ಇನ್‌ಸ್ಟಾಗ್ರಾಮ್‌ ಲೈಟ್‌ ಅಪ್ಲಿಕೇಶನ್‌ ಪರಿಚಯಿಸಲು ಫೇಸ್‌ಬುಕ್‌ ಸಿದ್ಧತೆ!

|

ಫೇಸ್‌ಬುಕ್‌ ಒಡೆತನದ ಇನ್‌ಸ್ಟಾಗ್ರಾಮ್‌ ಭಾರತದಲ್ಲಿ ಆಂಡ್ರಾಯ್ಡ್‌ ಬಳಕೆದಾರರಿಗೆ ಅಪ್ಲಿಕೇಶನ್‌ನ ಹೊಸ "ಲೈಟ್" ಆವೃತ್ತಿಯನ್ನು ಪರಿಚಯಿಸಲು ಸಿದ್ದತೆ ನಡೆಸಿದೆ. "Facebook Fuel For India" ವರ್ಚುವಲ್ ಈವೆಂಟ್‌ನಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದೆ. ಅಲ್ಲದೆ ಇದೇ ಈವೆಂಟ್‌ನಲ್ಲಿ "ಬಾರ್ನ್ ಆನ್ ಇನ್‌ಸ್ಟಾಗ್ರಾಮ್" ಕ್ರಿಯೆಟರ್‌ ಪ್ರೋಗ್ರಾಂನ ಎರಡನೇ ಆವೃತ್ತಿಯನ್ನು ಸಹ ಪರಿಚಯಿಸಿದೆ.

ಇನ್‌ಸ್ಟಾಗ್ರಾಮ್‌

ಹೌದು, ಜನಪ್ರಿಯ ಫೋಟೋ ಶೇರಿಂಗ್‌ ಅಪ್ಲಿಕೇಶನ್‌ ಇನ್‌ಸ್ಟಾಗ್ರಾಮ್‌ ತನ್ನ ಹೊಸ ಲೈಟ್‌ ಎಡಿಷನ್‌ ಅನ್ನು ಭಾರತದಲ್ಲಿ ಪರಿಚಯಿಸಲು ಸಿದ್ದತೆ ನಡೆಸಿದೆ. ಇನ್‌ಸ್ಟಾಗ್ರಾಮ್ ತನ್ನ ಲೈಟ್‌ ಆವೃತ್ತಿಯ ಪರೀಕ್ಷೆ ಮತ್ತು ಬಾರ್ನ್‌ ಆನ್‌ ಇನ್‌ಸ್ಟಾಗ್ರಾಮ್‌ ಆವೃತ್ತಿಯೊಂದಿಗೆ, ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಜನರಿಗೆ ಅಭಿವ್ಯಕ್ತಿ ಮತ್ತು ಸೃಜನಶೀಲತೆಯನ್ನು ಪ್ರಜಾಪ್ರಭುತ್ವೀಕರಿಸುವ ಗುರಿ ಹೊಂದಿದ್ದೇವೆ ಎಂದು ಹೇಳಿದೆ. ಇನ್ನುಳಿದಂತೆ ಇನ್‌ಸ್ಟಾಗ್ರಾಮ್ ಲೈಟ್‌ ಆವೃತ್ತಿಯ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಇನ್‌ಸ್ಟಾಗ್ರಾಮ್‌

ಇನ್‌ಸ್ಟಾಗ್ರಾಮ್‌ ತನ್ನ ಲೈಟ್‌ ಆವೃತ್ತಿಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಮೊದಲೇ ಭಾರತದಲ್ಲಿ ಪರಿಚಯಿಸಲು ಮುಂದಾಗಿದೆ. ಜಾಗತಿಕ ರೋಲ್‌ ಔಟ್‌ಗೆ ಮೊದಲು ಇನ್‌ಸ್ಟಾಗ್ರಾಮ್ ಭಾರತದಲ್ಲಿ ಫೀಚರ್ಸ್‌ ಅನ್ನು ಪರೀಕ್ಷಿಸುತ್ತಿರುವುದು ಇದೇ ಮೊದಲಲ್ಲ. ಈ ವೇದಿಕೆಯು ಕಳೆದ ಕೆಲವು ತಿಂಗಳುಗಳಲ್ಲಿ ಭಾರತದಲ್ಲಿ ಪಾದಾರ್ಪಣೆ ಮಾಡಿದ ಹೊಸ ಫೀಚರ್ಸ್‌ಗಳನ್ನು ಪ್ರದರ್ಶಿಸಿದೆ, ಇವುಗಳಲ್ಲಿ ಇದು ರೀಲ್ಸ್, ರೀಲ್ಸ್ ಟ್ಯಾಬ್ ಮತ್ತು ಲೈವ್ ರೂಮ್‌ಗಳನ್ನು ಒಳಗೊಂಡಿದೆ.

