Just In
- 25 min ago
ChatGPT ಬಳಕೆಯಿಂದ ಏನೆಲ್ಲಾ ಲಾಭ? ಏನೆಲ್ಲಾ ನಷ್ಟ?
- 47 min ago
ಏರ್ಟೆಲ್ನ ಈ ಹೊಸ ರೀಚಾರ್ಜ್ ಪ್ಲ್ಯಾನ್ನಲ್ಲಿ ದಿನವಿಡೀ ಇಂಟರ್ನೆಟ್ ಬಳಸಿದ್ರೂ ಡೇಟಾ ಖಾಲಿಯಾಗಲ್ಲ!
- 2 hrs ago
ಒನ್ಪ್ಲಸ್ ನಾರ್ಡ್ ಸ್ಮಾರ್ಟ್ವಾಚ್ ಬೆಲೆ ಇಳಿಕೆ; ಅಗ್ಗದ ದರದಲ್ಲಿ ನಿಮ್ಮ 'ಕೈ'ಗೆ!
- 2 hrs ago
Airtel, Jio and Vi: 200ರೂ. ಒಳಗೆ ಲಭ್ಯವಾಗುವ ಪ್ರಿಪೇಯ್ಡ್ ಪ್ಲಾನ್ಗಳು!
Don't Miss
- Sports
U-19 Women's World Cup 2023: ಭಾರತ vs ನ್ಯೂಜಿಲೆಂಡ್ ಸೆಮಿಫೈನಲ್ ಪಂದ್ಯದ ಟಾಸ್ ವರದಿ
- News
Breaking; ರಣದೀಪ್ ಸಿಂಗ್ ಸುರ್ಜೇವಾಲಾ ಭೇಟಿಯಾದ ಎಚ್. ವಿಶ್ವನಾಥ್!
- Movies
"ಸಿಗರೇಟ್ ಸೇದಿ 'ಕೆಜಿಎಫ್' ಮಾಡಿದ.. ಈಗ ಕಪ್ಸಿ, ಕುಪ್ಸಿ, ಪಿಪ್ಸಿ ಕುಡೀರಿ ಅಂತೆ" ಯಶ್ ವಿರುದ್ಧ ಅಹೋರಾತ್ರ ಆಕ್ರೋಶ!
- Automobiles
ಓಲಾ ಎಸ್1 ಪ್ರೊ ಸ್ಕೂಟರ್ಗೆ ಭರ್ಜರಿ ಡಿಸ್ಕೌಂಟ್ ಘೋಷಣೆ
- Lifestyle
Shani Asta 2023 : ಶನಿ ಅಸ್ತ 2023: ದ್ವಾದಶ ರಾಶಿಗಳ ಮೇಲೆ ಇದರ ಪ್ರಭಾವ ಹಾಗೂ ಪರಿಹಾರ
- Finance
ಹಿಂಡೆನ್ಬರ್ಗ್ ವರದಿ ಎಫೆಕ್ಟ್: ಅದಾನಿ ಸ್ಟಾಕ್ ಶೇ.20ರಷ್ಟು ಕುಸಿತ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಐಫೋನ್ 14: ಏನಿದು Emergency SOS via satellite ಫೀಚರ್? ಭಾರತದಲ್ಲಿ ಲಭ್ಯವೇ?
ಆಪಲ್ ಸಂಸ್ಥೆಯು ಇತ್ತೀಚಿಗೆ ಬಿಡುಗಡೆ ಮಾಡಿರುವ ಐಫೋನ್ 14 ಸರಣಿಯು ಆಕರ್ಷಕ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡಿದೆ. ಆ ಪೈಕಿ ಸೆಟ್‌ಲೈಟ್ ಕನೆಕ್ಟಿವಿಟಿ (Emergency SOS via satellite) ಆಯ್ಕೆಯು ಗ್ರಾಹಕರಲ್ಲಿ ಐಫೋನ್ 14 ಸರಣಿಯ ಬಗ್ಗೆ ಮತ್ತಷ್ಟು ಆಸಕ್ತಿ ಮೂಡಿಸಿದೆ. ಅಷ್ಟಕ್ಕೂ ಏನಿದು ಸ್ಯಾಟ್‌ಲೈಟ್ ಕನೆಕ್ಟಿವಿಟಿ ಫೀಚರ್ ಗೊತ್ತಾ?

ವಿಶೇಷ ಫೀಚರ್ಸ್‌ಗಳನ್ನು ಪರಿಚಯಿಸುವುದರಿಂದಲೆ ಐಫೋನ್‌ಗಳು ಹೆಚ್ಚು ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿವೆ. ಅದೇ ರೀತಿ ಸಂಸ್ಥೆಯು ನೂತನ ಐಫೋನ್ 14 ಸರಣಿಯಲ್ಲಿ Emergency SOS via satellite ಆಯ್ಕೆ ನೀಡಿದ್ದು, ಇದು ತುರ್ತು ಸಂದರ್ಭಗಳಲ್ಲಿ ಬಳಕೆದಾರರಿಗೆ ನೆರವು ನೀಡಲಿದೆ. ಅಂದರೆ, ಯಾವುದೇ ಸೆಲ್ಯುಲರ್ ಕನೆಕ್ಟಿವಿಟಿ ಇಲ್ಲದ/ಸಿಗದ ಸನ್ನಿವೇಶದಲ್ಲಿ ಬಳಕೆದಾರರಿಗೆ ಇದು ಖಂಡಿತಾ ಸಹಾಯಕ ಆಯ್ಕೆ ಎನಿಸಲಿದೆ. ಈ ಫೀಚರ್ ಬಗ್ಗೆ ಇನ್ನಷ್ಟು ಮಾಹಿತಿ ಏನು? ಈ ಆಯ್ಕೆ ಭಾರತದಲ್ಲಿ ಲಭ್ಯ ಇದೆಯಾ? ಮುಂದೆ ತಿಳಿಯೋಣ ಬನ್ನಿರಿ.

ಏನಿದು Emergency SOS via satellite?
ಐಫೋನ್ 14 ಸರಣಿಯಲ್ಲಿರುವ ಪ್ರಮುಖ ಹೈಲೈಟ್‌ಗಳಲ್ಲಿ ಒಂದಾಗಿರುವ Emergency SOS via satellite ಅಕ್ಷರಶಃ ತುರ್ತು ಸಹಾಯಕ ಆಯ್ಕೆ ಆಗಿದೆ. ಸುಲಭವಾಗಿ ಹೇಳುವುದಾದರೆ, ಯಾವುದೇ ವೈ-ಫೈ ಕನೆಕ್ಟಿವಿಟಿ ಅಥವಾ ಸೆಲ್ಯುಲರ್ ಕನೆಕ್ಟಿವಿಟಿ ಇಲ್ಲದ ಅಥವಾ ಸಿಗದ ಸಂದರ್ಭಗಳಲ್ಲಿಯೂ ಬಳಕೆದಾರರು ಮೆಸೆಜ್ ಅಪ್ಲಿಕೇಶನ್ ಮೂಲಕ ಮೆಸೆಜ್ ಕಳುಹಿಸಬಹುದಾಗಿದೆ. ಬಳಕೆದಾರರು ತುರ್ತು ಪರಿಸ್ಥಿತಿಯಲ್ಲಿ ಸಿಲುಕಿರುವಾಗ ಖಂಡಿತಾ ಇದೊಂದು ಉಪಯುಕ್ತ ಫೀಚರ್ ಎನ್ನಬಹುದು. ಏರ್‌ಪ್ಲೇನ್ ಮೋಡ್ ಅನ್ನು ಆನ್ ಮಾಡುವ ಮೂಲಕ ಈ ಆಯ್ಕೆ ಪರೀಕ್ಷಿಸಲು ಸಾಧ್ಯವಿಲ್ಲ ಎಂಬುದನ್ನು ಗಮನಿಸಬೇಕು.

ಭಾರತದಲ್ಲಿ ಈ ಫೀಚರ್ ಲಭ್ಯ ಇದೆಯಾ?
ಐಫೋನ್ 14 ಸರಣಿಯಲ್ಲಿರುವ Emergency SOS via satellite ಆಯ್ಕೆಯು ಆರಂಭದಲ್ಲಿ ಕೆನಡ ಹಾಗೂ ಯುಎಸ್‌ಎ (USA) ರಾಷ್ಟ್ರಗಳಲ್ಲಿ ಲಭ್ಯವಾಗಲಿದೆ. ಈ ಫೀಚರ್ ಈ ವರ್ಷದ ನವೆಂಬರ್‌ನಲ್ಲಿ ಆಗಮಿಸುವ ನಿರೀಕ್ಷೆಯಿದೆ. ಅಂದಹಾಗೆ ಚೀನಾ, ಹಾಂಗ್ ಕಾಂಗ್ ಅಥವಾ ಮಕಾವುಗಳಿಂದ ಯಾವುದೇ ಐಫೋನ್ 14 ಮಾದರಿಯನ್ನು ಖರೀದಿಸುವ ಬಳಕೆದಾರರಿಗೆ Emergency SOS via satellite ಫೀಚರ್ ಪ್ರಯೋಜನ ಲಭ್ಯವಾಗುವುದಿಲ್ಲ.

ಐಫೋನ್ 14 ಫೀಚರ್ಸ್
ಐಫೋನ್ 14 ಫೋನ್ 6.1 ಇಂಚಿನ FHD+ ಡಿಸ್‌ಪ್ಲೇ ಹೊಂದಿದ್ದು, 1200nits ಬ್ರೈಟ್ನಸ್ ಸಪೋರ್ಟ್ ಹಾಗೆಯೇ ಇದು ಡ್ಯುಯಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 12 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಮುಂಭಾಗದಲ್ಲಿ 12 ಮೆಗಾ ಪಿಕ್ಸಲ್‌ನ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇದು 128GB, 256GB ಮತ್ತು 512GB ಸ್ಟೋರೇಜ್ ಆಯ್ಕೆಗಳನ್ನು ಒಳಗೊಂಡಿದೆ. ಐಫೋನ್ 14 ಫೋನ್ 5G ಕನೆಕ್ಟಿವಿಟಿ ಸೌಲಭ್ಯ ಪಡೆದಿದೆ. ಇದು ಇ-ಸಿಮ್ ಆಯ್ಕೆ ಒಳಗೊಂಡಿದೆ.

ಐಫೋನ್ 14 ಪ್ಲಸ್ ಫೀಚರ್ಸ್
ಐಫೋನ್ 14 ಪ್ಲಸ್ ಫೋನ್ 6.7 ಇಂಚಿನ ಡಿಸ್‌ಪ್ಲೇ ಸಾಮರ್ಥ್ಯ ಪಡೆದಿದ್ದು, OLED ಡಿಸ್‌ಪ್ಲೇ ಹೊಂದಿದ್ದು, 1200nits ಬ್ರೈಟ್ನಸ್ ಸಪೋರ್ಟ್ ಹಾಗೆಯೇ ಇದು ಡ್ಯುಯಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 12 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಮುಂಭಾಗದಲ್ಲಿ 12 ಮೆಗಾ ಪಿಕ್ಸಲ್‌ನ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. 128GB, 256GB ಮತ್ತು 512GB ಸ್ಟೋರೇಜ್ ಆಯ್ಕೆಗಳನ್ನು ಒಳಗೊಂಡಿದೆ. ಐಫೋನ್ 14 ಗೆ ಹೋಲಿಸಿದರೆ, ಈ ಫೋನ್ ದೀರ್ಘ ಬ್ಯಾಟರಿ ಸಾಮರ್ಥ್ಯವನ್ನು ಪಡೆದಿದೆ. ಇದು ಐಫೋನ್ 14 ಪ್ಲಸ್ ಫೋನ್ ಸಹ 5G ಕನೆಕ್ಟಿವಿಟಿ ಸೌಲಭ್ಯ ಪಡೆದಿದೆ. ಇದು ಇ-ಸಿಮ್ ಸಪೋರ್ಟ್ ಪಡೆದಿದೆ.

ಐಫೋನ್ 14 ಪ್ರೊ ಫೀಚರ್ಸ್
ಐಫೋನ್ 14 ಪ್ರೊ ಫೋನ್ 6.1 ಇಂಚಿನ ಸೂಪರ್ ರೆಟಿನಾ ಎಕ್ಸ್‌ಡಿಆರ್ ಡಿಸ್‌ಪ್ಲೇ ಹೊಂದಿದ್ದು, ಮೊದಲ ಬಾರಿಗೆ ಆಲ್ವೇಸ್ ಆನ್ ಡಿಸ್‌ಪ್ಲೇ ನೀಡುತ್ತದೆ. ಅದೇ ರೀತಿ ಐಫೋನ್ 14 ಪ್ರೊ ಮ್ಯಾಕ್ಸ್ ಫೋನ್ 6.7 ಇಂಚಿನ ರೆಟಿನಾ XDR ಡಿಸ್‌ಪ್ಲೇ ಹೊಂದಿದ್ದು, ಇದು ಸಹ ಆಲ್ವೇಸ್ ಆನ್ ಕಾರ್ಯವನ್ನು ಹೊಂದಿದೆ. ಹಿಂಬದಿಯ ಕ್ಯಾಮೆರಾ ವ್ಯವಸ್ಥೆಯು 48 ಮೆಗಾ ಪಿಕ್ಸೆಲ್ ಕ್ವಾಡ್ ಪಿಕ್ಸೆಲ್ ಕ್ಯಾಮೆರಾವನ್ನು 65 ಪ್ರತಿಶತ ದೊಡ್ಡ ಸಂವೇದಕವನ್ನು ಹೊಂದಿದೆ. 48 ಮೆಗಾ ಪಿಕ್ಸೆಲ್ ಅಗಲದ ಕ್ಯಾಮೆರಾ 2x ಟೆಲಿಫೋಟೋ ವೀಕ್ಷಣೆಯನ್ನು ಸಹ ನೀಡುತ್ತದೆ. ಐಫೋನ್ 14 ಪ್ರೊ ಆಕ್ಷನ್ ಮೋಡ್ ಅನ್ನು ನೀಡುತ್ತದೆ, ಇದು ಆಟೋಫೋಕಸ್, ಕ್ರ್ಯಾಶ್ ಡಿಟೆಕ್ಷನ್ ಮತ್ತು Emergency SOS via satellite ಸಂಪರ್ಕವನ್ನು ಬಳಸಿಕೊಂಡು ಸುಧಾರಿತ ಮುಂಭಾಗದ ಕ್ಯಾಮೆರಾ ಒಳಗೊಂಡಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470