ಭಾರತೀಯ ಬಳಕೆದಾರರಿಗೆ ಹೊಸ ಆಯ್ಕೆ ಪರಿಚಯಿಸಿದ ಇನ್‌ಸ್ಟಾಗ್ರಾಮ್‌! ವಿಶೇಷತೆ ಏನು?

|

ಇನ್‌ಸ್ಟಾಗ್ರಾಮ್‌ ಜನಪ್ರಿಯ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿದೆ. ಬಳಕೆದಾರರ ನೆಚ್ಚಿನ ವೀಡಿಯೋ ಮತ್ತು ಫೋಟೋ ಶೇರಿಂಗ್‌ ಅಪ್ಲಿಕೇಶನ್‌ ಆಗಿ ಗುರುತಿಸಿಕೊಂಡಿದೆ. ಇದೇ ಕಾರಣಕ್ಕೆ ಇನ್‌ಸ್ಟಾಗ್ರಾಮ್‌ ಕೂಡ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಬಳಕೆದಾರರ ಅನುಭವವನ್ನು ಇನ್ನಷ್ಟು ಸುಧಾರಿಸುವ ನಿಟ್ಟಿನಲ್ಲಿ ಅನೇಕ ಫೀಚರ್ಸ್‌ಗಳಲ್ಲಿ ಇನ್‌ಸ್ಟಾಗ್ರಾಮ್‌ ಕಾರ್ಯನಿರ್ವಹಿಸುತ್ತಿದೆ. ಇದೀಗ ಭಾರತದಲ್ಲಿ ಹೊಸ ಏಜ್‌ ವೆರಿಫಿಕೇಷನ್ ಫೀಚರ್ಸ್‌ ಅನ್ನು ಪರಿಚಯಿಸಿದೆ.

ಇನ್‌ಸ್ಟಾಗ್ರಾಮ್‌

ಹೌದು, ಮೆಟಾ ಒಡೆತನದ ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್‌ ಭಾರತದಲ್ಲಿ ಹೊಸ ಏಜ್‌ ವೆರಿಫಿಕೇಷನ್ ವಿಧಾನವನ್ನು ಪರಿಚಯಿಸಿದೆ. ಇದರಿಂದ ಭಾರತದಲ್ಲಿ ಬಳಕೆದಾರರ ವಯಸ್ಸಿನ ಪರಿಶೀಲನಾ ವಿಧಾನದಲ್ಲಿ ಬದಲಾವಣೆಯನ್ನು ಕಾಣಬಹುದಾಗಿದೆ. ಇದರಿಂದ ಇನ್‌ಸ್ಟಾಗ್ರಾಮ್‌ನಲ್ಲಿ ಬಳಕೆದಾರರಿಗೆ ಯಾವುದೇ ರೀತಿಯ ದಕ್ಕೆ ಆಗುವುದಿಲ್ಲ ಎಂದು ಹೇಳಲಾಗಿದೆ. ಹಾಗಾದ್ರೆ ಇನ್‌ಸ್ಟಾಗ್ರಾಮ್‌ ಪರಿಚಯಿಸಿರುವ ಹೊಸ ವಯಸ್ಸಿನ ಪರಿಶೀಲನಾ ವಿಧಾನದ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇನ್‌ಸ್ಟಾಗ್ರಾಮ್‌

ಇನ್‌ಸ್ಟಾಗ್ರಾಮ್‌ನಲ್ಲಿ ಇನ್ಮುಂದೆ ಬಳಕೆದಾರರ ವಯಸ್ಸಿನ ಪರಿಶೀಲನೆಗೆ ಹೊಸ ವಿಧಾನವನ್ನು ಪರಿಚಯಿಸಲಾಗಿದೆ. ಈ ಹೊಸ ವಯಸ್ಸಿನ ಪರಿಶೀಲನಾ ವಿಧಾನದಲ್ಲಿ ಬಳಕೆದಾರರು ತಮ್ಮ ಜನ್ಮ ದಿನಾಂಕವನ್ನು ಬದಲಾಯಿಸಲು ಎರಡು ವಿಧಾನಗಳಲ್ಲಿ ಒಂದನ್ನು ಬಳಸಬೇಕಾಗುತ್ತದೆ. ಇದರಲ್ಲಿ 18 ಅಥವಾ 18 ಕ್ಕಿಂತ ಕಡಿಮೆ ವಯಸ್ಸಿನಿಂದ 18 ವರ್ಷಕ್ಕಿಂತ ಮೇಲ್ಪಟ್ಟವರು ತಮ್ಮ ವಯಸ್ಸನ್ನು ಎಡಿಟ್ ಮಾಡಲು ID ಮತ್ತು ವೀಡಿಯೊ ಸೆಲ್ಫಿಗಳನ್ನು ಅಪ್‌ಲೋಡ್ ಮಾಡಬಹುದಾಗಿದೆ.

