Subscribe to Gizbot

ಉತ್ತರ ಕೊರಿಯಾದ ಪ್ರಪ್ರಥಮ ಸ್ಮಾರ್ಟ್‌ಫೋನ್ ಅರಿರಂಗ್

Written By:

ಉತ್ತರ ಕೊರಿಯಾದ ಪ್ರಥಮ ಸ್ಮಾರ್ಟ್‌ಫೋನ್ ಅರಿರಂಗ್, ಅಭಿವೃದ್ಧಿಗೊಳ್ಳುತ್ತಿದ್ದು ಕಿಮ್ ಜಾಂಗ್ ಉನ್ ಫೋನ್ ಫ್ಯಾಕ್ಟ್ರಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಅರಿರಂಗ್ ಆಂಡ್ರಾಯ್ಡ್ ಯುಐ ಡಿವೈಸ್ ಆಗಿದ್ದು, ಕ್ಯಾಲಿಫೋರ್ನಿಯಾದ ಗೂಗಲ್ ಇದನ್ನು ಅಭಿವೃದ್ಧಿಪಡಿಸಿದೆ. ತಮ್ಮ ಪ್ರವಾಸದ ವೇಳೆಯಲ್ಲಿ ಕಿಮ್ ಜಾಂಗ್ ಫೋನ್‌ನ ಕಾರ್ಯಕ್ಷಮತೆ, ಗುಣಮಟ್ಟ ಮತ್ತು ಪ್ಯಾಕಿಂಗ್ ವಿವರಗಳನ್ನು ತಿಳಿದುಕೊಂಡಿದ್ದಾರೆ.

ಉತ್ತರ ಕೊರಿಯಾ ದೇಶವು ಫೋನ್ ಬಳಕೆಯ ಮೇಲೆ ಹೆಚ್ಚಿನ ಕಟ್ಟುಪಾಡುಗಳನ್ನು ಹೇರಿದ್ದು ಆಡಳಿತಕ್ಕೆ ಇದು ಧಕ್ಕೆಯನ್ನುಂಟು ಮಾಡಬಹುದು ಎಂಬ ಭಯದಿಂದ ಕೊಂಚ ನಿಯಮ ನಿಬಂಧನೆಗಳಿಗೆ ಒಳಪಟ್ಟಿದೆ. ಇಂಟರ್ನೆಟ್ ಅನ್ನು ಕೂಡ ಈ ದೇಶದಲ್ಲಿ ಬಳಸುವಂತಿಲ್ಲ ಅಂತೆಯೇ ಫೋಟೋಗ್ರಫಿ ಕೂಡ ಇಲ್ಲಿ ನಿರ್ಬಂಧನೆಯನ್ನು ಹೊಂದಿದೆ.

ಇಂತಹ ವೇಳೆಯಲ್ಲಿ ಅರಿರಂಗ್ ಫೋನ್ ಲಾಂಚ್ ಆಗಿರುವುದು ಕೊಂಚವಾದರೂ ಜನರ ಸ್ವಾತಂತ್ರ್ಯಕ್ಕೆ ಬೆಂಬಲವನ್ನೀಯುವಂತಿದ್ದು, ಇದರಿಂದಲಾದರೂ ದೇಶ ಪ್ರಗತಿಯನ್ನು ಕಾಣಲು ಸಾಧ್ಯವಾದೀತು ಎಂಬ ಆಶಾಭಾವನೆ ಜನರಲ್ಲಿದೆ. ಬನ್ನಿ ಈ ಸುದ್ದಿಯ ಕುರಿತು ಮತ್ತಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫೋನ್ ಬಳಕೆ

#1

ಫೋನ್ ಬಳಕೆಯ ಬಗ್ಗೆ ಕಿಮ್ ಜಾಂಗ್ ಉನ್‌ಗೆ ಫ್ಯಾಕ್ಟ್ರಿ ಕೆಲಸಗಾರರು ತೋರಿಸುತ್ತಿರುವುದು

ಕಿಮ್ ಜಾಂಗ್ ಅನುಮೋದನೆ

#2

ಕೊರಿಯಾದ ಮಾಧ್ಯಮ ವರದಿಯಂತೆ, ಟಚ್ ಸ್ಕ್ರೀನ್ ಬಳಕೆಗೆ ಕಿಮ್ ಜಾಂಗ್ ಅನುಮೋದನೆಯನ್ನು ನೀಡಿದ್ದಾರಂತೆ. ಬಕೆದಾರರಿಗೆ ಹ್ಯಾಂಡ್ ಫೋನ್ ಬಳಸಲು ಸುಲಭವಾಗಿದ್ದು ಫೋನ್‌ನ ಭಾಗ ಸೂಕ್ಷ್ಮವಾಗಿರುತ್ತದೆ. ಇನ್ನು ಫೋನ್‌ನ ಕ್ಯಾಮೆರಾ ಭಾಗ ಉತ್ತಮವಾಗಿದೆ ಎಂಬುದು ಕಿಮ್ ಜಾಂಗ್ ಮಾತಾಗಿದೆ.

ಪ್ರಥಮ ಬಾರಿ

#3

ಇದೇ ಪ್ರಥಮ ಬಾರಿಗೆ ಕಿಮ್ ಪ್ರಾಂತ್ಯವು ಉತ್ತರ ಕೊರಿಯಾದಲ್ಲಿ ಸ್ಮಾರ್ಟ್‌ಫೋನ್ ಮಾಲೀಕತ್ವಕ್ಕೆ ಅನುಮೋದನೆಯನ್ನು ನೀಡಿದೆ. ಈ ಹಿಂದೆ ಚೈನೀಸ್ ಫ್ಲಿಪ್ ಅಥವಾ ಸ್ಲೈಡಿಂಗ್ ಫೋನ್‌ಗಳನ್ನು ನಿವಾಸಿಗಳು ಹೊಂದಿದ್ದರೂ ಸ್ಮಾರ್ಟ್‌ಫೋನ್ ಇದೇ ಪ್ರಥಮ ಬಾರಿಯಾಗಿದೆ.

ಕಟ್ಟುನಿಟ್ಟಿನ ನಿರ್ಬಂಧ

#4

ಮೀಡಿಯಾ ಬಳಕೆಯ ಮೇಲೆ ಕಟ್ಟುನಿಟ್ಟಿನ ನಿರ್ಬಂಧವನ್ನು ಹೇರಿರುವುದರಿಂದಾಗಿ ಉತ್ತ ಕೊರಿಯಾದ ನಿವಾಸಿಗಳು ಇಂಟರ್ನೆಟ್ ಅನ್ನು ಬಳಸುವಂತಿಲ್ಲ. ಇನ್ನು ಸ್ವತಃ ಕಿಮ್ ಜಾಂಗ್ ಉನ್ ಅವರೇ ಅರಿರಂಗ್ ಫೋನ್ ಅನ್ನು ರಾಷ್ಟ್ರೀಯೆತೆಗೆ ಸಂಕಲ್ಪಸಿದ್ದು, ಉತ್ತರ ಕೊರಿಯಾದ ಹೆಮ್ಮೆಯ ಮೂಲವಾಗಿದೆ ಎಂಬುದಾಗಿ ಬಣ್ಣಿಸಿದ್ದಾರೆ.

ಹೆಚ್ಚಿನ ಭಾಗ

#5

ಫೋನ್‌ನ ಹೆಚ್ಚಿನ ಭಾಗಗಳನ್ನು ಚೀನಾದಲ್ಲಿ ತಯಾರಿಸಲಾಗಿದೆ ಎಂಬುದಾಗಿ ಮೂಲಗಳಿಂದ ತಿಳಿದು ಬಂದಿದೆ.

ಉತ್ತರ ಕೊರಿಯಾದಲ್ಲೇ ತಯಾರಿಸಲಾದ ಫೋನ್

#6

ಉತ್ತರ ಕೊರಿಯಾದಲ್ಲೇ ತಯಾರಿಸಲಾದ ಫೋನ್ ಇದಾಗಿರುವುದರಿಂದ ಖಂಡಿತ ಇಲ್ಲಿನ ವಾಸಿಗಳು ಇದನ್ನು ಇಷ್ಟಪಡುತ್ತಾರೆ ಎಂಬುದು ಕಿಮ್ ಮಾತಾಗಿದೆ.

ಉತ್ಪನ್ನದ ಗುಣಮಟ್ಟ ಅತ್ಯುತ್ತಮ

#7

ಉತ್ಪನ್ನವನ್ನು ಬೆಂಬಲಸಿದಂತೆಲ್ಲಾ ಉತ್ಪನ್ನದ ಗುಣಮಟ್ಟ ಅತ್ಯುತ್ತಮವಾಗಿರುತ್ತದೆ ಎಂಬುದು ಕಿಮ್ ಅನಿಸಿಕೆಯಾಗಿದೆ. ಸ್ಮಾರ್ಟ್‌ಫೋನ್ ಬಳಕೆಯನ್ನು ಮಾಡಲು ಅವರು ಸಂತಸರಾಗಿದ್ದಾರೆ.

ರಾಷ್ಟ್ರಕ್ಕಿದು ಹೆಮ್ಮೆ

#8

ಅರಿರಂಗ್ ಟ್ರೇಡ್ ಮಾರ್ಕ್ ಅನ್ನು ನೋಡುವಾಗ ರಾಷ್ಟ್ರಕ್ಕಿದು ಹೆಮ್ಮೆಯನ್ನು ತರುವ ಡಿವೈಸ್ ಎಂದೆನಿಸಿದ್ದು ಕೊರಿಯಾದ ಜನರಿಗೆ ಆತ್ಮಗೌರವದ ಮೂಲವಾಗಿದೆ ಎಂದು ಹೇಳಿದ್ದಾರೆ.

ನಾರ್ತ್ ಕೊರಿಯಾದ ಪ್ರಥಮ ಫೋನ್

#9

ನಾರ್ತ್ ಕೊರಿಯಾದ ಪ್ರಥಮ ಫೋನ್

ಪ್ರಥಮ ಆಂಡ್ರಾಯ್ಡ್ ಫೋನ್

#10

ನಾರ್ತ್ ಕೊರಿಯಾದ ಪ್ರಥಮ ಫೋನ್

ಇನ್ನಷ್ಟು ಓದಿ

ಗಿಜ್‌ಬಾಟ್ ಲೇಖನಗಳು

ಸಿನಿಮಾಗಳಲ್ಲಿ ತೋರಿಸಿರುವ ಮರಣದ ಬಗೆಗಿನ ತಪ್ಪು ಕಲ್ಪನೆಗಳು
ವಾಟ್ಸಾಪ್‌ ಭಾರತದಲ್ಲಿ ಬ್ಯಾನ್‌ ಆಗಲಿದೆಯಂತೆ!!
ಸತ್ಯದ ತಲೆಯ ಮೇಲೆ ಹೊಡೆಯುವಂತಹ ವೈರಲ್ ಫೋಟೋಗಳು

ಭೇಟಿ ನೀಡಿ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್

ಮತ್ತಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
North Korea factory where the country’s first smartphone, the Arirang, is being developed. Though just released, the images appear to have been from a May 11 tour, according to Chinese media.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot