Just In
- 1 hr ago
ಸ್ಯಾಮ್ಸಂಗ್ ಗ್ಯಾಲಕ್ಸಿ Z ಫೋಲ್ಡ್ 4 ಮತ್ತು Z ಫ್ಲಿಪ್ 4 ಪ್ರಿ ಬುಕ್ಕಿಂಗ್ ಶುರು! ಏನೆಲ್ಲಾ ಆಫರ್!
- 1 hr ago
ವಿ ಟೆಲಿಕಾಂ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ!...ಬೇಡಾ ಅಂದ್ರು ಸಿಗುತ್ತೆ ಅಧಿಕ ಡೇಟಾ!
- 2 hrs ago
ಇಂದು ಮೊಟೊ G32 ಫೋನ್ ಫಸ್ಟ್ ಸೇಲ್!..ಏನಾದ್ರೂ ಆಫರ್ ಸಿಗುತ್ತಾ?
- 20 hrs ago
ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಲ್ಯಾಂಗ್ವೇಜ್ ಸೆಟ್ಟಿಂಗ್ಸ್ ಬದಲಾಯಿಸುವುದು ಹೇಗೆ?
Don't Miss
- News
Atal Bihari Vajpayee- ರಾಜಕೀಯ ಅಜಾತಶತ್ರು ಬಗ್ಗೆ ವಿಶೇಷ ನೆನಪು
- Sports
ವಿರಾಟ್ ಕೊಹ್ಲಿ ಫಾರ್ಮ್ ಕುರಿತು ಭವಿಷ್ಯ ನುಡಿದ ಸೌರವ್ ಗಂಗೂಲಿ! ಆತ ಬಿಗ್ ಮ್ಯಾಚ್ ಪ್ಲೇಯರ್ ಎಂದ ದಾದಾ
- Automobiles
ಮಹೀಂದ್ರಾ ಹೊಸ ಎಕ್ಸ್ಯುವಿ400 ಎಲೆಕ್ಟ್ರಿಕ್ ಎಸ್ಯುವಿ ಕಾರಿನ ಬಿಡುಗಡೆ ಮಾಹಿತಿ ಬಹಿರಂಗ
- Finance
ಬೇಡಿಕೆ ಹೆಚ್ಚಾದಂತೆ ವಸತಿ ಬೆಲೆ ಕೂಡಾ ಏರಿಕೆ: ಯಾವ ನಗರ ಟಾಪ್?
- Movies
'ವಂದೇ ಮಾತರಂ' ಗೀತೆಯಲ್ಲಿ ದರ್ಶನ್, ಯಶ್, ದುನಿಯಾ ವಿಜಯ್ ಯಾಕಿಲ್ಲ?
- Lifestyle
ನಾಲಗೆಯ ಕೆಟ್ಟ ರುಚಿ ನಿವಾರಿಸಲು ಆಯುರ್ವೇದದ ಸಲಹೆಗಳು
- Travel
ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲ್ ಆನೆಗಳ ಶಿಬಿರಕ್ಕೆ ಭೇಟಿ ಕೊಡಿ
- Education
CSIR UGC NET June 2022 : ಜೂನ್ ಪರೀಕ್ಷೆಗೆ ಅರ್ಜಿ ಆಹ್ವಾನ..ಅರ್ಜಿ ಸಲ್ಲಿಕೆ ಅವಧಿ ಆ.17ರ ವರೆಗೆ ವಿಸ್ತರಣೆ
ಭಾರತಕ್ಕೆ ಎಂಟ್ರಿ ಕೊಟ್ಟಿದೆ 'ಐಕ್ಯೂ 9T 5G' ಫೋನ್!..ಅಚ್ಚರಿ ಮೂಡಿಸುವ ಬೆಲೆ!
ಐಕ್ಯೂ (iQOO) ಮೊಬೈಲ್ ಸಂಸ್ಥೆ ಬಹುನಿರೀಕ್ಷಿತ ಐಕ್ಯೂ 9T 5G (iQoo 9T 5G) ಸ್ಮಾರ್ಟ್‌ಫೋನ್ ಅಧಿಕೃತವಾಗಿ ಭಾರತದಲ್ಲಿ ಬಿಡುಗಡೆ ಆಗಿದೆ. ಐಕ್ಯೂ 9 ಸರಣಿಯಲ್ಲಿ ಕಾಣಿಸಿಕೊಂಡಿರುವ ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ ಜೆನ್ 1 SoC ಪ್ರೊಸೆಸರ್ ಪಡೆದಿದೆ. ಹಾಗೆಯೇ ಈ ಫೋನಿನ ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್ ಸಾಮರ್ಥ್ಯದಲ್ಲಿದೆ.