ಇನ್‌ಸ್ಟಾಗ್ರಾಮ್

ಇನ್ನು ಇನ್‌ಸ್ಟಾಗ್ರಾಮ್ ಲೈಟ್‌ನ ಹೊಸ ಆವೃತ್ತಿಯು 2MB ಗಿಂತಲೂ ಕಡಿಮೆ ಗಾತ್ರದಲ್ಲಿದೆ ಮತ್ತು ಹೆಚ್ಚಿನ ಜನರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹವಾಗಿ ಉಳಿಯುವ Instagram ಅನುಭವವನ್ನು ತಲುಪಿಸಲು ಇದನ್ನು ನಿರ್ಮಿಸಲಾಗಿದೆ. ಕಡಿಮೆ ಮೆಮೊರಿ ಫೋನ್‌ಗಳು ಮತ್ತು ಭಾರೀ ಗಾತ್ರದ ಅಪ್ಲಿಕೇಶನ್‌ಗಳ ಪರಿಣಾಮವಾಗಿ ಇಂಟರ್ನೆಟ್ ಸಮಸ್ಯೆಗಳನ್ನು ಎದುರಿಸುತ್ತಿರುವವರನ್ನು ಇದು ಗುರಿಯಾಗಿಸುತ್ತದೆ. ಅಲ್ಲದೆ ಆಂಡ್ರಾಯ್ಡ್‌ಗಾಗಿ ಆಪ್ ತಯಾರಿಸಲಾಗಿದ್ದು, ಈ ಹೊಸ ಆವೃತ್ತಿಯು ವೇಗ, ಕಾರ್ಯಕ್ಷಮತೆ ಮತ್ತು ಸ್ಪಂದಿಸುವಿಕೆಯನ್ನು ಸುಧಾರಿಸಿದೆ ಎಂದು ಇನ್‌ಸ್ಟಾಗ್ರಾಮ್ ತಿಳಿಸಿದೆ.

ಇನ್‌ಸ್ಟಾಗ್ರಾಮ್‌

ಇದಲ್ಲದೆ ಈ ಆಪ್ ಬಂಗಾಳಿ, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಪಂಜಾಬಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಲಭ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ. ಮುಂದಿನ ಪೀಳಿಗೆಯ ವಿಷಯ ರಚನೆಕಾರರನ್ನು ವೇದಿಕೆಯನ್ನು ಬಳಸಲು ಉತ್ತಮ ಅಭ್ಯಾಸಗಳೊಂದಿಗೆ ಸಜ್ಜುಗೊಳಿಸಲು ಮತ್ತು ಸಹಯೋಗ ಮತ್ತು ಮಾರ್ಗದರ್ಶನ ಅವಕಾಶಗಳೊಂದಿಗೆ ಅವುಗಳನ್ನು ಸಕ್ರಿಯಗೊಳಿಸಲು "ಬಾರ್ನ್‌ ಆನ್‌ ಇನ್‌ಸ್ಟಾಗ್ರಾಮ್‌" ಎರಡನೇ ಆವೃತ್ತಿಯನ್ನು ಪರಿಚಯಿಸಿದೆ. ಇದು ಇನ್‌ಸ್ಟಾಗ್ರಾಮ್‌ನಲ್ಲಿ, ವಿಶೇಷವಾಗಿ ರೀಲ್ಸ್‌ನಲ್ಲಿ ಹೊಸ ಫೀಚರ್ಸ್‌ಗಳನ್ನು ಸಂಯೋಜಿಸಲು ಪ್ರೋಗ್ರಾಂ ಅನ್ನು ಅಳವಡಿಸಲಾಗಿದೆ.

Best Mobiles in India

Read more about:
English summary
Facebook has started testing the Instagram Lite app in India, which will be less than 2MB in size.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X