ಐಪ್ಯಾಡ್‌ ಓಎಸ್‌ 16 ಅಪ್‌ಡೇಟ್‌: 10 ಉಪಯುಕ್ತ ಫೀಚರ್ಸ್‌ ಸೇರ್ಪಡೆ!

|

ಐಪ್ಯಾಡ್ ಓಎಸ್ 16 ಅನ್ನು ಆಪಲ್‌ ತನ್ನ ಐಪ್ಯಾಡ್‌ ಸೀರಿಸ್‌ನ ಟ್ಯಾಬ್ಲೆಟ್‌ಗಳಿಗಾಗಿ ಅಭಿವೃದ್ಧಿಪಡಿಸಿದೆ. ಇದು ಐಪ್ಯಾಡ್ಓಎಸ್ ಆಪರೇಟಿಂಗ್ ಸಿಸ್ಟಂನ ನಾಲ್ಕನೇ ಹಾಗೂ ಪ್ರಸ್ತುತ ಚಾಲ್ತಿಯಲ್ಲಿರುವ ಆಪರೇಟಿಂಗ್ ಸಿಸ್ಟಂ ಆಗಿದ್ದು, ಐಪ್ಯಾಡ್ ಓಎಸ್ 15 ನ ಉತ್ತರಾಧಿಕಾರಿ ಎಂದು ಕರೆಸಿಕೊಳ್ಳುತ್ತಿದೆ. ಇದನ್ನು ಕೆಲವು ತಿಂಗಳ ಹಿಂದೆಯಷ್ಟೇ ಆಪಲ್‌, ಮ್ಯಾಕ್‌ಓಎಸ್, ವೆಂಚುರಾ, ವಾಚ್ ಓಎಸ್‌ 9 ಮತ್ತು ಟಿವಿಓಎಸ್ 16 ಜೊತೆಗೆ ಅನಾವರಣ ಮಾಡಲಾಗಿತ್ತು. ಪ್ರಸ್ತುತ ಇದರಲ್ಲಿ ಸುಧಾರಿತ 10 ಹೊಸ ಫೀಚರ್ಸ್‌ಗಳು ಐಪ್ಯಾಡ್‌ ಬಳಕೆಯನ್ನು ಇನ್ನಷ್ಟು ಸುಲಭವಾಗಿಸಿವೆ.

ಆಪಲ್

ಹೌದು, ಆಪಲ್ ಅಂತಿಮವಾಗಿ ಐಪ್ಯಾಡ್ಓಎಸ್OS 16 ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಾಣಿಕೆಯ ಡಿವೈಸ್‌ಗಳಿಗೆ ಹೊರತರಲು ಮುಂದಾಗಿದ್ದು, ಈ ಓಎಸ್‌ ನಿರೀಕ್ಷೆಗೂ ಮೀರಿದ ಹಲವಾರು ಫೀಚರ್ಸ್‌ಗಳನ್ನು ಪಡೆದುಕೊಂಡಿದೆ. ಇದರಲ್ಲಿ ಸಂದೇಶಗಳನ್ನು ಕಳುಹಿಸದ ಮೇಲೆಯೂ ಎಡಿಟ್‌ ಮಾಡಲಾಗುವ ಆಯ್ಕೆ, ಮೇಲ್‌ನಲ್ಲಿ ಶಾರ್ಟ್‌ಟೂಲ್ಸ್‌ ಆಯ್ಕೆ ಸೇರಿದಂತೆ ಪ್ರಮುಖ 10 ಹೊಸ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ. ಅದರ ವಿವರ ಇಲ್ಲಿ ನೀಡಲಾಗಿದೆ ಓದಿರಿ.

ಮೆಸೆಜ್‌ ಎಡಿಟ್

ಮೆಸೆಜ್‌ ಎಡಿಟ್

ಆಪಲ್‌ ಮೆಸೆಜ್ ಆಪ್‌ ಕೆಲವು ಹೊಸ ಫೀಚರ್ಸ್‌ ಪಡೆದುಕೊಂಡಿದೆ ಅದರಲ್ಲಿ ಬಳಕೆದಾರರು ಕಳುಹಿಸಿದ ಮೆಸೆಜ್‌ ಅನ್ನು ಮತ್ತೆ ಎಡಿಟ್‌ ಮಾಡಬಹುದಾಗಿದೆ. ಹಾಗೆಯೇ ನಿರ್ದಿಷ್ಟ ಸಮಯದದಲ್ಲಿ ಕಳುಹಿಸಲಾದ ಮೆಸೆಜ್‌ ಅನ್ನು ರಿಮೂವ್ ಮಾಡಬಹುದು. ಇದರ ಜೊತೆಗೆ ಸ್ವೀಕರಿಸಿದ ಸಂದೇಶವನ್ನು ಓದದಿರುವಂತೆ ಗುರುತಿಸಬಹುದು.

