ಕ್ರೋಮಾ ಎವೆರಿಥಿಂಗ್‌ ಆಪಲ್‌ ಸೇಲ್‌: ಈ ಡಿವೈಸ್‌ಗಳಿಗೆ ಬಿಗ್‌ ಡಿಸ್ಕೌಂಟ್‌!

|

ಇಂದಿನ ದಿನಗಳಲ್ಲಿ ಆನ್‌ಲೈನ್‌ ಶಾಪಿಂಗ್‌ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದೇ ಕಾರಣಕ್ಕೆ ಆನ್‌ಲೈನ್‌ ಶಾಪಿಂಗ್‌ ಸೈಟ್‌ಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಇದರ ನಡುವೆ ಆನ್‌ಲೈನ್‌ ಗ್ರಾಹಕರನ್ನು ತಮ್ಮತ್ತ ಸೆಳೆಯುವ ನಿಟ್ಟಿನಲ್ಲಿ ಇ-ಕಾಮರ್ಸ್‌ ಸೈಟ್‌ಗಳು ಕೂಡ ವಿಶೇಷ ಸೇಲ್‌, ಆಫರ್‌ಗಳನ್ನು ನೀಡುತ್ತಾ ಬಂದಿವೆ. ಇದೀಗ ಕ್ರೋಮಾ ತಾಣ ತನ್ನ ಗ್ರಾಹಕರಿಗಾಗಿ ಕ್ರೋಮಾ ಎವೆರಿಥಿಂಗ್ ಆಪಲ್ ಸೇಲ್ ಅನ್ನು ಆಯೋಜಿಸಿದೆ. ಈ ಸೇಲ್‌ ಈಗಾಗಲೇ ಲೈವ್‌ ಆಗಿದ್ದು ಜುಲೈ 31ರವರಗೆ ನಡೆಯಲಿದೆ.

ಕ್ರೋಮಾ

ಹೌದು, ಕ್ರೋಮಾ ಎವೆರಿಥಿಂಗ್ ಆಪಲ್ ಸೇಲ್‌ನಲ್ಲಿ ಭರ್ಜರಿ ಡಿಸ್ಕೌಂಟ್‌ ಅನ್ನು ಪಡೆದುಕೊಳ್ಳಬಹುದಾಗಿದೆ. ರಿಟೇಲ್‌ ವ್ಯಾಪಾರಿಗಳು ಹಲವಾರು ಆಪಲ್ ಪ್ರಾಡಕ್ಟ್‌ಗಳ ಮೇಲೆ ರಿಯಾಯಿತಿಯಲ್ಲಿ ನೀಡುತ್ತಿದ್ದಾರೆ. ಕ್ರೋಮಾ ಎವೆರಿಥಿಂಗ್‌ ಆಪಲ್‌ ಸೇಲ್‌ನಲ್ಲಿ ಬ್ಯಾಂಕ್ ರಿಯಾಯಿತಿ ಸೇರಿದಂತೆ 15,000ರೂ.ಗಳವರೆಗೆ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಇದರಲ್ಲಿ ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ವೆರಿಯೆಬಲ್‌ ಡಿವೈಸ್‌ಗಳ ಜೊತೆಗೆ ಕ್ರೋಮಾ ಉತ್ಪನ್ನ ಪರಿಕರಗಳನ್ನು 67% ರಿಯಾಯಿತಿಯನ್ನು ನೀಡುತ್ತಿದೆ.

ಕ್ರೋಮಾ

ಇನ್ನು ಕ್ರೋಮಾ ಎವೆರಿಥಿಂಗ್‌ ಆಪಲ್‌ ಸೇಲ್‌ನಲ್ಲಿ ನೀವು ಆಪಲ್‌ ಕಂಪೆನಿಯ ಡಿವೈಸ್‌ಗಳ ಮೇಲೆ ಬಿಗ್‌ ಆಫರ್‌ ನೀಡಲಾಗುತ್ತಿದೆ. ಗ್ರಾಹಕರು ತಾವು ಖರೀದಿಸಲು ಬಯಸುವ ಉತ್ಪನ್ನಗಳ ಬೆಲೆಗಳನ್ನು ಇತರ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳೊಂದಿಗೆ ಹೋಲಿಸಲು ಸಲಹೆ ನೀಡಲಾಗುತ್ತದೆ. ಇದರ ಮೂಲಕ ನಿಮಗೆ ಸೂಕ್ತವಾಗುವ ಡಿವೈಸ್‌ ಅನ್ನು ನೀವು ರಿಯಾಯಿತಿ ದರದಲ್ಲಿ ಖರೀದಿಸಬಹುದಾಗಿದೆ. ಹಾಗಾದ್ರೆ ಕ್ರೋಮಾ ಎವೆರಿಥಿಂಗ್‌ ಆಪಲ್‌ ಸೇಲ್‌ನಲ್ಲಿ ನೀವು ಏನೆಲ್ಲಾ ರಿಯಾಯಿತಿ ಪಡೆದುಕೊಳ್ಳಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಪಲ್‌ ಐಫೋನ್‌ 13

ಆಪಲ್‌ ಐಫೋನ್‌ 13

128GB ಸ್ಟೋರೇಜ್ ಹೊಂದಿರುವ ಆಪಲ್‌ ಐಫೋನ್‌ 13 ಅನ್ನು ಕ್ರೋಮಾದಲ್ಲಿ ಕೇವಲ 66,990ರೂ.ಬೆಲೆಗೆ ಖರೀದಿಸಬಹುದಾಗಿದೆ. ಇದರ ಎಂಆರ್‌ಪಿ ಬೆಲೆ 79,900ರೂ. ಆಗಿದೆ. ಇದರಲ್ಲಿ ಹೆಚ್ಚುವರಿ ಬ್ಯಾಂಕ್‌ ರಿಯಾಯಿತಿಗಳನ್ನು ಕೂಡ ಸೇರಿದೆ. ಇದಲ್ಲದೆ ಆಪಲ್‌ ಐಫೋನ್‌ 13 256GB ಸ್ಟೋರೇಜ್ ರೂಪಾಂತರವನ್ನು ರಿಯಾಯಿತಿ ದರದಲ್ಲಿ 75,990ರೂ.ಗಳಿಗೆ ಖರೀದಿಸಬಹುದು. ಇದರ ಎಂಆರ್‌ಪಿ ಬೆಲೆ 89,900ರೂ.ಆಗಿದೆ. ಇನ್ನು ಐಫೋನ್ 13 6.1 ಇಂಚಿನ ಡಿಸ್‌ಪ್ಲೇ ಹೊಂದಿದ್ದು,1200 ನಿಟ್ಸ್‌ ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಈ ಫೋನ್ A15 ಬಯೋನಿಕ್ ಸೋಕ್ ಕ್ವಾಡ್‌ ಕೋರ್ ಪ್ರೊಸೆಸರ್‌ ಅನ್ನು ಹೊಂದಿದೆ.

ಆಪಲ್ ಐಫೋನ್‌ 12

ಆಪಲ್ ಐಫೋನ್‌ 12

ಕ್ರೋಮಾ ಎವೆರಿಥಿಂಗ್‌ ಆಪಲ್‌ ಸೇಲ್‌ನಲ್ಲಿ ಆಪಲ್ ಐಫೋನ್‌ 12 ಕೂಡ ನೀವು ಕೇವಲ 53,990ರೂ.ಬೆಲೆಗೆ ಖರೀದಿಸಬಹುದು. ಇದರಲ್ಲಿ ಹೆಚ್ಚುವರಿ ಬ್ಯಾಂಕ್‌ ರಿಯಾಯಿತಿಗಳು ಕೂಡ ಸೇರಿವೆ. ಇದಲ್ಲದೆ 128GB ಸ್ಟೋರೇಜ್ ಹೊಂದಿರುವ ರೂಪಾಂತರವು ನಿಮಗೆ 58,990ರೂ.ಬೆಲೆಯಲ್ಲಿ ಲಭ್ಯವಾಗಲಿದೆ. ಇನ್ನು ಐಫೋನ್ 12 OLED ಡಿಸ್‌ಪ್ಲೇ ಹೊಂದಿದ್ದು, A14 ಬಯೋನಿಕ್ ಸೋಕ್ ಕ್ವಾಡ್‌ ಕೋರ್ ಪ್ರೊಸೆಸರ್‌ ಅನ್ನು ಹೊಂದಿದೆ.ಈ ಫೋನ್ ಡ್ಯುಯಲ್‌ ರಿಯರ್‌ ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾಪಿಕ್ಸೆಲ್ ವೈಡ್ ಆಂಗಲ್ ಸೆನ್ಸಾರ್‌ಗಳನ್ನು ಹೊಂದಿವೆ.

