ಇಂಟರ್‌ನೆಟ್‌ನಲ್ಲಿವೆ ಬರೋಬ್ಬರಿ 333.8 ಮಿಲಿಯನ್ ಡೋಮೈನ್ಸ್‌..!

By Avinash
|

ಜಗತ್ತು ಸ್ಮಾರ್ಟ್ ಆಗುತ್ತಿದೆ. ಸದ್ಯ ಎಲ್ಲವೂ ಆನ್‌ಲೈನ್ ಆಗೋಗಿದೆ. ಮನರಂಜನೆಗೆ ಬಹುದೊಡ್ಡ ಮಾಧ್ಯಮ ಇಂಟರ್‌ನೆಟ್ ಆಗಿದ್ದು, ಗಂಟೆಗೊಂದು ವೆಬ್‌ಸೈಟ್ ಸೃಷ್ಟಿಯಾಗುತ್ತಿವೆ. ನ್ಯೂಸ್‌ನಿಂದ ಹಿಡಿದು ಆನ್‌ಲೈನ್ ಬ್ಯಾಂಕಿಂಗ್‌ವರೆಗೂ ತರಹ ತರಹದ ವೆಬ್‌ಸೈಟ್‌ಗಳು ಕಾಣಸಿಗುತ್ತವೆ. ಈ ವೆಬ್‌ಸೈಟ್‌ಗಳ ವಿಳಾಸವನ್ನು ಡೋಮೈನ್ ನೇಮ್ ಎಂದು ಕರೆಯುತ್ತೆವೆ.

ಇಂಟರ್‌ನೆಟ್‌ನಲ್ಲಿವೆ ಬರೋಬ್ಬರಿ 333.8 ಮಿಲಿಯನ್ ಡೋಮೈನ್ಸ್‌..!

ಈಗ ಡೋಮೈನ್ ನೇಮ್‌ಗಳ ಪ್ರಮಾಣ ಭಾರೀ ಮಟ್ಟದಲ್ಲಿ ಹೆಚ್ಚಾಗಿದ್ದು, ಭಾಗಶಃ ವಿಶ್ವದ ಜನಸಂಖ್ಯೆಯ ಅರ್ಧದಷ್ಟಿವೆ. ಹೌದು, ಮಂಗಳವಾರ ವರದಿಯೊಂದು ಬಿಡುಗಡೆಯಾಗಿದ್ದು, ಡೋಮೈನ್ ನೇಮ್‌ಗಳ ಹಾಗೂ ಅಂತರ್ಜಾಲ ಭದ್ರತೆಯ ಜಾಗತಿಕ ನಾಯಕ VeriSign ಪ್ರಕಟಿಸಿರುವ ವರದಿಯಲ್ಲಿ ಈ ಆಶ್ಚರ್ಯಕರ ಅಂಶ ಬಹಿರಂಗಗೊಂಡಿದೆ. VeriSign ಬಿಡುಗಡೆಗೊಳಿಸಿರುವ ವರದಿಯಲ್ಲಿ ಅನೇಕ ಕುತೂಹಲಕಾರಿ ಅಂಶಗಳು ಬಹಿರಂಗವಾಗಿವೆ.

ಮೊದಲ ತ್ರೈಮಾಸಿಕದಲ್ಲಿ ಬರೋಬ್ಬರಿ 1.4 ಮಿಲಿಯನ್ ಡೋಮೈನ್ಸ್‌

ಮೊದಲ ತ್ರೈಮಾಸಿಕದಲ್ಲಿ ಬರೋಬ್ಬರಿ 1.4 ಮಿಲಿಯನ್ ಡೋಮೈನ್ಸ್‌

ಹೌದು 2018ರ ಮೊದಲ ತ್ರೈಮಾಸಿಕದಲ್ಲಿ 1.4 ಮಿಲಿಯನ್ ಡೋಮೈನ್ ನೇಮ್‌ಗಳು ನೊಂದಾಯಿಸಲ್ಪಟ್ಟಿವೆ ಎಂದು VeriSign ತನ್ನ ವರದಿಯಲ್ಲಿ ಹೇಳಿದೆ. ಮೊದಲ ತ್ರೈಮಾಸಿಕದಲ್ಲಿನ ಪ್ರಮಾಣ ಈ ವರ್ಷದಂತ್ಯಕ್ಕೆ ಇನ್ನು ಹೆಚ್ಚಾಗುವ ಸಾಧ್ಯತೆಯನ್ನು VeriSign ಊಹಿಸಿದೆ.

ಸದ್ಯ 300 ಮಿಲಿಯನ್‌ಗೂ ಹೆಚ್ಚು ಡೋಮೈನ್ಸ್‌

ಸದ್ಯ 300 ಮಿಲಿಯನ್‌ಗೂ ಹೆಚ್ಚು ಡೋಮೈನ್ಸ್‌

VeriSign ವರದಿಯ ಅಂದಾಜಿನಂತೆ ಪ್ರಸ್ತುತ 333.8 ಮಿಲಿಯನ್ ಟಾಪ್ ಲೆವೆಲ್ ಡೋಮೈನ್‌ಗಳಿವೆ. ಈ ಪ್ರಮಾಣ ವಿಶ್ವದ ಜನಸಂಖ್ಯೆಯ ಅರ್ಧಕ್ಕೆ ಸಮೀಪಿಸುತ್ತಿದ್ದು, ಹುಬ್ಬೇರಿಸುವಂತೆ ಮಾಡಿದೆ.

.ಕಾಮ್ ಮತ್ತು .ನೆಟ್‌ಗೆ ಹೆಚ್ಚಿನ ಬೇಡಿಕೆ

.ಕಾಮ್ ಮತ್ತು .ನೆಟ್‌ಗೆ ಹೆಚ್ಚಿನ ಬೇಡಿಕೆ

ಡೋಮೈನ್ ನೇಮ್‌ಗಳಲ್ಲಿ .ಕಾಮ್ ಮತ್ತು .ನೆಟ್‌ಗೆ ಹೆಚ್ಚಿನ ಬೇಡಿಕೆಯಿದ್ದು, 333.8 ಮಿಲಿಯನ್ ಡೋಮೈನ್‌ಗಳಲ್ಲಿ 148.3 ಮಿಲಿಯನ್ ಡೋಮೈನ್ ನೇಮ್‌ಗಳು .ಕಾಮ್ ಮತ್ತು .ನೆಟ್‌ನಿಂದ ಅಂತ್ಯವಾಗಿವೆ. ಆದರೆ, 2018ರ ಮೊದಲ ತ್ರೈಮಾಸಿಕದಲ್ಲಿ .ಕಾಮ್ ಮತ್ತು .ನೆಟ್‌ ಡೋಮೈನ್‌ಗಳ ನೊಂದಣಿಯ ಅಂಕಿ-ಅಂಶ ಲಭ್ಯವಾಗಿಲ್ಲ. ಈ ಅಂಕಿ-ಅಂಶಗಳು ಬಂದ ನಂತರ ಏರಿಕೆಯಾದ ನಿಜವಾದ ಪ್ರಮಾಣ ಗೊತ್ತಾಗಲಿದೆ ಎಂದು VeriSign ಹೇಳಿದೆ.

ಡೋಮೈನ್ ನೊಂದಣಿಯಲ್ಲಿ ಶೇ.1.3 ಹೆಚ್ಚಳ

ಡೋಮೈನ್ ನೊಂದಣಿಯಲ್ಲಿ ಶೇ.1.3 ಹೆಚ್ಚಳ

2017ರ ಕೊನೆ ತ್ರೈಮಾಸಿಕಕ್ಕೆ ಹೋಲಿಸಿದರೆ 2018ರ ಮೊದಲ ತ್ರೈಮಾಸಿಕದಲ್ಲಿ ಡೋಮೈನ್ ನೊಂದಣಿ ಪ್ರಮಾಣ ಶೇ.1.3 ರಷ್ಟು ಹೆಚ್ಚಿದೆ. ಮತ್ತೊಂದು ಅಂದಾಜಿನ ಪ್ರಕಾರ ಮೊದಲ ತ್ರೈಮಾಸಿಕದಲ್ಲಿ ೧.೯ ಮಿಲಿಯನ್ ಡೋಮೈನ್ ನೇಮ್‌ಗಳು ನೊಂದಣಿಯಾಗಿವೆ ಎಂದು ವರದಿ ಹೇಳಿದೆ.

ವರ್ಷದಿಂದ ವರ್ಷಕ್ಕೆ ಶೇ.3.2ರಷ್ಟು ಏರಿಕೆ

ವರ್ಷದಿಂದ ವರ್ಷಕ್ಕೆ ಶೇ.3.2ರಷ್ಟು ಏರಿಕೆ

.ಕಾಮ್ ಮತ್ತು .ನೆಟ್ ಟಾಪ್ ಲೆವೆಲ್ ಡೋಮೈನ್‌ಗಳೆರಡು ಕೂಡಿ ವರ್ಷದಿಂದ ವರ್ಷಕ್ಕೆ 4.6 ಮಿಲಿಯನ್‌ನಷ್ಟು ಏರಿಕೆ ಕಾಣುತ್ತಿವೆ. ಈ ಪ್ರಮಾಣ ಶೇ.3.2ರಷ್ಟು ಇದೆ ಎಂದರೆ ನಂಬಲೇಬೇಕು.

.ನೆಟ್‌ಗಿಂತ .ಕಾಮ್ ಬೆಸ್ಟ್‌

.ನೆಟ್‌ಗಿಂತ .ಕಾಮ್ ಬೆಸ್ಟ್‌

ಮಾರ್ಚ್ 31, 2018ರಂತೆ .ಕಾಮ್ 133.9 ಮಿಲಿಯನ್ ಡೋಮೈನ್ ನೇಮ್‌ಗಳಲ್ಲಿ ನೊಂದಣಿಯಾಗಿದೆ. ಆದರೆ, .ನೆಟ್ ಕೇವಲ 14.4 ಮಿಲಿಯನ್ ಡೋಮೈನ್ ನೇಮ್‌ಗಳಲ್ಲಿ ಸ್ಥಾನ ಪಡೆದಿದೆ. ಹೊಸ .ಕಾಮ್ ಮತ್ತು .ನೆಟ್ ಡೋಮೈನ್‌ಗಳು 2018ರ ಪ್ರಥಮ ತ್ರೈಮಾಸಿಕ ಅಂತ್ಯಕ್ಕೆ 9.6 ಮಿಲಿಯನ್‌ನಷ್ಟು ನೊಂದಣಿಯಾಗಿವೆ. ಈ ಪ್ರಮಾಣ 2017ರ ಮೊದಲ ತ್ರೈಮಾಸಿಕದಲ್ಲಿ 9.5 ಮಿಲಿಯನ್‌ನಷ್ಟಿತ್ತು.

Best Mobiles in India

English summary
Internet now has 333.8 million domain names. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X