ಭಾರತದಲ್ಲಿ 'iQoo 3' 5G ಫೋನ್ ಬಿಡುಗಡೆ!..ಮಾರುಕಟ್ಟೆಯಲ್ಲಿ ಹೊಸ ಅಲೆ!

|

ವಿವೋದ ಸಬ್‌ಬ್ರ್ಯಾಂಡ್ iQoo ಸಂಸ್ಥೆಯು ಸ್ವತಂತ್ರವಾಗಿ ಇದೀಗ ತನ್ನ ಮೊದಲ iQoo 3 ಸ್ಮಾರ್ಟ್‌ಫೋನ್ ಅನ್ನು ಇಂದು (ಫೆ. 25) ಭಾರತದಲ್ಲಿ ಲಾಂಚ್ ಆಗಿದೆ. ದೇಶಿಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಭಾರಿ ನಿರೀಕ್ಷೆ ಮೂಡಿಸಿದ್ದ, iQoo 3 ಸ್ಮಾರ್ಟ್‌ಫೋನ್ ಹೈ ರೇಂಜ್ ಫೀಚರ್ಸ್‌ಗಳನ್ನು ಒಳಗೊಂಡಿದೆ. 5G ಬೆಂಬಲಿತ ಈ ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 865 ಪ್ರೊಸೆಸರ್‌ ಅನ್ನು ಪಡೆದಿದೆ.

iQoo-ಐಕ್ಯೂ ಸಂಸ್ಥೆ

ಹೌದು, iQoo-ಐಕ್ಯೂ ಸಂಸ್ಥೆಯು ತನ್ನ ಮೊದಲ ಸ್ಮಾರ್ಟ್‌ಫೋನ್ iQoo 3 ಅನ್ನು ಇಂದು ದೇಶಿಯ ಮಾರುಕಟ್ಟೆಗೆ ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್ ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್‌ನಲ್ಲಿದೆ. ಅಂದಹಾಗೆ ಈ ಸ್ಮಾರ್ಟ್‌ಫೋನ್ ಇದೇ ಮಾರ್ಚ್ 4ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಸೇಲ್ ಪ್ರಾರಂಭಿಸಲಿದ್ದು, ಬ್ಲ್ಯಾಕ್, ಸಿಲ್ವರ್, ವಾಲ್ಕೊನೊ ಅರ್ಥ್ ಬಣ್ಣಗಳ ಆಯ್ಕೆ ಪಡೆದಿದೆ. ಇನ್ನು ಈ ಫೋನಿನ ಆರಂಭಿಕ ಬೆಲೆಯು 36,990ರೂ.ಗಳು ಆಗಿದೆ. ಹಾಗಾದರೆ iQoo 3 ಸ್ಮಾರ್ಟ್‌ಫೋನಿನ ಇನ್ನುಳಿದ ಫೀಚರ್ಸ್‌ಗಳೆನು ಮತ್ತು ಬೆಲೆ ಎಷ್ಟು ಎಂಬುದನ್ನು ತಿಳಿಯಲು ಮುಂದೆ ಓದಿರಿ.

5G ಮತ್ತು 4G

5G ಮತ್ತು 4G

iQoo 3 ಸ್ಮಾರ್ಟ್‌ಫೋನಿನ ಅತೀ ಮುಖ್ಯ ಹೈಲೈಟ್‌ ಅಂದ್ರೆ ಅದು 5G ನೆಟವರ್ಕ್ ಬೆಂಬಲ ಪಡೆದಿರುವುದು. ಹಾಗಂತ ಈ ಫೋನ್ ಪೂರ್ಣ 5G ಆಧಾರಿತವಾಗಿಲ್ಲ. 4G ವೇರಿಯಂಟ್‌ ಆಯ್ಕೆಯು ಹೊಂದಿದೆ. ಒಟ್ಟು ಮೂರು ವೇರಿಯಂಟ್ ಆಯ್ಕೆಗಳಿದ್ದು, ಅವುಗಳಲ್ಲಿ ಎರಡು 5G ಸಪೋರ್ಟ್ ಪಡೆದಿವೆ. ಹಾಗೂ ಒಂದು ವೇರಿಯಂಟ್ 4G ಬೆಂಬಲ ಪಡೆದಿದೆ. 8GB RAM + 256GB ಮತ್ತು 12GB RAM + 256GB ವೇರಿಯಂಟಗಳು 5G ಸೌಲಭ್ಯ ಪಡೆದಿವೆ. ಹಾಗೂ 8GB RAM + 128GB ವೇರಿಯಂಟ್ 4G ಸಫೋರ್ಟ್‌ನಲ್ಲಿದೆ.

ಡಿಸ್‌ಪ್ಲೇ ಮತ್ತು ರಚನೆ

ಡಿಸ್‌ಪ್ಲೇ ಮತ್ತು ರಚನೆ

iQoo 3 ಸ್ಮಾರ್ಟ್‌ಫೋನ್ 1080 x 2400 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.4 ಇಂಚಿನ ಪೂರ್ಣ ಹೆಚ್‌ಡಿ AMOLED ಡಿಸ್‌ಪ್ಲೇಯನ್ನು ಪಡೆದಿದೆ. ಡಿಸ್‌ಪ್ಲೇಯು 1200 nits ಬ್ರೈಟ್ನೆಸ್‌ ಸಾಮರ್ಥ್ಯದಲ್ಲಿದ್ದು, HDR10+ ಅನ್ನು ಒಳಗೊಂಡಿದೆ. ಹಾಗೆಯೇ ಡಿಸ್‌ಪ್ಲೇಯ ರೆಫ್ರೇಶ್ ರೇಟ್ 120Hz ಆಗಿದ್ದು, ಫಿಂಗರ್‌ಪ್ರಿಂಟ್ ಸೆನ್ಸಾರ್ ಪಡೆದಿದೆ. ಇಲ್ಲದೇ ಸ್ಕ್ರೀನ್ ರಕ್ಷಣೆಗೆ ಗೊರಿಲ್ಲಾ ಗ್ಲಾಸ್ 6 ಅನ್ನು ಹೊಂದಿದೆ.

ಪ್ರೊಸೆಸರ್ ಕಾರ್ಯ

ಪ್ರೊಸೆಸರ್ ಕಾರ್ಯ

iQoo 3 ಸ್ಮಾರ್ಟ್‌ಫೋನ್ 5G ಬೆಂಬಲಿತ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 865 ಪ್ರೊಸೆಸರ್‌ ಅನ್ನು ಪಡೆದಿದೆ. ಇದಕ್ಕೆ ಪೂರಕವಾಗಿ iQoo UI ಹಾಗೂ ಆಂಡ್ರಾಯ್ಡ್ 10 ಓಎಸ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಈ ಫೋನ್ ಮೂರು ವೇರಿಯಂಟ್ ಆಯ್ಕೆಗಳನ್ನು ಹೊಂದಿದ್ದು, ಅವು ಕ್ರಮವಾಗಿ 8GB RAM + 128GB, 8GB RAM + 256GB ಮತ್ತು 12GB RAM + 256GB ಸ್ಟೋರೇಜ್ ಆಯ್ಕೆಯಲ್ಲಿವೆ.

ಸ್ಪೆಷಲ್ ಕ್ಯಾಮೆರಾ

ಸ್ಪೆಷಲ್ ಕ್ಯಾಮೆರಾ

iQoo 3 ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ನಾಲ್ಕು ಕ್ಯಾಮೆರಾ ಸೆಟ್‌ಅಪ್ ರಚನೆ ಪಡೆದಿದ್ದು, ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಸೆಕೆಂಡರಿ ಕ್ಯಾಮೆರಾವು 13ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದ್ದು, ತೃತೀಯ ಕ್ಯಾಮೆರಾವು 13ಎಂಪಿಯ ವೈಲ್ಡ್ ಆಂಗಲ್ ಲೆನ್ಸ್‌ ಪಡೆದಿದೆ. ನಾಲ್ಕನೇ ಕ್ಯಾಮೆರಾವು ಡೆಪ್ತ್ ಸೆನ್ಸಾರ್ ಹೊಂದಿದೆ. ಇನ್ನು ಸೆಲ್ಫಿ ಕ್ಯಾಮೆರಾವು 16ಎಂಪಿ ಸೆನ್ಸಾರ್ ಸಾಮರ್ಥ್ಯ ಪಡೆದಿದೆ. ಹಾಗೆಯೇ ಕ್ಯಾಮೆರಾವು 1x, 5x ಮತ್ತು 20x ಜೂಮ್ ಸೌಲಭ್ಯ ಹೊಂದಿದೆ.

ಬ್ಯಾಟರಿ ಲೈಫ್

ಬ್ಯಾಟರಿ ಲೈಫ್

iQoo 3 ಸ್ಮಾರ್ಟ್‌ಫೋನ್ 4,400mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಹೊಂದಿದ್ದು, ಇದರೊಂದಿಗೆ 55W ಸಾಮರ್ಥ್ಯ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಪಡೆದುಕೊಂಡಿದೆ. ಇದರೊಂದಿಗೆ ಫಿಂಗರ್‌ಪ್ರಿಂಟ್ ಸೆನ್ಸಾರ್, ಫೇಸ್‌ಲಾಕ್ ಸೌಲಭ್ಯ, ಕಾರ್ಬನ್ ಫೈಬರ್ VC ಲಿಕ್ವಡ್ ಕೂಲಿಂಗ್ ತಂತ್ರಜ್ಞಾನ ಸೌಲಭ್ಯವನ್ನು ಒಳಗೊಂಡಿದೆ. ಹಾಗೆಯೇ ವೈಫೈ, ಬ್ಲೂಟೂತ್, ಜಿಪಿಎಸ್‌ ಸೌಲಭ್ಯಗಳನ್ನು ಪಡೆದಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

iQoo 3 ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆ ಆಗಿದ್ದು, ಒಟ್ಟು ಮೂರು ವೇರಿಯಂಟ್ ಆಯ್ಕೆಗಳನ್ನು ಪಡೆದಿದೆ. 8GB RAM + 128GB ಸ್ಟೋರೇಜ್‌ನ 4G ವೇರಿಯಂಟ್ ಬೆಲೆಯು 36,990ರೂ.ಗಳು ಆಗಿದೆ. ಹಾಗೆಯೇ 5G ವೇರಿಯಂಟ್‌ನ 8GB RAM + 256GB ಬೆಲೆಯು 39,990ರೂ ಮತ್ತು 12GB RAM + 256GB ಬೆಲೆಯು 44,990ರೂ. ಆಗಿದೆ. ಇದೇ ಮಾರ್ಚ್ 4ರಂದು ಫ್ಲಿಪ್‌ಕಾರ್ಟ್ ತಾಣದಲ್ಲಿ ಈ ಫೋನಿನ ಮೊದಲ ಸೇಲ್ ನಡೆಯಲಿದೆ.

Best Mobiles in India

English summary
The iQOO 3 5G price in India is set at Rs 44,990, which is for the 12GB RAM + 256GB storage model.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X