Subscribe to Gizbot

ರೈಲ್ವೆ ಟಿಕೆಟ್ ಬುಕ್‌ ಮಾಡಲು ಇನ್ಮುಂದೆ ಪೇಟಿಎಂ, ಏರ್‌ಟೆಲ್‌ ಮನಿ: ಕ್ಯಾಶ್‌ಲೆಸ್, ಪೇಪರ್‌ಲೆಸ್,

Written By:

ಭಾರತೀಯ ರೈಲು ಸೇವೆ ಶೀಘ್ರದಲ್ಲಿ ಪೇಪರ್‌ಲೆಸ್‌, ಕ್ಯಾಶ್‌ಲೆಸ್ ಟಿಕೆಟ್ ಬುಕ್‌ ಮಾಡುವ ಕ್ರಮವನ್ನು ಕೈಗೊಳ್ಳಲಿದೆ. ಅಂದರೆ ಪ್ರಯಾಣಿಕರು ಇನ್ನುಮುಂದೆ ನೇರವಾಗಿ ಕಾಯ್ದಿರಿಸದ ರೈಲು ಟಿಕೆಟ್‌ ಅನ್ನು ಇ-ವ್ಯಾಲೆಟ್‌ಗಳಾದ ಪೇಟಿಎಂ, ಏರ್‌ಟೆಲ್‌ ಮನಿ, ಜಿಯೋ ಮನಿ, ಫ್ರೀಚಾರ್ಜ್‌ ಮತ್ತು ಇತರೆ -ವ್ಯಾಲೆಟ್‌ಗಳ ಮುಖಾಂತರ ಟಿಕೆಟ್ ಬುಕ್ ಮಾಡಬಹುದು.

ಭಾರತೀಯ ರೈಲ್ವೆ ಮತ್ತು ಪ್ರವಾಸೋದ್ಯಮ ಕಾರ್ಪೊರೇಶನ್(IRCTC), ಕ್ಯಾಶ್‌ಲೆಸ್ ಮತ್ತು ಪೇಪರ್‌ಲೆಸ್‌ ಟಿಕೆಟ್ ಬುಕ್ ಮಾಡುವ ವ್ಯವಸ್ಥೆ ಜಾರಿಗೊಳಿಸುತ್ತಿರುವುದು ಬಹುದೊಡ್ಡ ಬೆಳವಣಿಗೆ ಆಗಿದೆ. ಭಾರತೀಯ ರೈಲು ಸೇವೆಯ ಈ ಕ್ರಮದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಕಾಯ್ದಿರಿಸದ ಟಿಕೆಟ್ 'ಟ್ರಂಪ್ ಕಾರ್ಡ್' ಹೊಂದಲಿದೆ.

ಕಾಯ್ದಿರಿಸದ ಟಿಕೆಟ್ 'ಟ್ರಂಪ್ ಕಾರ್ಡ್' ಹೊಂದಲಿದೆ.

ಭಾರತೀಯ ರೈಲು ಮಾರ್ಗವು ದಿನವೊಂದಕ್ಕೆ 2 ಕೋಟಿಗಿಂತಲೂ ಹೆಚ್ಚಿನ ಪ್ರಯಾಣಿಕರ ಸಾಗಾಟ ನಡೆಸುತ್ತಿದೆ. ಈ ಜನಸಂಖ್ಯೆಯಲ್ಲಿ ಶೇ.6 ರಷ್ಟು ಪ್ರಯಾಣಿಕರು ಮಾತ್ರ ಟಿಕೆಟ್ ಬುಕ್ ಮಾಡುವ ಆಯ್ಕೆ ಹೊಂದಿದ್ದಾರೆ. ಉಳಿದ ಶೇ.94 ರಷ್ಟು ಟಿಕೆಟ್‌ಗಳು ಕಾಯ್ದಿರಿಸದ ಟಿಕೆಟ್‌ಗಳಾಗಿವೆ. ಆದ್ದರಿಂದ ಭಾರತೀಯ ರೈಲ್ವೆ ಹೆಚ್ಚಿನದಾಗಿ ಪೇಪರ್‌ಲೆಸ್ ಕ್ರಮಕ್ಕೆ ವರ್ಗಾವಣೆ ಬಯಸುತ್ತಿದೆ.

ಭಾರತೀಯ ರೈಲ್ವೆಯ ಕಾಯ್ದಿರಿಸದ ಟಿಕೆಟ್‌ಗಳನ್ನು ಮೊಬೈಲ್ ವ್ಯಾಲೆಟ್‌ಗಳ ಮೂಲಕ ಬುಕ್ ಮಾಡಬಹುದು.

 IRCTC ಸ್ವಂತ ಆಪ್‌ ಅನುತ್ತೀರ್ಣ

IRCTC ಸ್ವಂತ ಆಪ್‌ ಅನುತ್ತೀರ್ಣ

ಕಳೆದ ವರ್ಷ ಭಾರತೀಯ ರೈಲ್ವೆ ಸ್ವಂತ ಆಪ್‌ ಅನ್ನು, ಕ್ಯಾಶ್‌ಲೆಸ್‌, ಪೇಪರ್‌ಲೆಸ್‌ ಟಿಕೆಟ್‌ ಬುಕ್ಕಿಂಗ್‌ಗಾಗಿ ಲಾಂಚ್‌ ಮಾಡಿತ್ತು. ಈಗಲೂ ಸಹ ಈ ಆಪ್‌ ಅನ್ನು ಕಾಯ್ದಿರಿಸದ ಟಿಕೆಟ್‌ಗಳನ್ನು ಚೆನೈ, ಮುಂಬೈ ಮತ್ತು ದೆಹಲಿ-ಪಾಲ್ವಾಲ್‌ ಪ್ರದೇಶಗಳಂತಹ ಉಪ-ನಗರ ಪ್ರದೇಶಗಳಲ್ಲಿ, ಬುಕ್‌ ಮಾಡಲು ಬಳಸಬಹುದು.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

