ಕಣಿವೆಗೆ ಬಿದ್ದಿದ್ದ ಇಬ್ಬರ ಜೀವ ಉಳಿಸಿದ ಐಫೋನ್‌ 14! ಹೇಗೆ ಅಂತೀರಾ ಈ ಸ್ಟೋರಿ ಓದಿರಿ!

|

ಆಪಲ್‌ ಡಿವೈಸ್‌ಗಳು ಬಳಕೆದಾರರ ಪಾಲಿಗೆ ಕೆಲವೊಮ್ಮೆ ಅಪತ್ಬಾಂಧವನಂತೆ ಕಾರ್ಯನಿರ್ವಹಿಸುತ್ತವೆ. ಈಗಾಗಲೇ ಸಾಕಷ್ಟು ತುರ್ತು ಸಂದರ್ಭದಲ್ಲಿ ಬಳಕೆದಾರರು ಅಪಘಾತದಿಂದ ಪಾರಾಗುವಲ್ಲಿ ಆಪಲ್‌ ಡಿವೈಸ್‌ಗಳು ಪ್ರಮುಖ ಪಾತ್ರ ವಹಿಸಿವೆ. ಇದೀಗ ಅಂತಹದ್ದೇ ಮತ್ತೊಂದು ಪ್ರಕರಣ ಇದೀಗ ಸುದ್ದಿಯಾಗಿದ್ದು, ಆಪಲ್‌ ಡಿವೈಸ್‌ಗಳ ಮೇಲಿನ ಬಳಕೆದಾರರ ಪ್ರೀತಿ ಇನ್ನಷ್ಟು ಹೆಚ್ಚಾಗುವಂತೆ ಮಾಡಿದೆ. ಕ್ಯಾಲಿಪೋರ್ನಿಯಾದ ಏಂಜಲೀಸ್‌ ಫಾರೆಸ್ಟ್‌ ಹೆದ್ದಾರಿಯಲ್ಲಿ ನಡೆದ ಅಪಘಾತ ಸಂದರ್ಭದಲ್ಲಿ ಐಫೋನ್‌ 14 ನಲ್ಲಿರುವ ಫೀಚರ್ಸ್‌ ಸಹಕಾರಿಯಾಗಿದೆ.

ಆಪಲ್‌

ಹೌದು, ಆಪಲ್‌ ಕಂಪೆನಿಯ ಐಫೋನ್‌ 14ನಲ್ಲಿರುವ ಎಮರ್ಜೆನ್ಸಿ SOSಯಿಂದ ಏಂಜಲೀಸ್‌ ಫಾರೆಸ್ಟ್‌ ಹೆದ್ದಾರಿಯಲ್ಲಿಇಬ್ಬರು ವ್ಯಕ್ತಿಗಳನ್ನು ರಕ್ಷಿಸುವುದಕ್ಕೆ ಸಾಧ್ಯವಾಗಿದೆ. ಈ ಸಮಯದಲ್ಲಿ ಅಪಘಾತಕ್ಕೀಡಾದ ವ್ಯಕ್ತಿಗಳನ್ನು ಸಂಪರ್ಕಿಸುವುದಕ್ಕೆ ಸೆಲ್ಯುಲಾರ್‌ ನೆಟ್‌ವರ್ಕ್‌ ಸಂಪರ್ಕವಿಲ್ಲದ ಕಾರಣ ಎಮರ್ಜೆನ್ಸಿ SOS via ಸ್ಯಾಟ್‌ಲೈಟ್‌ ಕಮ್ಯೂನಿಕೇಶನ್‌ ಬಳಸಿಕೊಂಡು ಅವರನ್ನು ರಕ್ಷಿಸಲಾಗಿದೆ. ಹಾಗಾದ್ರೆ ಏಂಜಲೀಸ್‌ ಫಾರೆಸ್ಟ್‌ ಹೆದ್ದಾರಿಯಲ್ಲಿ ನಡೆದದ್ದು ಏನು? ಇದರಲ್ಲಿ ಆಪಲ್‌ ಡಿವೈಸ್‌ ವಹಿಸಿದ ಪಾತ್ರವೇನು? ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಕಣಿವೆಯಲ್ಲಿ

ಕ್ಯಾಲಿಪೋರ್ನಿಯಾದ ಏಂಜಲೀಸ್‌ ಅರಣ್ಯದಲ್ಲಿ ಅಪಘಾತಕ್ಕೀಡಾಗಿ ಆಳವಾದ ಕಣಿವೆಯಲ್ಲಿ ಬಿದಿದ್ದ ಇಬ್ಬರ ಜೀವಗಳನ್ನು ಉಳಿಸುವಲ್ಲಿ ಐಫೋನ್‌ 14 ಸಹಕಾರಿಯಾಗಿದೆ. ಈ ಮೂಲಕ ಆಪಲ್‌ ಡಿವೈಸ್‌ ಯಾಕೆ ಜಾಗತಿಕವಾಗಿ ಮುಂಚೂಣಿಯಲ್ಲಿದೆ ಅನ್ನೊದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಂತಾಗಿದೆ. ಆಪಲ್‌ ಡಿವೈಸ್‌ಗಳಲ್ಲಿರುವ ಹಾರ್ಟ್‌ಬೀಟ್‌ ಸೆನ್ಸಾರ್‌ ಅಥವಾ ಎಮರ್ಜೆನ್ಸಿ SOS ಆಗಿರಲಿ, ಐಫೋನ್‌ಗಳು ಮತ್ತು ಆಪಲ್ ವಾಚ್‌ಗಳಲ್ಲಿನ ಇನ್‌ಬಿಲ್ಟ್‌ ಎಮರ್ಜೆನ್ಸಿ ಫೀಚರ್ಸ್‌ಗಳು ಒಂದಲ್ಲ ಒಂದು ರೀತಿ ಸಹಕಾರಿಯಾಗಿವೆ.

ಕ್ಯಾಲಿಫೋರ್ನಿಯಾದ

ಸದ್ಯ ಕ್ಯಾಲಿಫೋರ್ನಿಯಾದ ಏಂಜಲೀಸ್ ರಾಷ್ಟ್ರೀಯ ಅರಣ್ಯದ ಹೆದ್ದಾರಿಯಲ್ಲಿ ಕಾರು ಅಪಘಾತ ಸಂಭವಿಸಿದೆ. ಇದರಿಂದ ಇಬ್ಬರು ವ್ಯಕ್ತಿಗಳು ಅರಣ್ಯದ ಅಳವಾದ ಕಣಿವೆಯಲ್ಲಿ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಅವರ ಬಳಿಯಿದ್ದ ಐಫೋನ್‌ 14ನಲ್ಲಿರುವ ಎಮರ್ಜೆನ್ಸಿ SOS ಫೀಚರ್ಸ್‌ ಉಪಯೋಗಕ್ಕೆ ಬಂದಿದೆ. ಅಪಘಾತವಾಗ್ತಿದ್ದ ಹಾಗೇ ಆಕ್ಸಿಡೆಂಟ್‌ ಅನ್ನು ರೆಕಾರ್ಡ್‌ ಮಾಡಿರುವ ಐಫೋನ್‌ 14 ತಕ್ಷಣವೇ ಬಳಕೆದಾರರ ಹೊಂದಿದ್ದ ತುರ್ತು ಸಂಪರ್ಕಗಳಿಗೆ ತುರ್ತು SOS ಅನ್ನು ಕಳುಹಿಸಿದೆ. ಇದರಿಂದ ಸೂಕ್ತ ಸಮಯದಲ್ಲಿ ಅವರನ್ನು ರಕ್ಷಿಸುವುದಕ್ಕೆ ಸಾದ್ಯವಾಗಿದೆ.