ಬ್ರೆಜಿಲ್

ಈಗಾಗಲೇ ಯುಎಸ್‌ನಲ್ಲಿ ಲಭ್ಯವಿದ್ದ ಈ ಆಯ್ಕೆಗಳು ಇದೀಗ ಭಾರತ ಮತ್ತು ಬ್ರೆಜಿಲ್ ಸೇರಿದಂತೆ ಹೆಚ್ಚಿನ ದೇಶಗಳಲ್ಲಿಯೂ ಕೂಡ ಲಭ್ಯವಾಗಲಿದೆ. ಇದರಿಂದ ಬಳಕೆದಾರರು ತಮ್ಮ ವಯಸ್ಸಿನ ಪರಿಶೀಲನೆಗಾಗಿ ಐಡಿಯನ್ನು ಅಪ್‌ಲೋಡ್‌ ಮಾಡಬೇಕಾಗುತ್ತದೆ. ಇಲ್ಲವೇ ತಮ್ಮನ್ನು ಗುರುತಿಸುವ ಸೆಲ್ಫಿ ವಿಡಿಯೋಗಳನ್ನು ಅಪ್‌ಲೋಡ್‌ ಮಾಡಬೇಕಾಗುತ್ತದೆ. ಇದರಿಂದ ಹದಿಹರೆಯದವರು ಮತ್ತು ವಯಸ್ಕರು ತಮ್ಮ ವಯಸ್ಸಿನವರೆ ಎಂದು ತಿಳಿಯಲು ಸಾಧ್ಯವಾಗಲಿದೆ.

ಆನ್‌ಲೈನ್

ಇನ್ನು ಜನರ ಗೌಪ್ಯತೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡಲು ನಾವು ಆನ್‌ಲೈನ್ ವಯಸ್ಸಿನ ಪರಿಶೀಲನೆಯಲ್ಲಿ ಪರಿಣತಿ ಹೊಂದಿರುವ ಯೋಟಿ ಕಂಪನಿಯೊಂದಿಗೆ ಸಹ ಪಾಲುದಾರರಾಗಿದ್ದೇವೆ ಎಂದು ಇನ್‌ಸ್ಟಾಗ್ರಾಮ್‌ ಬ್ಲಾಗ್‌ ಪೋಸ್ಟ್‌ನಲ್ಲಿ ಹೇಳಿಕೊಂಡಿದೆ. ವೀಡಿಯೊ ಸೆಲ್ಫಿಗಳ ಮೂಲಕ ಬಳಕೆದಾರರು ವೀಡಿಯೊವನ್ನು ತೆಗೆದುಕೊಳ್ಳುವ ಕಡೆಗೆ ಮಾರ್ಗದರ್ಶನ ನೀಡಲು ಆನ್-ಸ್ಕ್ರೀನ್ ಸೂಚನೆಗಳನ್ನು ಅನುಸರಿಸಲು ಆಯ್ಕೆ ಮಾಡಬೇಕಾಗುತ್ತದೆ.

ಡಿಜಿಟಲ್

ಅದರಂತೆ ಕ್ಯಾಪ್ಚರ್ ಅನ್ನು ಯೋತಿ, ಡಿಜಿಟಲ್ ಐಡಿ ಸೇವೆಯೊಂದಿಗೆ ಹಂಚಿಕೊಳ್ಳಲಾಗುತ್ತದೆ. ಇದು ಮುಖದ ವೈಶಿಷ್ಟ್ಯಗಳ ಆಧಾರದ ಮೇಲೆ ವ್ಯಕ್ತಿಯ ವಯಸ್ಸನ್ನು ಮಾತ್ರ ಪರಿಶೀಲಿಸುತ್ತದೆ. ನಂತರ ನಿಮ್ಮ ಚಿತ್ರವನ್ನು ಮೆಟಾ ಮತ್ತು ಯೋಟಿ ಎರಡರಿಂದಲೂ ಡಿಲೀಟ್‌ ಮಾಡಲಾಗುತ್ತದೆ ಎಂದು ಹೇಳಿದೆ. ಇಲ್ಲದಿದ್ದರೆ ನೀವು ನಿಮ್ಮ ಐಡಿ ಮೂಲಕವೂ ವಯಸ್ಸಿನ ಪರಿಶೀಲನೆಯನ್ನು ಮಾಡಬಹುದಾಗಿದೆ. ಇದಕ್ಕಾಗಿ ನೀವು ತಮ್ಮ ಐಡಿಗಳನ್ನು ಇನ್‌ಸ್ಟಾಗ್ರಾಮ್‌ನ ಏಜ್‌ ವೆರಿಫಿಕೇಷನ್‌ನಲ್ಲಿ ಶೇರ್‌ ಮಾಡಬೇಕಾಗುತ್ತದೆ.

ಇನ್‌ಸ್ಟಾಗ್ರಾಮ್‌

ಇದಲ್ಲದೆ ಇತ್ತೀಚಿಗೆ ಇನ್‌ಸ್ಟಾಗ್ರಾಮ್‌ ಹೊಸ ಪೇರೆಂಟಲ್ ಸೂಪರ್ ವಿಷನ್ ಟೂಲ್ಸ್ ಪರಿಚಯಿಸಿದೆ. ಇದರಿಂದ ಪೋಷಕರು ತಮ್ಮ ಮಕ್ಕಳು ಇನ್‌ಸ್ಟಾಗ್ರಾಮ್‌ನಲ್ಲಿ ನಡೆಸುವ ಆಕ್ಟಿವಿಟಿ ಮೇಲೆ ಕಂಟ್ರೋಲ್‌ ಮಾಡುವುದಕ್ಕೆ ಅವಕಾಶ ನೀಡಲಿದೆ. ಅಂದರೆ ನಿಮ್ಮ ಮಗು ಇನ್‌ಸ್ಟಾಗ್ರಾಮ್‌ನಲ್ಲಿ ಎಷ್ಟು ಸಮಯವನ್ನು ಕಳೆಯುತ್ತಾರೆ ಎನ್ನುವುದನ್ನು ಮೇಲ್ವಿಚಾರಣೆ ನಡೆಸುವುದಕ್ಕೆ ಅನುಮತಿಸಲಿದೆ. ಈ ಟೂಲ್ಸ ಮೂಲಕ ಮಿತಿಗಳನ್ನು ಸೆಟ್‌ ಮಾಡುವುದಕ್ಕೆ ಮತ್ತು ದಿನದಲ್ಲಿ ಬ್ರೇಕ್‌ ತೆಗೆದುಕೊಳ್ಳುವುದು ಯಾವಾಗ ಎನ್ನುವುದನ್ನು ನಿಗದಿಪಡಿಸುವುದಕ್ಕೆ ಅವಕಾಶ ಸಿಗಲಿದೆ.

ಪೋಷಕರು

ಪೋಷಕರು ತಮ್ಮ ಮಗು ಇನ್‌ಸ್ಟಾಗ್ರಾಮ್‌ನಲ್ಲಿ ಯಾವ ಅಕೌಂಟ್‌ಗಳನ್ನು ಪಾಲೋ ಮಾಡುತ್ತಿದೆ. ಆ ಖಾತೆಗಳನ್ನು ಫಾಲೋ ಮಾಡುವುದು ಸೂಕ್ತವೇ ಅನ್ನೊದನ್ನ ತಿಳಿಯಬಹುದಾಗಿದೆ. ಮಕ್ಕಳು ಫಾಲೋ ಮಾಡುವ ಖಾತೆಗಳನ್ನು ವೀಕ್ಷಿಸುವುದಕ್ಕೆ ಪೋಷಕರಿಗೆ ಸಾಧ್ಯವಾಗಲಿದೆ. ಜೊತೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಮಕ್ಕಳು ಯಾರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬುದರ ಕುರಿತು ಟ್ಯಾಬ್‌ಗಳನ್ನು ಇರಿಸಿಕೊಳ್ಳಲು ಪೋಷಕರಿಗೆ ಅನುಮತಿಸುತ್ತದೆ.

Best Mobiles in India

Read more about:
English summary
Instagram has been adding new age verification method in india.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X