ಒಮ್ಮೆ ಪೋಲೀಸರ ಅಥಿತಿಯಾಗಿದ್ದ 'ಬಿಲ್‌ಗೇಟ್ಸ್' ಜೀವನದ ರೋಚಕ ವಿಷಯಗಳು ಇವು!!

|

ವಿಶ್ವದ ಅತಿದೊಡ್ಡ ಸಿರಿವಂತರಲ್ಲಿ ಒಬ್ಬರೆಂಬ ಸ್ಥಾನವನ್ನು ಕಳೆದ ಹಲವು ವರ್ಷಗಳಿಂದ ಸ್ಥಿರವಾಗಿ ಉಳಿಸಿಕೊಂಡು ಬಂದಿರುವ ಅಮೆರಿಕದ ಪ್ರಭಾವಿ ಉದ್ಯಮಿ, ಪರೋಪಕಾರಿ ಮತ್ತು ಮೈಕ್ರೋಸಾಫ್ಟ್‌ ಎಂಬ ಬೃಹತ್ ಸಾಫ್ಟ್‌ವೇರ್‌ ಕಂಪನಿಯ ಅಧ್ಯಕ್ಷರಾದ 'ವಿಲಿಯಂ ಹೆನ್ರಿ ಬಿಲ್‌ಗೇಟ್ಸ್' ಎಂಬ ಹೆಸರನ್ನು ಕೇಳದವರೇ ಇಲ್ಲ ಎಂದರೆ ತಪ್ಪಾಗಲಾರದು.

20ನೇ ಶತಮಾನವನ್ನು ಅತಿಯಾಗಿ ಪ್ರಭಾವಿಸಿದ ವಿಶ್ವದ 100 ಜನರಲ್ಲಿ ಒಬ್ಬರು ಎಂದು ಟೈಮ್‌ ನಿಯತಕಾಲಿಕೆಯಿಂದ ಗುರುತಿಸಿಕೊಂಡ ಇವರು, ದಿ ಗಾರ್ಡಿಯನ್ ಯು 2001ರಲ್ಲಿ ಪತ್ರಿಕೆ ಬಿಡುಗಡೆ ಮಾಡಿದ "ಮಾಧ್ಯಮದಲ್ಲಿನ 100 ಅತಿ ಪ್ರಭಾವಶೀಲ ಜನ"ರ ಪಟ್ಟಿಯಲ್ಲಿ ಇವರು ಒಬ್ಬರಾಗಿದ್ದರು ಎಂದರೆ ಇವರ ಹೆಸರು ಎಲ್ಲಿಯವರೆಗೆ ಪಸರಿಸಿತ್ತು ಎಂಬುದನ್ನು ತಿಳಿಯಬಹುದು.

ಒಮ್ಮೆ ಪೋಲೀಸರ ಅಥಿತಿಯಾಗಿದ್ದ 'ಬಿಲ್‌ಗೇಟ್ಸ್' ಜೀವನದ ರೋಚಕ ವಿಷಯಗಳು ಇವು!!

"ಫೋರ್ಬ್ಸ್ 400" ಪಟ್ಟಿಯಲ್ಲಿ 1993ರಿಂದ 2007ರವರೆಗೆ ಸ್ಥಾನದಲ್ಲಿದ್ದ ಗೇಟ್ಸ್ "ವಿಶ್ವದ ಅತ್ಯಂತ ದೊಡ್ಡ ಸಿರಿವಂತರ" ಪಟ್ಟಿಯಲ್ಲಿ 1995 ರಿಂದ 2007ರವರೆಗೆ ಮತ್ತು 2009ರಲ್ಲಿ ಅವರು ಮೊದಲ ಸ್ಥಾನದಲ್ಲಿದ್ದರು. ಇಂದು ವಿಶ್ವದ ಎರಡನೇ ಅತಿ ಹೆಚ್ಚು ಶ್ರೀಮಂತನಾಗಿರುವ ಬಿಲ್‌ಗೇಟ್ಸ್ ಅವರ ಆಸ್ತಿ ಮೌಲ್ಯ 1999ರಲ್ಲಿಯೇ 101 ಬಿಲಿಯನ್ ಡಾಲರ್ ಅನ್ನು ಮೀರಿತ್ತು ಎಂದರೆ ಆಶ್ಚರ್ಯವೇ.

