರ್ನಲ್ ಮೆಮೊರಿ:

ಇನ್ ಫೋಕಸ್ M7s ಸ್ಮಾರ್ಟ್ ಫೋನಿನಲ್ಲಿ 3GB RAM ಅನ್ನು ನೀಡಲಾಗಿದ್ದು, ಇದರೊಂದಿಗೆ ಮಿಡಿಯಾಟೆಕ್ MT3737H ಪ್ರೋಸೆಸರ್ ಕಾಣಬಹುದಾಗಿದೆ. ಅಲ್ಲದೇ 32GB ಇಂಟರ್ನಲ್ ಮೆಮೊರಿ ಸಹ ಲಭ್ಯವಿದೆ. ಅಲ್ಲದೇ ಮೈಕ್ರೋ ಎಸ್ ಡಿ ಕಾರ್ಡ್ ಹಾಕಿಕೊಳ್ಳುವ ಮೂಲಕ 128GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದಾಗಿದೆ.

How to create two accounts in one Telegram app (KANNADA)
ಕ್ಯಾಮೆರಾ:

ಇನ್ ಫೋಕಸ್ M7s ಸ್ಮಾರ್ಟ್ ಫೋನಿನ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಕಾಣಬಹುದಾಗಿದೆ. 13MP + 5MP ಕ್ಯಾಮೆರಾ ಇದರಲ್ಲಿದ್ದು, ಮುಂಭಾಗದಲ್ಲಿ 8MP ಕ್ಯಾಮೆರಾವನ್ನು ನೀಡಲಾಗಿದೆ. ಈ ಎರಡು ಕ್ಯಾಮೆರಾಗಳು ಉತ್ತಮವಾಗಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ.

ಬ್ಯಾಟರಿ ಮತ್ತು ಸಾಫ್ಟ್ ವೇರ್:

ಇದಲ್ಲದೇ ಇನ್ ಫೋಕಸ್ M7s ಸ್ಮಾರ್ಟ್ ಫೋನಿನಲ್ಲಿ 4000mAh ಬ್ಯಾಟರಿಯನ್ನು ಕಾಣಬಹುದಾಗಿದ್ದು, ಇದು ಎರಡು ದಿನದ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ ಎನ್ನಲಾಗಿದೆ. ಅಲ್ಲದೇ ಇದು ಆಂಡ್ರಾಯ್ಡ್ ನ್ಯಾಗದಲ್ಲಿ ಕಾರ್ಯನಿರ್ವಹಿಸಲಿದೆ. ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಹಿಂಭಾಗದಲ್ಲಿ ನೋಡಬಹುದಾಗಿದೆ. 4G VoLTE ಸಪೋರ್ಟ್ ಮಾಡಲಿದೆ.

ಮಾರಾಟ:

ಸದ್ಯ ಈ ಸ್ಮಾರ್ಟ್ ಫೋನ್ ಥೈವಾನ್ ಮಾರುಕಟ್ಟೆಯನ್ನು ಬಿಟ್ಟರೇ ಬೇರೆ ಯಾವುದೇ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ ಎನ್ನಲಾಗಿದೆ. ಶೀಘ್ರವೇ ಭಾರತೀಯ ಮಾರುಕಟ್ಟೆಯಲ್ಲಿ ದೊರೆಯುವ ಸಾಧ್ಯತೆ ಇದೆ. ಬೆಲೆ ರೂ.9,355 ಅನುಪಾಸಿನಲ್ಲಿ ಇರಲಿದೆ.

ಗಣರಾಜ್ಯೋತ್ಸವ ದಿನದಿಂದ ಜಿಯೋ ಗ್ರಾಹಕರಿಗೆ ಹಬ್ಬ!..ಮತ್ತೆ ಭರ್ಜರಿ ಆಫರ್ ಬಿಡುಗಡೆ!!

Read more about:
English summary
The InFocus M7s sports a metal unibody design, giving it a stylish look. The smartphone is fitted with a 5.7-inch display that delivers a HD+ resolution of 720×1440 pixels. The display has an aspect ratio of 18:9, and it is surrounded by narrow bezels.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot