Subscribe to Gizbot

ಜಾಗತಿಕವಾಗಿ ಇಂಟರ್ನೆಟ್ ಬಳಕೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ..!

Posted By: -

ದೇಶಿಯವಾಗಿ ಮತ್ತು ಜಾಗತಿಕವಾಗಿ ಇಂಟರ್ ನೆಟ್ ಸಾಕಷ್ಟು ಖ್ಯಾತಿಗಳಿಸಿಕೊಳ್ಳುತ್ತಿದೆ ಎನ್ನುವುದಕ್ಕೆ ಸಾಕ್ಷಿಯೊಂದು ದೊರೆತಿದೆ. ಕಳೆದ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಸುಮಾರು 1.7 ಮಿಲಿಯನ್ ನಷ್ಟು ಸಂಖ್ಯೆಯಲ್ಲಿ ಹೊಸ ಡೊಮೈನ್ ಹೆಸರುಗಳು ನೊಂದಣಿಯಾಗಿದೆ ಎನ್ನಲಾಗಿದೆ. ಅಲ್ಲದೇ ಕಳೆದ ಒಂದೇ ವರ್ಷದಲ್ಲಿ ಸುಮಾರು 332.4 ಮಿಲಿಯನ್ ಡೊಮೈನ್ ಗಳು ರಿಜಿಸ್ಟರ್ ಆಗಿದೆ.

ಜಾಗತಿಕವಾಗಿ ಇಂಟರ್ನೆಟ್ ಬಳಕೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ..!

ವಿರಿಸೈನ್ ಕಂಪನಿಯೂ ಈ ಮಾಹಿತಿಯನ್ನು ಹೊರ ಹಾಕಿದ್ದು, ಈ ಕಂಪನಿ ಡೊಮೈನ್ ಹೆಸರು ಗಳು ಮತ್ತು ಇಂಟರ್ನೆಟ್ ಸೆಕ್ಯೂರಿಟಿ ಸೇವೆಯನ್ನು ನೀಡುತ್ತಿದ್ದು, ಈ ಕಂಪನಿಯೂ ಕಳೆದ ವರ್ಷದ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ.

ದಿನದಿಂದ ದಿನಕ್ಕೆ ಇಂಟರ್ನೆಟ್ ಮಾರುಕಟ್ಟೆ ಬೆಳವಣಿಗೆಯಾಗುತ್ತಿದ್ದು, ಕಂಪನಿ ನೀಡಿರುವ ಮಾಹಿತಿಯ ಪ್ರಕಾರ .ಕಾಮ್ ಮತ್ತು .ಇನ್ ವೆಬ್ ಸೈಟ್ ಗಳ ಬೇಡಿಕೆಯೂ ಹೆಚ್ಚಾಗಿದ್ದು, 2016ರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ 2017ರಲ್ಲಿ ವೆಬ್ ಸೈಟ್ ಗಳ ಬಳಕೆಯೂ ಅಧಿಕವಾಗುತ್ತಿದೆ ಎನ್ನುವುದು ತಿಳಿದು ಬಂದಿದೆ.

ಓದಿರಿ: ಸ್ಮಾರ್ಟ್‌ಫೋನ್‌ನಲ್ಲಿ ಟೈಮ್ ವೆಸ್ಟ್ ಮಾಡ್ಬೇಡಿ: ಆಪ್‌ ನಿಂದ ತಿಂಗಳಿಗೆ ರೂ.2,50,000 ಆದಾಯ ಗಳಿಸಿ.! ಹೇಗೆ.?

ವಿಶ್ವ ಮಾರುಕಟ್ಟೆಯಲ್ಲಿ ಕಳೆದ ಮೂರು ತಿಂಗಳಲ್ಲಿ 1.7 ಮಿಲಿಯನ್ ಡೊಮೈನ್ ಹೆಸರುಗಳು ರಿಜಿಸ್ಟರ್ ಆಗಿದ್ದು, ಬಳಕೆದಾರರಿಗೆ ಸೇವೆಯನ್ನು ನೀಡಲು ಮುಂದಾಗಿವೆ. ಒಂದೇ ವರ್ಷದಲ್ಲಿ ಬೆಳಣಿಗೆ ದರ 0.9ರಷ್ಟು ಏರಿಕೆಯಾಗಿದೆ ಎನ್ನಬಹುದಾಗಿದೆ.

ಈಗಾಗಲೇ ಇಂಟರ್ನೆಟ್ ಕ್ರಾಂತಿಯೂ ಜೋರಾಗಿದ್ದು, ಎಲ್ಲಾ ವಿಷಯಗಳಿಗೂ ಇಂದು ಇಂಟರ್ನೆಟ್ ಬೇಕಾಗಿದೆ. ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಡೊಮೈನ್ ಗಳ ಸಂಖ್ಯೆ ಹನುಮನ ಬಾಲದಂತೆ ಬೆಳೆಯುತ್ತಾ ಸಾಗುತ್ತಿದೆ. ಹೆಚ್ಚಿನ ಸೇವೆಯೂ ಇಂಟರ್ ನೆಟ್ ನಲ್ಲಿ ದೊರೆಯುತ್ತಿರುವುದು ಇದಕ್ಕೆ ಕಾರಣ.

English summary
Internet Grows with 332.4 Million Domain Name Registrations. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot