ಆಪಲ್‌ 'ಐಫೋನ್ 14' ಬಿಡುಗಡೆಗೆ ಮುಹೂರ್ತ ಫಿಕ್ಸ್‌!..ಇಲ್ಲಿದೆ ಸಂಪೂರ್ಣ ಮಾಹಿತಿ!

|

ಇಡೀ ಮೊಬೈಲ್‌ ಮಾರುಕಟ್ಟೆಯೇ ಎದುರುನೋಡುತ್ತಿರುವ ಬಹುನಿರೀಕ್ಷಿತ 'ಆಪಲ್ ಐಫೋನ್ 14' ಸರಣಿ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಐಫೋನ್ 14 ಸರಣಿಯು ಇದೇ ಸೆಪ್ಟಂಬರ್ 7 ರಂದು ಅಧಿಕೃತವಾಗಿ ಲಾಂಚ್ ಆಗಲಿದೆ. ಆಪಲ್‌ ಫಾರ್‌ ಔಟ್‌ ಈವೆಂಟ್‌ (Far Out event) ಕಾರ್ಯಕ್ರಮವನ್ನು ನಡೆಸಲಿದ್ದು, ಈ ಕಾರ್ಯಕ್ರಮದಲ್ಲಿ ಬಹುನಿರೀಕ್ಷಿತ ಐಫೋನ್‌ 14 ಸರಣಿಯು ಅನಾವರಣ ಆಗಲಿದೆ.

ಥಿಯೇಟರ್‌ನಲ್ಲಿ

ಆಪಲ್ ಈ ಕಾರ್ಯಕ್ರಮವನ್ನು ಕ್ಯುಪರ್ಟಿನೊದಲ್ಲಿರುವ ಆಪಲ್‌ನ ಪ್ರಧಾನ ಕಛೇರಿಯಲ್ಲಿರುವ ಸ್ಟೀವ್ ಜಾಬ್ಸ್ ಥಿಯೇಟರ್‌ನಲ್ಲಿ ಹೋಸ್ಟ್ ಮಾಡಲಾಗುವ ವೈಯಕ್ತಿಕ ಕಾರ್ಯಕ್ರಮವಾಗಿದೆ. ಈ ಈವೆಂಟ್‌ನಲ್ಲಿ ಸಂಸ್ಥೆಯು ಐಫೋನ್ 14 ಸರಣಿ ಮತ್ತು ಆಪಲ್ ವಾಚ್ 8 ಸರಣಿಯನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಲೀಕ್ ಮಾಹಿತಿ ಪ್ರಕಾರ ಸಂಸ್ಥೆಯು ಐಫೋನ್ 14 ಸರಣಿಯು ಐಫೋನ್ 14, ಐಫೋನ್ 14 ಮ್ಯಾಕ್ಸ್‌, ಐಫೋನ್ 14 ಪ್ರೊ ಮತ್ತು ಐಫೋನ್ 14 ಪ್ರೊ ಮ್ಯಾಕ್ಸ್‌ ಸೇರಿದಂತೆ ನಾಲ್ಕು ಡಿವೈಸ್‌ಗಳನ್ನು ಒಳಗೊಂಡಿರುತ್ತದೆ.

ಐಫೋನ್ 14 ಸರಣಿ ಬಿಡುಗಡೆ ವಿವರ

ಐಫೋನ್ 14 ಸರಣಿ ಬಿಡುಗಡೆ ವಿವರ

ಆಪಲ್‌ ಸಂಸ್ಥೆಯು ತನ್ನ ಐಫೋನ್‌ 14 ಅನ್ನು ಯುನೈಟೆಡ್ ಸ್ಟೇಟ್ಸ್‌ನಲ್ಲಿ 'ಫಾರ್ ಔಟ್' ಎಂಬ ಮೆಗಾ ಈವೆಂಟ್‌ನಲ್ಲಿ 7 ಸೆಪ್ಟೆಂಬರ್ 2022 ರಂದು ಬೆಳಿಗ್ಗೆ 10 ಗಂಟೆಗೆ. (ಭಾರತೀಯ ಕಾಲಮಾನ) 10:30 IST ಕ್ಕೆ ಬಿಡುಗಡೆ ಮಾಡಲಾಗುವುದು. ಬಿಡುಗಡೆ ಕಾರ್ಯಕ್ರಮವು USA, ಕ್ಯಾಲಿಫೋರ್ನಿಯಾದ ಕ್ಯುಪರ್ಟಿನೋದಲ್ಲಿರುವ ಆಪಲ್‌ ಪಾರ್ಕ್‌ನಲ್ಲಿ ನಡೆಯಲಿದೆ.