UTSOnMobile ಆಪ್‌

UTSOnMobile ಆಪ್‌

ಈ ವರ್ಷದ ಆರಂಭದಲ್ಲಿಯೂ ಭಾರತೀಯ ರೈಲ್ವೆ UTSOnMobile ಆಪ್‌ ಅನ್ನು ಲಾಂಚ್‌ ಮಾಡಿದೆ. ಈ ಆಪ್‌ ಪ್ರಯಾಣಿಕರು ತಮ್ಮ ಟಿಕೆಟ್‌ ಅನ್ನು ಆಪ್‌ಗೆ ಡೌನ್‌ಲೋಡ್‌ ಮಾಡಿಕೊಳ್ಳಲು, ಮತ್ತು ಪ್ರಿಂಟ್‌ಔಟ್ ಪಡೆಯಲು ಅವಕಾಶ ನೀಡುತ್ತದೆ.

ರೈಲ್ವೆ ಆಪ್‌

ರೈಲ್ವೆ ಆಪ್‌

ರೈಲ್ವೆ ಆಪ್‌, ಪ್ರಯಾಣಿಕರಿಂದ ಮೊಬೈಲ್‌ ಆಪ್‌ ಬಳಸಿ ಕಾಯ್ದಿರಿಸದ ಟಿಕೆಟ್ ಬುಕ್ ಮಾಡಲು ಸಕಾರಾತ್ಮಕವಾದ ಉತ್ಸಾಹವನ್ನು ಪ್ರಯಾಣಿಕರಿಂದ ಪಡೆಯದೇ ಅನುತ್ತೀರ್ಣಗೊಂಡಿದೆ. ಇದಕ್ಕೆ ಹಲವು ಕಾರಣಗಳು ಇವೆ. ಮುಂದೆ ಓದಿರಿ

ರೈಲ್ವೆ ಆಪ್‌ ಅನುತ್ತೀರ್ಣಗೊಳ್ಳಲು ಕಾರಣಗಳು

ರೈಲ್ವೆ ಆಪ್‌ ಅನುತ್ತೀರ್ಣಗೊಳ್ಳಲು ಕಾರಣಗಳು

* ಪ್ರಾಥಮಿಕವಾಗಿ ಭಾರತೀಯ ರೈಲ್ವೆಯ ಸ್ವಂತ ಇ-ವ್ಯಾಲೆಟ್ ಅನ್ನು ಅಗತ್ಯವಾಗಿ ಟಿಕೆಟ್ ಬುಕ್‌ ಮಾಡಲು ಬಳಸಬೇಕಿರುವುದು. ಟಿಕೆಟ್ ಬುಕ್‌ ಮಾಡಲು ಮೊದಲಿಗೆ IRCTC ಇ-ವ್ಯಾಲೆಟ್‌ಗೆ ಹಣವನ್ನು ಅಪ್‌ಲೋಡ್ ಮಾಡಿ ನಂತರ ಪ್ರಯಾಣಿಕರು ಟಿಕೆಟ್ ಬುಕ್ ಮಾಡಬೇಕಿರುವುದು

* ಹಲವರಿಗೆ ಟೆಕ್ನಾಲಜಿ ಬಳಸಲು ಬರದಿರುವುದು ಮತ್ತು ಗ್ರಾಮೀಣ ಭಾಗದ ಜನರು.

ಪೇಟಿಎಂ ಮತ್ತು ಏರ್‌ಟೆಲ್‌ ಮನಿ ಆಪ್‌ಗಳು ಏಕೆ?

ಪೇಟಿಎಂ ಮತ್ತು ಏರ್‌ಟೆಲ್‌ ಮನಿ ಆಪ್‌ಗಳು ಏಕೆ?

ಪ್ರಸ್ತುತದಲ್ಲಿ ಭಾರತೀಯ ರೈಲು ಸೇವೆ ಪೇಟಿಎಂ, ಏರ್‌ಟೆಲ್ ಮನಿ, ಫ್ರೀಚಾರ್ಜ್‌ ಆಪ್‌ಗಳೊಂದಿಗೆ ಪಾಲುದಾರಿಗೆ ಹೊಂದಲು ಪ್ರಸ್ತಾಪಿಸಿದೆ. ಕಾರಣ ಪೇಟಿಎಂ, ಏರ್‌ಟೆಲ್‌ ಮನಿ, ಫ್ರೀಚಾರ್ಜ್‌ನಂತಹ ಆಪ್‌ಗಳನ್ನು ಜನರು ಸಿನಿಮಾ, ಕಾರ್ಯಕ್ರಮಗಳನ್ನು ಬುಕ್ ಮಾಡಲು, ಬಿಲ್ ಪೇ ಮಾಡಲು ಬಳಸುತ್ತಾರೆ. ಆದ್ದರಿಂದ ಈ ಆಪ್‌ಗಳಲ್ಲಿ ರೈಲ್ವೆ ಟಿಕೆಟ್ ಬುಕ್ ಮಾಡುವ ಅವಕಾಶವನ್ನು ಅಭಿವೃದ್ದಿಪಡಿಸಿದರೆ, ಕಾಯ್ದಿರಿಸದ ಟಿಕೆಟ್‌ ಬುಕ್‌ ಮಾಡಲು ಪ್ರಯಾಣಿಕರು ಮುಂದಾಗುತ್ತಾರೆ ಎಂದು ಭಾವಿಸಲಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
IRCTC Jumps Into Cashless, Paperless Mode Tickets Booked Via eWallets Like Paytm, Airtel Money. To know more about this visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot