ಇನ್‌ಸ್ಟಾಗ್ರಾಮ್‌ ಪೋಸ್ಟ್‌ನಲ್ಲಿ ಪ್ರಾಡಕ್ಟ್‌ ಟ್ಯಾಗ್‌ ಟೂಲ್‌ ಬಳಸುವುದು ಹೇಗೆ?

|

ಮೆಟಾ ಒಡೆತನದ ಇನ್‌ಸ್ಟಾಗ್ರಾಮ್‌ ಜನಪ್ರಿಯ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ ಎನಿಸಿಕೊಂಡಿದೆ. ಬಳಕೆದಾರರ ನೆಚ್ಚಿನ ಫೋಟೋ ಮತ್ತು ವೀಡಿಯೊ ಶೇರಿಂಗ್‌ ಅಪ್ಲಿಕೇಶನ್‌ ಆಗಿರುವ ಇನ್‌ಸ್ಟಾಗ್ರಾಮ್‌ ಅನೇಕ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಬಳಕೆದಾರರ ಅನುಕೂಲಕ್ಕಾಗಿ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಸದ್ಯ ಇದೀಗ ತನ್ನ ಪೋಸ್ಟ್‌ಗಳಲ್ಲಿ ಪ್ರಾಡಕ್ಟ್‌ ಟ್ಯಾಗ್ಸ್‌ ಅನ್ನು ಆಡ್‌ ಮಾಡುವ ಹೊಸ ಸಾಮರ್ಥ್ಯವನ್ನು ಪರಿಚಯಿಸಿದೆ.

ಇನ್‌ಸ್ಟಾಗ್ರಾಮ್‌

ಹೌದು, ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡುವ ಬಳಕೆದಾರರು ಪ್ರಾಡಕ್ಟ್‌ ಟ್ಯಾಗಗಳನ್ನು ಆಡ್‌ ಮಾಡುವುದಕ್ಕೆ ಅವಕಾಶ ನೀಡಲಾಗಿದೆ. ಸದ್ಯ ಈ ಹೊಸ ಫೀಚರ್ಸ್‌ ಅನ್ನು ಯುನೈಟೆಡ್ ಸ್ಟೇಟ್ಸ್‌ನಲ್ಲಿರುವ ಪ್ರತಿಯೊಬ್ಬ ಬಳಕೆದಾರರಿಗೆ ವಿಸ್ತರಿಸುತ್ತಿದೆ ಎಂದು ಘೋಷಿಸಿದೆ. ಇದರಿಂದ ನೀವು ಯಾವುದೇ ಪೋಸ್ಟ್ ಅನ್ನು ಕ್ರಿಯೆಟ್‌ ಮಾಡುವಾಗ, ಎಲ್ಲಾ ಬಳಕೆದಾರರು ಬ್ರ್ಯಾಂಡ್ ಅನ್ನು ಟ್ಯಾಗ್ ಮಾಡಬಹುದಾಗಿದೆ. ಹಾಗಾದ್ರೆ ಇನ್‌ಸ್ಟಾಗ್ರಾಮ್‌ ಪೋಸ್ಟ್‌ನಲ್ಲಿ ಪ್ರಾಡಕ್ಟ್‌ ಟ್ಯಾಗ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಇನ್‌ಸ್ಟಾಗ್ರಾಮ್‌

ಇನ್‌ಸ್ಟಾಗ್ರಾಮ್‌ ತನ್ನ ಬಳಕೆದಾರರಿಗೆ ಪೋಸ್ಟ್‌ ಮಾಡುವಾಗ ಪ್ರಾಡಕ್ಟ್‌ ಟ್ಯಾಗ್‌ ಮಾಡುವುದಕ್ಕೆ ಅನುಮತಿಸಲಿದೆ. ಇದರಿಂದ ನೀವು ನಿಮ್ಮ ಪೋಸ್ಟ್‌ನಲ್ಲಿ ಬ್ರ್ಯಾಂಡ್‌ ಪ್ರಾಡಕ್ಟ್‌ ಅನ್ನು ಟ್ಯಾಗ್‌ ಮಾಡಬಹುದು. ನಿಮ್ಮ ಪೊಸ್ಟ್‌ ಅನ್ನು ವೀಕ್ಷಿಸುವವರು ಈ ಟ್ಯಾಗ್‌ಗಳನ್ನು ಟ್ಯಾಪ್ ಮಾಡುವ ಮೂಲಕ ಪ್ರಾಡಕ್ಟ್‌ಗಳ ಪೂರ್ತಿ ವಿವರವಾದ ಮಾಹಿತಿಯನ್ನು ತಿಳಿದುಕೊಳ್ಳಲು ಸಾಧ್ಯವಾಗಲಿದೆ. ಪ್ರಸ್ತುತ, ನೀವು ಫೀಡ್‌ ಪೋಸ್ಟ್‌ಗಳಲ್ಲಿ ಪ್ರಾಡಕ್ಟ್‌ಗಳನ್ನು ಮಾತ್ರ ಟ್ಯಾಗ್ ಮಾಡಬಹುದು. ಅಲ್ಲದೆ ಪ್ರಾಡಕ್ಟ್‌ ಟ್ಯಾಗಿಂಗ್ ಪಬ್ಲಿಕ್‌ ಆಕೌಂಟ್‌ಗಳಲ್ಲಿ ಮಾತ್ರ ಕಾರ್ಯನಿರ್ವಹಿಸಲಿದೆ. ಈ ಫೀಚರ್ಸ್‌ ಸ್ಟೋರೀಸ್‌ನಲ್ಲಿ ಲಭ್ಯವಾಗುವಂತೆ ಮಾಡಲು ಇನ್‌ಸ್ಟಾಗ್ರಾಮ್‌ ಕಾರ್ಯನಿರ್ವಹಿಸುತ್ತಿದೆ.

ಫೀಚರ್ಸ್‌

ಇನ್ನು ಈ ಹೊಸ ಫೀಚರ್ಸ್‌ ಬಗ್ಗೆ ಪ್ರತಿಕ್ರಿಯಿಸಿರುವ ಇನ್‌ಸ್ಟಾಗ್ರಾಮ್‌ ''ನಾವು ಪೋಸ್ಟ್‌ಗಳಲ್ಲಿ ಪ್ರಾಡಕ್ಟ್‌ ಟ್ಯಾಗಿಂಗ್ ಅನ್ನು ಸಕ್ರಿಯಗೊಳಿಸುವ ಮೂಲಕ ಅವರ ಹತ್ತಿರವಿರುವವರಿಗೆ ಸ್ಫೂರ್ತಿ ನೀಡಲು ಎಲ್ಲರಿಗೂ ಪ್ರವೇಶವನ್ನು ನೀಡುತ್ತಿದ್ದೇವೆ'' ಎಂದು ಹೇಳಿದೆ. ಇದಲ್ಲದೆ ನೀವು ಇಷ್ಟಪಡುವ ಬ್ರ್ಯಾಂಡ್‌ಗಳನ್ನು ಬೆಂಬಲಿಸುವುದರಿಂದ ಹಿಡಿದು ನಿಮ್ಮ ಸ್ನೇಹಿತರು ಮತ್ತು ಕುಟುಂಬದವರು ಇಷ್ಟಪಡಬಹುದಾದ ಹೊಸ ಪ್ರಾಡಕ್ಟ್‌ಗಳನ್ನು ಅನ್ವೇಷಿಸಲು ಸಹಾಯ ಮಾಡಲಿದೆ.

ಇನ್‌ಸ್ಟಾಗ್ರಾಮ್‌

ಇದಲ್ಲದೆ ಇನ್‌ಸ್ಟಾಗ್ರಾಮ್‌ ಪೋಸ್ಟ್ ಅನ್ನು ಕ್ರಿಯೆಟ್‌ ಮಾಡುವಾಗ, ಬ್ರ್ಯಾಂಡ್ ಅನ್ನು ಟ್ಯಾಗ್ ಮಾಡಲು ಟ್ಯಾಗಿಂಗ್ ಫೀಚರ್ಸ್‌ ಅನ್ನು ಬಳಸಿ ನಂತರ ಪ್ರಾಡಕ್ಟ್‌ ಅನ್ನು ಸ್ಪೇಸಿಫೈ ಮಾಡಬೇಕಿದೆ. ಇದರಿಂದ ನಿಮ್ಮ ಪ್ರಕಟಿತ ಫೀಡ್ ಪೋಸ್ಟ್‌ನಲ್ಲಿ ಯಾರಾದರೂ ನಿಮ್ಮ ಪ್ರಾಡಕ್ಟ್‌ ಟ್ಯಾಗ್ ಅನ್ನು ಟ್ಯಾಪ್ ಮಾಡಿದಾಗ, ಅವರು ಪ್ರಾಡಕ್ಟ್‌ ಕುರಿತು ವಿವರವಾದ ಮಾಹಿತಿಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ತಿಳಿದುಕೊಳ್ಳಬಹುದಾಗಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಾಡಕ್ಟ್‌ ಟ್ಯಾಗ್ ಅನ್ನು ಸೇರಿಸುವುದು ಹೇಗೆ?

ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಾಡಕ್ಟ್‌ ಟ್ಯಾಗ್ ಅನ್ನು ಸೇರಿಸುವುದು ಹೇಗೆ?

* ಮೊದಲಿಗೆ ಇನ್‌ಸ್ಟಾಗ್ರಾಮ್‌ ಫೀಡ್‌ನಲ್ಲಿ ಪೋಸ್ಟ್ ಕ್ರಿಯೆಟ್‌ ಮಾಡಲು ಪ್ರಾರಂಭಿಸಿ.
* ನಂತರ 'ಟ್ಯಾಗ್ ಪಿಪಲ್‌' ಅನ್ನು ಟ್ಯಾಪ್ ಮಾಡಿ.
* ಇದೀಗ ನೀವು ಮೊದಲು ಬ್ರ್ಯಾಂಡ್ ಅನ್ನು ಸರ್ಚ್‌ ಮಾಡಿ ಮತ್ತು ಟ್ಯಾಗ್ ಮಾಡಿ.
* ಇದರಲ್ಲಿ 'ಜನರು' ಮತ್ತು 'ಉತ್ಪನ್ನಗಳು' ಎಂದು ಲೇಬಲ್ ಮಾಡಲಾದ ಕೆಳಭಾಗದಲ್ಲಿ 2 ಆಯ್ಕೆಗಳನ್ನು ನೋಡಬಹುದು.
* ಈಗ 'ಪ್ರಾಡಕ್ಟ್‌ಗಳು' ಟ್ಯಾಪ್ ಮಾಡಿ.
* ಪ್ರಾಡಕ್ಟ್‌ಗಳನ್ನು ಟ್ಯಾಗ್ ಮಾಡುವುದನ್ನು ಪ್ರಾರಂಭಿಸಲು ಫೋಟೋವನ್ನು ಟ್ಯಾಪ್ ಮಾಡಿ. ಪ್ರಾಡಕ್ಟ್‌ ಅನ್ನು ಸರ್ಚ್‌ ಮಾಡಲು ವಿವರಣೆಗಳನ್ನು ಬಳಸಿ. ಒಮ್ಮೆ ನೀವು ಉತ್ಪನ್ನವನ್ನು ಕಂಡುಕೊಂಡರೆ, ಯಾವುದೇ ಶೈಲಿಗಳು ಮತ್ತು/ಅಥವಾ ಬಣ್ಣಗಳನ್ನು ನಿರ್ದಿಷ್ಟಪಡಿಸಿ, ನಂತರ ಟ್ಯಾಗ್ ಸೇರಿಸಲು ಟ್ಯಾಪ್ ಮಾಡಿ.
* ಇದೀಗ ಪೋಸ್ಟ್ ಅನ್ನು ಪ್ರಕಟಿಸಲು 'ಶೇರ್' ಒತ್ತಿರಿ.

Most Read Articles
Best Mobiles in India

Read more about:
English summary
Instagram product tag tool is now available for all users across US

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X