ವಿದ್ಯುತ್‌ ಬಿಲ್‌ ಪಾವತಿಸುವ ಮುನ್ನ ಎಚ್ಚರ? ವಂಚಕರಿದ್ದಾರೆ?

|

ಪ್ರಸ್ತುತ ದಿನಗಳಲ್ಲಿ ಟೆಕ್ನಾಲಜಿ ಮುಂದುವರೆದಂತೆ ವಂಚನೆ ಪ್ರಕರಣಗಳು ಕೂಡ ಹೆಚ್ಚುತ್ತಲೇ ಇದೆ. ಜನರನ್ನು ವಂಚಿಸುವುದಕ್ಕೆ ಏನೆಲ್ಲಾ ಮಾರ್ಗಗಳಿದೆಯೋ ಅದೆಲ್ಲವನ್ನೂ ಕೂಡ ವಂಚಕರು ಅನುಸರಿಸುತ್ತಲೇ ಇದ್ದಾರೆ. ಈಗಾಗಲೇ ಬ್ಯಾಂಕ್‌ ಸಿಬ್ಬಂದಿ ಹೆಸರಿನಲ್ಲಿ, ನಕಲಿ ಗಿಫ್ಟ್‌ ನೆಪದಲ್ಲಿ ಹಲವಾರು ರೀತಿಯಲ್ಲಿ ವಂಚನೆ ನಡೆಸುತ್ತಿದ್ದಾರೆ. ಸದ್ಯ ಇದೀಗ ವಂಚಕರು ವಿದ್ಯುತ್‌ ಬಿಲ್‌ ಹೆಸರಿನಲ್ಲಿ ವಂಚನೆ ಮಾಡುತ್ತಿರುವ ಪ್ರಕರಣಗಳು ದಾಖಲಾಗುತ್ತಿದೆ. ವಿದ್ಯುತ್‌ ಬಿಲ್‌ ಕಟ್ಟಿಸಿಕೊಳ್ಳುವ ನೆಪದಲ್ಲಿ ಅನೇಕ ಮುಗ್ದ ಜನರನ್ನು ದಾರಿ ತಪ್ಪಿಸಿರುವ ಪ್ರಕರಣಗಳು ವರದಿಯಾಗಿವೆ.

ವಿದ್ಯುತ್‌

ಹೌದು, ವಿದ್ಯುತ್‌ ಬಿಲ್‌ ಹೆಸರಿನಲ್ಲಿ ಜನರನ್ನು ವಂಚಿಸಿರುವ ಘಟನೆಗಳು ನಡೆಯುತ್ತಿವೆ. ನೀವು ನಿಗದಿತ ಸಮಯಕ್ಕೆ ವಿದ್ಯುತ್‌ ಬಿಲ್‌ ಪಾವತಿಸದಿದ್ದರೆ ವಿದ್ಯುತ್‌ ಪೂರೈಕೆದಾರರ ನಿಮ್ಮ ಮನೆಯ ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸುತ್ತಾರೆ. ಇದನ್ನೇ ಆಧಾರವಾಗಿಟ್ಟುಕೊಂಡಿರುವ ವಂಚಕರು ವಿದ್ಯುತ್‌ ಪೂರೈಕೆದಾರ ನಿಗಮದ ಸಿಬ್ಬಂದಿಯ ಸೋಗಿನಲ್ಲಿ ಜನರಿಗೆ ವಂಚಿಸುತ್ತಿದ್ದಾರೆ ಎನ್ನಲಾಗಿದೆ. ಮುಗ್ದ ಜನರಿಗೆ ನಕಲಿ ಸಂದೇಶಗಳನ್ನು ಕಳುಹಿಸುವ ಮೂಲಕ ತಮ್ಮ ಖಾತೆಗೆ ವಿದ್ಯುತ್‌ ಬಿಲ್‌ನ ಹಣ ಬರುವಂತೆ ಮಾಡುತ್ತಿದ್ದಾರೆ.

