ಐಕ್ಯೂ ನಿಯೋ 7 5G ಸ್ಮಾರ್ಟ್‌ಫೋನ್‌ ಲಾಂಚ್; ಟ್ರಿಪಲ್‌ ಕ್ಯಾಮೆರಾ ಆಯ್ಕೆ!

|

ಐಕ್ಯೂ (iQOO) ನಿಯೋ ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿ ತನ್ನದೇ ಆದ ಹೆಸರು ಗಳಿಸಿಕೊಂಡಿದೆ. ವಿವಿಧ ಫೀಚರ್ಸ್‌ ಇರುವ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿರುವುದರ ಜೊತೆಗೆ ಇದೀಗ ಮತ್ತೆ ಹೊಸ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9000+ SoC ನಿಂದ ಕಾರ್ಯನಿರ್ವಹಿಸಲಿದೆ.

ಐಕ್ಯೂ ನಿಯೋ

ಹೌದು, ಐಕ್ಯೂ ನಿಯೋ ಸರಣಿಯಲ್ಲಿ ಹೊಸ ಐಕ್ಯೂ ನಿಯೋ 7 5G ಸ್ಮಾರ್ಟ್‌ಫೋನ್ (iQOO Neo 7 5G) ಚೀನಾದಲ್ಲಿ ಬಿಡುಗಡೆ ಆಗಿದೆ. ಈ ಸ್ಮಾರ್ಟ್‌ಫೋನ್‌ ಈ ಹಿಂದೆ ಬಿಡುಗಡೆಯಾಗಿದ್ದ ನಿಯೋ 6 5G ಸ್ಮಾರ್ಟ್‌ಫೋನ್‌ ನ ಫೀಚರ್ಸ್‌ ಹೋಲುತ್ತದೆಯಾದರೂ ಸ್ವಲ್ಪ ಭಿನ್ನತೆ ಕಾಣಬಹುದಾಗಿದೆ. ಈ ಸ್ಮಾರ್ಟ್‌ಫೋನ್ ನಾಲ್ಕು ರೀತಿಯ ಸ್ಟೋರೇಜ್‌ ವೇರಿಯಂಟ್‌ನಲ್ಲಿ ಲಭ್ಯ ಇದ್ದು, ಇದು ಆಂಡ್ರಾಯ್ಡ್ 13 ಆಧಾರಿತ ಮೂಲ ಓಎಸ್ನಲ್ಲಿ ರನ್‌ ಆಗಲಿದೆ. ಹಾಗಿದ್ರೆ ಇದರ ಇನ್ನಿತರೆ ಫೀಚರ್ಸ್‌ ಹಾಗೂ ಬೆಲೆಯನ್ನು ಈ ಲೇಖನದಲ್ಲಿ ನೀಡಲಾಗಿದೆ, ಓದಿರಿ.

ಡಿಸ್‌ಪ್ಲೇ ವಿವರ

ಡಿಸ್‌ಪ್ಲೇ ವಿವರ

ಈ ಸ್ಮಾರ್ಟ್‌ಫೋನ್ 6.78 ಇಂಚಿನ E5 ಅಮೋಲೆಡ್ ಫುಲ್ HD+ ಡಿಸ್‌ಪ್ಲೇಯನ್ನು ಹೊಂದಿದ್ದು, 1080x2400 ಪಿಕ್ಸೆಲ್ ರೆಸಲ್ಯೂಶನ್ ಆಯ್ಕೆ ಪಡೆದಿದೆ. ಹಾಗೆಯೇ 120Hz ರಿಫ್ರೆಶ್ ರೇಟ್‌ ಹಾಗೂ 1500nits ಬ್ರೈಟ್‌ನೆಟ್‌ ನೀಡಲಿದೆ. ಇದರೊಂದಿಗೆ ಡಿಸ್‌ಪ್ಲೇ ಮೇಲ್ಭಾಗದ ಮಧ್ಯದಲ್ಲಿ ಹೋಲ್-ಪಂಚ್ ಕಟೌಟ್ ರಚನೆ ಪಡೆದಿದೆ.

