ಭಾರತದಲ್ಲಿ ಇಂದಿನಿಂದ ಆಪಲ್‌ ಐಫೋನ್‌ 14 ಸರಣಿ ಖರೀದಿಗೆ ಲಭ್ಯ!

|

ಕಳೆದ ವಾರ ಆಪಲ್‌ ಕಂಪೆನಿ ತನ್ನ ಫಾರ್‌ ಔಟ್‌ ಈವೆಂಟ್‌ನಲ್ಲಿ ಐಫೋನ್‌ 14 ಸರಣಿಯನ್ನು ಬಿಡುಗಡೆ ಮಾಡಿತ್ತು. ಬಿಡುಗಡೆಯಾದ ಒಂದು ವಾರದ ನಂತರ ಅಂದರೆ ಇಂದು(ಸೆ.16) ಭಾರತದಲ್ಲಿ ಐಫೋನ್‌ 14, ಐಫೋನ್‌ 14 ಪ್ರೊ ಮತ್ತು ಐಫೋನ್‌ 14 ಪ್ರೊ ಮ್ಯಾಕ್ಸ್‌ ಖರೀದಿಗೆ ಲಭ್ಯವಿದೆ. ಇಂದು ಸಂಜೆ 5:30 ರಿಂದ ಭಾರತದಲ್ಲಿ ಐಫೋನ್‌ 14 ಸರಣಿಯ ಮಾಡೆಲ್‌ಗಳನ್ನು ಖರೀದಿಸಲು ಸಾಧ್ಯವಾಗಲಿದೆ.

ಆಪಲ್‌

ಹೌದು, ಆಪಲ್‌ ಕಂಪೆನಿಯ ಐಫೋನ್‌ 14 ಸರಣಿಯ ಫೋನ್‌ಗಳು ಇಂದು ಭಾರತದಲ್ಲಿ ಸೇಲ್‌ಗೆ ಬರಲಿವೆ. ಸದ್ಯ ಭಾರತದಲ್ಲಿ ಆಪಲ್‌ ಐಫೋನ್‌ 14, ಐಫೋನ್‌ 14 ಪ್ರೊ ಮತ್ತು ಐಫೋನ್‌ 14 ಪ್ರೊ ಮ್ಯಾಕ್ಸ್‌ ಮಾದರಿಗಳು ಇಂದಿನಿಂದ ಖರೀದಿಗೆ ಲಭ್ಯವಾಗಲಿದೆ. ಈ ಡಿವೈಸ್‌ಗಳನ್ನು ಪ್ರಮುಖ ಇ-ಕಾಮರ್ಸ್ ಸೈಟ್‌ಗಳಾದ ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ಆಪಲ್‌ನ ಅಧಿಕೃತ ರಿಸೇಲ್‌ ಸ್ಟೋರ್‌ಗಳಲ್ಲಿ ಖರೀದಿಸಬಹುದಾಗಿದೆ. ಹಾಗಾದ್ರೆ ಭಾರತದಲ್ಲಿ ಐಫೋನ್‌ 14 ಸರಣಿಯ ಬೆಲೆ ಹೇಗಿದೆ? ಸೇಲ್‌ ಆಫರ್‌ನಲ್ಲಿ ಏನೆಲ್ಲಾ ದೊರೆಯಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಭಾರತದಲ್ಲಿ ಐಫೋನ್‌ 14 ಸರಣಿಯ ಬೆಲೆ ಹೇಗಿದೆ?

ಭಾರತದಲ್ಲಿ ಐಫೋನ್‌ 14 ಸರಣಿಯ ಬೆಲೆ ಹೇಗಿದೆ?

ಭಾರತದಲ್ಲಿ ಐಫೋನ್‌ 14 128GB ಸ್ಟೋರೇಜ್ ಮಾಡೆಲ್‌ ಬೆಲೆ 79,900ರೂ.ಗಳಿಂದ ಪ್ರಾರಂಭವಾಗಲಿದೆ. ಇದರ 256GB ಸ್ಟೋರೇಜ್ ರೂಪಾಂತರದ ಆಯ್ಕೆಯು 89,900ರೂ. ಮತ್ತು 512GB ಸ್ಟೋರೇಜ್‌ ರೂಪಾಂತರದ ಆಯ್ಕೆಯ ಬೆಲೆ 1,09,900ರೂ.ಆಗಿದೆ. ಇನ್ನು ಈ ಮಾಡೆಲ್‌ ನೀಲಿ, ನೇರಳೆ, ಮಿಡ್ನೈಟ್, ಸ್ಟಾರ್ಲೈಟ್ ಮತ್ತು ಪ್ರಾಡಕ್ಟ್‌ (ಕೆಂಪು) ಕಲರ್‌ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

