ಕುತೂಹಲಕಾರಿ ಫೀಚರ್ಸ್‌ ಪರಿಚಯಿಸಿದ ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಮೆಸೆಂಜರ್!

|

ಕೆಲ ದಿನಗಳ ಹಿಂದೆಯಷ್ಟೇ ಇನ್‌ಸ್ಟಾಗ್ರಾಮ್‌ ತನ್ನ ಇನ್‌ಸ್ಟಾಗ್ರಾಮ್ ಡೈರೆಕ್ಟ್‌ ಮೆಸೇಜ್‌ಗಳನ್ನು ಫೇಸ್‌ಬುಕ್‌ ಮೆಸೆಂಜರ್‌ನೊಂದಿಗೆ ಕನೆಕ್ಟ್‌ ಮಾಡುವ ಆಯ್ಕೆಯನ್ನು ಪರಿಚಯಿಸಿದೆ. ಈ ಸಮಯದಲ್ಲಿ, ಇನ್‌ಸ್ಟಾಗ್ರಾಮ್ ವಾಚ್ ಟುಗೆದರ್, ವ್ಯಾನಿಶ್ ಮೋಡ್, ಮತ್ತು ಚಾಟ್ ಥೀಮ್‌ಗಳಂತಹ ಫೀಚರ್ಸ್‌ಗಳನ್ನು ಇನ್‌ಸ್ಟಾಗ್ರಾಮ್ ಡೈರೆಕ್ಟ್ ಮೆಸೇಜ್‌ಗಳು ಮತ್ತು ಫೇಸ್‌ಬುಕ್ ಮೆಸೆಂಜರ್ ಎರಡಕ್ಕೂ ಸೇರಿಸಲಾಗುವುದು ಎಂದು ಹೇಳಲಾಗಿತ್ತು. ಸದ್ಯ ಇದೀಗ ಈ ಫೀಚರ್ಸ್‌ ಗಳನ್ನು ಎರಡು ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಲಭ್ಯಗೊಳಿಸಿದೆ.

ಇನ್‌ಸ್ಟಾಗ್ರಾಮ್‌

ಹೌದು, ಇನ್‌ಸ್ಟಾಗ್ರಾಮ್‌ ಹಾಗೂ ಫೇಸ್‌ಬುಕ್‌ ಮೆಸೆಂಜರ್‌ನಲ್ಲಿ ಇದೀಗ ಇನ್‌ಸ್ಟಾಗ್ರಾಮ್ ವಾಚ್ ಟುಗೆದರ್, ವ್ಯಾನಿಶ್ ಮೋಡ್, ಮತ್ತು ಚಾಟ್ ಥೀಮ್‌ಗಳಂತಹ ಫೀಚರ್ಸ್‌ಗಳು ಎರಡು ಕಡೆ ಕೂಡ ಲಭ್ಯವಿವೆ. ಇನ್ನು ಹೆಸರೇ ಸೂಚಿಸುವಂತೆ, ವಾಚ್‌ಟುಗೆದರ್‌ ಫೀಚರ್ಸ್‌ ಸ್ನೇಹಿತರೊಂದಿಗೆ ಟ್ರೆಂಡಿಂಗ್ ವೀಡಿಯೊಗಳನ್ನು ವೀಕ್ಷಿಸಲು ನಿಮಗೆ ಅನುಮತಿಸುತ್ತದೆ. ನಿರ್ದಿಷ್ಟ ಸಮಯದ ನಂತರ ಸ್ವಯಂಚಾಲಿತವಾಗಿ ಕಣ್ಮರೆಯಾಗುವಂತೆ ಸಂದೇಶಗಳನ್ನು ಸೆಟ್‌ಮಾಡಲು ವ್ಯಾನಿಶ್ ಮೋಡ್ ನಿಮಗೆ ಅನುವು ಮಾಡಿಕೊಡುತ್ತದೆ. ಇನ್ನುಳಿದಂತೆ ಈ ಫೀಚರ್ಸ್‌ಗಳ ವಿಶೇಷತೆಯೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇನ್‌ಸ್ಟಾಗ್ರಾಮ್

ಇನ್‌ಸ್ಟಾಗ್ರಾಮ್ ಡೈರೆಕ್ಟ್‌ ಮೆಸೇಜ್‌ಗಳಲ್ಲಿ ಮತ್ತು ಮೆಸೆಂಜರ್‌ನಲ್ಲಿಯೂ ‘ವಾಚ್ ಟುಗೆದರ್' ಫೀಚರ್ಸ್‌ ಈಗ ಲಭ್ಯವಿದೆ ಎಂದು ಬ್ಲಾಗ್ ಪೋಸ್ಟ್‌ನಲ್ಲಿ ಫೇಸ್‌ಬುಕ್ ಖಚಿತಪಡಿಸಿದೆ. ಈ ಫೀಚರ್ಸ್‌ ಬಳಸಲು, ಬಳಕೆದಾರರು Instagram ಅಥವಾ ಮೆಸೆಂಜರ್‌ನಲ್ಲಿ ವೀಡಿಯೊ ಚಾಟ್ ಅನ್ನು ಪ್ರಾರಂಭಿಸಬೇಕಾಗುತ್ತದೆ. ವೀಡಿಯೊ ಚಾಟ್ ಪ್ರಾರಂಭವಾದ ನಂತರ ‘ವಾಚ್ ಟುಗೆದರ್' ಆಯ್ಕೆಯು ಮೆನು ಆಯ್ಕೆಯಲ್ಲಿ ಲಭ್ಯವಿರಲಿದೆ. ಇದನ್ನ ಬಳಸಿ ನೀವು ಮತ್ತು ನಿಮ್ಮ ಸ್ನೇಹಿತರು ಐಜಿಟಿವಿ, ರೀಲ್ಸ್, ಇತರ ಟಿವಿ ಕಾರ್ಯಕ್ರಮಗಳು, ಚಲನಚಿತ್ರಗಳು ಮತ್ತು ಟ್ರೆಂಡಿಂಗ್ ವೀಡಿಯೊಗಳನ್ನು ರಿಯಲ್‌ಟೈಂ ನಲ್ಲಿ ವೀಡಿಯೊ ಚಾಟ್ ಮೂಲಕ ಟ್ಯೂನ್ ಮಾಡಬಹುದು.

