ಗುಡ್‌ ನ್ಯೂಸ್‌ ಕೊಟ್ಟ ಒಕ್ಲಾ ರಿಪೋರ್ಟ್‌! ಭಾರತದ ಇಂಟರ್‌ನೆಟ್‌ ವೇಗದಲ್ಲಿ ಸುಧಾರಣೆ!

|

ಕೊರೊನಾ ಬಂದ ನಂತರ ಹೆಚ್ಚಿನ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಇನ್ನು ಕೂಡ ಮನೆಯಿಂದಲೇ ಕೆಲಸ ನಿರ್ವಹಿಸುವುದನ್ನು ಮುಂದುವರೆಸಿವೆ. ಮನೆಯಿಂದಲೇ ಕೆಲಸ ಮಾಡುವುದರಿಂದ ಇಂಟರ್‌ನೆಟ್‌ನಲ್ಲಿ ಹೆಚ್ಚಿನ ಹೊರೆ ಬಿದ್ದಿದೆ. ಆದರೂ ಭಾರತದಲ್ಲಿ ಮೊಬೈಲ್ ಇಂಟರ್ನೆಟ್ ಮತ್ತು ಸ್ಥಿರ ಬ್ರಾಡ್‌ಬ್ಯಾಂಡ್ ವೇಗ ಎರಡೂ ಕೂಡ ಸಾಕಷ್ಟು ಸುಧಾರಿಸುತ್ತಿವೆ. ಸದ್ಯ ಜೂನ್ 2021ರಲ್ಲಿ ನೆಟ್‌ವರ್ಕ್ ವೇಗದ ಕುರಿತಂತೆ ಪ್ರಖ್ಯಾತ ಓಕ್ಲಾ ಸಂಸ್ಥೆ ಪರೀಕ್ಷೆ ನಡೆಸಿದ್ದು, ಭಾರತದಲ್ಲಿ ಇಂಟರ್ನೆಟ್ ವೇಗ ಸುಧಾರಣೆ ಕಂಡಿದೆ ಎಂದು ವರದಿ ಮಾಡಿದೆ.

ಇಂಟರ್‌ನೆಟ್‌

ಹೌದು, ಇಂಟರ್‌ನೆಟ್‌ ಸ್ಪೀಡ್‌ ಟೆಸ್ಟರ್‌ ಒಕ್ಲಾ ಭಾರತದಲ್ಲಿ ಇಂಟರ್‌ನೆಟ್‌ ವೇಗದಲ್ಲಿ ಸಾಕಷ್ಟು ಸುಧಾರಣೆಯಾಗಿದೆ ಎಂದು ಹೇಳಿದೆ. ಭವಿಷ್ಯದ ದೃಷ್ಟಿಯಿಂದ ಭಾರತವು ಇಂಟರ್‌ನೆಟ್‌ ವೇಗದ ಸುಧಾರಣೆಯನ್ನು ಮುಂದುವರೆಸಿದೆ. ಅಲ್ಲದೆ ಜಾಗತಿಕ ಇಂಟರ್ನೆಟ್ ವೇಗದ ಶ್ರೇಯಾಂಕದಲ್ಲಿ ತನ್ನ ಸ್ಥಾನವನ್ನು ಸುಧಾರಿಸಿದೆ ಎಂದು ತಿಳಿದುಬಂದಿದೆ. ಹಾಗಾದ್ರೆ ಒಕ್ಲಾ ರಿಪೋರ್ಟ್‌ ನಲ್ಲಿ ಭಾರತದ ಇಂಟರ್‌ನೆಟ್‌ ವೇಗ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತದಲ್ಲಿ ಇಂಟರ್ನೆಟ್ ವೇಗ ಸುಧಾರಿಸುತ್ತಿದೆ

ಭಾರತದಲ್ಲಿ ಇಂಟರ್ನೆಟ್ ವೇಗ ಸುಧಾರಿಸುತ್ತಿದೆ

ಭಾರತ ಸ್ಥಿರ ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್‌ ವೇಗದಲ್ಲಿ 70 ನೇ ಸ್ಥಾನದಲ್ಲಿದೆ ಮತ್ತು ಮೊಬೈಲ್ ಇಂಟರ್ನೆಟ್ ವೇಗದಲ್ಲಿ 122 ನೇ ಸ್ಥಾನದಲ್ಲಿದೆ ಎಂದು ಓಕ್ಲಾ ವರದಿ ತಿಳಿಸಿದೆ. ಅದರಲ್ಲೂ ಕಳೆದ ಎರಡು ತಿಂಗಳ ಅವಧಿಯಲ್ಲಿ ಮೂರನೇ ಬಾರಿಗೆ ತನ್ನ ಮೊಬೈಲ್ ಇಂಟರ್ನೆಟ್ ವೇಗ ಹೆಚ್ಚಾಗಿದ್ದರಿಂದ ಭಾರತದ ಬೆಳವಣಿಗೆಯ ಗ್ರಾಫ್ ಮೇಲಕ್ಕೆ ಚಲಿಸುತ್ತಿದೆ. ನಿಗದಿತ ಬ್ರಾಡ್‌ಬ್ಯಾಂಡ್ ವೇಗವು ಮೇ ತಿಂಗಳಲ್ಲಿ ಕುಸಿತ ಕಂಡರೂ, ಭಾರತವು ಈ ವಿಭಾಗದಲ್ಲಿ ಒಟ್ಟಾರೆ ಬೆಳೆಯುವಲ್ಲಿ ಯಶಸ್ವಿಯಾಗಿದೆ.

ಬ್ರಾಡ್‌ಬ್ಯಾಂಡ್

ಇದು ಸರಾಸರಿ ಸ್ಥಿರ ಬ್ರಾಡ್‌ಬ್ಯಾಂಡ್ ವೇಗವನ್ನು 5817Mbps ಕಂಡಿದೆ. ಇದು ಮೇ 2021 ರಲ್ಲಿ 66.65Mbps ವೇಗಕ್ಕಿಂತ ಹೆಚ್ಚಾಗಿದೆ. ಮೊಬೈಲ್ ಇಂಟರ್‌ನೆಟ್ ವೇಗಕ್ಕೆ ಸಂಬಂಧಿಸಿದಂತೆ, ಜೂನ್‌ನಲ್ಲಿ ಸರಾಸರಿ 17.84Mbps ವೇಗವನ್ನು ಕಂಡಿದೆ. ಇದು ಮೇ ತಿಂಗಳಲ್ಲಿ ಕಂಡುಬರುವ ಸರಾಸರಿ 1534Mbps ವೇಗಕ್ಕಿಂತ ಹೆಚ್ಚಾಗಿದೆ. ಆದಾಗ್ಯೂ, ಮೊಬೈಲ್ ಇಂಟರ್‌ನೆಟ್‌ಗಾಗಿ ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗದಲ್ಲಿ ವ್ಯತ್ಯಾಸವಿದೆ.

ಡೌನ್‌ಲೋಡ್

ಜೂನ್‌ನಲ್ಲಿ ಭಾರತದಲ್ಲಿ ಸರಾಸರಿ ಡೌನ್‌ಲೋಡ್ ವೇಗ 17.84Mbps ಆಗಿದ್ದರೆ, ಅಪ್‌ಲೋಡ್ ವೇಗ 5.17Mbps ಆಗಿತ್ತು. ಹಾಗೆಯೇ ಸ್ಥಿರ ಬ್ರಾಡ್‌ಬ್ಯಾಂಡ್‌ಗೆ ಸಂಬಂಧಿಸಿದಂತೆ, ದೊಡ್ಡ ವ್ಯತ್ಯಾಸವಿರಲಿಲ್ಲ. ಡೌನ್‌ಲೋಡ್ ವೇಗ ಜೂನ್‌ನಲ್ಲಿ 58.17Mbps ಆಗಿದ್ದರೆ, ಅಪ್‌ಲೋಡ್ ವೇಗ 54.43Mbps ಆಗಿತ್ತು. ಇನ್ನು ಯುಎಇ (ಯುನೈಟೆಡ್ ಅರಬ್ ಎಮಿರೇಟ್ಸ್) 193.51Mbps ವೇಗದ ಮೊಬೈಲ್ ಇಂಟರ್ನೆಟ್ ವೇಗದೊಂದಿಗೆ ಮೊದಲ ಸ್ಥಾನದಲ್ಲಿದೆ ಎಂದು ತಿಳಿದುಬಂದಿದೆ. ಇದರ ನಂತರ ದಕ್ಷಿಣ ಕೊರಿಯಾ (180.48Mbps), ಕತಾರ್ (171.76Mbps), ನಾರ್ವೆ (167.60Mbps), ಮತ್ತು ಸೈಪ್ರಸ್ (161.80Mbps) ಮೊದಲ 5 ಸ್ಥಾನಗಳಲ್ಲಿವೆ.

Best Mobiles in India

English summary
Ookla has released its Speedtest Global Index for June this year and this is something positive for India. Here's a look at the findings.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X