ವಿದ್ಯುತ್‌

ನಿಮ್ಮ ಮನೆಯ ವಿದ್ಯುತ್‌ ಬಿಲ್‌ ಅನ್ನು ತಕ್ಷಣವೇ ಪಾವತಿ ಮಾಡಿ ಇಲ್ಲದಿದ್ದಲೇ ನಿಮ್ಮ ಮನೆಯ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗುವುದು ಎನ್ನುವ ಸಂದೇಶಗಳನ್ನು ಹರಿಬಿಡಲಾಗ್ತಿದೆ. ಈ ಸಂದೇಶಗಳನ್ನು ಮುಗ್ದ ಜನರಿಗೆ ಅದರಲ್ಲೂ ವಿಶೇಷವಾಗಿ ಹಿರಿಯ ನಾಗರಿಕರನ್ನೇ ಗುರಿಯಾಗಿಸಿ ಕಳುಹಿಸುತ್ತಿದ್ದಾರೆ. ಈ ಸಂದೇಶಗಳನ್ನು ನೋಡಿದ ಜನರು ಸಂದೇಶದಲ್ಲಿರುವ ಲಿಂಕ್‌ ಟ್ಯಾಪ್‌ ಮಾಡುವ ಮೂಲಕ ಯುಪಿಐ ಪೇಮೆಂಟ್‌ನಲ್ಲಿ ಹಣ ಪಾವತಿ ಮಾಡುತ್ತಿದ್ದಾರೆ. ಇದು ವಂಚಕರ ಕೈಗೆ ಹಣ ಸೇರುವಂತೆ ಮಾಡಿದೆ. ಹಾಗಾದ್ರೆ ವಿದ್ಯುತ್‌ ಬಿಲ್‌ ಹಗರಣ ಹೇಗೆ ನಡೆಯುತ್ತಿದೆ? ಇದನ್ನು ತಿಳಿಯುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಿದ್ಯುತ್‌

ವಿದ್ಯುತ್‌ ಬಾಕಿಯನ್ನು ವಸೂಲಿ ಮಾಡುವ ನೆಪದಲ್ಲಿ ವಂಚಕರು ನಿಮ್ಮ ಮೊಬೈಲ್‌ ನಂಬರ್‌ಗೆ ಸಂದೇಶವನ್ನು ಕಳುಹಿಸುತ್ತಾರೆ. ಈ ಸಂದೇಶದಲ್ಲಿ ನೀವು ಕೂಡಲೇ ನಿಮ್ಮ ಬಾಕಿ ವಿದ್ಯುತ್‌ ಬಿಲ್‌ ಪಾವತಿಸಬೇಕು, ಇಲ್ಲದಿದ್ದಲ್ಲಿ ಕೂಡ ನಿಮ್ಮ ಮನೆಯ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗುವುದು ಎನ್ನಲಾಗಿರುತ್ತದೆ. ಅಲ್ಲದೆ ಈ ಸಂದೇಶದಲ್ಲಿ ಒಂದು ಫೋನ್‌ ನಂಬರ್‌ ಸಂಖ್ಯೆಯನ್ನು ಕೂಡ ನೀಡಲಾಗಿರುತ್ತದೆ. ಈ ಸಂಖ್ಯೆಗೆ ಕರೆ ಮಾಡಿದಾಗ ವಿದ್ಯುತ್‌ ಪೂರೈಕೆದಾರರ ನಿಗಮದ ಮಾದರಿಯಲ್ಲಿಯೇ ಕಾಲರ್‌ ಟ್ಯೂನ್‌ ಬರಲಿದೆ. ನಂತರ ನಿಮ್ಮ ಜೊತೆ ಮಾತನಾಡುವ ವಂಚಕರು ನಿಮ್ಮಿಂದ ಹಣ ವಸೂಲಿ ಮಾಡುತ್ತಾರೆ.