ಇಂತಹ ಮಹಾನ್ ಸಾಧಕ ತನ್ನ ಜ್ಞಾನ, ಗಳಿಕೆ ಮತ್ತು ಪರೋಪಕಾರದಿಂದಲೇ ಹೆಸರುವಾಸಿಯಾದರೂ ಅವರ ಜೀವನದ ಕೆಲವು ಪ್ರಮುಖ ಘಟನೆಗಳು ಜನರಿಗೆ ಕುತೋಹಲವಾಗಿ ಕಂಡವು. ಹಾಗಾಗಿ, ಇಂದಿನ ಲೇಖನದಲ್ಲಿ ಬಿಲ್‌ಗೇಟ್ಸ್ ಅವರು ಜೀವನದಲ್ಲಿ ಹೇಗೆ ದುಡಿದಿದ್ದಾರೆ ಮತ್ತು ಅವರ ಜೀವನವು ಹೇಗೆಲ್ಲಾ ನಡೆದುಬಂತು ಎಂಬುದನ್ನು ನಾವು ತಿಳಿಯೋಣ

ಬಿಲ್‌ಗೇಟ್ಸ್ ಬಾಲ್ಯ ಹೇಗಿತ್ತು?

ಬಿಲ್‌ಗೇಟ್ಸ್ ಬಾಲ್ಯ ಹೇಗಿತ್ತು?

ವಿಲಿಯಂ ಎಚ್. ಗೇಟ್ಸ್, ಮತ್ತು ಮೇರಿ ಮ್ಯಾಕ್ಸ್‌ವೆಲ್ ಗೇಟ್ಸ್‌ ದಂಪತಿಗಳ ಮಗನಾಗಿ ಅಕ್ಟೋಬರ್ 28, 1955 ರಂದು ವಾಷಿಂಗ್ಟನ್‌ನ ಸಿಯಾಟಲ್‌ನಲ್ಲಿ ಬಿಲ್‌ಗೇಟ್ಸ್ ಜನಿಸಿದರು ಇವರದು ಮೇಲ್ಮಧ್ಯಮ ವರ್ಗದ ಕುಟುಂಬವಾಗಿತ್ತು. ಬಿಲ್‌ಗೇಟ್ಸ್ ಅವರು ಬಾಲ್ಯದಲ್ಲಿದ್ದಾಗ ತಮ್ಮ ಮಗ ಕಾನೂನು ಕ್ಷೇತ್ರದಲ್ಲಿ ವೃತ್ತಿಜೀವನ ನಡೆಸಬೇಕೆಂಬುದು ಗೇಟ್ಸ್ ಪೋಷಕರ ಬಯಕೆಯಾಗಿತ್ತು.

ಬಾಲ್ಯದಲ್ಲಿಯೇ ಸಾಫ್ಟ್‌ವೇರ್‌ ಮೋಡಿಗೊಳಗಾಗಿದ್ದರು .

ಬಾಲ್ಯದಲ್ಲಿಯೇ ಸಾಫ್ಟ್‌ವೇರ್‌ ಮೋಡಿಗೊಳಗಾಗಿದ್ದರು .

ಬಿಲ್‌ಗೇಟ್ಸ್ ಅನ್ನು ಅವರ 13ನೇ ವಯಸ್ಸಿನಲ್ಲಿ ಲೇಕ್‌ಸೈಡ್‌ ಸ್ಕೂಲ್‌ ಎಂಬ ಒಂದು ಮೀಸಲು ಪ್ರಾಥಮಿಕ ಶಾಲೆಗೆ ದಾಖಲಿಸಲಾಯಿತು. ಆಗತಾನೆ ಶಾಲೆಗೆ ಬಂದಿದ್ದ ಕಂಪ್ಯೂಟರ್‌ನತ್ತ ಗೇಟ್ಸ್ ಹೆಚ್ಚು ಆಸಕ್ತಿ ವಹಿಸುತ್ತಿದ್ದರು. ಸಾಫ್ಟ್‌ವೇರ್‌ ಕೋಡ್‌ಗಳನ್ನು ಎಲ್ಲ ಸಮಯದಲ್ಲೂ ಕರಾರುವಾಕ್ಕಾಗಿ ಕಾರ್ಯರೂಪಕ್ಕೆ ತರುವ ಕಾರ್ಯಕ್ಷಮತೆಯ ಪರಿಯಿಂದ ಗೇಟ್ಸ್‌ ಮೋಡಿಗೊಳಗಾಗಿದ್ದರು.

