ಐಕ್ಯೂ 11 ಸ್ಮಾರ್ಟ್‌ಫೋನ್‌ನ ಫೀಚರ್ಸ್‌ ಲೀಕ್: ಮೂರು ವೇರಿಯಂಟ್‌ನಲ್ಲಿ ಲಭ್ಯ?

|

ಐಕ್ಯೂ (iQOO) ಕಂಪೆನಿ ಗ್ರಾಹಕ ಎಲೆಕ್ಟ್ರಾನಿಕ್ಸ್ ತಯಾರಕಾ ಕಂಪೆನಿಗಳಲ್ಲಿ ಒಂದಾಗಿದೆ. ಗೇಮಿಂಗ್‌ ಆಧಾರಿತ ಸ್ಮಾರ್ಟ್‌ಫೋನ್‌ ಹಾಗೂ ಕ್ಯಾಮೆರಾ ಹಾಗೂ ಸ್ಪೀಕರ್‌ ಗುಣಮಟ್ಟದಲ್ಲಿ ಐಕ್ಯೂ ತನ್ನದೇ ಆದ ಹೆಸರು ಗಳಿಸಿದ್ದು, ಅದರಂತೆ ಈಗ ಬಿಡುಗಡೆಯಾಗುವ ಮುನ್ನವೇ ಐಕ್ಯೂ 11 ಸ್ಮಾರ್ಟ್‌ಫೋನ್‌ನ ಫೀಚರ್ಸ್‌ ಬಹಿರಂಗವಾಗಿದ್ದು, ಈ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 8 ಪ್ಲಸ್ ಜೆನ್ 2 SoC ನಲ್ಲಿ ಕಾರ್ಯನಿರ್ವಹಿಸಲಿದೆ.

ಐಕ್ಯೂ 10

ಹೌದು, ಈ ಹಿಂದೆ ಭಾರತದಲ್ಲಿ ಐಕ್ಯೂ 10 ಸರಣಿಯ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಲಾಂಚ್‌ ಆಗಿರಲಿಲ್ಲ. ಆದರೆ, ಐಕ್ಯೂ 9T 5G ಅನ್ನು ಮರುಬ್ಯಾಡ್ಜ್ ಮಾಡಿ ಭಾರತದಲ್ಲಿ ಲಾಂಚ್‌ ಮಾಡಲಾಗಿತ್ತು. ಇದರ ನಡುವೆ ಐಕ್ಯೂ ಕಂಪೆನಿಯ ಐಕ್ಯೂ 11 ಸ್ಮಾರ್ಟ್‌ಫೋನ್‌ ಈ ವರ್ಷದ ಅಂತ್ಯದ ವೇಳೆಗೆ ಲಾಚ್‌ ಆಗಲಿದ್ದು. ಈ ಸರಣಿಯ ಐಕ್ಯೂ 11 ಪ್ರೊ ಸ್ಮಾರ್ಟ್‌ಫೋನ್‌ ಸಹ ಮಾರುಕಟ್ಟೆ ಪ್ರವೇಶ ಮಾಡಲಿದೆ. ಈ ಸ್ಮಾರ್ಟ್‌ಫೋನ್ 8GB ಹಾಗೂ 12GB ಇಂಟರ್ನಲ್‌ ಸೇರಿದಂತೆ ಮೂರು ವೇರಿಯಂಟ್‌ನಲ್ಲಿ ಲಭ್ಯವಿರಲಿದೆ. ಇನ್ನುಳಿದಂತೆ ಲೀಕ್‌ ಆದ ಮಾಹಿತಿ ಪ್ರಕಾರ ಈ ಫೋನ್‌ನ ಪ್ರಮುಖ ಫೀಚರ್ಸ್‌ ಏನು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ಡಿಸ್‌ಪ್ಲೇ ವಿವರ

ಡಿಸ್‌ಪ್ಲೇ ವಿವರ

ಟಿಪ್‌ಸ್ಟರ್ನ ಯೋಗೇಶ್ ಬ್ರಾರ್ ಅವರು ಈ ಸಂಬಂಧ ಟ್ವೀಟ್‌ ಮಾಡಿದ್ದು, ಅದರಂತೆ ಐಕ್ಯೂ 11 ಸ್ಮಾರ್ಟ್‌ಫೋನ್ 1440 x 3200ಪಿಕ್ಸೆಲ್‌ ರೆಸಲ್ಯೂಶನ್‌ ಇರುವ 6.78 ಇಂಚಿನ E6 ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ಇದು 144Hz ರಿಫ್ರೆಶ್ ರೇಟ್‌ ಬೆಂಬಲಿಸುತ್ತದೆ ಎನ್ನಲಾಗಿದೆ. ಇದರ ಜೊತೆಗೆ ಹೋಲ್ ಪಂಚ್ ಡಿಸ್‌ಪ್ಲೇ ರಚನೆ ಹೊಂದಿರಬಹುದಾಗಿದೆ.

ಪ್ರೊಸೆಸರ್‌ ಯಾವುದು?

ಪ್ರೊಸೆಸರ್‌ ಯಾವುದು?

ಐಕ್ಯೂ 11 ಸ್ಮಾರ್ಟ್‌ಫೋನ್ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 8 ಜೆನ್ 2 SoC ಮೂಲಕ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್‌ 13 ಆಧಾರಿತ ಮೂಲ ಓಎಸ್‌ನಲ್ಲಿ ನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗುತ್ತದೆ. ಹಾಗೆಯೇ 8GB ಹಾಗೂ 12GB RAM ಜೊತೆಗೆ 128GB, 256GB ಮತ್ತು 512GB ಇಂಟರ್ನಲ್‌ ಸ್ಟೋರೇಜ್‌ ಆಯ್ಕೆ ಇರುವ ಮೂರು ವೇರಿಯಂಟ್‌ನಲ್ಲಿ ಈ ಸ್ಮಾರ್ಟ್‌ಫೋನ್‌ ಲಾಚ್‌ ಆಗಲಿದೆ ಎನ್ನುವ ಮಾಹಿತಿ ದೃಢವಾಗಿದೆ.

ಟ್ರಿಪಲ್‌ ಕ್ಯಾಮೆರಾ ರಚನೆ

ಟ್ರಿಪಲ್‌ ಕ್ಯಾಮೆರಾ ರಚನೆ

ಈ ಸ್ಮಾರ್ಟ್‌ಫೋನ್ ಐಕ್ಯೂ 10 ಮತ್ತು ಐಕ್ಯೂ 9T 5G ಸ್ಮಾರ್ಟ್‌ಫೋನ್‌ನಲ್ಲಿ ಕಂಡು ಬರುವಂತೆಯೇ ರಿಯಲ್‌ ಪ್ಯಾನೆಲ್‌ನಲ್ಲಿ ಟ್ರಿಪಲ್‌ ಕ್ಯಾಮೆರಾ ರಚನೆ ಪಡೆದಿರಬಹುದು ಎನ್ನಲಾಗಿದೆ. ಅದರಂತೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 13 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಲೆನ್ಸ್ ಹಾಗೂ 12 ಮೆಗಾಪಿಕ್ಸೆಲ್ ಟೆಲಿಫೋಟೋ ಸೆನ್ಸರ್‌ ಇದರಲ್ಲಿರಲಿದೆ. ಜೊತೆಗೆ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಈ ಸ್ಮಾರ್ಟ್‌ಫೋನ್‌ ಹೊಂದಿರಲಿದೆ ಎಂದು ಟಿಪ್‌ಸ್ಟರ್ ವರದಿ ಮಾಡಿದೆ. ಪ್ರಮುಖ ವಿಷಯ ಎಂದರೆ ಈ ಸ್ಮಾರ್ಟ್‌ಫೋನ್‌ನಲ್ಲಿ ವಿವೋ V2 ಇಮೇಜ್ ಸಿಗ್ನಲ್ ಪ್ರೊಸೆಸರ್ ಅನ್ನು ಅಳವಡಿಸುವ ಮೂಲಕ ಚಿತ್ರದ ಗುಣಮಟ್ಟವನ್ನು ಇನ್ನಷ್ಟು ಹೆಚ್ಚಿಗೆ ಮಾಡಲು ಕಂಪೆನಿ ಮುಂದಾಗಿದೆ ಎನ್ನುವ ಮಾತುಗಳ ಸಹ ಕೇಳಿಬರುತ್ತಿವೆ.

ಬ್ಯಾಟರಿ ಹಾಗೂ ಇತರೆ

ಬ್ಯಾಟರಿ ಹಾಗೂ ಇತರೆ

ಐಕ್ಯೂ 11 ಸ್ಮಾರ್ಟ್‌ಫೋನ್‌ 120W ಫಾಸ್ಟ್‌ ಚಾರ್ಜಿಂಗ್ ಬೆಂಬಲ ಇರುವ 5,000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿರಲಿದೆ. ಹಾಗೆಯೇ 10w ರಿವರ್ಸ್‌ ಚಾರ್ಜಿಂಗ್ ಫೀಚರ್ಸ್ ಸಹ ಇದರಲ್ಲಿರಲಿದೆ. ಈ ಸ್ಮಾರ್ಟ್‌ಫೋನ್‌ ದರ ಭಾರತದಲ್ಲಿ ಸುಮಾರು 59,990ರೂ. ಗಳಾಗಿರಬಹುದು ಎಂದು ವರದಿಯಿಂದ ತಿಳಿದುಬಂದಿದ್ದು, ಇನ್ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್, 4G, 5G, ಬ್ಲೂಟೂತ್ ಆವೃತ್ತಿ v5.3, ವೈ-ಫೈ, ಯುಎಸ್‌ಬಿ-ಸಿ ಪೋರ್ಟ್‌ ಸೇರಿದಂತೆ ಇನ್ನಿತರೆ ಕನೆಕ್ಟಿವಿಟಿ ಆಯ್ಕೆಯನ್ನು ಇದು ಪಡೆದಿರಲಿದೆ.

Best Mobiles in India

English summary
iQOO is a popular consumer electronics manufacturing company. Meanwhile, the features of the iQOO 11 smartphone have been revealed even before its launch.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X