ವಿದ್ಯುತ್‌

ವಿದ್ಯುತ್‌ ಬಿಲ್‌ ಅನ್ನು ಪಾವತಿಸುವಲ್ಲಿ ಕೆಲವರು ವಿಳಂಬವನ್ನು ಅನುಸರಿಸುತ್ತಾರೆ. ಅಂತಹ ಜನರನ್ನೇ ಟಾರ್ಗೆಟ್‌ ಮಾಡುವ ವಂಚಕರು ಆನ್‌ಲೈನ್‌ನಲ್ಲಿ ನಕಲಿ ಬಿಲ್‌ಗಳನ್ನು ಪಾವತಿಸುವಂತೆ ಮಾಡಿ ವಂಚಿಸುತ್ತಿದ್ದಾರೆ ಎಂದು ವರದಿಯಾಗಿದೆ. ಒಂದು ವೇಳೆ ನೀವು ನಿಮಗೆ ಸಂದೇಶ ಬಂದಿರುವ ಸಂಖ್ಯೆಗೆ ನೀವು ಕರೆ ಮಾಡಿದರೆ ನೀವು ಪಾವತಿಸಬೇಕಾದ ಹಣದಲ್ಲಿ ಆಫರ್‌ ನೀಡುವ ಭರವಸೆಯನ್ನು ಸಹ ನೀಡುತ್ತಾರೆ. ಈ ರೀತಿಯ ಆಫರ್‌ಗಳಿಗೆ ಸುಲಭವಾಗಿ ಬಲಿಯಾಗುವ ಜನರು ವಂಚಕರು ಹೇಳಿದಂತೆ ಆನ್‌ಲೈನ್‌ನಲ್ಲಿ ಹಣ ಪಾವತಿಸುತ್ತಾರೆ. ಆದರೆ ಈ ಹಣ ವಿದ್ಯುತ್‌ ಪೂರೈಕೆದಾರ ನಿಗಮಕ್ಕೆ ಸೇರುವುದಿಲ್ಲ ಬದಲಿಗೆ ವಂಚಕರ ಕೈ ಸೇರಲಿದೆ.

ವಿದ್ಯುತ್ ಬಿಲ್ ಸ್ಕ್ಯಾಮ್‌ ವಂಚಕರನ್ನು ಗುರುತಿಸುವುದು ಹೇಗೆ?

ವಿದ್ಯುತ್ ಬಿಲ್ ಸ್ಕ್ಯಾಮ್‌ ವಂಚಕರನ್ನು ಗುರುತಿಸುವುದು ಹೇಗೆ?

* ಹಣ ನೀಡದೆ ಹೋದರೆ ತಕ್ಷಣವೇ ನಿಮ್ಮ ವಿದ್ಯುತ್ ಕಡಿತಗೊಳಿಸುವುದಾಗಿ ಬೆದರಿಕೆ ಹಾಕುತ್ತಾರೆ. ಇಂತಹ ಬೆದರಿಕೆಗಳನ್ನು ಯಾವುದೇ ಪೂರೈಕದಾರ ನಿಗಮ ಫೋನ್‌ ಕರೆಯಲ್ಲಿ ತಿಳಿಸುವುದಿಲ್ಲ. ಬದಲಿಗೆ ವಿದ್ಯುತ್‌ ಪೂರೈಕೆದಾರರ ನಿಗಮದ ಸಿಬ್ಬಂದಿ ನಿಮ್ಮ ಮನೆಯ ಬಳಿಗೆ ಬಂದು ಪರಿಸ್ಥಿತಿ ವಿವರಿಸುವ ಪ್ರಯತ್ನ ಮಾಡುತ್ತಾರೆ.

* ಇನ್ನು ನಿಮಗೆ ಕರೆ ಮಾಡುವ ವಂಚಕರಿಗೆ ನೀವು ಪಾವತಿಸಬೇಕಾದ ಪೂರ್ತಿ ಬಿಲ್ಲಿಂಗ್‌ ವಿವರ ಅವರ ಬಳಿ ಇರುವುದಿಲ್ಲ. ಅಂತಹವರ ಜೊತೆ ನೀವು ಮಾತನಾಡದೆ ಇರುವುದು ಸೂಕ್ತ.

* ವಂಚಕರು ಯಾವಾಗಲೂ ಆನ್‌ಲೈನ್‌ನಲ್ಲಿ ಹಣವನ್ನು ಪಾವತಿಸಲು ಕೇಳುತ್ತಾರೆ. ಇದು UPI ಮೂಲಕ ಆಗಿರಬಹುದು ಅಥವಾ ನಿಮ್ಮ ಕ್ರೆಡಿಟ್/ಡೆಬಿಟ್ ಕಾರ್ಡ್ ವಿವರಗಳನ್ನು ಕೇಳಬಹುದು ಇಂತಹ ಸಮಯದಲ್ಲಿ ನೀವು ಎಚ್ಚರ ವಹಿಸುವುದು ಸೂಕ್ತ.

ವಿದ್ಯುತ್‌ ಬಿಲ್‌ ಸ್ಕ್ಯಾಮ್‌ನಿಂದ ಬಚಾವಾಗುವುದು ಹೇಗೆ?

ವಿದ್ಯುತ್‌ ಬಿಲ್‌ ಸ್ಕ್ಯಾಮ್‌ನಿಂದ ಬಚಾವಾಗುವುದು ಹೇಗೆ?

* ನಿಮ್ಮ ಏರಿಯಾದ ವಿದ್ಯುತ್‌ ಪೂರೈಕೆದಾರರ ನಿಗಮಗಳು ನೀವು ವಿದ್ಯುತ್‌ ಬಿಲ್‌ ಪಾವತಿಸುವುದಕ್ಕೆ ಸೂಕ್ತ ವ್ಯವಸ್ಥೆ ಮಾಡಿವೆ. ಆ ನಿಯಮಗಳನ್ನು ಪಾಲಿಸುವ ಮೂಳಕ ನೀವು ಆನ್‌ಲೈನ್‌ ಪಾವತಿ ಮಾಡುವುದು ಉತ್ತಮ.
* ಇನ್ನು ನಿಮಗೆ ಈ ರೀತಿಯ ಕರೆಗಳು ಬಂದಾಗ ಅವುಗಳನ್ನು ನಿರ್ಲಕ್ಷ್ಯ ಮಾಡುವುದು ಒಳಿತು.
* ಬಿಲ್ಲಿಂಗ್ ವಿವರಗಳನ್ನು ಖಚಿತಪಡಿಸಲು ಬಿಲ್ ಅಥವಾ ಅಧಿಕೃತ ವೆಬ್‌ಸೈಟ್‌ನಲ್ಲಿನ ಅಧಿಕೃತ ಸಂಪರ್ಕ ವಿವರಗಳನ್ನು ಬಳಸಿಕೊಂಡು ನಿಮ್ಮ ವಿದ್ಯುತ್‌ ಪೂರೈಕೆದಾರರನ್ನು ಸಂಪರ್ಕಿಸುವುದು ಉತ್ತಮ ಆಯ್ಕೆಯಾಗಿದೆ.
* ಅಲ್ಲದೆ ನಿಮ್ಮ ವಿದ್ಯುತ್‌ ಬಿಲ್‌ ದೃಢೀಕರಣವನ್ನು ಪಡೆಯಲು ನೀವು ವಿದ್ಯುತ್‌ ಪೂರೈಕೆದಾರರ ಕಚೇರಿಗೆ ಭೇಟಿ ನೀಡಬಹುದು.
* ವಿದ್ಯುತ್‌ ಬಿಲ್ ವಿವರಗಳನ್ನು ಸ್ವತಃ ಪರಿಶೀಲಿಸದೆ ತರಾತುರಿಯಲ್ಲಿ ಹಣವನ್ನು ಪಾವತಿಸುವುದನ್ನು ತಪ್ಪಿಸಬೇಕು.

ಫೋನ್‌ಪೇ ಆಪ್‌ನಲ್ಲಿ ವಿದ್ಯುತ್ ಬಿಲ್ ಪಾವತಿಸಲು ಈ ಕ್ರಮ ಅನುಸರಿಸಿ?

ಫೋನ್‌ಪೇ ಆಪ್‌ನಲ್ಲಿ ವಿದ್ಯುತ್ ಬಿಲ್ ಪಾವತಿಸಲು ಈ ಕ್ರಮ ಅನುಸರಿಸಿ?

