ಐಫೋನ್‌ ಬಳಕೆದಾರರೇ ನಿಮಗಿದು ಶುಭಸುದ್ದಿ; ಆಪಲ್‌ನಲ್ಲಿ ಇನ್ಮುಂದೆ ದೊಡ್ಡ ಸೌಲಭ್ಯವೊಂದು ಲಭ್ಯ!

By Ningaraju C
|

ಆಪಲ್ ಫೋನ್‌ ಕಾರ್ಯಕ್ಷಮತೆ ಹಾಗೂ ಭದ್ರತೆ ದೃಷ್ಟಿಯಿಂದ ಇತರೆ ಫೋನ್‌ಗಳಿಗೆ ಹೋಲಿಕೆ ಮಾಡಿಕೊಂಡರೆ ಪ್ರಮುಖ ಸ್ಥಾನದಲ್ಲಿ ನಿಲ್ಲುತ್ತದೆ. ಅದರಲ್ಲೂ ಈ ಫೋನ್‌ನ ಕ್ಯಾಮೆರಾ ಫೀಚರ್ಸ್‌ ಹಾಗೂ ಇನ್ನಿತರೆ ಫೀಚರ್ಸ್‌ ಗ್ರಾಹಕರನ್ನು ಹೆಚ್ಚಿಗೆ ಸಂತೃಪ್ತಿಪಡಿಸಲಿವೆ. ಇದರ ನಡುವೆ ಆಪಲ್‌ ಫೋನ್‌ಗಳಿಗೆ ಕಂಪೆನಿಯು ಹಲವಾರು ಹೊಸ ಹೊಸ ಫೀಚರ್ಸ್‌ ಪರಿಚಯಿಸುತ್ತಲೇ ಬರುತ್ತಿದೆ. ಇದೆಲ್ಲದರ ಜೊತೆಗೆ ಈಗ ಎಲ್ಲರೂ ಕಾತುರದಿಂದ ಕಾಯುತ್ತಿದ್ದ ಸೌಲಭ್ಯವನ್ನೂ ಸಹ ನೀಡಲು ಆಪಲ್‌ ಮುಂದಾಗಿದೆ ಎನ್ನಲಾಗಿದೆ.

ಐಫೋನ್

ಹೌದು, ಐಫೋನ್ ಬಳಕೆದಾರರು ಅಂತಿಮವಾಗಿ ಆಂಡ್ರಾಯ್ಡ್‌ನ ಅತಿದೊಡ್ಡ ಫೀಚರ್ಸ್‌ ಒಂದನ್ನು ಪಡೆಯಬಹುದಾಗಿದೆ. ಆಪಲ್‌ನಂತಹ ಟೆಕ್ ಕಂಪೆನಿಗಳು ಮುಕ್ತ ಮಾರುಕಟ್ಟೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳುವ ಕಾನೂನನ್ನು ಯುರೋಪಿಯನ್ ಒಕ್ಕೂಟವು ಅಂಗೀಕರಿಸಿದ್ದು, ಈ ಮೂಲಕ ಆಪಲ್‌ ಡಿವೈಸ್‌ ಬಳಕೆದಾರರು ಮೂರನೇ ವ್ಯಕ್ತಿಯ ಆಪ್ ಸ್ಟೋರ್‌ನಿಂದ ಆಪ್‌ಗಳನ್ನು ಇನ್‌ಸ್ಟಾಲ್‌ ಮಾಡಿಕೊಳ್ಳಬಹುದಾಗಿದೆ.

ಏನಿದು ಹೊಸ ವಿಷಯ?

ಏನಿದು ಹೊಸ ವಿಷಯ?

