ಐಫೋನ್ SE 2020 ಖರೀದಿಗೆ ಇದಕ್ಕಿಂತ ಬೆಸ್ಟ್ ಟೈಮ್ ಇಲ್ಲ!

|

ಜನಪ್ರಿಯ ಆಪಲ್ ಐಫೋನ್ ಇತ್ತೀಚಿಗೆ ಐಫೋನ್ SE2020 ಐಫೋನ್‌ ಬಿಡುಗಡೆ ಮಾಡಿದ್ದು, ಆಪಲ್‌ ಪ್ರಿಯರಲ್ಲಿ ಖುಷಿ ಮೂಡಿಸಿತ್ತು. ಇದೀಗ ಈ ಐಫೋನ್ ಭಾರತದಲ್ಲಿ ಭರ್ಜರಿ ಡಿಸ್ಕೌಂಟ್‌ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. ಇದೇ ಮೇ 20ರಂದು ಇ-ಕಾಮರ್ಸ್‌ ದೈತ್ಯ ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ SE2020 ಫೋನ್ ಮಾರಾಟ ನಡೆಯಲಿದ್ದು, ಈ ವೇಳೆ ಸುಮಾರು 3,600ರೂ.ಗಳ ವರೆಗೂ ರಿಯಾಯಿತಿ ಕೊಡುಗೆ ದೊರೆಯಲಿದೆ.

ಐಫೋನ್ SE2020

ಹೌದು, ಐಫೋನ್ SE2020 ಬೆಲೆಯಲ್ಲಿ ಈಗ 3,600ರೂ. ವರೆಗೂ ರಿಯಾಯಿತಿ ದೊರೆಯಲಿದೆ. ಇದೇ ಮೇ 20ರಂದು ಫ್ಲಿಪ್‌ಕಾರ್ಟ್‌ನಲ್ಲಿ ಸೇಲ್ ನಡೆಲಿದ್ದು, ಗ್ರಾಹಕರು ಎಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್‌ಗಳ ಮೂಲಕ ಈ ಐಫೋನ್ ಖರೀದಿಸಿದರೇ 3,600ರೂ. ವರೆಗೂ ಕ್ಯಾಶ್‌ಬ್ಯಾಕ್ ಲಭ್ಯವಾಗಲಿದೆ. 64GB ಸ್ಟೋರೇಜ್‌ನ ಬೇಸ್‌ ವೇರಿಯಂಟ್ ಐಫೋನ್ SE2020 38,900ರೂ.ಗಳಿಗೆ ಲಭ್ಯವಾಗಲಿದೆ. ಹಾಗೆಯೇ 128GB ಮತ್ತು 256GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳು ಇವೆ. ಇನ್ನೂ ಈ ಫೋನ್ ರೆಡ್, ಬ್ಲ್ಯಾಕ್ ಮತ್ತು ವೈಟ್ ಬಣ್ಣಗಳ ಆಯ್ಕೆಗಳನ್ನು ಪಡೆದಿದೆ.

ಡಿಸ್‌ಪ್ಲೇ

ಡಿಸ್‌ಪ್ಲೇ

ಆಪಲ್ ಐಫೋನ್ SE(2020) 4.7-ಇಂಚಿನ ರೆಟಿನಾ ಎಚ್‌ಡಿ ಮಾದರಿಯ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇಯು 750x1334 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ವೈಟ್ ಬ್ಯಾಲೆನ್ಸ್ ಹೊಂದಿಸಲು ಟ್ರೂ ಟೋನ್ ಟೆಕ್ ಹೊಂದಿದೆ. ಇನ್ನು ಈ ಡಿಸ್‌ಪ್ಲೇಯು 625 ನಿಟ್‌ಗಳ ಗರಿಷ್ಠ ಬ್ರೈಟ್‌ನೆಶ್‌ ಅನ್ನು ನೀಡಲಿದೆ. ಅಲ್ಲದೆ ಡಾಲ್ಬಿ ವಿಷನ್ ಮತ್ತು ಎಚ್‌ಡಿಆರ್ 10 ಅನ್ನು ಬೆಂಬಲಿಸಲಿದೆ. ಇನ್ನು ಈ ಡಿಸ್‌ಪ್ಲೇ ಸ್ಕ್ರೀನ್‌ ಹೊಸ ಐಫೋನ್ ಮಾದರಿಗಳಲ್ಲಿ ಕಂಡುಬರುವ ಹ್ಯಾಪ್ಟಿಕ್ ಟಚ್ ಬೆಂಬಲವನ್ನು ಹೊಂದಿದೆ.

ಪ್ರೊಸೆಸರ್

ಪ್ರೊಸೆಸರ್

ಐಫೋನ್ SE(2020) ಆಪಲ್‌ ಕಂಪೆನಿ A 13 ಬಯೋನಿಕ್ SoC ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ. ಪ್ರೊಸೆಸರ್‌ಗೆ ಪೂರಕವಾಗಿ ಐಒಎಸ್‌ 13 ಬೆಂಬಲ ನೀಡಲಿದೆ. ಹುಡ್ ಅಡಿಯಲ್ಲಿ, ಐಫೋನ್ 11, ಐಫೋನ್ 11 ಪ್ರೊ ಮತ್ತು ಐಫೋನ್ 11 ಪ್ರೊ ಮ್ಯಾಕ್ಸ್‌ನ ಮಾದರಿಯನ್ನೆ ಹೊಂದಿದೆ. ಇನ್ನು ಈ ಐಫೋನ್‌ RAM ಸಾಮರ್ಥ್ಯದ ಬಗ್ಗೆ ಯಾವುದೇ ಮಾಹಿತಿ ಲಬ್ಯವಿಲ್ಲ, ಆದರೆ ಈ ಐಫೋನ್‌ 64GB, 128GB, ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯ ವೇರಿಯೆಂಟ್‌ ಆಯ್ಕೆಯಲ್ಲಿ ಲಬ್ಯವಿದೆ. ಮೆಮೊರಿ ಕಾರ್ಡ್‌ ಮೂಲಕ ಸಂಗ್ರಹ ಸಾಮರ್ಥ್ಯ ವಿಸ್ತರಿಸಲು ಯಾವುದೇ ಅವಕಾಶವನ್ನ ನೀಡಿಲ್ಲ.

ಕ್ಯಾಮೆರಾ ವಿನ್ಯಾಸ

ಕ್ಯಾಮೆರಾ ವಿನ್ಯಾಸ

ಆಪಲ್‌ ಐಫೋನ್‌SE (2020) ಐಫೋನ್ ರಿಯರ್‌ ಸೆಟ್‌ಅಪ್‌ನಲ್ಲಿ ಸಿಂಗಲ್‌ ಕ್ಯಾಮೆರಾ ಹೊಂದಿದೆ. ಇದು 2 ಮೆಗಾಪಿಕ್ಸೆಲ್ ಕ್ಯಾಮೆರಾ ಸೆನ್ಸಾರ್ f/ 1.8 ಲೆನ್ಸ್‌ + ಒಐಎಸ್ ಹೊಂದಿದೆ ಮತ್ತು ಸ್ಲೋ ಸಿಂಕ್‌ ಜೊತೆಗೆ ದಿಗೆ ಎಲ್ಇಡಿ ಟ್ರೂ ಟೋನ್ ಫ್ಲ್ಯಾಷ್ ಹೊಂದಿದೆ. ಇದು 60kps ವರೆಗೆ 4 ಕೆ ವಿಡಿಯೋ ರೆಕಾರ್ಡಿಂಗ್ ಮತ್ತು ಫೋಟೋಗಳಿಗಾಗಿ ಸ್ಮಾರ್ಟ್ HDR ಅನ್ನು ನೀಡುತ್ತದೆ. ಜೊತೆಗೆ ರಿಯರ್‌ ಕ್ಯಾಮೆರಾ ಪ್ರೊಟೆಕ್ಷನ್‌ ಗಾಗಿ ಶಾಂಪೈರ್‌ ಕ್ರಿಸ್ಟಲ್ ಲೆನ್ಸ್ ಕವರ್ ಅನ್ನು ನೀಡಲಾಗಿದೆ. ಇದಲ್ಲದೆ ಈ ಕ್ಯಾಮೆರಾ ಫೀಚರ್ಸ್‌ನಲ್ಲಿ ಪೋರ್ಟ್ರೇಟ್ ಮೋಡ್ ಅನ್ನು ನೀಡಲಾಗಿದೆ. ಜೊತೆಗೆ 7 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಆಪಲ್‌ ಐಫೋನ್‌SE (2020) ಬ್ಯಾಟರಿ ಸಾಮರ್ಥ್ಯದ ಬಗ್ಗೆ ಯಾವುದೇ ಮಾಹಿತಿಯನ್ನ ಹಂಚಿಕೊಂಡಿಲ್ಲ. ಆದರೆ ಈ ಐಫೋನ್‌ 18W ಸಾಮರ್ಥ್ಯದ ಚಾರ್ಜಿಂಗ್ ಸೌಲಭ್ಯವನ್ನು ಪಡೆದಿದೆ. ಈ ಬ್ಯಾಟರಿ ಪ್ಯಾಕ್‌ಅಪ್‌ 13 ಗಂಟೆಗಳ ವೀಡಿಯೊ ಪ್ಲೇಬ್ಯಾಕ್ ಟೈಂ ಮತ್ತು 40 ಗಂಟೆಗಳ ಆಡಿಯೊ ಪ್ಲೇಬ್ಯಾಕ್ ಟೈಂ ಹೊಂದಿರುತ್ತದೆ ಎಂದು ಹೇಳಲಾಗುತ್ತಿದೆ. ಆದಾಗ್ಯೂ, ಇದು ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ.

Best Mobiles in India

English summary
iPhone SE 2020 base 64GB storage variant is priced at Rs 42,500, whereas the 128GB model will cost Rs 47,800.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X