ಹಂತ 1: ಫೋನ್‌ಪೇ ಅಪ್ಲಿಕೇಶನ್ ತೆರೆಯಿರಿ.
ಹಂತ 2: 'ರೀಚಾರ್ಜ್ ಮತ್ತು ಪಾವತಿ ಬಿಲ್‌ಗಳು' ವಿಭಾಗದ ಅಡಿಯಲ್ಲಿ 'ವಿದ್ಯುತ್' ಮೇಲೆ ಕ್ಲಿಕ್ ಮಾಡಿ.
ಹಂತ 3: ನಿಮ್ಮ ವಿದ್ಯುತ್ ಮಂಡಳಿಯನ್ನು ಆಯ್ಕೆ ಮಾಡಿ.
ಹಂತ 4: ನಿಮ್ಮ ಬಿಲ್ ವಿವರಗಳನ್ನು ನಮೂದಿಸಿ.
ಹಂತ 5: ನಿಮ್ಮ ಬಿಲ್ ಅನ್ನು UPI/ಡೆಬಿಟ್ ಕಾರ್ಡ್‌ಗಳು ಅಥವಾ ಕ್ರೆಡಿಟ್ ಕಾರ್ಡ್‌ಗಳೊಂದಿಗೆ ಪಾವತಿಸಿ.

ಗೂಗಲ್ ಪೇ ಆಪ್‌ನಲ್ಲಿ ವಿದ್ಯುತ್ ಬಿಲ್ ಪಾವತಿಸಲು ಈ ಕ್ರಮ ಅನುಸರಿಸಿ?

ಗೂಗಲ್ ಪೇ ಆಪ್‌ನಲ್ಲಿ ವಿದ್ಯುತ್ ಬಿಲ್ ಪಾವತಿಸಲು ಈ ಕ್ರಮ ಅನುಸರಿಸಿ?

ಹಂತ 1: ನಿಮ್ಮ ಫೋನ್‌ನಲ್ಲಿ ಗೂಗಲ್ ಪೇ ಆಪ್ ತೆರೆಯಿರಿ.
ಹಂತ 2: ಪರದೆಯ ಕೆಳಭಾಗಕ್ಕೆ ಸ್ಕ್ರಾಲ್ ಮಾಡಿ, "+ ಹೊಸ ಪಾವತಿ" ಆಯ್ಕೆಯನ್ನು ಪತ್ತೆ ಮಾಡಿ ಮತ್ತು ಟ್ಯಾಪ್ ಮಾಡಿ.
ಹಂತ 3: ಈಗ ಮುಂದಿನದರಲ್ಲಿ "ಬಿಲ್ ಪಾವತಿಗಳು" ಆಯ್ಕೆಯನ್ನು ಆರಿಸಿ.
ಹಂತ 4: ವಿವಿಧ ಬಿಲ್ ಪಾವತಿ ಆಯ್ಕೆಗಳಿಂದ 'ವಿದ್ಯುತ್' ಟ್ಯಾಬ್ ಆಯ್ಕೆಮಾಡಿ.
ಹಂತ 5: ನಂತರ ನೀವು ಪಾವತಿ ಮಾಡಲು ಬಯಸುವ ಏಜೆನ್ಸಿಯನ್ನು ಆಯ್ಕೆ ಮಾಡಿ.
ಹಂತ 6: ನೀವು ಬಯಸಿದ ಕಂಪನಿಯನ್ನು ಆಯ್ಕೆ ಮಾಡಿದ ನಂತರ, ಪಾವತಿ ಪ್ರಕ್ರಿಯೆಯನ್ನು ಮುಗಿಸಲು ನಿಮ್ಮ ಗ್ರಾಹಕ ಖಾತೆಯನ್ನು ನೀವು ಲಿಂಕ್ ಮಾಡಬೇಕಾಗುತ್ತದೆ.
ಹಂತ 7: ನೀವು ಬಿಲ್ ಪಾವತಿಸಲು ಬಯಸುವ ಮೊತ್ತವನ್ನು ನಮೂದಿಸಿ ಮತ್ತು UPI ಪಿನ್ ಬಳಸಿ ಬಿಲ್ ಪಾವತಿಸಿ.

Most Read Articles
Best Mobiles in India

Read more about:
English summary
Innocent people are loosing money due to electricity bill scam

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X