ಜಿಯೋ ಇದೆ ಎಂದು ಬೀಗಬೇಡ...ಇಲ್ಲಿದೆ ನೋಡು ಶಾಕಿಂಗ್ ಸುದ್ದಿ!!

|

ಜಿಯೋ ಬಂದ ನಂತರ ಅತ್ಯಂತ ಕಡಿಮೆ ಬೆಲೆಯಲ್ಲಿ ಹೈ ಸ್ಪೀಡ್ ಇಂಟರ್‌ನೆಟ್ ಸಿಕ್ಕಿದ ಖುಷಿಯಲ್ಲಿ ನಾವಿದ್ದೇವೆ. ಆದರೆ, ಸ್ಪೀಡ್ ಇಂಟರ್‌ನೆಟ್ ನಮಗೆ ಸಿಕ್ಕಿದ ನಂತರ ನಮ್ಮ ಆರೋಗ್ಯವನ್ನು ನಾವೇ ಹಾಳು ಮಾಡಿಕೊಳ್ಳುತ್ತಿದ್ದೇವೆ ಎಂಬ ಸತ್ಯವನ್ನು ನಾವು ಮರೆತಿದ್ದೇವೆ. ಏಕೆಂದರೆ, ಈಗ ಎಲ್ಲರೂ ಆತಂಕಪಡಬೇಕಾದ ಸುದ್ದಿಯನ್ನು ಅಧ್ಯಯನವೊಂದು ಹೊರಹಾಕಿದೆ.

ಹೌದು, ಇತ್ತೀಚಿಗೆ ದಿನದಿಂದ ದಿನಕ್ಕೆ ಅಂತರ್ಜಾಲದ ವೇಗ ಹೆಚ್ಚಾಗುತ್ತಿದೆ. ಇದರಿಂದ ಅಂತರ್ಜಾಲ ಬಳಕೆದಾರರು ಖುಷಿಯಾಗಿದ್ದರೆ, ಅವರಿಗೆ ತಿಳಿಯದಂತೆ ಅವರ ಆರೋಗ್ಯ ಹದಗೆಡುತ್ತಿದೆ. ಹೈ ಸ್ಪೀಡ್ ಇಂಟರ್ನೆಟ್ ರಾತ್ರಿ ವೇಳೆ ನಿದ್ದೆಯ ಅವಧಿಯನ್ನು ಕದ್ದು ನಿದ್ದೆಯ ಗುಣಮಟ್ಟವನ್ನು ಹಾಳು ಮಾಡುತ್ತಿದೆ. ಇದು ಖಂಡಿತವಾಗಿಯೂ ಒಳ್ಳೆಯದಲ್ಲ ಎಂದು ಅಧ್ಯಯನ ಎಚ್ಚರಿಸಿದೆ.

<strong>ಟ್ರಾಫಿಕ್ ಪೊಲೀಸರಿಗೆ ಶಾಕ್ ನೀಡಿದ ಸರ್ಕಾರ!..ಸಾರ್ವಜನಿಕರಿಗೆ ಸಿಹಿಸುದ್ದಿ!!</strong>ಟ್ರಾಫಿಕ್ ಪೊಲೀಸರಿಗೆ ಶಾಕ್ ನೀಡಿದ ಸರ್ಕಾರ!..ಸಾರ್ವಜನಿಕರಿಗೆ ಸಿಹಿಸುದ್ದಿ!!

ಜಿಯೋ ಇದೆ ಎಂದು ಬೀಗಬೇಡ...ಇಲ್ಲಿದೆ ನೋಡು ಶಾಕಿಂಗ್ ಸುದ್ದಿ!!

ಜರ್ನಲ್ ಆಫ್ ಎಕನಾಮಿಕ್ ಬಿಹೇವಿಯರ್ ಮತ್ತು ಆರ್ಗನೈಸೇಷನ್ ನಡೆಸಿರುವ ಅಧ್ಯಯನದ ಪ್ರಕಾರ, ಡಿಎಸ್ಎಲ್ ಇಂಟರ್‌ನೆಟ್ ಬಳಸುವವರು ಇಂಟರ್‌ನೆಟ್ ಬಳಸದೇ ಇರುವವರಿಗಿಂತ ಕಡಿಮೆ ನಿದ್ದೆಯನ್ನು ಮಾಡುತ್ತಾರಂತೆ. ಹಾಗಾದರೆ, ಏನಿದು ಶಾಕಿಂಗ್ ಸುದ್ದಿ? ರಾತ್ರಿವೇಳೆ ಏಕೆ ಮೊಬೈಲ್ ಬಳಸಬಾರದು ಎಂಬ ಮಾಹಿತಿಗಳನ್ನು ಮುಂದೆ ತಿಳಿಯಿರಿ.

ಆರೋಗ್ಯಕ್ಕೆ ಹೆಚ್ಚು ಮಾರಕ!

ಆರೋಗ್ಯಕ್ಕೆ ಹೆಚ್ಚು ಮಾರಕ!

ಒಬ್ಬ ಮನುಷ್ಯನಿಗೆ ದಿನಕ್ಕೆ ಅಗತ್ಯವಿರುವ 7 ರಿಂದ 9 ಕನಿಷ್ಟ ಘಂಟೆಯ ನಿದ್ದೆಯನ್ನು ಇಂಟರ್ನೆಟ್ ಬಳಕೆದಾರರು ತಪ್ಪಿಸಿಕೊಳ್ಳುತ್ತಾರೆ ಮತ್ತು ಅದರಿಂದ ಅತೃಪ್ತಿಯನ್ನು ಅನುಭವಿಸುತ್ತಾರೆ. ದಿನವಿಡೀ ಹೆಚ್ಚು ಸ್ಪೀಡ್ ಇರುವ ಅಂತರ್ಜಾಲವನ್ನು ಬಳಸುತ್ತಲೇ ಇರುವುದು ಕೆಲವರಿಗೆ ಅಭ್ಯಾಸವಾಗಿ ಬಿಡುತ್ತದೆ. ಇದು ಅವರ ಆರೋಗ್ಯಕ್ಕೆ ಹೆಚ್ಚು ಮಾರಕ ಎಂದು ಅಧ್ಯಯನ ತಿಳಿಸಿದೆ.

ನಿದ್ದೆಯ ತೃಪ್ತಿ ಇಲ್ಲ!

ನಿದ್ದೆಯ ತೃಪ್ತಿ ಇಲ್ಲ!

ಇಟಲಿಯ ಬೊಕ್ಕೊನಿ ವಿಶ್ವವಿದ್ಯಾಲಯ ನಡೆಸಿರುವ ಅಧ್ಯಯನ ಮತ್ತು ಯುಎಸ್ ನ ಪಿಟ್ಸ್ಬರ್ಗ್ ವಿಶ್ವವಿದ್ಯಾಲಯ ಹೇಳುವಂತೆ, ಹೆಚ್ಚು ವೇಗದ ಅಂತರ್ಜಾಲ ಸಂಪರ್ಕ ಬಳಸುವುದರ ಪರಿಣಾಮದಿಂದಾಗಿ ಆ ವ್ಯಕ್ತಿಯ ನಿದ್ದೆ ತೃಪ್ತಿಯು ಅವರಿಗೆ ಲಭ್ಯವಾಗುವುದಿಲ್ಲ. ಯಾಕೆಂದರೆ ಅವರು ಮಾರನೆಯ ದಿನ ಬೆಳಿಗ್ಗೆ ಕೆಲಸದ ಕಾರಣದಿಂದ ಬೇಗನೆ ಏಳುತ್ತಾರೆ.

ಅಭ್ಯಾಸವಾಗಿ ಬಿಡುತ್ತದೆ.

ಅಭ್ಯಾಸವಾಗಿ ಬಿಡುತ್ತದೆ.

ದಿನವಿಡೀ ಹೆಚ್ಚು ಸ್ಪೀಡ್ ಇರುವ ಇಂಟರ್ನೆಟ್ ಬಳಕೆ ಮಾಡುವುದು ಅಥವಾ ಮಲಗಿಕೊಂಡು ಕೂಡ ಅಂತರ್ಜಾಲವನ್ನು ಬಳಸುತ್ತಲೇ ಇರುವುದು ಕೆಲವರಿಗೆ ಅಭ್ಯಾಸವಾಗಿ ಬಿಡುತ್ತದೆ. ಡಿಜಿಟಲ್ ಸಾಧನಗಳ ಬಳಕೆಯ ಅಭ್ಯಾಸವು ಮನುಷ್ಯನ ಒಟ್ಟಾರೆ ಆರೋಗ್ಯದ ಮೇಲೆ ದುಷ್ಪರಿಣಾಮವನ್ನುಂಟು ಮಾಡುತ್ತದೆ. ಹಲವಾರು ರೋಗಗಳಿಗೆ ಮನುಷ್ಯ ತುತ್ತಾಗುತ್ತಾನೆ.