ಈ ಮೊದಲು ಆಪಲ್‌ ಡಿವೈಸ್‌ಗಳಿಗೆ ಆಪಲ್‌ ಆಪ್‌ ಸ್ಟೋರ್‌ನಿಂದ ಮಾತ್ರ ಆಪ್‌ಗಳನ್ನು ಇನ್‌ಸ್ಟಾಲ್‌ ಮಾಡಿಕೊಳ್ಳಲು ಅನುಮತಿ ಇತ್ತು. ಕೆಲವೊಂದು ಆಪ್‌ಗಳಿಗೆ ಚಂದಾದಾರಿಕೆ ಸಹ ಪಾವತಿ ಮಾಡಬೇಕಿತ್ತು. ಆದರೆ, ಈ ಹೊಸ ನಿಯಮದ ಪ್ರಕಾರ ಬಳಕೆದಾರರು ಯಾವ ಪ್ಲಾಟ್‌ಫಾರ್ಮ್‌ನ ನಿಂದ ಆದರೂ ಸಹ ಆಪ್‌ಗಳನ್ನು ಇನ್‌ಸ್ಟಾಲ್‌ ಮಾಡಿಕೊಂಡು ಬಳಕೆ ಮಾಡಬಹುದಾಗಿದೆ. ಈ ಕಾನೂನನ್ನು ಜಾರಿ ಮಾಡಲು ಆಪಲ್‌ ಯುರೋಪಿಯನ್ ಒಕ್ಕೂಟವು ಆಪಲ್‌ ಕಂಪೆನಿಗೆ ಸಮಯ ನಿಗದಿ ಮಾಡಿದೆ.

ಥರ್ಡ್‌ ಪಾರ್ಟಿ ಆಪ್‌ ಇನ್‌ಸ್ಟಾಲ್‌ ಆಯ್ಕೆ

ಥರ್ಡ್‌ ಪಾರ್ಟಿ ಆಪ್‌ ಇನ್‌ಸ್ಟಾಲ್‌ ಆಯ್ಕೆ

ಐಫೋನ್ ಬಳಕೆದಾರರು ಕೊನೆಗೂ ಈ ಕಾನೂನಿನ ಮೂಲಕ ಆಂಡ್ರಾಯ್ಡ್‌ನ ಅತಿದೊಡ್ಡ ಫೀಚರ್ಸ್‌ಗಳಲ್ಲಿ ಒಂದಾಗಿರುವ ಥರ್ಡ್‌ ಪಾರ್ಟಿ ಆಪ್‌ ಇನ್‌ಸ್ಟಾಲ್‌ ಆಯ್ಕೆ ಪಡೆದುಕೊಳ್ಳಲಿದ್ದಾರೆ. ಅಂದರೆ ಐಒಎಸ್ ಬಳಕೆದಾರರಿಗೆ ಮೂರನೇ ವ್ಯಕ್ತಿಯ ಆಪ್‌ ಸ್ಟೋರ್‌ಗಳಿಂದ ಆಪ್‌ಗಳನ್ನು ಡೌನ್‌ಲೋಡ್ ಮಾಡಲು ಆಪಲ್ ಅವಕಾಶ ಕಲ್ಪಿಸಲು ಮುಂದಾಗಲಿದೆ ಎಂದು ವರದಿಯಾಗಿದೆ .ಹಾಗೆಯೇ ಬಳಕೆದಾರರು ಆಪ್‌ಗಳನ್ನು ಸೈಡ್‌ಲೋಡ್ ಮಾಡಲು ಸಹ ಇದು ಅನುಕೂಲ ಮಾಡಿಕೊಡಲಿದೆ.

ಯುರೋಪಿಯನ್‌ ಒಕ್ಕೂಟದ ನಿಲುವೇನು?

ಯುರೋಪಿಯನ್‌ ಒಕ್ಕೂಟದ ನಿಲುವೇನು?

ಡಿಜಿಟಲ್ ಗೇಟ್‌ಕೀಪರ್‌ಗಳು ಎಂದು ಕರೆಸಿಕೊಳ್ಳುವ ಆಪಲ್‌ನಂತಹ ಟೆಕ್ ಕಂಪನಿಗಳು ಮುಕ್ತ ಮಾರುಕಟ್ಟೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳುವ ಕಾನೂನನ್ನು ಯುರೋಪಿಯನ್ ಒಕ್ಕೂಟವು ಅಂಗೀಕರಿಸಿದೆ. ತಮ್ಮ ಡಿವೈಸ್‌ಗಳಿಗೆ ಯಾವ ಮೂಲದಿಂದ ಆಪ್‌ ಇನ್‌ಸ್ಟಾಲ್‌ ಮಾಡಿಕೊಳ್ಳಬೇಕು ಎಂಬ ನಿರ್ಧಾರವನ್ನು ಬಳಕೆದಾರರಿಗೆ ನೀಡಬೇಕು. ಹಾಗೆಯೇ ಥರ್ಡ್‌ ಪಾರ್ಟಿ ಆಪ್ ಇನ್‌ಸ್ಟಾಲ್‌ ಮಾಡಿಕೊಳ್ಳಲು ಬಳಕೆದಾರರಿಗೆ ಐಓಎಸ್‌ನಲ್ಲಿ ಅವಕಾಶ ಕಲ್ಪಿಸಬೇಕು ಎಂದು ತಿಳಿಸಿದೆ.

ಆಪಲ್‌ ಭದ್ರತೆಗೆ ಹೊಡೆತ ಬೀಳಲಿದೆಯೇ?

ಆಪಲ್‌ ಭದ್ರತೆಗೆ ಹೊಡೆತ ಬೀಳಲಿದೆಯೇ?

ಸುರಕ್ಷತೆಯ ದೃಷ್ಟಿಯಿಂದ ಆಪಲ್‌ ತನ್ನದೇ ಆದ ಆಪ್‌ ಸ್ಟೋರ್ ಅನ್ನು ಹೊಂದಿದ್ದು, ಈವರೆಗೂ ಬಳಕೆದಾರರು ಆಪಲ್‌ ಆಪ್‌ ಸ್ಟೋರ್‌ ಬಿಟ್ಟು ಬೇರೆಲ್ಲೂ ಆಪ್‌ ಇನ್‌ಸ್ಟಾಲ್‌ ಮಾಡುವ ಅವಕಾಶ ಇರಲಿಲ್ಲ. ಆಪಲ್‌ ಸಂಸ್ಥೆ ಈ ಹೊಸ ಕಾನೂನನ್ನು ಅನಸರಿಸಿದ್ದೇ ಆದರೆ ಬಳಕೆದಾರರು ತಮ್ಮ ಅಪೇಕ್ಷಿತ ಆಪ್‌ ಸ್ಟೋರ್‌ಗಳಿಂದ ಬೇಕಾದ ಆಪ್‌ ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತದೆ. ಪ್ರಮುಖ ವಿಷಯ ಎಂದರೆ ಈ ಪ್ರಕ್ರಿಯೆಯಲ್ಲಿ ಬಳಕೆದಾರರೇ ತಮ್ಮ ಫೋನ್‌ನ ಸುರಕ್ಷತೆಗೆ ಜವಾಬ್ದಾರರಾಗಿರುತ್ತಾರೆ ಮತ್ತು ಅವರು ಯಾವ ಆಪ್‌ ಸ್ಟೋರ್ ಅನ್ನು ನಂಬಬೇಕು ಮತ್ತು ಆಪ್‌ಗಳನ್ನು ಡೌನ್‌ಲೋಡ್ ಮಾಡಬೇಕು ಎಂಬುದರ ಕುರಿತು ಅವರೇ ಜಾಗರೂಕರಾಗಿರಬೇಕಿದೆ.

ಆಪ್‌ ಡೆವಲಪರ್‌ಗಳಿಗೆ ಆಗುವ ಅನುಕೂಲ ಏನು?

ಆಪ್‌ ಡೆವಲಪರ್‌ಗಳಿಗೆ ಆಗುವ ಅನುಕೂಲ ಏನು?

ಈ ಕ್ರಮದಿಂದ ಫೋನ್‌ ಬಳಕೆದಾರರಿಗಿಂತ ಆಪ್‌ ಡೆವಲಪರ್‌ಗಳಿಗೆ ಹೆಚ್ಚಿನ ಪ್ರಯೋಜನ ಆಗಲಿದೆ. ಯಾಕೆಂದರೆ ಡೆವಲಪರ್‌ಗಳ ವೆಚ್ಚ ಕಡಿಮೆಯಾಗಲಿದೆ ಎನ್ನಲಾಗಿದೆ. ಆಪಲ್‌ ಆಪ್‌ ಸ್ಟೋರ್‌ನಲ್ಲಿ ತಮ್ಮ ಆಪ್‌ಗಳನ್ನು ಸೇರಿಸಬೇಕು ಎಂದರೆ ಶೇಕಡಾ 30 ರಷ್ಟು ಹಣ ಪಾವತಿ ಮಾಡಬೇಕಿತ್ತು. ಆದರೆ, ಈ ಹೊಸ ನಿಯಮದ ಪ್ರಕಾರ ಥರ್ಡ್‌ ಪಾರ್ಟಿ ಆಪ್‌ ಬಳಕೆ ಮಾಡಿದರೆ ಡೆವಲಪರ್ಸ್‌ಗಳು ಹಣ ಪಾವತಿ ಮಾಡುವ ಪ್ರಮೇಯ ಬರುವುದಿಲ್ಲ. ಹಾಗೆಯೇ ಆಪ್‌ ಚಂದಾದಾರಿಕೆ ಸಹ ಕಡಿಮೆ ಆಗುವ ಸಾಧ್ಯತೆ ಇರುತ್ತದೆ. ಇಲ್ಲಿ ಗಮನಿಸಬೇಕಾದ ವಿಷಯ ಎಂದರೆ ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ ಸ್ಟೋರ್‌ ತನ್ನ ಯಾವುದೇ ಆಪ್‌ಗಳಿಗೆ ಹಣ ಪಾವತಿ ಮಾಡಿ ಎಂದು ಡೆವಲಪರ್‌ಗಳಿಗೆ ಕೇಳುವುದಿಲ್ಲ.

ಆಪಲ್‌ಗೆ ಸಮಯ ನೀಡಿದ ಯುರೋಪಿಯನ್ ಯೂನಿಯನ್

ಆಪಲ್‌ಗೆ ಸಮಯ ನೀಡಿದ ಯುರೋಪಿಯನ್ ಯೂನಿಯನ್

ಯುರೋಪಿಯನ್ ಯೂನಿಯನ್ ಈ ಹೊಸ ಆದೇಶವನ್ನು ಅನುಸರಿಸಲು ಮಾರ್ಚ್ 2024 ರವರೆಗೆ ಸಮಯವನ್ನು ನೀಡಿದೆ. ಆದಾಗ್ಯೂ, ಆಪಲ್ ಕೆಲವು ಷರತ್ತುಗಳನ್ನು ನೀಡಲಿದ್ದು, ಬಳಕೆದಾರರ ಸುರಕ್ಷತೆಯನ್ನು ಸಂಪೂರ್ಣವಾಗಿ ಬಿಟ್ಟುಕೊಡುವುದಿಲ್ಲ ಎಂದು ಹೇಳುತ್ತಿದೆ ಎನ್ನಲಾಗಿದೆ. ಇದರರ್ಥ ಹೊರಗಿನ ಆಪ್‌ಗಳನ್ನು ಕೆಲವು ರೀತಿಯಲ್ಲಿ ಪರಿಶೀಲಿಸಲು ಯೋಜಿಸಲಿದೆ ಹಾಗೆಯೇ ಆ ಆಪ್‌ಗಳಿಗೂ ಸಹ ಶುಲ್ಕ ವಿಧಿಸಬಹುದು ಎನ್ನಲಾಗಿದೆ. ಆದರೆ, ಈ ಬಗ್ಗೆ ಆಪಲ್‌ನಿಂದ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ.

ಯುಎಸ್‌ಬಿ ಟೈಪ್‌ ಸಿ ಬಳಕೆ ಮಾಡಿ

ಯುಎಸ್‌ಬಿ ಟೈಪ್‌ ಸಿ ಬಳಕೆ ಮಾಡಿ

ಈ ಕಾನೂನಿನ ಜೊತೆ ಯುರೋಪಿಯನ್ ಯೂನಿಯನ್ ನ ಮತ್ತೊಂದು ಕಾನೂನಿನ ಪ್ರಕಾರ ಆಪಲ್‌ ತನ್ನ ಡಿವೈಸ್‌ಗಳಿಗೆ ಯುಎಸ್‌ಬಿ ಟೈಪ್‌ ಸಿ ಬಳಕೆ ಮಾಡಿ ಎಂದು ಒತ್ತಾಯಿಸಿದೆ. ಈ ಎರಡು ಬೆಳವಣಿಗೆ ಕಂಡುಬಂದರೆ ಆಂಡ್ರಾಯ್ಡ್‌ ಹಾಗೂ ಆಪಲ್‌ ಡಿವೈಸ್‌ಗಳಿಗೆ ಕೆಲವು ಸಾಮ್ಯತೆ ಕಂಡುಬರಲಿದೆ. ಈ ನಿಯಮದಿಂದ ಕೆಲವು ಬಳಕೆದಾರರು ಸಹ ಖುಷಿಯಾಗಲಿದ್ದಾರೆ. ಹಾಗೆಯೇ ಈ ನಿಯಮ ಪಾಲಿಸಿದರೆ ಆಪಲ್‌ ಕಂಪೆನಿಯಲ್ಲಿ ಇದೊಂದು ದೊಡ್ಡ ಬದಲಾವಣೆಯಾಗಲಿದೆ.

Best Mobiles in India

English summary
iPhone users will get one of Android's biggest features.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X