ಭಾರತದಲ್ಲಿ ಐಫೋನ್‌ 14 ಪ್ರೊ 128GB ಸ್ಟೋರೇಜ್‌ ಆಯ್ಕೆಯ ಬೆಲೆ 1,29,900ರೂ.ಗಳಿಂದ ಪ್ರಾರಂಭವಾಗಲಿದೆ. ಇದರ 256GB ಸ್ಟೋರೇಜ್ ವೇರಿಯಂಟ್ ಬೆಲೆ 1,39,900ರೂ ಆಗಿದೆ. ಇನ್ನು 512GB ಸ್ಟೋರೇಜ್‌ ಮಾದರಿಯು 1,59,900ರೂ. ಮತ್ತು 1TB ಸ್ಟೋರೇಜ್ ಆಯ್ಕೆಯ ಬೆಲೆ 1,79,900ರೂ. ಆಗಿದೆ. ಇದು ಡೀಪ್ ಪರ್ಪಲ್, ಗೋಲ್ಡ್, ಸಿಲ್ವರ್ ಮತ್ತು ಸ್ಪೇಸ್ ಬ್ಲ್ಯಾಕ್ ಬಣ್ಣದ ರೂಪಾಂತರಗಳಲ್ಲಿ ಲಭ್ಯವಿರುತ್ತದೆ.

ಆಪಲ್‌ ಐಫೋನ್‌ 14 ಪ್ರೊ ಮ್ಯಾಕ್ಸ್‌ ಮಾಡೆಲ್‌ನ ಆರಂಭಿಕ ಬೆಲೆ 1,39,900ರೂ. ಆಗಿದೆ.

ಸೇಲ್‌ ಆಫರ್‌ ಏನಿದೆ?

ಸೇಲ್‌ ಆಫರ್‌ ಏನಿದೆ?

ಐಫೋನ್‌ 14 ಸರಣಿಯನ್ನು ಖರೀದಿಸುವ ಗ್ರಾಹಕರು HDFC ಕ್ರೆಡಿಟ್ ಕಾರ್ಡ್ ಮೂಲಕ 54,900ಕ್ಕಿಂತ ಹೆಚ್ಚಿನ ಆರ್ಡರ್‌ಗಳಲ್ಲಿ 6,000 ರೂಪಾಯಿಗಳ ತ್ವರಿತ ಕ್ಯಾಶ್‌ಬ್ಯಾಕ್ ಅನ್ನು ಪಡೆಯಬಹುದು. ಅಲ್ಲದೆ ಐಫೋನ್‌ 14 ಅಥವಾ ಐಫೋನ್‌ 14 ಪ್ರೊ ಮಾಡೆಲ್‌ಗಳೊಂದಿಗೆ ಹಳೆಯ ಐಫೋನ್‌ ಮಾಡೆಲ್‌ಗಳನ್ನು ಎಕ್ಸ್‌ಚೇಂಜ್‌ ಮಾಡಿದರೆ 46,120ರೂ.ವರೆಗೆ ಸೇವ್‌ ಮಾಡಬಹುದು. ಈ ಆಫರ್‌ಗಳು ಭಾರತದಲ್ಲಿನ ಆಪಲ್‌ ಆನ್‌ಲೈನ್ ಸ್ಟೋರ್‌ನಲ್ಲಿ ಲಭ್ಯವಾಗಲಿದೆ.

ಇನ್ನು ಫ್ಲಿಪ್‌ಕಾರ್ಟ್‌ ನಲ್ಲಿ ಐಫೋನ್‌ 14 ಪ್ರೊ ಅನ್ನು HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್‌ ಮೂಲಕ ಖರೀದಿಸಿದರೆ 4,000ರೂ ಡಿಸ್ಕೌಂಟ್‌ ಸಿಗಲಿದೆ. ಅಲ್ಲದೆ ಐಫೋನ್‌ 14 ಅನ್ನು HDFC ಬ್ಯಾಂಕ್ ಕ್ರೆಡಿಟ್ ನಾನ್-ಇಎಂಐ, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ EMI ವಹಿವಾಟುಗಳ ಮೂಲಕ ಖರೀದಿಸಿದರೆ 5,000ರೂಗಳ ತ್ವರಿತ ರಿಯಾಯಿತಿಯನ್ನು ಪಡೆಯುತ್ತಾರೆ. ಇದಲ್ಲದೆ ಫ್ಲಿಪ್‌ಕಾರ್ಟ್‌ ಆಕ್ಸಿಸ್‌ ಬ್ಯಾಂಕ್‌ ಕಾರ್ಡ್‌ ಮೂಲಕ ಖರೀದಿಸಿದರೆ 5% ಕ್ಯಾಶ್‌ಬ್ಯಾಕ್ ಕೂಡ ದೊರೆಯಲಿದೆ.

ಆಪಲ್‌ ಐಫೋನ್‌ 14 ಫೀಚರ್ಸ್‌ ಹೇಗಿದೆ?

ಆಪಲ್‌ ಐಫೋನ್‌ 14 ಫೀಚರ್ಸ್‌ ಹೇಗಿದೆ?

ಆಪಲ್‌ ಐಫೋನ್‌ 14 6.1-ಇಂಚಿನ ಸೂಪರ್ ರೆಟಿನಾ XDR ಡಿಸ್‌ಪ್ಲೇಯನ್ನು ಹೊಂದಿದೆ. ಇದು A15 ಬಯೋನಿಕ್‌ ಚಿಪ್‌ಸೆಟ್‌ ಪ್ರೊಸೆಸರ್‌ನಲ್ಲಿ ಮತ್ತು iOS 16 ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಐಫೋನ್‌ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 12 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಮುಂಭಾಗದಲ್ಲಿ 12 ಮೆಗಾ ಪಿಕ್ಸಲ್‌ನ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

ಆಪಲ್‌ ಐಫೋನ್‌ 14ಪ್ರೊ ಫೀಚರ್ಸ್‌ ಹೇಗಿದೆ?

ಆಪಲ್‌ ಐಫೋನ್‌ 14ಪ್ರೊ ಫೀಚರ್ಸ್‌ ಹೇಗಿದೆ?

ಐಫೋನ್ 14 ಪ್ರೊ ಫೋನ್ 6.1 ಇಂಚಿನ ಸೂಪರ್ ರೆಟಿನಾ ಎಕ್ಸ್‌ಡಿಆರ್ ಡಿಸ್‌ಪ್ಲೇ ಹೊಂದಿದ್ದು, ಮೊದಲ ಬಾರಿಗೆ ಆಲ್ವೇಸ್‌ ಆನ್ ಡಿಸ್‌ಪ್ಲೇ ನೀಡುತ್ತದೆ. ಇದು A16 ಬಯೋನಿಕ್ ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಐಫೋನ್‌ 14ಪ್ರೊ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಇದಲ್ಲದೆ 12ಮೆಗಾಪಿಕ್ಸೆಲ್‌ ಟ್ರೂ ಡೆಪ್ತ್‌ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಆಪಲ್‌ ಐಫೋನ್‌ 14ಪ್ರೊ ಮ್ಯಾಕ್ಸ್‌ ಫೀಚರ್ಸ್‌ ಹೇಗಿದೆ?

ಆಪಲ್‌ ಐಫೋನ್‌ 14ಪ್ರೊ ಮ್ಯಾಕ್ಸ್‌ ಫೀಚರ್ಸ್‌ ಹೇಗಿದೆ?

ಆಪಲ್‌ ಐಫೋನ್‌ 14 ಪ್ರೊ ಮ್ಯಾಕ್ಸ್‌ ಕೂಡ ಆಲ್‌ವೇಸ್‌ ಆನ್‌ ಡಿಸ್‌ಪ್ಲೇ ಹೊಂದಿದೆ. ಇದು 6.7-ಇಂಚಿನ ಸೂಪರ್ ರೆಟಿನಾ XDR ಡಿಸ್‌ಪ್ಲೇ ಹೊಂದಿದೆ. ಈ ಫೋನ್‌ A16 ಬಯೋನಿಕ್ ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಕೂಡ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಸೆನ್ಸಾರ್‌ನಲ್ಲಿದೆ.

Best Mobiles in India

English summary
iPhone 14 series now available in India: checkout price features and offers

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X