ಭಾರತದಲ್ಲಿ ಐಕ್ಯೂ Z5 ಸ್ಮಾರ್ಟ್‌ಫೋನ್‌ ಬಿಡುಗಡೆ! ಫೀಚರ್ಸ್‌ ಹೇಗಿದೆ?

|

ಟೆಕ್‌ ವಲಯದಲ್ಲಿ ಲಭ್ಯವಿರುವ ಜನಪ್ರಿಯ ಸ್ಮಾರ್ಟ್‌ಫೋನ್‌ ಬ್ರಾಂಡ್‌ಗಳಲ್ಲಿ ಐಕ್ಯೂ ಕಂಪೆನಿ ಕೂಡ ಒಂದಾಗಿದೆ. ಇನ್ನು ಐಕ್ಯೂ ಕಂಪೆನಿ ಈಗಾಗಲೇ ಹಲವು ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ. ಸದ್ಯ ಇದೀಗ ತನ್ನ ಹೊಸ ಐಕ್ಯೂ Z5 ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 778G SoC ಪ್ರೊಸೆಸರ್‌ ಬಲವನ್ನು ಒಳಗೊಂಡಿದೆ. ಜೊತೆಗೆ ಈ ಫೋನ್‌ 120Hz ರಿಫ್ರೆಶ್ ರೇಟ್‌ ಹೊಂದಿರುವ ಪಂಚ್-ಹೋಲ್‌ ಡಿಸ್‌ಪ್ಲೇ ಹೊಂದಿದೆ.

ಐಕ್ಯೂ

ಹೌದು, ಐಕ್ಯೂ ಕಂಪೆನಿ ಭಾರತದಲ್ಲಿ ಹೊಸ ಐಕ್ಯೂ Z5 ಸ್ಮಾರ್ಟ್‌ಫೋನ್‌ ಲಾಂಚ್‌ ಮಾಡಿದೆ. ಇದು ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಪಡೆದುಕೊಂಡಿದೆ. ಜೊತೆಗೆ ಈ ಫೋನ್‌ 5,000mAh ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, 44W ಫ್ಲಾಶ್ ಚಾರ್ಜ್ ಬೆಂಬಲಿಸಲಿದೆ. ಇದಲ್ಲದೆ ಫೇಸ್ ವೇಕ್ ಫೆಸಿಯಲ್‌ ರೆಕಗ್ನಿಷನ್ ಅನ್ನು ಸಹ ಬೆಂಬಲಿಸಲಿದೆ. ಇದು ಇದೇ ಅಕ್ಟೋಬರ್ 3 ರಿಂದ ಆರಂಭವಾಗುವ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ಮಾರಾಟವಾಗಲಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ಫೀಚರ್ಸ್‌ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಒದಿರಿ.

ಡಿಸ್‌ಪ್ಲೇ ರಚನೆ

ಡಿಸ್‌ಪ್ಲೇ ರಚನೆ

ಐಕ್ಯೂ Z5 ಸ್ಮಾರ್ಟ್‌ಫೋನ್‌ 1,080x2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.67-ಇಂಚಿನ ಫುಲ್‌ ಹೆಚ್‌ಡಿ + ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಈ ಡಿಸ್‌ಪ್ಲೇ 240Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಹೊಂದಿದೆ. ಜೊತೆಗೆ ಈ ಡಿಸ್‌ಪ್ಲೇ 20:9 ರಚನೆ ಅನುಪಾತ, ಡಿಸಿಐ-ಪಿ 3 ಕಲರ್ ಹರವು ಮತ್ತು ಹೆಚ್‌ಡಿಆರ್ 10 ಬೆಂಬಲವನ್ನು ಹೊಂದಿದೆ. ಇದು ಟಿಯುವಿ ರೀನ್ಲ್ಯಾಂಡ್ ನಿಂದ ಪ್ರಮಾಣೀಕರಿಸಲ್ಪಟ್ಟಿದೆ.

ಪ್ರೊಸೆಸರ್‌ ಯಾವುದು?

ಪ್ರೊಸೆಸರ್‌ ಯಾವುದು?

ಇದು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 778G SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್ 11 ಆಧಾರಿತ ಒರಿಜಿನ್ ಓಎಸ್ 1.0 ನಲ್ಲಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ 12GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ.

ಕ್ಯಾಮೆರಾ ಹೇಗಿದೆ?

ಕ್ಯಾಮೆರಾ ಹೇಗಿದೆ?

ಐಕ್ಯೂ Z5 ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಸೆನ್ಸರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಇನ್ನು ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಡ್ಯುಯಲ್ ವ್ಯೂ ವೀಡಿಯೋ, ಸೂಪರ್ ನೈಟ್ ಮೋಡ್, ಪೋರ್ಟ್ರೇಟ್ ಮೋಡ್ ಅನ್ನು ಹೊಂದಿವೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಐಕ್ಯೂ Z5 ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 44W ಫ್ಲ್ಯಾಶ್ ಚಾರ್ಜ್ ಫಾಸ್ಟ್ ಚಾರ್ಜಿಂಗ್ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಯುಎಸ್‌ಬಿ ಟೈಪ್-ಸಿ ಪೋರ್ಟ್, ಬ್ಲೂಟೂತ್ v5.2, ಯುಎಸ್‌ಬಿ ಒಟಿಜಿ, ಟ್ರೈ-ಬ್ಯಾಂಡ್ ವೈ-ಫೈ 2.4GHz, 5.1GHz, ಮತ್ತು 5.8GHz ಬ್ಯಾಂಡ್‌ಗಳು, GPS ಮತ್ತು 3.5mm ಆಡಿಯೋ ಜ್ಯಾಕ್ ಸೇರಿವೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಐಕ್ಯೂ Z5 ಸ್ಮಾರ್ಟ್‌ಫೋನ್‌ ಭಾರತದಲ್ಲಿ 8GB RAM + 128GB ಸ್ಟೋರೇಜ್‌ಗಾಗಿ 23,990ರೂ ಮತ್ತು 12GB RAM + 256GB ಸ್ಟೋರೇಜ್ ಆಯ್ಕೆಗಳಿಗಾಗಿ 26,990ರೂ ಬೆಲೆಯನ್ನು ಹೊಂದಿದೆ. ಇದು ಆರ್ಕ್ಟಿಕ್ ಡಾನ್ ಮತ್ತು ಮಿಸ್ಟಿಕ್ ಸ್ಪೇಸ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇನ್ನು ಈ ಫೋನ್ iQoo.com ಮತ್ತು Amazon.in ನಲ್ಲಿ ಅಕ್ಟೋಬರ್ 3 ರಿಂದ ಅಂದರೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ಮಾರಾಟಕ್ಕೆ ಬರಲಿದೆ. ಲಾಂಚ್ ಆಫರ್ ನಲ್ಲಿ ಹೆಚ್‌ಡಿಎಫ್‌ಸಿ ಬ್ಯಾಂಕ್ ಡೆಬಿಟ್ ಮತ್ತು ಇಎಂಐ ವಹಿವಾಟು ಸೇರಿದಂತೆ ಕ್ರೆಡಿಟ್ ಕಾರ್ಡ್‌ಗಳಲ್ಲಿ 1,500 ರಿಯಾಯಿತಿ ಪಡೆಯಬಹುದಾಗಿದೆ.

Best Mobiles in India

English summary
iQoo Z5 has backed all this up with a 5,000mAh battery with 44W Flash Charge fast charging support.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X