ರೈಲ್ವೆ ಆಪ್‌ನಲ್ಲಿ ಅಶ್ಲೀಲ ಜಾಹಿರಾತು ಬಗ್ಗೆ ಟ್ವಿಟ್ ಮಾಡಿ ಮರ್ಯಾದೆ ಕಳೆದುಕೊಂಡ!

|

ಇಂಟರ್‌ನೆಟ್ ಬಗ್ಗೆ ಸರಿಯಾಗಿ ತಿಳಿಯದಿದ್ದರೆ ಹೇಗೆಲ್ಲಾ ಮುಜುಗರ ಅನುಭವಿಸಬೇಕಾಗುತ್ತದೆ ಎಂಬುದಕ್ಕೆ ಇಂದಿನ ಒಂದು ಸ್ಟೋರಿ ಉದಾಹರಣೆಯಾಗಬಹುದು. ಏಕೆಂದರೆ, ಆನ್‌ಲೈನಿನಲ್ಲಿ ರೈಲ್ವೆ ಟಿಕೆಟ್ ಬುಕ್ ಮಾಡಿದ್ದ ವ್ಯಕ್ತಿಯೋರ್ವನು IRCTC ಸೇವೆಯನ್ನು ಕುಟುಕುವಂತಹ ಒಂದು ಟೀಕೆಯನ್ನು ಮಾಡಿ ಟ್ವಿಟ್ ಮಾಡಿದ್ದ. ಇದಕ್ಕೆ ಉತ್ತರಿಸಿದ IRCTC ಇಲಾಖೆ, ಆತ ಇನ್ನೆಂದೂ ಇಂತಹ ತಪ್ಪು ಮಾಡಲೇಬಾರದು ಎನ್ನುವಷ್ಟು ತಿರುಗೇಟು ನೀಡಿದೆ. ಇದು ಸಾಮಾಜಿಕ ತಾಣಗಳು ಮತ್ತು ಇಂಟರ್‌ನೆಟ್ ಪ್ರಪಂಚದಲ್ಲಿ ವೈರಲ್ ಆಗಿದೆ.

ಹೌದು, ವ್ಯಕ್ತಿಯೋರ್ವ ರೈಲ್ವೆಯ ಅಧಿಕೃತ ವೆಬ್‌ಸೈಟ್ IRCTC ಮೂಲಕ ರೈಲ್ವೆ ಟಿಕೆಟ್ ಬುಕಿಂಗ್ ಮಾಡಿದ್ದ. ಈ ವೇಳೆ ಆ ವೆಬ್‌ಸೈಟ್‌ನಲ್ಲಿ ಅಶ್ಲೀಲ ಮತ್ತು ಪೋಲಿ ಜಾಹೀರಾತುಗಳು ಕಾಣಿಸಿಕೊಂಡಿದ್ದವು. ಇದರಿಂದ ರೈಲ್ವೆ ಇಲಾಖೆ ಮೇಲೆ ಸಿಟ್ಟಾದ ಆ ವ್ಯಕ್ತಿ, ''IRCTC ವೆಬ್‌ಸೈಟ್‌ನಲ್ಲಿ ಅಶ್ಲೀಲ ಮತ್ತು ಪೋಲಿ ಜಾಹೀರಾತುಗಳುಪದೇ ಪದೇ ಕಾಣಿಸುತ್ತವೆ. ಇದರಿಂದ ನಿಜಕ್ಕೂ ಮುಜುಗರ ಮತ್ತು ಕಿರಿಕಿರಿಪಡುವಂತಾಗಿದೆ" ಎಂದು ರೈಲ್ವೆ ಸಚಿವಾಲಯ, IRCTC ಮತ್ತು ರೈಲ್ವೆ ಸಚಿವರಿಗೂ ಅದನ್ನು ಟ್ಯಾಗ್ ಕೂಡ ಮಾಡಿದ್ದ.

ರೈಲ್ವೆ ಆಪ್‌ನಲ್ಲಿ ಅಶ್ಲೀಲ ಜಾಹಿರಾತು ಬಗ್ಗೆ ಟ್ವಿಟ್ ಮಾಡಿ ಮರ್ಯಾದೆ ಕಳೆದುಕೊಂಡ!