ರಾತ್ರಿವೇಳೆ ಹೆಚ್ಚು ಮೊಬೈಲ್ ಬಳಕೆ!

ರಾತ್ರಿವೇಳೆ ಹೆಚ್ಚು ಮೊಬೈಲ್ ಬಳಕೆ!

ಇತ್ತೀಚಿನ ದಿನಗಳಲ್ಲಿ ರಾತ್ರಿ ಸಮಯದಲ್ಲಿ ಸ್ಮಾರ್ಟ್‌ಫೋನ್ ಬಳಕೆ ಮಾಡುವವರ ಪ್ರಮಾಣ ಹೆಚ್ಚಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಶೇ. 75 ಕ್ಕಿಂತ ಹೆಚ್ಚು ಯುವಜನರು ರಾತ್ರಿ ಸ್ಮಾರ್ಟ್‌ಫೋನ್ ಬಳಕೆಯಿಂದ ನಿದ್ದೆ ಮಾಡುತ್ತಿಲ್ಲ ಎಂಬ ಶಾಕಿಂಗ್ ವಿಷಯವನ್ನು ಅಧ್ಯಯನವೊಂದು ತಿಳಿಸಿದೆ.

ಮಾನಸಿಕ ಖಿನ್ನತೆ

ಮಾನಸಿಕ ಖಿನ್ನತೆ

ಜನರಿಗೆ ಸ್ಮಾರ್ಟ್‌ಪೋನ್ ಸಿಕ್ಕನಂತರವಂತೂ ಪ್ರಪಂಚವೇ ಮರೆತುಹೋಗಿದ್ದಾರೆ. ರಾತ್ರಿಹಗಲೂ ಎನ್ನದೇ ಸ್ಮಾರ್ಟ್‌ಫೋನ್ ಬಳಕೆ ಮಾಡುತ್ತಾ ಮಾನಸಿಕ ಖಿನ್ನತೆಗೆ ತುತ್ತಾಗಿ ಆತ್ಮಹತ್ಯೆಯ ದಾರಿ ಹಿಡಿಯುವ ಪ್ರಮಾಣ ಹೆಚ್ಚಾಗಿದೆ ಎಂದು ಅಮೆರಿಕಾದ 'ಸ್ಯಾನ್ ಡೈಗೊ ಸ್ಟೇಟ್' ಯೂನಿವರ್ಸಿಟಿಯ ಅಧ್ಯಯನವೊಂದು ಎಚ್ಚರಿಕೆ ನೀಡಿದೆ.

ಸಾವಿಗೆ ಸ್ಮಾರ್ಟ್‌ಫೋನ್ ದಾರಿ!!

ಸಾವಿಗೆ ಸ್ಮಾರ್ಟ್‌ಫೋನ್ ದಾರಿ!!

ನಿದ್ದೆ ಮಾಡುವ ಸಮಯದಲ್ಲಿ ಸ್ಮಾರ್ಟ್‌ಫೋನ್ ಬಳಕೆ ಮಾಡುವ ಪ್ರಮಾಣ ಹೆಚ್ಚಿರುವುದರಿಂದ ಮಾನವನ ಆರೋಗ್ಯ ಸ್ಥಿತಿ ಏರುಪೇರಾಗುತ್ತಿದೆ. ಇದು ಮಾನವನಲ್ಲಿ ಖಿನ್ನತೆ ಮೂಡಲು ಪ್ರಮುಖ ಕಾರಣವಾಗುತ್ತಿರುವ ಪರಿಣಾಮದಿಂದ ಆತ್ಮಹತ್ಯೆಯ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಹೇಳಲಾಗಿದೆ.!

ಖಿನ್ನತೆಗೆ ಜಾರಲು ಕಾರಣ ಏನು?

ಖಿನ್ನತೆಗೆ ಜಾರಲು ಕಾರಣ ಏನು?

