ಭಾರತದಲ್ಲಿ ಬಿರುಗಾಳಿ ಎಬ್ಬಿಸಿದ ಐಕ್ಯೂ 11 ಫೋನ್‌! ಪ್ರೊಸೆಸರ್‌ ವೇಗ ಎಷ್ಟಿದೆ ಗೊತ್ತಾ?

|

ಭಾರತದ ಮಾರುಕಟ್ಟೆಗೆ ಐಕ್ಯೂ ಕಂಪೆನಿಯ ಬಹುನಿರೀಕ್ಷಿತ ಐಕ್ಯೂ 11 ಫೋನ್‌ ಎಂಟ್ರಿ ನೀಡಿದೆ. ಇದು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8 Gen 2 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುವ ಭಾರತದ ಮೊದಲ ಫೋನ್‌ ಆಗಿದೆ. ಈ ಸ್ಮಾರ್ಟ್‌ಫೋನ್‌ ಲೆಜೆಂಡ್ ಎಡಿಷನ್‌ ಮತ್ತು ಆಲ್ಫಾ ಎಡಿಷನ್‌ ಎನ್ನುವ ಎರಡು ಆವೃತ್ತಿಗಳಲ್ಲಿ ಲಭ್ಯವಾಗಲಿದೆ. ಇದರಲ್ಲಿ ಲೆಜೆಂಡ್‌ ಎಡಿಷನ್‌ BMW M ಮೋಟಾರ್‌ಸ್ಪೋರ್ಟ್ ಸರಣಿಯ ಪಟ್ಟಿಯೊಂದಿಗೆ ಲೆದರ್ ಫಿನಿಶ್‌ನೊಂದಿಗೆ ಬರುತ್ತದೆ.

ಸ್ಮಾರ್ಟ್‌ಫೋನ್‌

ಹೌದು, ಐಕ್ಯೂ 11 ಸ್ಮಾರ್ಟ್‌ಫೋನ್‌ ಭಾರತದಲ್ಲಿ ಬಿಡುಗಡೆಯಾಗಿದೆ. ಪ್ರೊಸೆಸರ್‌ ಕಾರಣಕ್ಕೆ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದ ಈ ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50MP ಸೆನ್ಸಾರ್‌ ಹೊಂದಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 120W ವೇಗದ ವೈರ್ಡ್ ಚಾರ್ಜಿಂಗ್‌ಗೆ ಬೆಂಬಲಿಸಲಿದೆ. ಇನ್ನುಳಿದಂತೆ ಈ ಹೊಸ ಸ್ಮಾರ್ಟ್‌ಫೋನ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಸ್‌ಪ್ಲೇ ರಚನೆ ಏನು?

ಡಿಸ್‌ಪ್ಲೇ ರಚನೆ ಏನು?

ಐಕ್ಯೂ 11 ಸ್ಮಾರ್ಟ್‌ಫೋನ್‌ 6.78 ಇಂಚಿನ ಪಂಚ್-ಹೋಲ್ ಸ್ಯಾಮ್‌ಸಂಗ್‌ E6 ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 3200 x 1440 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು 144Hz ರಿಫ್ರೆಶ್ ರೇಟ್‌, 300Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಅನ್ನು ನೀಡಲಿದೆ. ಇನ್ನು ಡಿಸ್‌ಪ್ಲೇ 517 PPI ಪಿಕ್ಸೆಲ್‌ ಸಾಂದ್ರತೆಯನ್ನು ಹೊಂದಿದೆ. ಜೊತೆಗೆ ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್‌ ಪ್ರೊಟೆಕ್ಷನ್‌ ಅನ್ನು ಪಡೆದಿದೆ.

ಪ್ರೊಸೆಸರ್‌ ಯಾವುದು?

ಪ್ರೊಸೆಸರ್‌ ಯಾವುದು?

ಐಕ್ಯೂ 11 ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8 Gen 2 SoC ಪ್ರೊಸೆಸರ್‌ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 13 ಆಧಾರಿತ Funtouch OS 13 ಬಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಫೋನ್‌ 8 RAM ಮತ್ತು 256GB ಹಾಗೂ 16GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದರಲ್ಲಿ ಮೆಮೊರಿ ಕಾರ್ಡ್‌ ಸ್ಲಾಟ್‌ ಅನ್ನು ನೀಡಲಾಗಿಲ್ಲ ಎಂದು ಐಕ್ಯೂ ಕಂಪೆನಿ ಹೇಳಿದೆ.

ಕ್ಯಾಮೆರಾ ಸೆಟ್‌ಅಪ್‌ ಎಷ್ಟಿದೆ?

ಕ್ಯಾಮೆರಾ ಸೆಟ್‌ಅಪ್‌ ಎಷ್ಟಿದೆ?

ಐಕ್ಯೂ 11 ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸ್ಯಾಮ್‌ಸಂಗ್ GN5 ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್‌ ಅಲ್ಟ್ರಾ-ವೈಡ್ ಲೆನ್ಸ್‌ ಮತ್ತು ಮೂರನೇ ಕ್ಯಾಮೆರಾ 13 ಮೆಗಾಪಿಕ್ಸೆಲ್‌ 2x ಟೆಲಿಫೋಟೋ ಲೆನ್ಸ್‌ ಅನ್ನು ಒಳಗೊಂಡಿದೆ. ಇದಲ್ಲದೆ 16 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಈ ಎಲ್ಲಾ ಕ್ಯಾಮೆರಾಗಳು Vivo V2 ಇಮೇಜಿಂಗ್ ಚಿಪ್‌ನಿಂದ ರನ್‌ ಆಗಲಿವೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್‌

ಬ್ಯಾಟರಿ ಮತ್ತು ಇತರೆ ಫೀಚರ್ಸ್‌

ಐಕ್ಯೂ 11 ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 120W ವೇಗದ ವೈರ್ಡ್ ಚಾರ್ಜಿಂಗ್‌ಗೆ ಬೆಂಬಲವನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್, 5 ಜಿ, ವೈಫೈ 6, ಬ್ಲೂಟೂತ್ 5.3, ಜಿಎನ್ಎಸ್ಎಸ್, ಎನ್ಎಫ್ಸಿ ಮತ್ತು ಯುಎಸ್‌ಬಿ ಟೈಪ್-ಸಿಗೆ ಬೆಂಬಲವನ್ನು ನೀಡಲಿದೆ. ಇದು ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳು, ಐಆರ್ ಸೆನ್ಸಾರ್‌ ಮತ್ತು ಆಪ್ಟಿಕಲ್ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಕೂಡ ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಐಕ್ಯೂ 11 ಸ್ಮಾರ್ಟ್‌ಫೋನ್‌ ಭಾರತದಲ್ಲಿ 8GB + 256GB ಸ್ಟೋರೇಜ್‌ ಆಯ್ಕೆಯ ಬೆಲೆ 59,999ರೂ. ಆಗಿದೆ. ಇದರ 16GB + 256GB ಸ್ಟೋರೇಜ್‌ ಆಯ್ಕೆಯು 64,999ರೂ. ಬೆಲೆಯನ್ನು ಪಡೆದಿದೆ. ಇದನ್ನು ಆಲ್ಫಾ (ಗ್ಲಾಸ್ ಬ್ಯಾಕ್) ಅಥವಾ ಲೆಜೆಂಡ್ (ಸಿಲಿಕಾನ್ ಲೆದರ್) ಬಣ್ಣದ ಆಯ್ಕೆಗಳಲ್ಲಿ ಪಡೆಯಬಹುದು. ಈ ಸ್ಮಾರ್ಟ್‌ಫೋನ್‌ ಅಮೆಜಾನ್‌ ಇಂಡಿಯಾ ಮತ್ತು ಐಕ್ಯೂ.ಕಾಮ್‌ ಮೂಲಕ ಜನವರಿ 13 ರಂದು ಸೇಲ್‌ ಆಗಲಿದೆ.

ಆಫರ್‌ ಏನಿದೆ?

ಆಫರ್‌ ಏನಿದೆ?

ಇನ್ನು ಈ ಸ್ಮಾರ್ಟ್‌ಫೋನ್‌ ಅನ್ನು HDFC ಮತ್ತು ICICI ಬ್ಯಾಂಕ್‌ಗಳು ನೀಡುವ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೂಲಕ ಖರೀದಿಸುವ ಗ್ರಾಹಕರು 5,000ರೂ. ರಿಯಾಯಿತಿ ಪಡೆಯಬಹುದು. ಜೊತೆಗೆ ಐಕ್ಯೂ ಕಂಪೆನಿ 4,000ರೂ. ವರೆಗಿನ ಹೆಚ್ಚುವರಿ ಎಕ್ಸ್‌ಚೇಂಜ್‌ ಬೋನಸ್ ಅನ್ನು ಸಹ ನೀಡುತ್ತಿದೆ.

Best Mobiles in India

English summary
IQoo 11 phone with Snapdragon 8 Gen 2 processor launched in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X