ಮೆಸೆಜ್‌ ಕೊಲ್ಯಾಬೋರೇಷನ್

ಮೆಸೆಜ್‌ ಕೊಲ್ಯಾಬೋರೇಷನ್

ಈ ಫೀಚರ್ಸ್‌ ನಲ್ಲಿ ಬಳಕೆದಾರರು ಇತರ ಮೆಸೆಜ್‌ ಬಳಕೆದಾರರೊಂದಿಗೆ ಕೊಲ್ಯಾಬೋರೇಷನ್ ಆಗಬಹುದಾಗಿದೆ. ಇದಕ್ಕಾಗಿ ಬಳಕೆದಾರರು ಆಹ್ವಾನವನ್ನು ಕಳುಹಿಸಬಹುದು ಆಗ ಥ್ರೆಡ್‌ನಲ್ಲಿರುವ ಪ್ರತಿಯೊಬ್ಬರ ಹೆಸರು ಆಟೋಮ್ಯಾಟಿಕ್‌ ಆಗಿ ಡಾಕ್ಯುಮೆಂಟ್, ಸ್ಪ್ರೆಡ್‌ಶೀಟ್‌ಗೆ ಸೇರಿಕೊಳ್ಳುತ್ತದೆ. ಹಾಗೆಯೇ ಯಾರಾದರೂ ಶೇರ್‌ ಮಾಡಿಕೊಂಡ ಡಾಕ್ಯುಮೆಂಟ್ ಅನ್ನು ಎಡಿಟ್‌ ಮಾಡಿದಾಗ ನವೀಕರಣ ಮಾಡಿದ ಮಾಹಿತಿ ಹಾಗೂ ಅವರ ಹೆಸರು ಮೇಲ್ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ.

ಮೇಲ್‌ನಲ್ಲಿ ಸ್ಮಾರ್ಟ್ ಟೂಲ್ಸ್

ಮೇಲ್‌ನಲ್ಲಿ ಸ್ಮಾರ್ಟ್ ಟೂಲ್ಸ್

ಮೇಲ್‌ನಲ್ಲೂ ಕೂಡ ಅಪ್‌ಡೇಟ್‌ ಮಾಡಲಾಗಿದ್ದು, ಮೇಲ್ ಆಪ್‌ಗೆ ಹೊಸ 'ರಿಮೈಂಡ್ ಮಿ ಫೀಚರ್ಸ್' ಅನ್ನು ಸೇರಿಸಲಾಗಿದೆ. ಇದರ ಜೊತೆಗೆ ಕಳುಹಿಸಿದ ಮೇಲ್‌ಗೆ ಯಾವುದೇ ಪ್ರತಿಕ್ರಿಯೆ ಬಾರದೆ ಇದ್ದರೆ ಆ ಮೇಲ್‌ ಬಗ್ಗೆ ಗಮನ ಇಡಲು ಆಟೋಮ್ಯಾಟಿಕ್‌ ಆಗಿ ಸಲಹೆಗಳನ್ನು ನೀಡುತ್ತದೆ. ಇದರ ಜೊತೆಗೆ ಇಮೇಲ್‌ ಕಳುಹಿಸುವಾಗ ಯಾರನ್ನಾದರು ಮರೆತಿದ್ದರೆ ಅಥವಾ ಏನಾದರೂ ಫೈಲ್‌ ಅನ್ನು ಲಗತ್ತು ಮಾಡಲು ಮರೆತಿದ್ದರೆ ಅದಕ್ಕೂ ಕೂಡ ಎಚ್ಚರಿಕೆ ಮೂಲಕ ಮಾಹಿತಿ ನೀಡುತ್ತದೆ.

ಮೇಲ್‌ನಲ್ಲಿ ಸರ್ಚಿಂಗ್‌ ಇನ್ನಷ್ಟು ಸುಲಭ

ಮೇಲ್‌ನಲ್ಲಿ ಸರ್ಚಿಂಗ್‌ ಇನ್ನಷ್ಟು ಸುಲಭ

ಮೇಲ್ ಆಪ್‌ನಲ್ಲಿ ಸರ್ಚಿಂಗ್‌ ಆಯ್ಕೆಯನ್ನು ಇನ್ನಷ್ಟು ಸುಧಾರಿಸಲಾಗಿದೆ. ಇದರಲ್ಲಿ 'ಸ್ಮಾರ್ಟ್ ಸರ್ಚ್‌ ಕರೆಕ್ಷನ್ಸ್' ಮತ್ತು 'ಸ್ಮಾರ್ಟ್ ಸರ್ಚ್‌ ಸಲಹೆಗಳು' ಎಂಬ ಎರಡು ಫೀಚರ್ಸ್‌ ಸೇರ್ಪಡೆಗೊಂಡಿವೆ. ಇನ್ನು ಸ್ಮಾರ್ಟ್ ಸರ್ಚ್‌ ಕರೆಕ್ಷನ್ಸ್ ಆಯ್ಕೆಯಲ್ಲಿ ಆಟೋಮ್ಯಾಟಿಕ್‌ ಆಗಿ ಮುದ್ರಣದೋಷಗಳನ್ನು ಸರಿಪಡಿಸಲಾಗುತ್ತದೆ ಹಾಗೆಯೇ ಸ್ಮಾರ್ಟ್ ಸರ್ಚ್‌ ಸಲಹೆಗಳ ಆಯ್ಕೆಯಲ್ಲಿ ಕಳುಹಿಸಲಾದ ಎಲ್ಲಾ ಮೆಸೆಜ್‌ ಅನ್ನು ಡಿಸ್‌ಪ್ಲೇ ಮಾಡುತ್ತದೆ.

ಐಕ್ಲೌಡ್‌ನಲ್ಲಿ ಅಪ್‌ಡೇಟ್‌

ಐಕ್ಲೌಡ್‌ನಲ್ಲಿ ಅಪ್‌ಡೇಟ್‌

ಹೊಸದಾಗಿ ಐಕ್ಲೌಡ್‌ನಲ್ಲಿ ಫೋಟೋಗಳ ಲೈಬ್ರರಿಯನ್ನು ಸೇರಿಸಲಾಗಿದೆ. ಹಾಗೆಯೇ ಈ ಶೇರ್‌ ಲೈಬ್ರರಿಯಲ್ಲಿ ಆರು ಜನರು ಕೊಲ್ಯಾಬೋರೇಟ್‌ ಆಗಲು ಅನುಮತಿಸುತ್ತದೆ. ಜೊತೆಗೆ ಫೋಟೋಗಳನ್ನು ಶೇರ್‌ ಮಾಡಲು ಬಳಕೆದಾರರು ಅತ್ಯಾಕರ್ಷಕ ಸಲಹೆಗಳನ್ನೂ ಸಹ ಪಡೆಯಬಹುದಾಗಿದೆ.

ಸಫಾರಿ ಈಗ ಮತ್ತಷ್ಟು ಸುರಕ್ಷಿತ

ಸಫಾರಿ ಈಗ ಮತ್ತಷ್ಟು ಸುರಕ್ಷಿತ

ಸಫಾರಿಯಲ್ಲಿ ಹೊಸ ಪಾಸ್‌ಕೀ ಫೀಚರ್ಸ್‌ ಸೇರಿಸಲಾಗಿದೆ. ಹಾಗೆಯೇ ಪಾಸ್‌ವರ್ಡ್‌ಗಳನ್ನು ಬದಲಿಸಲು ವಿಶೇಷ ಆಯ್ಕೆಯನ್ನೂ ಇದು ನೀಡುತ್ತದೆ. ಇದರ ಜೊತೆಗೆ ಐಕ್ಲೌಡ್ ಕೀಚೈನ್‌ನೊಂದಿಗೆ ಸಿಂಕ್ ಆಗಲಿದ್ದು, ಬಯೋಮೆಟ್ರಿಕ್ ದೃಢೀಕರಣವನ್ನು ಬಳಸಿಕೊಂಡು ಆಪ್‌ಗಳು ಮತ್ತು ಇತರೆ ಸೇವೆಗಳಿಗೆ ಸುರಕ್ಷಿತವಾಗಿ ಲಾಗಿನ್ ಮಾಡಲು ಬಳಕೆದಾರರಿಗೆ ಅವಕಾಶ ಕಲ್ಪಿಸುತ್ತದೆ.

ಸ್ಟೇಜ್‌ ಮ್ಯಾನೇಜರ್

ಸ್ಟೇಜ್‌ ಮ್ಯಾನೇಜರ್

ಐಪ್ಯಾಡ್‌ಗಾಗಿ ಹೊಸ ಡೆಸ್ಕ್‌ಟಾಪ್ ಕ್ಲಾಸ್ ಫೀಚರ್ಸ್‌ ಇದಾಗಿದೆ. ಇದು ಬಳಕೆದಾರರಿಗೆ ಆಪ್‌ಗಳ ಗಾತ್ರವನ್ನು ಬದಲಾಯಿಸಲು ಮತ್ತು ಐಪ್ಯಾಡ್‌ನಲ್ಲಿ ಮ್ಯಾಕ್‌ಬುಕ್ ತರಹದ ಅನುಭವವನ್ನು ಪಡೆಯಲು ಫ್ಲೈ ನಲ್ಲಿ ಮಲ್ಟಿಟಾಸ್ಕ್ ಕೆಲಸ ಮಾಡಲು ಅನುಮತಿಸುತ್ತದೆ.