ರಾತ್ರಿ ಸಮಯದಲ್ಲಿ ಸರಿಯಾಗಿ ನಿದ್ದೆ ಮಾಡದಿದ್ದರೆ ಮಾನವನ ಮೆದುಳಿನ ಮೇಲೆ ಹೆಚ್ಚು ಒತ್ತಡ ಬೀಳಲಿದೆ. ಇದರಿಂದ ನೆನಪಿನ ಶಕ್ತಿ ಮತ್ತು ಏಕಾಗ್ರತೆ ಮೇಲೆ ಪರಿಣಾಮಗಳು ಬೀರುತ್ತದೆ. ಹೀಗೆ ಪ್ರತಿದಿನವೂ ಅಭ್ಯಾಸವಾಗುತ್ತಾ ಓದರೆ ಮಾನವನ ಮೆದುಳು ಖಿನ್ನತೆಗೆ ಜಾರುತ್ತದೆ ಎಂದು ಹೇಳಲಾಗಿದೆ.

ಸಮಸ್ಯೆಗೆ

ಸಮಸ್ಯೆಗೆ

ಮಾನವನ ದೇಹಕ್ಕೆ ಸರಿಯಾಗಿ ನಿದ್ದೆ ಸಿಗದಿದ್ದರೆ ಅವನ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಮಧುಮೇಹ, ತಲೆನೊವ್ವುಗಳಂತಹ ಸಮಸ್ಯೆಗಳ ಜೊತೆಗೆ ಕ್ಯಾನ್ಸರ್‌ ಮತ್ತು ಬಬ್ರೈನ್ ಟ್ಯೂಮರ್‌ನಂತಹ ದೊಡ್ಡ ರೋಗಗಳೂ ಕೂಡ ಮಾನವನನ್ನು ಕಾಡುತ್ತವೆ ಎಂದು ವರದಿ ಹೇಳಿದೆ. ಇದು ಕೂಡ ಮುಂದೆ ಖಿನ್ನತೆಗೆ ಕಾರಣವಾಗುತ್ತದೆ.

ಸ್ಮಾರ್ಟ್‌ಫೋನ್ ಬಳಕೆಗೆ ಮಿತಿಇದೆ!

ಸ್ಮಾರ್ಟ್‌ಫೋನ್ ಬಳಕೆಗೆ ಮಿತಿಇದೆ!

ಮಾನವನಿಗೆ ಸ್ಮಾರ್ಟ್‌ಫೋನ್ ಬಿಟ್ಟಿರಲು ಸಾಧ್ಯವಿಲ್ಲ ಎನ್ನುವುದು ನಿಜ. ಆದರೆ, ಮಾನವನ ದೇಹಕ್ಕೆ ಮತ್ತು ಮನಸ್ಸಿಗೆ ಉಲ್ಲಾಸ ನೀಡುವ ನಿದ್ದೆಯನ್ನು ಕೂಡ ಈ ಸ್ಮಾರ್ಟ್‌ಫೋನ್ ಕಸಿದುಕೊಳ್ಳುತ್ತಿರುವುದು ಎಚ್ಚರಿಕೆಯ ವಿಷಯವಾಗಿದೆ. ಹಾಗಾಗಿ, ಸ್ಮಾರ್ಟ್‌ಫೋನ್ ಬಳಕೆಗೆ ಒಂದು ಮಿತಿಇದೆ.

13 ರಿಂದ 30 ವರ್ಷದವರಿಗೆ ಹೆಚ್ಚು ಸಮಸ್ಯೆ

13 ರಿಂದ 30 ವರ್ಷದವರಿಗೆ ಹೆಚ್ಚು ಸಮಸ್ಯೆ

13 ರಿಂದ 30 ವರ್ಷ ವಯಸ್ಸಿನವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸುತ್ತಿದೆ ಎಂಬುದು ಅಧ್ಯಯನಕಾರರು ಅಭಿಪ್ರಾಯಪಟ್ಟಿದ್ದಾರೆ. ಮೊಬೈಲ್ ನೋಡುವುದು, ಟಿವಿ ನೋಡುವುದು, ಕಂಪ್ಯೂಟರ್ ಗೇಮ್ಸ್ ಇತ್ಯಾದಿಗಳನ್ನು ಹೈ ಸ್ಪೀಡ್ ಇಂಟರ್ನೆಂಟ್ ಬಳಸಿ ಇವರು ಮಾಡುತ್ತಾರೆ ಮತ್ತು ನಿದ್ದೆಯನ್ನು ಹಾಳು ಮಾಡಿಕೊಳ್ಳುತ್ತಾರೆ ಎಂದು ಅಧ್ಯಯನ ತಿಳಿಸಿದೆ.

Best Mobiles in India

English summary
teenagers and young adults (aged 13-30), there is a significant association between insufficient sleep and time spent on computer games or watching TV or videos. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X