ಇದಕ್ಕೆ ಉತ್ತರಿಸಿದ ರೈಲ್ವೆ ಇಲಾಖೆ, ''IRCTC ವೆಬ್‌ಸೈಟ್‌ನಲ್ಲಿ ಇಂತಹ ಅಶ್ಲೀಲ ಜಾಹಿರಾತುಗಳು ಕಾಣಿಸಿಕೊಳ್ಳಲು ನೀವೇ ಕಾರಣ ಎಂಬುದನ್ನು ಟೀಕೆ ಮಾಡಿದ್ದ ವ್ಯಕ್ತಿಗೆ ತಿಳಿ ಹೇಳಿದೆ. ಬುದ್ದಿವಾದ ಹೇಳುವ ನೆಪದಲ್ಲಿ ಅರ್ಧಂಬರ್ಧ ಇಂಟರ್‌ನೆಟ್ ಮಾಹಿತಿ ಇದ್ದರೆ ಏನಾಗುತ್ತದೆ ಎಂಬುದನ್ನು ಸಹ ಹೇಳಿ ಪಾಠ ಕಲಿಸಿದೆ. ಹಾಗಾದರೆ, ಏನಿದು ವೈರಲ್ ಸ್ಟೋರಿ?, ರೈಲ್ವೆ ಇಲಾಖೆಯ IRCTC ವೆಬ್‌ಸೈಟ್‌ನಲ್ಲಿ ಅಶ್ಲೀಲ ಜಾಹೀರಾತುಗಳು ಕಾಣಿಸಿದ್ದು ಹೇಗೆ? ಎಂಬೆಲ್ಲಾ ಅಂಶಗಳನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಏನಿದು ವೈರಲ್ ಆಗಿರುವ ಘಟನೆ?

ಏನಿದು ವೈರಲ್ ಆಗಿರುವ ಘಟನೆ?

ಆನಂದ ಕುಮಾರ್‌ ಎಂಬ ಯುವಕ ಐಆರ್‌ಸಿಟಿಸಿ ಟಿಕೆಟ್ ಬುಕಿಂಗ್ ಸೈಟ್‌ನಲ್ಲಿ ನಿರಂತರವಾಗಿ ಆಕ್ಷೇಪಾರ್ಹ ಮತ್ತು ಅಶ್ಲೀಲ ಜಾಹೀರಾತುಗಳು ಬರುತ್ತಿವೆ. ಇದರಿಂದ ನಮಗೆ ತುಂಬಾ ಮುಜುಗರವಾಗುತ್ತಿದೆ ಮತ್ತು ಹಿಂಸೆಯಾಗುತ್ತಿದೆ. ಈ ಬಗ್ಗೆ ಭಾರತೀಯ ರೈಲ್ವೆ ಇಲಾಖೆ, ಐಆರ್‌ಸಿಟಿಸಿ ಕಚೇರಿ ಮತ್ತು ರೈಲ್ವೆ ಮಂತ್ರಿ ಪಿಯೂಷ್ ಗೋಯಲ್ ಗಮನ ಹರಿಸಬೇಕು ಎಂದು ಕೋರಿ ಟ್ವೀಟ್ ಮಾಡಿದ್ದರು. ಇದಕ್ಕೆ ಐಆರ್​ಸಿಟಿಸಿ ಇಲಾಖೆಯು ನಿಖರವಾಗಿ ಉತ್ತರಿಸಿ ತಿರುಗೇಟು ನೀಡಿದೆ.

ಇದಕ್ಕೆ ರೈಲ್ವೆ ಇಲಾಖೆ ಹೇಳಿದ್ದೇನು?

ಇದಕ್ಕೆ ರೈಲ್ವೆ ಇಲಾಖೆ ಹೇಳಿದ್ದೇನು?

ಇದಕ್ಕೆ ಐಆರ್​ಸಿಟಿಸಿ ಸಂಸ್ಥೆ ಕೊಟ್ಟ ಉತ್ತರ ಆತ ಜೀವನದಲ್ಲಿ ಮತ್ತೆಂದೂ ಇಂತಹ ತಪ್ಪು ಮಾಡದಂತೆ ಇತ್ತು. 'ದೂರುದಾರನ ಮೊಬೈಲ್​ನಲ್ಲಿ ಪೋಲಿ ಜಾಹೀರಾತುಗಳು ಕಾಣಲು ಯಾವುದೇ ತಾಂತ್ರಿಕ ದೋಷ ಕಾರಣವಲ್ಲ. ಬದಲಾಗಿ, ಅವರ ಮೊಬೈಲ್​ನ ಬ್ರೌಸರ್​ಗಳಲ್ಲಿ ಪೋರ್ನ್ ಸಂಬಂಧಿತ ತಾಣಗಳನ್ನೇ ಹೆಚ್ಚಾಗಿ ವೀಕ್ಷಿಸುತ್ತಿರುವುದೇ ಇಂತಹ ಜಾಹೀರಾತುಗಳಿಗೆ ಕಾರಣ ಎಂದು ಐಆರ್​ಸಿಟಿಸಿ ಹೇಳಿದೆ. ಇದು ದೂರುದಾರರದ್ದೇ ತಪ್ಪು ಎಂದು ಸ್ಪಷ್ಟಪಡಿಸಿದೆ.

ತನ್ನ ಮರ್ಯಾದೆ ತಾನೇ ಕಳೆದುಕೊಂಡ!

ತನ್ನ ಮರ್ಯಾದೆ ತಾನೇ ಕಳೆದುಕೊಂಡ!

ಬಳಕೆದಾರ ಏನನ್ನು ಹೆಚ್ಚು ವೀಕ್ಷಿಸುತ್ತಾನೆ ಅಥವಾ ಯಾವುದರ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾನೆ ಎಂಬುದನ್ನು ಬ್ರೌಸಿಂಗ್ ಹಿಸ್ಟರಿ ಮೂಲಕ ಅರ್ಥೈಸಿ ಗೂಗಲ್ ಜಾಹೀರಾತು ನೀಡುತ್ತದೆ. ನೀವು ಬ್ರೌಸರ್ ಕುಕ್ಕೀಸ್‌ ಮತ್ತು ಬ್ರೌಸಿಂಗ್ ಹಿಸ್ಟರಿಯನ್ನು ಕ್ಲೀನ್‌ ಮತ್ತು ಡಿಲೀಟ್‌ ಮಾಡಿ. ಮುಂದೆ ಅಂತಹ ಜಾಹೀರಾತುಗಳು ಬರುವುದಿಲ್ಲ ಎಂದು ಸಲಹೆ ನೀಡಿದೆ. ಇದರಿಂದ ರೈಲ್ವೆ ಇಲಾಖೆಯ ಮರ್ಯಾದೆ ಕಳೆಯಲು ಹೋದ ವ್ಯಕ್ತಿ ತನ್ನ ಮರ್ಯಾದೆಯನ್ನು ತಾನೇ ಕಳೆದುಕೊಂಡಿದ್ದಾನೆ.

ಆತನಿಗೆ ಅಶ್ಲೀಲ ಜಾಹಿರಾತು ಕಂಡಿದ್ದೇಗೆ?

ಆತನಿಗೆ ಅಶ್ಲೀಲ ಜಾಹಿರಾತು ಕಂಡಿದ್ದೇಗೆ?

ಆನ್‌ಲೈನಿನಲ್ಲಿ ಗೂಗಲ್ ಆಡ್‌ಸೆನ್ಸ್ ಮೂಲಕ ಜಾಹೀರಾತು ಭಿತ್ತರಿಸಲಾಗುತ್ತದೆ. ಜಾಹಿರಾತು ನೀಡಲು ಗೂಗಲ್‌ ಮತ್ತು ಎಡಿಎಕ್ಸ್‌ ಸರ್ವಿಂಗ್‌ ಟೂಲ್‌ಅನ್ನು ಬಳಕೆ ಮಾಡುತ್ತದೆ. ಬಳಕೆದಾರರನ್ನು ಗುರಿಯಾಗಿಸುವ ಕುಕ್ಕೀಸ್‌ ಕೆಲಸ ಮಾಡುತ್ತದೆ. ಇದು ಬಳಕೆದಾರನ ಹಿಸ್ಟರಿ ಮತ್ತು ಬ್ರೌಸಿಂಗ್‌ ಬಿಹೇವಿಯರ್‌ಅನ್ನು ಗ್ರಹಿಸಿ ಜಾಹೀರಾತುಗಳನ್ನು ನೀಡುತ್ತದೆ. ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ಕೂಡ ಇದೇ ರೀತಿಯಲ್ಲಿ ಜಾಹಿರಾತುಗಳು ಕಾಣಿಸಿಕೊಳ್ಳುತ್ತವೆ.

ಈ ಟ್ವೀಟ್ ವೈರಲ್ ಆಗಿದ್ದು ಏಕೆ?

ಈ ಟ್ವೀಟ್ ವೈರಲ್ ಆಗಿದ್ದು ಏಕೆ?

ಒಬ್ಬರಿಗೆ ಚಪ್ಪಲಿ ಕೊಟ್ಟು ತಾವೇ ಹೊಡೆಸಿಕೊಂಡರೆ ಹೇಗಿರುತ್ತದೆ ಎಂಬುದಕ್ಕೆ ಈ ಘಟನೆ ಉದಾಹರಣೆಯಾಗಿದೆ. ಆ ವ್ಯಕ್ತಿ ಆತನ ಮೊಬೈಲ್ ಅಥವಾ ಕಂಪ್ಯೂಟರ್​ನಲ್ಲಿ ಅಶ್ಲೀಲ ವಿಡಿಯೋ ನೋಡಿರುವುದರಿಂದಲೇ ಆತನಿಗೆ ಅಶ್ಲೀಲ ಜಾಹಿರಾತುಗಳು ಕಾಣಿಸಿಕೊಂಡಿವೆ. ಇಂಟರ್‌ನೆಟ್ ಬಗ್ಗೆ ಸರಿಯಾಗಿ ತಿಳಿಯದಿದ್ದರೆ ಹೇಗೆಲ್ಲಾ ಮುಜುಗರ ಅನುಭವಿಸಬೇಕು ನೋಡಿ ಎಂದು ಹಲವರು ಹೇಳಿದ್ದಾರೆ. ಜತೆಗೆ ಬ್ರೌಸಿಂಗ್ ಹಿಸ್ಟರಿಯನ್ನು ಕ್ಲಿಯರ್ ಮಾಡಿಕೊಳ್ಳಿ ಎಂದು ಸಲಹೆ ಕೂಡ ನೀಡಿದ್ದಾರೆ.

Best Mobiles in India

English summary
Indian Railways Catering and Tourism Corporation recently schooled a man who complained about a lot of “Obscene and vulgar ads” appearing on his IRCTC app. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X