2020ಕ್ಕೆ ಶೇ 96ರಷ್ಟು ಫೋನ್‌ಗಳು ಭಾರತದಲ್ಲಿಯೇ ಉತ್ಪಾದನೆಯಾಗಲಿವೆ!!

ಭಾರತದಲ್ಲಿ ಮೊಬೈಲ್ ಮಾರುಕಟ್ಟೆ ಜಾಗತಕ ಮಾರುಕಟ್ಟೆಗಿಂತಲೂ ಹೆಚ್ಚು ದರದಲ್ಲಿ ಬೆಳವಣಿಗೆ ಹೊಂದುತ್ತಿದೆ ಎಂಬುದು ಒಂದು ರಿಪೋರ್ಟ್‌ನ ವರದಿ!!

|

ಜಾಗತಿಕ ಮೊಬೈಲ್ ಮಾರುಕಟ್ಟೆ ವಿಸ್ತಾರವಾಗಿ ಬೆಳೆಯುತ್ತಾ ಹೋಗುತ್ತಿದ್ದು, ಭವಿಷ್ಯದಲ್ಲಿ ಮತ್ತಷ್ಟು ಬೆಳವಣಿಗೆಯನ್ನು ನಿರೀಕ್ಷಿಸಬಹುದಾಗಿದೆ.! ಇನ್ನು ಭಾರತದಲ್ಲಿ ಮೊಬೈಲ್ ಮಾರುಕಟ್ಟೆ ಜಾಗತಕ ಮಾರುಕಟ್ಟೆಗಿಂತಲೂ ಹೆಚ್ಚು ದರದಲ್ಲಿ ಬೆಳವಣಿಗೆ ಹೊಂದುತ್ತಿದೆ ಎಂಬುದು ಒಂದು ರಿಪೋರ್ಟ್‌ನ ವರದಿ!!

ಈ ರಿಪೋರ್ಟ್‌ ಜೊತೆಯಲ್ಲಿಯೇ ಮತ್ತೊಂದು ಸಮೀಕ್ಷಾ ವರದಿ ಹೊರಬಿದ್ದಿದ್ದು, ಇಂಟರ್‌ನೆಟ್ ಆಂಡ್ ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ ಸಂಸ್ಥೆ ಭವಿಷ್ಯದ ಮೊಬೈಲ್ ಮಾರುಕಟ್ಟೆ ಬಗ್ಗೆ ಸಮೀಕ್ಷೆ ನಡೆಸಿ ವರದಿ ಪ್ರಕಟಿಸಿದೆ!! ಹಾಗಾದರೆ, ಈ ಸಮೀಕ್ಷೆ ವರದಿಯಲ್ಲಿರುವ ಅಂಶಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ನಂ.1 ಆಗಲಿದೆ ಇಂಡಿಯಾ!!

ನಂ.1 ಆಗಲಿದೆ ಇಂಡಿಯಾ!!

ಇಂಟರ್‌ನೆಟ್ ಆಂಡ್ ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ ಸಂಸ್ಥೆ ಸಮೀಕ್ಷೆ ಪ್ರಕಾರ, ಪ್ರಸ್ತುತ ಭಾರತವುಜಾಗತಿಕವಾಗಿ 2ನೇ ಅತೀ ದೊಡ್ಡ ಮೊಬೈಲ್ ಬಳಕೆದಾರ ದೇಶವಾಗಿದೆ.ಈಗಿನ ಬೆಳವಣಿಗೆ ದರದಲ್ಲಿ ಲೆಕ್ಕಾಚಾರ ಮಾಡಿದರೆ ಇನ್ನೊಂದೆರಡು ವರ್ಷದಲ್ಲಿ ಭಾರತ ನಂ.1 ಆಗಲಿದೆ.!!

2020ಕ್ಕೆ ಮೇಕ್ ಇನ್ ಇಂಡಿಯಾ!!

2020ಕ್ಕೆ ಮೇಕ್ ಇನ್ ಇಂಡಿಯಾ!!

ಪ್ರಸ್ತುತ ಭಾರತೀಯರು ಬಳಕೆ ಮಾಡುತ್ತಿರುವ ಬಹುತೇಕ ಫೋನ್‌ಗಳು ವಿದೇಶದಲ್ಲಿ ಉತ್ಪಾದನೆಯಾಗುತ್ತಿವೆ. ಆದರೆ, 2020ರ ಹೊತ್ತಿಗೆ ಭಾರತದಲ್ಲಿ ಮಾರಾಟವಾಗುವ ಮೊಬೈಲ್ ಫೋನ್​ಗಳ ಪೈಕಿ ಶೇ. 96ರಷ್ಟು ಫೋನ್‌ಗಳು ಭಾರತದಲ್ಲೇ ಉತ್ಪಾದನೆಯಾಗುತ್ತವೆ.!!

 ಉದ್ಯಮದ ಬೆಲೆ 1,20,200 ಕೋಟಿ ರೂ.ಗೆ ಏರಿಕೆ!?

ಉದ್ಯಮದ ಬೆಲೆ 1,20,200 ಕೋಟಿ ರೂ.ಗೆ ಏರಿಕೆ!?

2020 ನೇ ವರ್ಷದ ವೇಳೆಗೆ ಭಾರತದ ಮೊಬೈಲ್ ಉತ್ಪಾದನಾ ಉದ್ಯಮದ ಬೆಲೆ 1,20,200 ಕೋಟಿ ರೂ.ಗೆ ಏರಿಕೆಯಾಗಲಿದೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ. ಈ ವರ್ಷದಲ್ಲಿ (2016-17) ದೇಶಿಯ ಮೊಬೈಲ್ ಉತ್ಪಾದನಾ ವಲಯ ಸುಮಾರು 94,000 ಕೋಟಿ ರೂ. ಗಾತ್ರದ್ದಾಗಿತ್ತು.

ಸಮೀಕ್ಷೆ ಅಂಶಗಳು ಬದಲಾಗಬಹುದು!!

ಸಮೀಕ್ಷೆ ಅಂಶಗಳು ಬದಲಾಗಬಹುದು!!

ಜಿಯೋ ಸೇರಿದಂತೆ ಹಲವು ಟೆಲಿಕಾಂ ಕಂಪೆನಿಗಳು ಈಗಾಗಲೇ ತಮ್ಮದೇ ಸಂಸ್ಥೆಯ ಮೊಬೈಲ್‌ಗಳನ್ನು ಬಿಡುಗಡೆ ಮಾಡುತ್ತಿವೆ. ಹಾಗಾಗಿ, ಮೊಬೈಲ್ ಬಳಕೆದಾರರ ಸಂಖ್ಯೆ ಇನ್ನು ಹೆಚ್ಚಾಗಬಹುದಾಗಿದ್ದು, ಮೊಬೈಲ್ ಉತ್ಪಾದನಾ ಉದ್ಯಮದ ಬೆಲೆ ಕಡಿಮೆಯಾಗುವ ಸಾಧ್ಯತೆ ಕೂಡ ಇದೆ.!!

Best Mobiles in India

English summary
Internet & Mobile Association of India is a not-for-profit industry body.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X