ಹೌದು, ಐಕ್ಯೂ ಕಂಪನಿಯು ತನ್ನ ನೂತನ ಐಕ್ಯೂ 9T 5G (iQOO 9T 5G) ಸ್ಮಾರ್ಟ್‌ಫೋನ್ ಅನ್ನು ಇಂದು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್ ಪಂಚ್‌ಹೋಲ್ ಡಿಸ್‌ಪ್ಲೇಯನ್ನು ಒಳಗೊಂಡಿದ್ದು, ಹಿಂಬದಿಯ ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಹಾಗೆಯೇ ಈ ಮೊಬೈಲ್ 120W ಫ್ಲ್ಯಾಶ್‌ಚಾರ್ಜ್ ಸಪೋರ್ಟ್‌ನೊಮದಿಗೆ 4,700mAh ಬ್ಯಾಟರಿ ಅನ್ನು ಒಳಗೊಂಡಿದೆ.

ಇದಲ್ಲದೆ ಈ ಫೋನ್ ಎರಡು ವೇರಿಯಂಟ್ ಆಯ್ಕೆಗಳಲ್ಲಿ ಅನಾವರಣ ಆಗಿದೆ. ಅವುಗಳು ಕ್ರಮವಾಗಿ 8GB RAM + 128GB ಸ್ಟೋರೇಜ್ ಮತ್ತು 12GB RAM + 256GB ಸ್ಟೋರೇಜ್ ಆಯ್ಕೆಗಳಲ್ಲಿ ಇವೆ. ಇನ್ನು ಈ ಫೋನ್ ಎರಡು ಬಣ್ಣಗಳಲ್ಲಿ ಲಭ್ಯ ಆಗಲಿದ್ದು, ಅವು ಕ್ರಮವಾಗಿ ಆಲ್ಫಾ ಮತ್ತು ಲೆಜೆಂಡ್ ಬಣ್ಣಗಳ ಆಯ್ಕೆ ಆಗಿವೆ. ಇನ್ನುಳಿದಂತೆ ಈ ಫೋನಿನ ಇತರೆ ಫೀಚರ್ಸ್‌ಗಳೆನು? ಇದರ ಬೆಲೆ ಎಷ್ಟು? ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಐಕ್ಯೂ 9T 5G ಡಿಸ್‌ಪ್ಲೇ ರಚನೆ
ಐಕ್ಯೂ 9T 5G ಸ್ಮಾರ್ಟ್‌ಫೋನ್ 6.78 ಇಂಚಿನ HD+ E5 AMOLED ಡಿಸ್‌ಪ್ಲೇ ಅನ್ನು ಪಡೆದಿದೆ. ಡಿಸ್‌ಪ್ಲೇಯು 1,080 x 2,400 ಪಿಕ್ಸಲ್ ರೆಸಲ್ಯೂಶನ್ ಅನ್ನು ಒಳಗೊಂಡಿದೆ. ಇನ್ನು ಈ ಡಿಸ್‌ಪ್ಲೇಯು 120Hz ರಿಫ್ರೆಶ್ ದರ ಹೊಂದಿದೆ. ಜೊತೆಗೆ 1,500 nits ಗರಿಷ್ಠ ಹೊಳಪು ಮತ್ತು 100 ಪ್ರತಿಶತ ಕವರ್ ಅನ್ನು ಒಳಗೊಂಡಿದೆ.

