ಇನ್ಮುಂದೆ ಐಫೋನ್‌ ಬಳಕೆದಾರರು ಬ್ಯಾಟರಿ ಸಮಸ್ಯೆಯ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ!

|

ಆಪಲ್‌ ಕಂಪೆನಿಯ ಐಫೋನ್‌ಗಳು ತಮ್ಮ ಗುಣಮಟ್ಟ ಹಾಗೂ ಕಾರ್ಯದಕ್ಷತೆಯಿಂದ ಮಾರುಕಟ್ಟೆಯಲ್ಲಿ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿವೆ. ಇದೇ ಕಾರಣಕ್ಕೆ ಆಪಲ್‌ ಕಂಪೆನಿ ತನ್ನ ಐಫೋನ್‌ಗಳಲ್ಲಿ ಹೊಸ ಮಾದರಿಯ ಟೆಕ್ನಾಲಜಿಯನ್ನು ಪರಿಚಯಿಸುತ್ತಲೇ ಬಂದಿದೆ. ಸದ್ಯ ಇದೀಗ ಆಪಲ್‌ ಕಂಪೆನಿ ತನ್ನ ಮುಂಬರುವ ಐಫೋನ್‌ 14 ನಲ್ಲಿ ಹೊಸ ಮಾದರಿಯ 5G ಚಿಪ್‌ಗಳನ್ನು ಪರಿಚಯಿಸಲು ಮುಂದಾಗಿದೆ. ಇದಕ್ಕಾಗಿ TSMC ಕಂಪೆನಿಯ 5G RF ಚಿಪ್‌ ಅಳವಡಿಸಲಿದೆ ಎನ್ನಲಾಗಿದೆ. ಇದರಿಂದ ಐಫೋನ್‌ 14 ಅತ್ಯುತ್ತಮ ಬ್ಯಾಟರಿ ಅವಧಿಯನ್ನು ನೀಡಲಿದೆ ಎಂದು ವರದಿಯಾಗಿದೆ.

ಐಫೋನ್‌ 14

ಹೌದು, ಆಪಲ್‌ ಕಂಪೆನಿ ತನ್ನ ಬಹುನಿರೀಕ್ಷಿತ ಐಫೋನ್‌ 14ನಲ್ಲಿ ಹೊಸ ಚಿಪ್‌ಸೆಟ್‌ ಅಳವಡಿಸಲ ಮುಂದಾಗಿದೆ. ಇದರಿಂದ ಈ ಐಫೋನ್‌ ಅತ್ಯುತ್ತಮವಾದ ಬ್ಯಾಟರಿ ಅವಧಿಯೊಂದಿಗೆ ಬರಬಹುದು ಎನ್ನಲಾಗಿದೆ. ಈ ವರ್ಷದ ಕೊನೆಯಲ್ಲಿ ಬರುವ ಐಫೋನ್‌ನಲ್ಲಿ ಹೊಸ 5G RF ಚಿಪ್‌ಗಳಿಗಾಗಿ ಆಪಲ್ TSMC ಯನ್ನು ಬಳಸಲಿದೆ. TSMC, ಅತಿದೊಡ್ಡ ಸ್ಮಾರ್ಟ್‌ಫೋನ್ ಚಿಪ್-ಉತ್ಪಾದನಾ ಕಂಪನಿಗಳಲ್ಲಿ ಒಂದಾಗಿದ್ದು, 5G ಚಿಪ್‌ಗಳು ಕಡಿಮೆ ಶಕ್ತಿಯನ್ನು ಬಳಸುವಂತೆ ಮಾಡುವ ಟೆಕ್ನಾಲಜಿಯನ್ನು ಹೊಂದಿದೆ. ಹಾಗಾದ್ರೆ ಈ ಬ್ಯಾಟರಿ ಅವಧಿಯ ಹೇಗೆ ಅತ್ಯುತ್ತಮವಾಗಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಐಫೋನ್‌