ಐಫೋನ್ 14 ಲಾಂಚ್ 2022: ಲೈವ್-ಸ್ಟ್ರೀಮಿಂಗ್

ಐಫೋನ್ 14 ಲಾಂಚ್ 2022: ಲೈವ್-ಸ್ಟ್ರೀಮಿಂಗ್

ಪ್ರಪಂಚದಾದ್ಯಂತದ ಎಲ್ಲಾ ಐಫೋನ್‌ ಪ್ರಿಯರು ಆಪಲ್‌ನ ಅಧಿಕೃತ ವೆಬ್‌ಸೈಟ್, ಸಂಸ್ಥೆಯ ಅಧಿಕೃತ ಯೂಟ್ಯೂಬ್‌ ಚಾನಲ್, ಆಪಲ್‌ ಟಿವಿ ಹಾಗೂ ಆಪಲ್‌ ಟಿವಿ ಅಪ್ಲಿಕೇಶನ್‌ನಲ್ಲಿ ಫಾರ್ ಔಟ್ ಬಿಡುಗಡೆ ಕಾರ್ಯಕ್ರಮದ ಲೈವ್-ಸ್ಟ್ರೀಮಿಂಗ್ ಅನ್ನು ವೀಕ್ಷಿಸಬಹುದು. ಈವೆಂಟ್‌ನ ಲೈವ್-ಸ್ಟ್ರೀಮಿಂಗ್ ಅನ್ನು ಕ್ಯುಪರ್ಟಿನೊದ ಆಪಲ್ ಪಾರ್ಕ್‌ನಲ್ಲಿರುವ ಸ್ಟೀವ್ ಜಾಬ್ಸ್ ಥಿಯೇಟರ್‌ನಿಂದ ಪ್ರಸಾರ ಮಾಡಲಾಗುತ್ತದೆ.

ಕಾರ್ಯಕ್ರಮದಲ್ಲಿ

ಈ ಕಾರ್ಯಕ್ರಮದಲ್ಲಿ ಆಪಲ್‌ ಐಫೋನ್‌ 14 ಮಿನಿ ವೇರಿಯಂಟ್‌ ಫೋನ್‌ ಅನ್ನು ಬಿಡುಗಡೆ ಮಾಡುವುದಿಲ್ಲ. ಬದಲಿಗೆ, ಸಂಸ್ಥೆಯು ಐಫೋನ್ 14 ಮ್ಯಾಕ್ಸ್ ಅನ್ನು ಬಿಡುಗಡೆ ಮಾಡುತ್ತದೆ ಎನ್ನಲಾಗಿದೆ. ಐಫೋನ್ 14 ಮ್ಯಾಕ್ಸ್ ವಿಶಾಲ ಡಿಸ್‌ಪ್ಲೇ ಫೋನ್ ಆಗಿರಬಹುದು ಎಂದು ನಿರೀಕ್ಷಿಸಲಾಗಿದೆ. ಇದರರ್ಥ ಐಫೋನ್ 14 ಮತ್ತು ಐಫೋನ್‌ 14 ಮ್ಯಾಕ್ಸ್‌ ಸ್ಕ್ರೀನ್‌ ಗಾತ್ರ ಮತ್ತು ಬ್ಯಾಟರಿಯಂತಹ ಕೆಲವು ವಿಭಾಗಗಳಲ್ಲಿನ ವ್ಯತ್ಯಾಸಗಳನ್ನು ಹೊರತುಪಡಿಸಿ ಒಂದೇ ರೀತಿಯ ಫೀಚರ್ಸ್‌ಗಳೊಂದಿಗೆ ಲಗ್ಗೆ ಇಡುವ ಸಾಧ್ಯತೆಗಳು ಇವೆ.

ಐಫೋನ್

ಐಫೋನ್ 14 ಮತ್ತು ಐಫೋನ್ 14 ಮ್ಯಾಕ್ಸ್ ಐಫೋನ್ 13 ಸರಣಿಯ ನಾಚ್ ಡಿಸ್‌ಪ್ಲೇಯನ್ನು ಮುಂದುವರಿಸುತ್ತವೆ ಎಂದು ಹೇಳಲಾಗುತ್ತದೆ. ಆಪಲ್‌ ಕಳೆದ ವರ್ಷದ A15 ಬಯೋನಿಕ್ ಅನ್ನು ಐಫೋನ್ 14 ಮತ್ತು ಐಫೋನ್ 14 ಮ್ಯಾಕ್ಸ್‌ ನಲ್ಲಿ ಸೇರಿಸಬಹುದು. ಇನ್ನು ಐಫೋನ್ 14 ಪ್ರೊ ಮತ್ತು ಐಫೋನ್ 14 ಪ್ರೊ ಮ್ಯಾಕ್ಸ್ ಹೊಸ ಡಿಸ್‌ಪ್ಲೇ ಯೊಂದಿಗೆ ಬರುತ್ತವೆ ಎಂದು ನಿರೀಕ್ಷಿಸಲಾಗಿದೆ. ಅದು ಮಾತ್ರೆ-ಆಕಾರದ ನಾಚ್ ಮತ್ತು ಪಂಚ್ ಹೋಲ್ ಅನ್ನು ಒಳಗೊಂಡಿರುತ್ತದೆ. ಐಫೋನ್ 14 ಪ್ರೊ ಮತ್ತು ಐಫೋನ್ 14 ಪ್ರೊ ಮ್ಯಾಕ್ಸ್ A 16 ಬಯೋನಿಕ್‌ನೊಂದಿಗೆ ಬರಲಿರುವ ನಿರೀಕ್ಷೆಯಿದೆ.

ಕಾರ್ಯಕ್ರಮವನ್ನು

ಇನ್ನು ಅದೇ ಈವೆಂಟ್‌ನಲ್ಲಿ ಆಪಲ್ ಮೂರು ಐಪ್ಯಾಡ್‌ಗಳನ್ನು ಸಹ ಅನಾವರಣಗೊಳಿಸಬಹುದು ಎಂಬ ನಿರೀಕ್ಷಿಸಲಾಗುತ್ತಿದೆ. ಆದರೆ ಆಪಲ್ ಅಕ್ಟೋಬರ್‌ನಲ್ಲಿ ಐಪ್ಯಾಡ್‌ಗಳಿಗಾಗಿ ಪ್ರತ್ಯೇಕ ಬಿಡುಗಡೆ ಕಾರ್ಯಕ್ರಮವನ್ನು ನಡೆಸುತ್ತದೆ ಎಂದು ಕೆಲವು ಮೂಲಗಳಿಂದ ತಿಳಿದುಬಂದಿದೆ. ಐಓಎಸ್‌ 16 ಸ್ಥಿರ (iPadOS 16 Stable) ಬಹುಶಃ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗುತ್ತದೆ ಎನ್ನಲಾಗಿದೆ.

ಫೀಚರ್ಸ್‌ ಮಾಹಿತಿ

ಫೀಚರ್ಸ್‌ ಮಾಹಿತಿ

ಆಪಲ್‌ ಐಫೋನ್‌ 14 ಸರಣಿ ಆಪಲ್‌ ಸಂಸ್ಥೆಯು ಇದೇ ಸೆಪ್ಟೆಂಬರ್‌ನಲ್ಲಿ ತನ್ನ ಐಫೋನ್ 14 ಸರಣಿಯನ್ನು ಬಿಡುಗಡೆ ಮಾಡಲಿದೆ. ಈ ಸರಣಿಯು ಐಫೋನ್ 14, ಐಫೋನ್ 14 ಪ್ರೊ, ಐಫೋನ್ 14 ಪ್ರೊ ಮ್ಯಾಕ್ಸ್‌ ಮಾದರಿಗಳನ್ನು ಒಳಗೊಂಡಿರಲಿದೆ ಎಂದು ಹೇಳಲಾಗುತ್ತಿದೆ. ಅವುಗಳ ಪೈಕಿ ಐಫೋನ್ 14 ಫೋನ್ 6.1 ಇಂಚಿನ ಡಿಸ್‌ಪ್ಲೇ ಒಳಗೊಂಡಿರಲಿದೆ. ಐಫೋನ್ 14 ಪ್ರೊ ಮತ್ತು ಐಫೋನ್‌ 14 ಪ್ರೊ ಮ್ಯಾಕ್ಸ್‌ ಫೋನ್‌ಗಳು 6.7 ಇಂಚಿನ ಡಿಸ್‌ಪ್ಲೇ ಹೊಂದಿರಲಿವೆ.

Best Mobiles in India

English summary
iPhone 14 Launch Event Confirmed for September 7: Here's All You Need To Know.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X