ಪ್ರೊಸೆಸರ್‌ ವಿವರ

ಪ್ರೊಸೆಸರ್‌ ವಿವರ

ಐಕ್ಯೂ ನಿಯೋ 7 5G ಮೀಡಿಯಾ ಟೆಕ್‌ನ ಹೊಸ ಸ್ಮಾರ್ಟ್‌ಫೋನ್ ಚಿಪ್ ಮೀಡಿಯಾ ಟೆಕ್ ಡೈಮೆನ್ಸಿಟಿ 9000+ SoC ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ ಪ್ರಮುಖ SoC 6nm ಪ್ರಕ್ರಿಯೆಯನ್ನು ಆಧರಿಸಿದ್ದು, 3.05GHz ನ ಗರಿಷ್ಠ ವೇಗವನ್ನು ಪಡೆದುಕೊಂಡಿದೆ. ಪ್ರೊಸೆಸರ್‌ನ ವರ್ಧಿತ ಕಾರ್ಯಕ್ಷಮತೆಗಾಗಿ ಕಸ್ಟಮ್-ಟ್ಯೂನ್ ಮಾಡಲಾಗಿದೆ. ಆಂಡ್ರಾಯ್ಡ್ 13 ಆಧಾರಿತ ಮೂಲ ಓಎಸ್ನಲ್ಲಿ ಈ ಸ್ಮಾರ್ಟ್‌ಫೋನ್ ರನ್‌ ಆಗಲಿದೆ. ಹಾಗೆಯೇ ಇದು ನಾಲ್ಕು ಸ್ಟೋರೇಜ್‌ ಆಯ್ಕೆಗಳಾದ 8GB + 128GB, 8GB + 256GB, 12GB + 256GB ಹಾಗೂ 12GB + 512GB ನಲ್ಲಿ ಲಭ್ಯ ಇದೆ.

ಟ್ರಿಪಲ್ ಕ್ಯಾಮೆರಾ ರಚನೆ

ಟ್ರಿಪಲ್ ಕ್ಯಾಮೆರಾ ರಚನೆ

ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಹೊಂದಿದ್ದು, ಚೌಕಾಕಾರದ ಕ್ಯಾಮೆರಾ ಮಾಡ್ಯೂಲ್‌ನಲ್ಲಿ 50MP ಸೋನಿ ಮುಖ್ಯ ಕ್ಯಾಮೆರಾ, 8MP ಅಲ್ಟ್ರಾವೈಡ್ ಕ್ಯಾಮೆರಾ ಮತ್ತು 2MP ಮ್ಯಾಕ್ರೋ ಸೆನ್ಸರ್ ಹೊಂದಿದೆ. ಹಾಗೆಯೇ ಸೆಲ್ಫಿಗಾಗಿ 16MP ಮುಂಭಾಗದ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ.

ಬ್ಯಾಟರಿ ಹಾಗೂ ಇತರೆ

ಬ್ಯಾಟರಿ ಹಾಗೂ ಇತರೆ

ಈ ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಇದು 120W ವೇಗದ ಚಾರ್ಜಿಂಗ್ ಆಯ್ಕೆಯನ್ನು ಬೆಂಬಲಿಸಲಿದೆ. ಕನೆಕ್ಟಿವಿಟಿ ವಿಚಾರದಲ್ಲಿ ಬ್ಲೂಟೂತ್‌, ವೈ-ಫೈ ಹಾಗೂ ಇತರ ಪ್ರಮುಖ ಫೀಚರ್ಸ್ ಪಡೆದಿದೆ.

ಬೆಲೆ ಎಷ್ಟು?

ಬೆಲೆ ಎಷ್ಟು?

8GB of RAM ಹಾಗೂ 128GB ಆಂತರಿಕ ಸಂಗ್ರಹಣೆಯ ವೇರಿಯಂಟ್‌ಗೆ ಚೀನಾದಲ್ಲಿ CNY 2699 ಇದೆ. (ಭಾರತೀಯ ಬೆಲೆಯಲ್ಲಿ ಸುಮಾರು 30,900ರೂ. ಗಳು), ಹಾಗೆಯೇ 8GB + 256GB ವೇರಿಯಂಟ್‌ಗೆ CNY 2999 (ಸುಮಾರು 34,300ರೂ. ಗಳೂ) 12GB + 256GB ವೇರಿಯಂಟ್‌ಗೆ CNY 3299 (ಸುಮಾರು 37,700ರೂ. ಗಳು) ಹಾಗೂ 12GB +512GB ಸ್ಟೋರೇಜ್ ವೇರಿಯಂಟ್‌ಗೆ CNY 3599 (ಸುಮಾರು 41,200ರೂ. ಗಳು) ಬೆಲೆ ನಿಗದಿ ಮಾಡಲಾಗಿದೆ.

ಬಣ್ಣ ಹಾಗೂ ಲಭ್ಯತೆ

ಬಣ್ಣ ಹಾಗೂ ಲಭ್ಯತೆ

ಐಕ್ಯೂ ನಿಯೋ 7 5G ಸ್ಮಾರ್ಟ್‌ಫೋನ್ ಕಿತ್ತಳೆ ಬಣ್ಣ, ನೀಲಿ ಮತ್ತು ಕಪ್ಪು ಬಣ್ಣಗಳಲ್ಲಿ ಲಭ್ಯವಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್‌ ಪ್ರಸ್ತುತ ಚೀನಾ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಭಾರತದಲ್ಲಿ ಹಾಗೂ ಇತರೆ ದೇಶಗಳಲ್ಲಿ ಕೆಲವೇ ದಿನಗಳಲ್ಲಿ ಲಭ್ಯವಿರಲಿದೆ ಎನ್ನಲಾಗಿದೆ.

Best Mobiles in India

English summary
iQOO Electronics has made a name for itself among gadget manufacturers. Now iQOO Neo 7 5G smartphone has been launched, its details are given here.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X