ಹವಾಮಾನ ವರದಿ

ಹವಾಮಾನ ವರದಿ

ಈ ಫೀಚರ್ಸ್‌ ಮೂಲಕ ಸ್ಥಳೀಯ ಹವಾಮಾನ ಮಾಹಿತಿಯನ್ನು ಪಡೆಯಬಹುದಾಗಿದೆ. ಐಪ್ಯಾಡ್‌ಗಾಗಿ ಈ ಸಂಬಂಧ ಆಪ್‌ ರಚಿಸಲಾಗಿದ್ದು, ಇದರಲ್ಲಿ ಹೊಸ ಅನಿಮೇಷನ್‌ಗಳು ಮತ್ತು ಗಾಳಿಯ ಗುಣಮಟ್ಟ, ತಾಪಮಾನ ಮತ್ತು ತೀವ್ರ ಹವಾಮಾನ ಎಚ್ಚರಿಕೆಗಳಂತಹ ಪ್ರಮುಖ ಡೇಟಾವನ್ನು ಬಳಕೆದಾರರು ಕಾಣಬಹುದಾಗಿದೆ.

ಲೈವ್ ಟೆಕ್ಸ್ಟ್‌ನಲ್ಲಿ ಸುಧಾರಣೆ

ಲೈವ್ ಟೆಕ್ಸ್ಟ್‌ನಲ್ಲಿ ಸುಧಾರಣೆ

ಐಪ್ಯಾಡ್‌ಗಳಲ್ಲಿನ ಲೈವ್ ಟೆಕ್ಸ್ಟ್ ಫೀಚರ್ಸ್‌ನಲ್ಲಿ ಪ್ರಮುಖ ಸುಧಾರಣೆಗಳನ್ನು ತರಲಾಗಿದೆ. ಬಳಕೆದಾರರು ಈಗ ವಿಡಿಯೋ ಫ್ರೇಮ್‌ನಿಂದ ಡೇಟಾವನ್ನು ಪಡೆದುಕೊಳ್ಳುವುದರ ಜೊತೆಗೆ ಅದನ್ನು ಬೇರೆ ಕಡೆ ನಕಲಿಸಬಹುದು ಹಾಗೂ ಪೇಸ್ಟ್‌ ಮಾಡಬಹುದು, ಹಾಗೆಯೇ ಭಾಷಾಂತರ ಕೂಡ ಮಾಡಬಹುದಾಗಿದೆ. ಈ ಫೀಚರ್ಸ್‌ ಫೋಟೋ, ಸಫಾರಿ ಮತ್ತು ಇತರ ಆಪ್‌ಗಳ ಜೊತೆಗೆ ಕೆಲಸ ಮಾಡುತ್ತದೆ.

ಐಒಎಸ್ 16 ನಿಂದ ಕೆಲ ಫೀಚರ್ಸ್‌ ನಕಲು

ಐಒಎಸ್ 16 ನಿಂದ ಕೆಲ ಫೀಚರ್ಸ್‌ ನಕಲು

ಆಪಲ್‌ ಫೋನ್‌ಗಳಲ್ಲಿ ಇರುವ ಕೆಲವು ಫೀಚರ್ಸ್‌ ಗಳನ್ನು ಈ ಐಪ್ಯಾಡ್‌ನಲ್ಲೂ ಪರಿಚಯಿಸಲಾಗಿದೆ. ಅದರಲ್ಲಿ ಪ್ರಮುಖವಾಗಿ ಮರುವಿನ್ಯಾಸಗೊಳಿಸಲಾದ ಹೋಮ್ ಅಪ್ಲಿಕೇಶನ್, ಲಾಕ್‌ಡೌನ್ ಮೋಡ್ ಹಾಗೆಯೇ ಸುದಾರಿತ ಗೌಪ್ಯತೆ ಮತ್ತು ಭದ್ರತಾ ಫೀಚರ್ಸ್‌ಗಳಾಗಿವೆ.

Best Mobiles in India

English summary
iPadOS 16 is developed by Apple for its iPad series of tablets. Meanwhile, some amazing features can be found in iPadOS 16 now.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X