ಅಪಘಾತಕ್ಕೀಡಾಗಿದ್ದ

ಇದಲ್ಲದೆ ಅಪಘಾತಕ್ಕೀಡಾಗಿದ್ದ ವ್ಯಕ್ತಿಗಳು ಅಳವಾದ ಕಣಿವೆಯಲ್ಲಿ ಬಿದ್ದಿದ್ದರಿಂದ ಅವರನ್ನು ಸಂಪರ್ಕಿಸಲು ಯಾವುದೇ ನೆಟ್‌ವರ್ಕ್‌ ಸಂಪರ್ಕ ಸಾಧ್ಯವಾಗಿಲ್ಲ. ಈ ಸಮಯದಲ್ಲಿ ಸ್ಯಾಟ್‌ಲೈಟ್‌ ಕಮ್ಯೂನಿಕೇಶನ್‌ ಮೂಲಕ ಸಂತ್ರಸ್ಥರನ್ನು ಸಂಪರ್ಕಿಸಲು ಸಾಧ್ಯವಾಗಿದೆ. ನಂತರ ಹೆಲಿಕಾಪ್ಟರ್ ಬಳಸಿ ಇಬ್ಬರು ಬಲಿಪಶುಗಳನ್ನು ರಕ್ಷಿಸಲಾಗಿದೆ. ಇನ್ನು ಅಪಘಾತಕ್ಕೀಡಾದವರು ಹತ್ತಿರದ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಐಫೋನ್‌ 14ನಲ್ಲಿರುವ ಕಾರ್ ಕ್ರ್ಯಾಶ್ ಡಿಟೆಕ್ಷನ್‌ ಮತ್ತು ಸ್ಯಾಟ್‌ಲೈಟ್‌ ಮೂಲಕ ತುರ್ತು SOS-ಕಳುಹಿಸುವ ಫೀಚರ್ಸ್‌ ಸಾಕಷ್ಟು ಉಪಕಾರಿಯಾಗಿದೆ.

ಏನಿದು ಎಮೆರ್ಜೆನ್ಸಿ SOS

ಏನಿದು ಎಮೆರ್ಜೆನ್ಸಿ SOS

ಐಫೋನ್‌ 14 ಸರಣಿಯಲ್ಲಿರುವ ಪ್ರಮುಖ ಹೈಲೈಟ್‌ಗಳಲ್ಲಿ ಒಂದಾಗಿರುವ Emergency SOS via satellite ಅಕ್ಷರಶಃ ತುರ್ತು ಸಹಾಯಕ ಆಯ್ಕೆ ಆಗಿದೆ. ಸುಲಭವಾಗಿ ಹೇಳುವುದಾದರೆ, ಯಾವುದೇ ವೈ-ಫೈ ಕನೆಕ್ಟಿವಿಟಿ ಅಥವಾ ಸೆಲ್ಯುಲರ್ ಕನೆಕ್ಟಿವಿಟಿ ಇಲ್ಲದ ಅಥವಾ ಸಿಗದ ಸಂದರ್ಭಗಳಲ್ಲಿಯೂ ಬಳಕೆದಾರರು ಮೆಸೆಜ್‌ ಅಪ್ಲಿಕೇಶನ್ ಮೂಲಕ ಮೆಸೆಜ್‌ ಕಳುಹಿಸಬಹುದಾಗಿದೆ. ಬಳಕೆದಾರರು ತುರ್ತು ಪರಿಸ್ಥಿತಿಯಲ್ಲಿ ಸಿಲುಕಿರುವಾಗ ಖಂಡಿತಾ ಇದೊಂದು ಉಪಯುಕ್ತ ಫೀಚರ್‌ ಎನ್ನಬಹುದು.

ಐಫೋನ್‌

ತುರ್ತು ಸಂದರ್ಭದಲ್ಲಿ SOS ಫೀಚರ್ಸ್‌ ನಿಮಗೆ ಸಹಾಯ ಮಾಡಲಿದೆ. ನಿಮ್ಮ ಐಫೋನ್‌ನಲ್ಲಿ ನೀವು ತುರ್ತು SOS ಫೀಚರ್ಸ್‌ ಅನ್ನು ಬಳಸ ಬೇಕಾದರೆ ಮೊದಲಿಗೆ ತುರ್ತು ಸಂಪರ್ಕವನ್ನು ಗೊತ್ತುಪಡಿಸಬೇಕಿರುತ್ತದೆ. ನೀವು ತುರ್ತು ಸೇವೆಗಳಿಗೆ ಸೂಚನೆ ನೀಡಿದ ನಂತರ ನಿಮ್ಮ ಸ್ಥಳ ಮತ್ತು ಪರಿಸ್ಥಿತಿಯ ಬಗ್ಗೆ ತಿಳಿಸಲಾಗುತ್ತದೆ. SOS ಫೀಚರ್ಸ್‌ ಬಳಸುವಾಗ ಕರೆನ್ಸಿ ಇರಬೇಕಾದ ಅವಶ್ಯಕತೆ ಕೂಡ ಇರುವುದಿಲ್ಲ.

Best Mobiles in India

English summary
iPhone 14 emergency features helped to save lives of 2 people

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X