ಕಂಪ್ಯೂಟರ್ ಸೆಂಟರ್ ಕಾರ್ಪೊರೇಶನ್‌ನಿಂದ ನಿಷೇಧ

ಕಂಪ್ಯೂಟರ್ ಸೆಂಟರ್ ಕಾರ್ಪೊರೇಶನ್‌ನಿಂದ ನಿಷೇಧ

ಲೇಕ್‌ಸೈಡ್‌ ಸ್ಕೂಲ್‌ನ ನಾಲ್ವರು ವಿದ್ಯಾರ್ಥಿಗಳಾದ ಗೇಟ್ಸ್‌, ಪಾಲ್‌ ಅಲೆನ್‌, ರಿಕ್ ವೀಲ್ಯಾಂಡ್, ಮತ್ತು ಕೆಂಟ್‌ ಇವಾನ್ಸ್ ಅವರು ಸೇರಿ ಕಂಪ್ಯೂಟರ್ ಸೆಂಟರ್‌ ಕಾರ್ಪೊರೇಷನ್‌ (CCC)ಸಂಸ್ಥೆಗೆ ಸೇರಿದ್ದ PDP-10ಕಂಪ್ಯೂಟರ್‌ನಲ್ಲಿ ಆಪರೇಟಿಂಗ್‌ ಸಿಸ್ಟಂನಲ್ಲಿದ್ದ ನ್ಯೂನತೆಗಳ ಪ್ರಯೋಜನವನ್ನು ಪಡೆಯುತ್ತಿದ್ದರು. ಆಪರೇಟಿಂಗ್‌ ಸಿಸ್ಟಂನಲ್ಲಿದ್ದ ನ್ಯೂನತೆಗಳ ಪ್ರಯೋಜನವನ್ನು ಪಡೆಯುತ್ತಿದ್ದ ಕಾರಣಕ್ಕಾಗಿ ಕಂಪನಿಯು ಅವರನ್ನು ಹಿಡಿದುಹಾಕಿದ ನಂತರ ಕೆಲ ಅವಧಿಗೆ ಬಹಿಷ್ಕಾರ ಹೇರಿತ್ತು.

17ರ ಹರೆಯದಲ್ಲೇ ಕಂಪ್ಯೂಟರ್ ಪ್ರೊಗ್ರಾಮ್ ಮಾರಿದ್ದರು!

17ರ ಹರೆಯದಲ್ಲೇ ಕಂಪ್ಯೂಟರ್ ಪ್ರೊಗ್ರಾಮ್ ಮಾರಿದ್ದರು!

ಗೇಟ್ಸ್‌ BASICನಲ್ಲಿ GE ಸಿಸ್ಟಮ್‌ನ್ನು ಪ್ರೋಗ್ಯ್ರಾಮ್‌ ಮಾಡಲು ಆಸಕ್ತಿ ವಹಿಸಿದರು. ಇದನ್ನು ಸಾಧಿಸಲು ಇವರಿಗೆ ಗಣಿತ ತರಗತಿಗಳಿಂದ ವಿಯಾಯಿತಿ ದೊರೆಯಿತು. ಇದೇ ಯಂತ್ರದ ಮೇಲೆ ಗೇಟ್ಸ್‌ ತಮ್ಮ ಮೊದಲ ಕಂಪ್ಯೂಟರ್‌ ಪ್ರೊಗ್ರಾಮ್‌ ಅನ್ನು ಬರೆದರು. ತಮ್ಮ 17 ರ ಹರೆಯದಲ್ಲೇ ಪ್ರಥಮ ಕಂಪ್ಯೂಟರ್ ಪ್ರೊಗ್ರಾಮ್ ಅನ್ನು ಮಾರಾಟ ಮಾಡಿದರು.

ಬಿಲ್‌ಗೇಟ್ಸ್ ನಂತರದ  ಶಿಕ್ಷಣ!

ಬಿಲ್‌ಗೇಟ್ಸ್ ನಂತರದ ಶಿಕ್ಷಣ!

ಬಿಲ್‌ಗೇಟ್ಸ್ ಅವರು 1973ರಲ್ಲಿ ಲೇಕ್‌ಸೈಡ್‌ ಸ್ಕೂಲ್‌ನಿಂದ ಪದವಿ ಪಡೆದರು. ಇವರು ಹೆಸರಾಂತ SAT ಪರೀಕ್ಷೆಯಲ್ಲಿ 1600ಕ್ಕೆ 1590 ಅಂಕ ಗಳಿಸಿದರು. ತರುವಾಯ ಉನ್ನತ ವಿದ್ಯಾಭ್ಯಾಸಕ್ಕಾಗಿ 1973ರ ಅಂತ್ಯದ ವೇಳೆಗೆ ಹಾರ್ವರ್ಡ್ ಕಾಲೇಜ್‌ಗೆ ಸೇರಿದರು. ನಿಮಗೆ ಗೊತ್ತಾ?. 1990ರ ದಶಕದ ಮಧ್ಯ ಭಾಗಕ್ಕೂ ಮುಂಚೆ SAT ಪರೀಕ್ಷೆಯಲ್ಲಿ 1590 ಅಂಕ ಗಳಿಸಿದರೆ, ಅಂತಹವರ IQ ಅಂದಾಜು 170ಎಂದು ಭಾವಿಸಲಾಗಿತ್ತು.

ಕಾಲೇಜಿಗೆ ಹೋಗಲಿಲ್ಲ

ಕಾಲೇಜಿಗೆ ಹೋಗಲಿಲ್ಲ

ಬಿಲ್‌ಗೇಟ್ಸ್ ಹಾರ್ವರ್ಡ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ ಸಮಯದಲ್ಲಿ ಒಂದು ನಿಶ್ಚಿತವಾದ ಅಧ್ಯಯನದ ಯೋಜನೆಯನ್ನು ಹೊಂದಿರಲಿಲ್ಲ. ಅಲ್ಲಿಯೂ ಕಂಪ್ಯೂಟರ್‌ಗಳನ್ನು ಬಳಸುವುದರಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದರು. ತನ್ನ ಬಾಲ್ಯ ಸ್ನೇಹಿತ ಪಾಲ್‌ ಅಲೆನ್‌ರೊಂದಿಗೆ ಸಂಪರ್ಕ ಉಳಿಸಿಕೊಂಡಿದ್ದ ಬಿಲ್‌ಗೇಟ್ಸ್ ತಮ್ಮದೇ ಸ್ವಂತ ಕಂಪ್ಯೂಟರ್‌ ಸಾಫ್ಟ್‌ವೇರ್‌ ಕಂಪನಿಯನ್ನು ಸ್ಥಾಪಿಸಲು ಮುಂದಾದರು. ಇದಕ್ಕೆ ಪೋಷಕರ ಸಮ್ಮತಿ ಪ್ರೋತ್ಸಾಹ ಸಹ ದೊರೆಯಿತು.

ಮೈಕ್ರೋ-ಸಾಫ್ಟ್‌!!

ಮೈಕ್ರೋ-ಸಾಫ್ಟ್‌!!

ಗೇಟ್ಸ್‌ ಮತ್ತು ಅಲೆನ್ ಸೇರಿ ಪಾಲುದಾರಿಕೆಯಲ್ಲಿ "ಮೈಕ್ರೋ-ಸಾಫ್ಟ್‌" ಎಂದು ಹೆಸರಿಸಿ ತಮ್ಮ ಮೊದಲ ಕಚೇರಿಯನ್ನು ಅಲ್ಬುಕರ್ಕ್‌ನಲ್ಲಿ ತೆರೆದರು. ನಂತರ ಒಂದೇ ವರ್ಷದಲ್ಲಿ ಕಂಪನಿಯ ಹೆಸರಿನ ನಡುವೆ ಇದ್ದ ಅಡ್ಡಗೆರೆ ತೆಗೆದು ಮೈಕ್ರೋಸಾಫ್ಟ್‌ ಆಯಿತು. 1976ರ ನವೆಂಬರ್‌‌ 25ರಂದು "ಮೈಕ್ರೋಸಾಫ್ಟ್‌" ಹೆಸರಿನ ವ್ಯಾಪಾರನಾಮವನ್ನು ಸೆಕ್ರೆಟರಿ ಆಫ್‌ ಸ್ಟೇಟ್‌ ಆಫ್‌ ನ್ಯೂ ಮೆಕ್ಸಿಕೋ ಕಚೇರಿಯಲ್ಲಿ ನೋಂದಾಯಿಸಲಾಯಿತು.