ಆಫಲ್‌ ಐಫೋನ್‌ 11

ಆಫಲ್‌ ಐಫೋನ್‌ 11

64GB ಸ್ಟೋರೇಜ್ ಸಾಮರ್ಥ್ಯದ ಆಪಲ್‌ ಐಫೋನ್‌ ಕ್ರೋಮಾ ಎವೆರಿಥಿಂಗ್‌ ಆಪಲ್‌ ಸೇಲ್‌ನಲ್ಲಿ 42,990ರೂ.ಬೆಲೆಗೆ ಖರೀದಿಸಬಹುದಾಗಿದೆ. ಇದರ ಎಂಆರ್‌ಪಿ ಬೆಲೆ 49,990ರೂ.ಆಗಿದೆ. ಗ್ರಾಹಕರು ಹೆಚ್ಚುವರಿ ಬ್ಯಾಂಕ್ ರಿಯಾಯಿತಿಗಳನ್ನು ಅನ್ವಯಿಸಿದ ನಂತರ ಈ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು 128GB ಸ್ಟೋರೇಜ್ ಮಾದರಿಯು ಕೂಡ ರಿಯಾಯಿತಿ ದರದಲ್ಲಿ ನಿಮಗೆ ಕೇವಲ 49,990ರೂ.ಬೆಲೆಗೆ ಲಭ್ಯವಾಗಲಿದೆ. ಇನ್ನು ಆಫಲ್‌ ಐಫೋನ್‌ 11 6.1 ಇಂಚಿನ ಡಿಸ್‌ಪ್ಲೇ ಹೊಂದಿದೆ. ಇದು ವೇಗದ ಚಿಪ್‌ಸೆಟ್‌ ಬೆಂಬಲದೊಂದಿಗೆ A13 ಬಯೋನಿಕ್ ಪ್ರೊಸೆಸರ್‌ ಪಡೆದುಕೊಂಡಿದ್ದು, ಈ ಬಯೋನಿಕ್ ಚಿಪ್ 8.5 ಬಿಲಿಯನ್ ಟ್ರಾನ್ಸಿಸ್ಟರ್‌ಗಳನ್ನು ಹೊಂದಿದೆ.

ಆಪಲ್‌ ವಾಚ್‌ ಸಿರೀಸ್‌ 7

ಆಪಲ್‌ ವಾಚ್‌ ಸಿರೀಸ್‌ 7

ಕ್ರೋಮಾ ಎವೆರಿಥಿಂಗ್‌ ಆಪಲ್‌ ಸೇಲ್‌ನಲ್ಲಿ ಆಪಲ್‌ ವಾಚ್‌ ಸಿರೀಸ್‌ 7 ಮೇಲೆ ಬಿಗ್‌ ಡಿಸ್ಕೌಂಟ್‌ ಪಡೆದುಕೊಳ್ಳಬಹುದಾಗಿದೆ. ಪ್ರಸ್ತುತ ಕ್ರೋಮಾದಲ್ಲಿ ಈ ವಾಚ್‌ನ 41mm ಗಾತ್ರದ ರೂಪಾಂತರದ ಆಯ್ಕೆಯನ್ನು 37,990ರೂ. ಬೆಲೆಯಲ್ಲಿ ಖರೀದಿಸಬಹುದಾಗಿದೆ. ಇನ್ನು ಆಪಲ್ ವಾಚ್ ಸರಣಿ 7 41mm ಆಯ್ಕೆಯು ರೆಟಿನಾ ಡಿಸ್‌ಪ್ಲೇ ಹೊಂದಿದ್ದು, ಬಾಗಿದ ಮಾದರಿಯ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇಯಲ್ಲಿ 50% ಹೆಚ್ಚು ಪಠ್ಯವನ್ನು ಕ್ರಾಮ್ ಮಾಡಬಹುದು. ಈ ವಾಚ್‌ ಹೊಸ ಫೇಸ್‌ಗಳು, ಐಪಿಎಕ್ಸ್ 6 ಪ್ರಮಾಣೀಕರಣ, ಸುಧಾರಿತ ಚಾರ್ಜಿಂಗ್ ಅನುಭವ, ವೇಗದ ಚಾರ್ಜಿಂಗ್ ಯುಎಸ್‌ಬಿ ಸಿ ಕೇಬಲ್ ಅನ್ನು ಒಳಗೊಂಡಿದೆ.

ಆಪಲ್‌ ವಾಚ್ SE

ಆಪಲ್‌ ವಾಚ್ SE

ಆಪಲ್‌ ವಾಚ್ SE GPS ಅನ್ನು ನೀವು ಕ್ರೋಮಾ ಸೇಲ್‌ನಲ್ಲಿ ಕೇವಲ 26,990ರೂ.ಬೆಲೆಗೆ ಖರೀದಿಸಬಹುದಾಗಿದೆ. ಈ ವಾಚ್‌ನ 40mm ಗಾತ್ರದ ರೂಪಾಂತರಕ್ಕೆ ರಿಯಾಯಿತಿ ದೊರೆಯುತ್ತಿದೆ, ಇದರ ಎಂಆರ್‌ಪಿ ಬೆಲೆ 29,900ರೂ.ಆಗಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ಆಪಲ್‌ S5 SiP ಮತ್ತು W3 ವೈರ್‌ಲೆಸ್ ಚಿಪ್ ಅನ್ನು ಒಳಗೊಂಡಿದೆ. ಇದು ಅಕ್ಸೆಲೆರೊಮೀಟರ್, ಗೈರೊಸ್ಕೋಪ್ ಮತ್ತು ಯಾವಾಗಲೂ ಆನ್ ಆಲ್ಟಿಮೀಟರ್ ಕಾರ್ಯವನ್ನು ಪಡೆಯುತ್ತದೆ.

ಆಪಲ್‌ ಮ್ಯಾಕ್‌ಬುಕ್‌ ಪ್ರೊ 14-ಇಂಚಿನ (2021)

ಆಪಲ್‌ ಮ್ಯಾಕ್‌ಬುಕ್‌ ಪ್ರೊ 14-ಇಂಚಿನ (2021)

ಆಪಲ್‌ ಕಂಪೆನಿಯ ಆಪಲ್‌ ಮ್ಯಾಕ್‌ಬುಕ್‌ ಪ್ರೊ 14-ಇಂಚಿನ ಆಯ್ಕೆಯು ವಿಶೇಷ ಡಿಸ್ಕೌಂಟ್‌ ಪಡೆದುಕೊಂಡಿದೆ. ಈ ಸೇಲ್‌ನಲ್ಲಿ ಮ್ಯಾಕ್‌ಬುಕ್‌ ಪ್ರೊ 14-ಇಂಚಿನ ಆಯ್ಕೆಯನ್ನು ನೀವು ಕೇವಲ 1,75,410ರೂ.ಬೆಲೆಗೆ ಖರೀದಿಸಬಹುದಾಗಿದೆ. ಇದರ ಎಂಆರ್‌ಪಿ ಬೆಲೆ 1,94,900ರೂ.ಆಗಿದೆ. ಇನ್ನು ಆಪಲ್ ಮ್ಯಾಕ್‌ಬುಕ್ ಪ್ರೊ (2021) 14 ಇಂಚಿನ ಆಯ್ಕೆಯು SDXC ಕಾರ್ಡ್ ಸ್ಲಾಟ್ ಹಾಗೂ HDMI ಪೋರ್ಟ್‌ ಅನ್ನು ಹೊಂದಿದೆ. ಇನ್ನು ಈ ಮಾಡೆಲ್‌ನಲ್ಲಿ 1080p ಸಾಮರ್ಥ್ಯದ ಫೇಸ್‌ಟೈಮ್ ವೆಬ್‌ಕ್ಯಾಮ್ ಅನ್ನು ಹೊಂದಿದೆ. ಇದು P3 ವೈಡ್ ಕಲರ್ ಗ್ಯಾಮಟ್, HDR ಬೆಂಬಲ ಮತ್ತು XDR ಔಟ್‌ಪುಟ್ ಅನ್ನು ಸಹ ಒಳಗೊಂಡಿದೆ. ಈ ಆಫರ್‌ ನಿಮಗೆ ಜುಲೈ 31ರವರಗೆ ಲಭ್ಯವಾಗಲಿದೆ.

Best Mobiles in India

Read more about:
English summary
iPhone 13, MacBook Pro and more Discounted in Croma Everything Apple Sale

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X