ಐಕ್ಯೂ 9T 5G ಪ್ರೊಸೆಸರ್ ಬಲ
ಐಕ್ಯೂ 9T 5G ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ ಜೆನ್ 1 ಚಿಪ್‌ಸೆಟ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 ಓಎಸ್ ಬೆಂಬಲ ಇದೆ. ಈ ಫೋನ್ ಎರಡು ವೇರಿಯಂಟ್ ಆಯ್ಕೆಗಳಲ್ಲಿ ಲಾಂಚ್ ಆಗಿದ್ದು, ಅವುಗಳು ಕ್ರಮಾವಗಿ 8GB RAM + 128GB ಮತ್ತು 12GB RAM + 256GB ಸ್ಟೋರೇಜ್ ಆಯ್ಕೆ ಆಗಿವೆ. ಜೊತೆಗೆ ಈ ಫೋನ್ ವಿವೋದ ಆಂತರಿಕ V1+ ಇಮೇಜಿಂಗ್ ಚಿಪ್ ಅನ್ನು ಸಹ ಒಳಗೊಂಡಿದೆ.

ಐಕ್ಯೂ 9T 5G ಕ್ಯಾಮೆರಾ ಸೆನ್ಸಾರ್
ಐಕ್ಯೂ 9T 5G ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್‌ನಲ್ಲಿ ಇದೆ. ಸೆಕೆಂಡರಿ ಕ್ಯಾಮೆರಾವು 13 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಸೆನ್ಸಾರ್ ಸಾಮರ್ಥ್ಯದಲ್ಲಿದ್ದು, ತೃತೀಯ ಕ್ಯಾಮೆರಾವು 12 ಮೆಗಾ ಪಿಕ್ಸೆಲ್ ಟೆಲಿಫೋಟೋ ಲೆನ್ಸ್‌ನೊಂದಿಗೆ ಒಳಗೊಂಡಿದೆ. ಹಾಗೆಯೇ ಸೆಲ್ಫಿ ಕ್ಯಾಮೆರಾವು 16 ಮೆಗಾ ಪಿಕ್ಸೆಲ್ ಸೆನ್ಸಾರ್ ಆಗಿದೆ.

ಐಕ್ಯೂ 9T 5G ಬ್ಯಾಟರಿ ಬ್ಯಾಕ್‌ಅಪ್
ಐಕ್ಯೂ 9T 5G ಸ್ಮಾರ್ಟ್‌ಫೋನ್ 4,700 mAh ಬ್ಯಾಟರಿ ಬ್ಯಾಕ್‌ಅಪ್ ಒಳಗೊಂಡಿದ್ದು, ಜೊತೆಗೆ 120W ವೇಗದ ಚಾರ್ಜಿಂಗ್‌ಗೆ ಸಪೋರ್ಟ್ ಅನ್ನು ಪಡೆದಿದೆ. ಇದು ಕೇವಲ ಎಂಟು ನಿಮಿಷಗಳಲ್ಲಿ 0 ರಿಂದ 50 ಪ್ರತಿಶತದಷ್ಟು ಬ್ಯಾಟರಿಯನ್ನು ತುಂಬುತ್ತದೆ ಎಂದು ಹೇಳಲಾಗಿದೆ. ಇನ್ನು ಈ ಫೋನ್ 5G, Wi-Fi 6, ಬ್ಲೂಟೂತ್ v5, GPS, FM ರೇಡಿಯೋ, USB ಟೈಪ್-C ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಕನೆಕ್ಟಿವಿಟಿ ಆಯ್ಕೆಗಳಮ್ಮು ಒಳಗೊಂಡಿದೆ.

ಇತರೆ ಸೌಲಭ್ಯಗಳು
ಐಕ್ಯೂ 9T 5G ಸ್ಮಾರ್ಟ್‌ಫೋನ್ ಸಂವೇದಕಗಳಲ್ಲಿ ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ಇ-ದಿಕ್ಸೂಚಿ, ಗೈರೊಸ್ಕೋಪ್, ಹಾಲ್ ಸೆನ್ಸಾರ್, ಮ್ಯಾಗ್ನೆಟೋಮೀಟರ್ ಮತ್ತು ಸಾಮೀಪ್ಯ ಸಂವೇದಕ ಸೇರಿವೆ. ದೃಢೀಕರಣಕ್ಕಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕವೂ ಇದೆ.