31 ರ ಹರೆಯಲ್ಲೇ ಬಿಲಿಯಾಧಿಪತಿ

31 ರ ಹರೆಯಲ್ಲೇ ಬಿಲಿಯಾಧಿಪತಿ

ಬಿಲ್‌ಗೇಟ್ಸ್ ತನ್ನ 30 ರ ಹರೆಯದಲ್ಲೇ ಬಿಲಿಯಾಧಿಪತಿಯಾಗುತ್ತೇನೆಂದು ತನ್ನ ವಿಶ್ವವಿದ್ಯಾಲಯದ ಶಿಕ್ಷಕರಲ್ಲಿ ಗೇಟ್ಸ್ ಹೇಳಿದ್ದರಂತೆ. ಹಾಗೆ ಅವರು ಹೇಳಿದಂತೆಯೇ ತಮ್ಮ 31 ರ ಹರೆಯದಲ್ಲೇ ಇವರು ಬಿಲಿಯಾಧಿಪತಿಯಾಗಿಬಿಟ್ಟರು. ಅಲ್ಲಿಂದ ಇಲ್ಲಿಯವರೆಗೂ ಬಿಲ್‌ಗೇಟ್ಸ್ ಸಂಪತ್ತು ಏರುತ್ತಲೇ ಇದೆ. ಅವರು ಅಷ್ಟೇ ಹಣವನ್ನು ದಾನ ಮಾಡುತ್ತಲೇ ಇದ್ದಾರೆ.

ಬಂಧನಕ್ಕೆ ಒಳಗಾಗಿದ್ದರು!!

ಬಂಧನಕ್ಕೆ ಒಳಗಾಗಿದ್ದರು!!

ಜಗತ್ತಿನ ಅತಿ ದೊಡ್ಡ ಸಾಫ್ಟ್‌ವೇರ್ ಕಂಪೆನಿಯ ಸ್ಥಾಪಕರಾದ ಬಿಲ್ ಗೇಟ್ಸ್ ಒಮ್ಮೆ ಪೋಲೀಸರ ಅತಿಥಿ ಕೂಡ ಆಗಿದ್ದರು. ನ್ಯೂ ಮೆಕ್ಸಿಕೋದಲ್ಲಿ ಕಾನೂನು ಬಾಹಿರವಾಗಿ ರೆಡ್ ಲೈಟ್ (ಕೆಂಪು ದೀಪ) ಹಾಗೂ ಪರವನಗಿಯಿಲ್ಲದೆ ಗಾಡಿ ಚಲಾಯಿಸಿದ್ದಕ್ಕೆ ಪೋಲೀಸರು ಇವರನ್ನು ಬಂಧಿಸಿದ್ದರು ಎಂದರೆ ಎಲ್ಲರಿಗೂ ಆಶ್ಚರ್ಯವಾಗುವುದು ಖಂಡಿತ.

ಹೊಸ ವರ್ಷದಂದೇ ವಿವಾಹ

ಹೊಸ ವರ್ಷದಂದೇ ವಿವಾಹ

ತಮ್ಮ ದೀರ್ಘ ಸಮಯದ ಗೆಳತಿಯಾದ ಮೆಲಿಂಡಾ ಫ್ರೆಂಚ್ ಅನ್ನು ಬಿಲ್ ಗೇಟ್ಸ್ ಜನವರಿ 1 1994 ರಂದು ವಿವಾಹವಾದರು. ಇವರಿಗೆ ಜೆನ್ನಿಫರ್‌ ಕ್ಯಾಥರಿನ್‌ (1996), ರೋರಿ ಜಾನ್‌ (1999) ಮತ್ತು ಫೋಬೆ ಅಡೆಲೆ (2002) ಎಂಬ ಮೂವರು ಮಕ್ಕಳಿದ್ದಾರೆ. ನಿಮಗೆ ಗೊತ್ತಾ? ಮಕ್ಕಳು 14 ನೇ ವಯಸ್ಸಿಗೆ ಬರುವವರೆಗೂ ಬಿಲ್‌ಗೇಟ್ಸ್ ಅವರಿಗೆ ಮೊಬೈಲ್ ಅನ್ನು ನಿಡಿರಲಿಲ್ಲವಂತೆ.

ಬಿಲ್‌ಗೇಟ್ಸ್ ಎಸ್ಟೇಟ್‌!

ಬಿಲ್‌ಗೇಟ್ಸ್ ಎಸ್ಟೇಟ್‌!

66,000 ಚದರ ಅಡಿಗಳ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಇವರ 60 ಅಡಿಯ ಒಂದು ಈಜುಕೊಳ, ಇದರ ಅಡಿಯಲ್ಲಿ ಸಂಗೀತ ವ್ಯವಸ್ಥೆ, 2500 ಚದರ ಅಡಿ ವ್ಯಾಯಾಮ ಕೊಠಡಿ ಮತ್ತು 1000 ಚದರ ಅಡಿಗಳ ಊಟದ ಕೊಠಡಿಗಳನ್ನು ಒಳಗೊಂಡಿದೆ.ಕಿಂಗ್‌ ಕೌಂಟಿ ಸಾರ್ವಜನಿಕ ದಾಖಲೆಗಳ ಪ್ರಕಾರ, 2006ರಲ್ಲಿದ್ದಂತೆ ಈ ಆಸ್ತಿಯ (ಜಮೀನು ಮತ್ತು ಮನೆ ) ಒಟ್ಟು ನಿರ್ಧಾರಿತ ಮೌಲ್ಯವು 125 ದಶಲಕ್ಷ$ ಹಾಗೂ ಇದರ ವಾರ್ಷಿಕ ಆಸ್ತಿ ತೆರಿಗೆ 991,000$ನಷ್ಟಿದೆ.

ಲೋಕೋಪಕಾರಿ ಗೇಟ್ಸ್!!

ಲೋಕೋಪಕಾರಿ ಗೇಟ್ಸ್!!

ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿರುವ ವಿಶ್ವದ ಬೃಹತ್‌ ದತ್ತಿ ಪ್ರತಿಷ್ಠಾನ ಎಂಬ ಹೆಗ್ಗಳಿಕೆ ಪಡೆದಿರುವ ಬಿಲ್‌ & ಮೆಲಿಂಡ ಗೇಟ್ಸ್ ಫೌಂಡೇಷನ್ ಎಂಬ ದತ್ತಿ ಪ್ರತಿಷ್ಠಾನದಿಂದ ಸರ್ಕಾರಗಳು ಮತ್ತು ಇತರೆ ಸಂಸ್ಥೆಗಳು ನಿರ್ಲಕ್ಷಿಸಿರುವ ಜಾಗತಿಕ ಸಮಸ್ಯೆಗಳನ್ನು ಪರಿಹರಿಸಲು ರೂಪುರೇಷೆಯನ್ನು ಬಿಲ್‌ಗೇಟ್ಸ್ ಮತ್ತು ಅವರ ತಂಡ ತಯಾರಿಸಿ ಸಮಸ್ಯೆ ತೊಲಗಿಸಲು ಮುಂದಾಯಿತು. ಲ್‌ ಮತ್ತು ಮೆಲಿಂಡ ಗೇಟ್ಸ್‌ ಅಮೆರಿಕದ ಉದಾರ ಪರೋಪಕಾರಿಗಳು ಎಂದು ಕರೆಸಿಕೊಂಡಿದ್ದು, ಇವರು 28 ಶತಕೋಟಿ $ಗೂ ಹೆಚ್ಚಿನ ಹಣವನ್ನು ದಾನವಾಗಿ ನೀಡಿದ್ದಾರೆ

ಇಂಗ್ಲೆಂಡಿನ ರಾಣಿಯಿಂದ ನೈಟ್‌ಹುಡ್

ಇಂಗ್ಲೆಂಡಿನ ರಾಣಿಯಿಂದ ನೈಟ್‌ಹುಡ್

ಮಾರ್ಚ್ 2005 ರಂದು ಗೇಟ್ಸ್ ಗೌರವಾನ್ವಿತ ನೈಟ್ ಹುಟ್ ಪ್ರಶಸ್ತಿಯನ್ನು ಇಂಗ್ಲೆಂಡಿನ ರಾಣಿಯಿಂದ ಪಡೆದುಕೊಂಡರು. ಜಗತ್ತಿನ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಬಡತನ ಮತ್ತು ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಿಸುವಲ್ಲಿ ಅವರ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ಅವರಿಗೆ ನೀಡಲಾಯಿತು. ಇದಲ್ಲದೇ ವಿಶ್ವದ 6 ಕ್ಕೂ ಹೆಚ್ಚು ವಿಶ್ವ ವಿದ್ಯಾಲಯಗಳು ಅವರಿಗೆ ಗೌರವ ಡಾಕ್ಟರೇಟ್ ಪದವಿಗಳನ್ನು ನೀಡಿ ಗೌರವಿಸಿವೆ.

Best Mobiles in India

English summary
Bill Gates aimed to become a millionaire by the age of 30. However, he became a billionaire at 31.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X