ಮೆಸೆಂಜರ್

ಇನ್ನು ಮೆಸೆಂಜರ್ ಬಳಕೆದಾರರು, ಮತ್ತು ಇನ್‌ಸ್ಟಾಗ್ರಾಮ್ ಬಳಕೆದಾರರು ಸಹ ಹೊಸ ಚಾಟ್ ಥೀಮ್‌ಗಳನ್ನು ಪಡೆಯಬಹುದಾಗಿದೆ. ಟೈ-ಡೈ ಮತ್ತು ಪ್ರೀತಿಯನ್ನ ವ್ಯಕ್ತಪಡಿಸುವ ವಿಷಯಗಳು ಇವುಗಳಲ್ಲಿ ಸೇರಿವೆ. ಇನ್ನು ನೀವು ಹೊಸ ಚಾಟ್‌ ಫೀಚರ್ಸ್‌ ಅನ್ನು ಆಪ್ಡೇಟ್‌ ಮಾಡಿದ ನಂತರ, Instagram ಮತ್ತು ಮೆಸೆಂಜರ್‌ನಲ್ಲಿ ಟೈನಿಟಾನ್ ಚಾಟ್ ಥೀಮ್ ಅನ್ನು ಸಕ್ರಿಯಗೊಳಿಸಲು ಸಾಧ್ಯವಾಗುತ್ತದೆ. ಎಮೋಜಿಗಳೊಂದಿಗೆ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಬಹುದಾಗಿದೆ. ಜೊತೆಗೆ ಹೊಸ ಆಲ್ಬಮ್‌ನಿಂದ ನಿಮ್ಮ ನೆಚ್ಚಿನ ಹಾಡುಗಳನ್ನು ಶೇರ್‌ ಮಾಡಿಕೊಳ್ಳಬಹುದು. ಅಲ್ಲದೆ Instagram ಮತ್ತು ಮೆಸೆಂಜರ್‌ನಲ್ಲಿ ಚಾಟ್ ಸೆಟ್ಟಿಂಗ್‌ಗಳಿಗೆ ಹೋಗುವ ಮೂಲಕ ಈ ಹೊಸ ವಿಷಯಗಳನ್ನು ಸಕ್ರಿಯಗೊಳಿಸಬಹುದು.

ಇನ್‌ಸ್ಟಾಗ್ರಾಮ್

ಇದಲ್ಲದೆ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಮೆಸೆಂಜರ್ ಎರಡು ಕೂಡ ಹೊಸ ವ್ಯಾನಿಶ್ ಮೋಡ್ ಅನ್ನು ಪಡೆದುಕೊಂಡಿವೆ. ಇದು ನೀವು ಚಾಟ್ ಥ್ರೆಡ್ ಅನ್ನು ಬಿಟ್ಟ ನಂತರ ಸಂದೇಶಗಳು ಕಣ್ಮರೆಯಾಗುವಂತೆ ಮಾಡುತ್ತದೆ. ಅಸ್ತಿತ್ವದಲ್ಲಿರುವ ಚಾಟ್ ಥ್ರೆಡ್‌ನಲ್ಲಿ ಸ್ವೈಪ್ ಮಾಡುವ ಮೂಲಕ ಇದನ್ನು ಆನ್ ಮಾಡಬಹುದು. ಅದನ್ನು ಆಫ್ ಮಾಡಲು, ಬಳಕೆದಾರರು ಮತ್ತೆ ಸ್ವೈಪ್ ಮಾಡಬೇಕಾಗುತ್ತದೆ. ಇನ್‌ಸ್ಟಾಗ್ರಾಮ್‌ನಲ್ಲಿ ಒಬ್ಬರನ್ನೊಬ್ಬರು ಅನುಸರಿಸುತ್ತಿರುವ ಅಥವಾ ಮೆಸೆಂಜರ್‌ನಲ್ಲಿ ಸಂಪರ್ಕ ಹೊಂದಿದ ಜನರು ಮಾತ್ರ ಒನ್-ಒನ್ ಚಾಟ್‌ಗಳಲ್ಲಿ ವ್ಯಾನಿಶ್ ಮೋಡ್ ಅನ್ನು ಬಳಸಬಹುದು ಎಂದು ಫೇಸ್‌ಬುಕ್ ಹೇಳುತ್ತದೆ. ಇದು ಆಪ್ಟ್-ಇನ್ ವೈಶಿಷ್ಟ್ಯವಾಗಿದ್ದು, ಬಳಕೆದಾರರು ಇರಲು ಆಯ್ಕೆ ಮಾಡಬಹುದು, ಅಥವಾ ಇಲ್ಲ ಎಂದು ಸಹ ಆಯ್ಕೆ ಮಾಡಬಹುದಾಗಿದೆ.

Best Mobiles in India

English summary
Facebook is slowly rolling out vanish mode to Messenger users in the US and a handful of other countries.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X