ಬೆಲೆ ಎಷ್ಟು ಮತ್ತು ಲಭ್ಯತೆ
ಭಾರತದಲ್ಲಿ ಐಕ್ಯೂ 9T 5G ಎರಡು ವೇರಿಯಂಟ್‌ಗಳಲ್ಲಿ ಬಿಡುಗಡೆ ಆಗಿದೆ. 8GB RAM + 128GB ಸ್ಟೋರೇಜ್ ಮಾದರಿಗೆ 49,999 ರೂ. ಆಗಿದೆ. ಹಾಗೆಯೇ 12GB RAM + 256GB ಸ್ಟೋರೇಜ್ ಮಾದರಿಯ ಬೆಲೆಯು 59,999 ರೂ. ಆಗಿದೆ. ಇನ್ನು ಈ ಫೋನ್ ಆಲ್ಫಾ ಮತ್ತು ಲೆಜೆಂಡ್ ಬಣ್ಣ ಆಯ್ಕೆಗಳಲ್ಲಿ ಲಭ್ಯ. ಪ್ರಸ್ತುತ ಅಮೆಜಾನ್ ಮತ್ತು ಕಂಪನಿಯ ವೆಬ್‌ಸೈಟ್ ಮೂಲಕ ಖರೀದಿಸಲು ಲಭ್ಯವಿದೆ. ಐಸಿಐಸಿಐ ಬ್ಯಾಂಕ್‌ನ ಕಾರ್ಡ್‌ಗಳನ್ನು ಬಳಸಿಕೊಂಡು ಸ್ಮಾರ್ಟ್‌ಫೋನ್ ಖರೀದಿಸುವ ಗ್ರಾಹಕರು 4,000 ರೂ. ರಿಯಾಯಿತಿಯೂ ಇದೆ.

ಐಕ್ಯೂ 9 ಪ್ರೊ ಸ್ಮಾರ್ಟ್‌ಫೋನ್ ಫೀಚರ್ಸ್
ಸಂಸ್ಥೆಯು ಇತ್ತೀಚಿಗೆ ಬಿಡುಗಡೆ ಮಾಡಿರುವ ಐಕ್ಯೂ 9 ಪ್ರೊ ಸ್ಮಾರ್ಟ್‌ಫೋನ್ 6.78 ಇಂಚಿನ 2K E5 ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 3D ಕರ್ವ್ಡ್ ಪ್ರೊಟೆಕ್ಷನ್ ಅನ್ನು ಹೊಂದಿದ್ದು, ಕಡಿಮೆ-ತಾಪಮಾನದ ಪಾಲಿಕ್ರಿಸ್ಟಲಿನ್ ಆಕ್ಸೈಡ್ (LTPO) 2.0 ತಂತ್ರಜ್ಞಾನವನ್ನು ಆಧರಿಸಿದೆ. ಇನ್ನು ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಅನ್ನು ಸಕ್ರಿಯಗೊಳಿಸುತ್ತದೆ. ಇದು ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 8 Gen 1 SoC ಪ್ರೊಸೆಸರ್ ಬಲವನ್ನು ಹೊಂದಿದ್ದು, ಆಂಡ್ರಾಯ್ಡ್ 12 ನಲ್ಲಿ ಫನ್‌ಟೌಚ್ OS 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 12GB RAM ಮತ್ತು 256GB ಇಂಟರ್ ಸ್ಟೋರೇಜ್ ಅನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಹಾಗೆಯೇ ಈ ಫೋನ್ 4,700 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 120W ಫ್ಲ್ಯಾಶ್‌ಚಾರ್ಜ್ ಮತ್ತು 50W ವೈರ್‌ಲೆಸ್ ಫ್ಲ್ಯಾಶ್‌ಚಾರ್ಜ್ ವೇಗದ ಚಾರ್ಜಿಂಗ್ ಬೆಂಬಲಿಸಲಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
44,999
-
15,999
-
20,449
-
7,332
-
18,990
-
31,999
-
54,999
-
17,091
-
17,091
-
13,999
-
31,830
-
31,499
-
26,265
-
24,960
-
21,839
-
15,999
-
11,570
-
11,700
-
7,070
-
7,086