ಆಪಲ್‌ ಕಂಪೆನಿ ಐಫೋನ್‌ 14ನಲ್ಲಿ TSMC ಸಂಸ್ಥೆಯ 5G RF ಚಿಪ್‌ ಬಳಸಲಿದೆ. TSMC ಯ ಹೊಸ 5G ಚಿಪ್‌ಗಳು 6nm ಆರ್ಕಿಟೆಕ್ಚರ್ ಅನ್ನು ಬಳಸುತ್ತವೆ ಎಂದು ಇತ್ತೀಚಿನ ವರದಿಯಲ್ಲಿ ಹೈಲೈಟ್ ಮಾಡಲಾಗಿದೆ. ಈ ಚಿಪ್‌ ಅನ್ನು ಕಳೆದ ವರ್ಷ ನಡೆದ TSMC ಟೆಕ್ನಾಲಜಿ ಫೋರಮ್‌ನಲ್ಲಿ ಘೋಷಣೆ ಮಾಡಲಾಗಿತ್ತು. ಇನ್ನು ಈ ಚಿಪ್‌ಗಳು ಗಾತ್ರದಲ್ಲಿ ಸ್ಯಾಮ್‌ಸಂಗ್‌ನ ಚಿಪ್‌ಗಳಿಗಿಂತ ಚಿಕ್ಕದಾಗಿದೆ. ಅಲ್ಲದೆಬ್ಯಾಟರಿ ಬಳಕೆಯ ವಿಷಯದಲ್ಲಿ ಉತ್ತಮವಾಗಿದೆ. ಇದರಿಂದ ಆಪಲ್ ಐಫೋನ್ 14 ನಲ್ಲಿ ಬ್ಯಾಟರಿ ಡ್ರೈನ್ ಸಮಸ್ಯೆಯನ್ನು ಇನ್ನಷ್ಟು ಸುಧಾರಿಸಲು ಈ ಚಿಪ್‌ಗಳು ಸಹಾಯ ಮಾಡಲಿವೆ ಎನ್ನಲಾಗಿದೆ.

ಐಫೋನ್‌12

ಆಪಲ್‌ ಕಂಪೆನಿ ಈ ಹಿಂದೆ ಪರಿಚಯಿಸಿದ್ದ ಐಫೋನ್‌12 ದುರ್ಬಲ ಬ್ಯಾಟರಿ ಅವಧಿಯ ಕಾರಣಕ್ಕಾಗಿ ಅನೇಕ ಸಮಸ್ಯೆಗಳನ್ನು ಎದುರಿಸಿತ್ತು. ಇದರಿಂದ ಆಪಲ್‌ ಐಫೋನ್‌ 13 ನಲ್ಲಿ ವಿದ್ಯುತ್ ಬಳಕೆಯನ್ನು ಸುಧಾರಿಸಲು ಸಾಕಷ್ಟು ಕೆಲಸ ಮಾಡಲಾಗಿತ್ತು. ಆದರೆ ಐಫೋನ್‌ 14ನಲ್ಲಿ ಬ್ಯಾಟರಿ ಅವಧಿಯಲ್ಲಿ ಯಾವುದೇ ಸಮಸ್ಯೆ ಕಾಣಿಸಿಕೊಳ್ಳದಂತೆ ಮಾಡುವುದಕ್ಕೆ ಪ್ರಯತ್ನ ನಡೆದಿದೆ. ಆದರಿಂದ TSMC ಚಿಪ್‌ ಬಳಸುವುದಕ್ಕೆ ಆಪಲ್‌ ಕಂಪೆನಿ ಮುಂದಾಗಿದೆ. ಈ ಚಿಪ್‌ಗಳು ಕಡಿಮೆ ಪವರ್‌ ಬಳಸುವಂತೆ ಮಾಡುವ ಟೆಕ್ನಾಲಜಿಯನ್ನು ಹೊಂದಿದೆ ಎನ್ನಲಾಗಿದೆ.

ಫ್ಲ್ಯಾಗ್‌ಶಿಪ್

ಸಾಮಾನ್ಯವಾಗಿ ಫ್ಲ್ಯಾಗ್‌ಶಿಪ್ ಫೋನ್‌ಗಳಲ್ಲಿ ಹೆಚ್ಚಿನ ಪವರ್‌ ಯೂಸ್‌ ಪ್ರಮುಖ ಸಮಸ್ಯೆಯಾಗಿದೆ. ಈ ಉನ್ನತ-ಮಟ್ಟದ ಫೋನ್‌ಗಳು ಡಿಸ್‌ಪ್ಲೇಗಳು, ಪ್ರೊಸೆಸರ್‌ಗಳು ಮತ್ತು ಕ್ಯಾಮೆರಾಗಳಿಗಾಗಿ ಸುಧಾರಿತ ತಂತ್ರಜ್ಞಾನಗಳೊಂದಿಗೆ ಬರುವುದರಿಂದ, ಬ್ಯಾಟರಿ ಬಾಳಿಕೆಯನ್ನು ಹೆಚ್ಚಾಗಿ ಕಡೆಗಣಿಸಲಾಗುತ್ತದೆ. ಅಂದರೆ ಸ್ಮಾರ್ಟ್‌ಫೋನ್‌ ತಯಾರಕರು ತಮ್ಮ ಪ್ರಮುಖ ಫೋನ್‌ಗಳ ಬ್ಯಾಟರಿಗೆ ಡಿಸ್‌ಪ್ಲೇ ಅಥವಾ ಕ್ಯಾಮೆರಾಗಳಿಗೆ ನೀಡಿದ ಪ್ರಾಮುಖ್ಯತೆಯನ್ನು ನೀಡುವುದು ಕಡಿಮೆ. ಈ ಸಮಸ್ಯೆಯನ್ನು ಪರಿಹರಿಸಲು ಸುಲಭವಾದ ಮಾರ್ಗವೆಂದರೆ ಫೋನ್‌ಗಳಲ್ಲಿ ದೊಡ್ಡ ಬ್ಯಾಟರಿಗಳನ್ನು ಹಾಕುವುದು. ಆದರೆ ಹೆಚ್ಚಿನ ಸಾಮರ್ಥ್ಯದ ಬ್ಯಾಟರಿಗಳು ಬೃಹತ್ ಪ್ರಮಾಣದಲ್ಲಿರುತ್ತವೆ. ಆದರಿಂದ ಅನೇಕ ಸ್ಮಾರ್ಟ್‌ಫೋನ್‌ ತಯಾರಕರು ತಮ್ಮ ಪ್ರಮುಖ ಫೋನ್‌ಗಳ ಪ್ರೀಮಿಯಂ ನೋಟವನ್ನು ಕಾಪಾಡಿಕೊಳ್ಳಲು ಬೃಹತ್‌ ಪ್ರಮಾಣದ ಬ್ಯಾಟರಿ ಬಳಸುವುದಕ್ಕೆ ಇಷ್ಟಪಡುವುದಿಲ್ಲ.

ಐಫೋನ್‌

ಇನ್ನು ಕಳೆದ ವರ್ಷ, ಬಿಡುಗಡೆಯಾದ ಆಪಲ್ ಐಫೋನ್‌ 13 ಉತ್ತಮ ಬ್ಯಾಟರಿ ತ್ರಾಣವನ್ನು ಹೊರಹಾಕುವಲ್ಲಿ ಯಶಸ್ವಿಯಾಗಿದೆ. ಆದರೆ ಐಫೋನ್‌ 12 ರಿಂದ ಆಪಲ್ ಬಳಸುತ್ತಿರುವ 5G ಚಿಪ್‌ಗಳು ಪವರ್‌ ವಿಷಯದಲ್ಲಿ ಬಯಸಿದಷ್ಟು ಉತ್ತಮವಾಗಿಲ್ಲ. ಆದರಿಂದ ಈ ವರ್ಷ ಬ್ಯಾಟರಿ ಅವಧಿಯನ್ನು ಸುಧಾರಿಸುವಲ್ಲಿ ಆಪಲ್‌ ಒಂದು ಹೆಜ್ಜೆ ಮುಂದೆ ಹೋಗುವುದಕ್ಕೆ ಮುಂದಾಗಿದೆ. TSMC ಯ ಚಿಕ್ಕ 5G ಚಿಪ್‌ಗಳು ಕನಿಷ್ಠ ಬ್ಯಾಟರಿ ಬಳಕೆಯೊಂದಿಗೆ ವರ್ಧಿತ ಕಾರ್ಯಕ್ಷಮತೆಯನ್ನು ಒದಗಿಸುವ ನಿರೀಕ್ಷೆಯಿದೆ. ಆದರೆ 4G ಚಿಪ್‌ಗಳಿಗೆ ಹೋಲಿಸಿದರೆ 5G ಚಿಪ್‌ಗಳು ಇನ್ನೂ ಹೆಚ್ಚಿನ ಪವರ್‌ ಬಳಸುವುದಕ್ಕೆ ಬಯಸುತ್ತವೆ. ಅದಕ್ಕಾಗಿಯೇ ಆಪಲ್ ಅಗತ್ಯವಿಲ್ಲದಿದ್ದಾಗ 5G ಅನ್ನು ಆಫ್ ಮಾಡಲು ಶಿಫಾರಸು ಮಾಡುತ್ತದೆ. ಸದ್ಯ ಮುಂಬರುವ ಐಫೋನ್ 14 ರ ಬ್ಯಾಟರಿ ಸಾಮರ್ಥ್ಯ ಇನ್ನೂ ತಿಳಿದಿಲ್ಲ, ಆದರೆ ಐಫೋನ್ 13 ಗಿಂತ ಹೆಚ್ಚಿನ ಬ್ಯಾಟರಿ ಅವಧಿಯನ್ನು ಖಂಡಿತವಾಗಿ ನಿರೀಕ್ಷಿಸಬಹುದು.

Best Mobiles in India

Read more about:
English summary
iPhone 14 might offer better battery life thanks to a new 5G chip

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X