Subscribe to Gizbot

ಜನವರಿಯಲ್ಲಿ ಲಾಂಚ್ ಆಗಲಿದೆ ರೆಡ್ ಮಿ ನೋಟ್ 5 ಸ್ಮಾರ್ಟ್ ಫೋನ್...!

Written By: Lekhaka

ಭಾರತೀಯ ಮಾರುಕಟ್ಟೆಯಲ್ಲಿ ಚೀನಾ ಮೂಲದ ಶಿಯೋಮಿ ಕಂಪನಿಯ ಸ್ಮಾರ್ಟ್ ಫೋನ್ ಗಳು ಹೆಚ್ಚು ಸದ್ದು ಮಾಡುತ್ತಿದೆ. ಭಾರತದ ನಂಬರ್ 1 ಮಾರಾಟವಾಗುತ್ತಿರುವ ಸ್ಮಾರ್ಟ್ ಫೋನ್ ಎನ್ನುವ ಖ್ಯಾತಿಗೆ ಪಾತ್ರವಾಗಿರುವ ರೆಡ್ ಮಿ ನೋಟ್ 4 ಸ್ಮಾರ್ಟ್ ಫೋನ್ ಬದಲಾಗಿ ಶೀಘ್ರವೇ ಶಿಯೋಮಿ ರೆಡ್ ಮಿ ನೋಟ್ 5 ಸ್ಮಾರ್ಟ್ ಫೋನ್ ಲಾಂಚ್ ಮಾಡಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಜನವರಿಯಲ್ಲಿ ಲಾಂಚ್ ಆಗಲಿದೆ ರೆಡ್ ಮಿ ನೋಟ್ 5 ಸ್ಮಾರ್ಟ್ ಫೋನ್...!

ಸದ್ಯ ಮಾರುಕಟ್ಟೆಯಲ್ಲಿ ಶಿಯೋಮಿ ಅಭಿಮಾನಿಗಳು ನೋಟ್ 5 ಸ್ಮಾರ್ಟ್ ಫೋನ್ ಲಾಂಚ್ ಮಾಡುವುದನ್ನೇ ಎದುರು ನೋಡುತ್ತಿದ್ದಾರೆ. ಮೂಲಗಳ ಪ್ರಕಾರ ಶಿಯೋಮಿ ವರ್ಷದ ಆರಂಭದಲ್ಲಿಯೇ ಈ ಹೊಸ ಸ್ಮಾರ್ಟ್ ಫೋನ್ ಅನ್ನು ಬಳಕೆದಾರರ ಕೈಗೆ ನೀಡಲಿದೆ ಎನ್ನಲಾಗಿದೆ.

ಈಗಾಗಲೇ ಚೀನಾದಲ್ಲಿ ಲಾಂಚ್ ಆಗಿರುವ ರೆಡ್ ಮಿ 5 ಪ್ಲಸ್ ಸ್ಮಾರ್ಟ್ ಫೋನ್ ಭಾರತದಲ್ಲಿ ನೋಟ್ 5 ಎಂದು ಲಾಂಚ್ ಆಗಲಿದೆ ಎನ್ನಲಾಗಿದೆ. ನೋಟ್ 5 ಸ್ಮಾರ್ಟ್ ಪೋನಿನಲ್ಲಿ 5.99 ಇಂಚಿನ ಡಿಸ್ ಪ್ಲೇಯನ್ನು ಅಳವಡಿಸಲಾಗಿದೆ. ಅದುವೇ FHD ಪ್ಲಸ್ ಗುಣಮಟ್ಟದಾಗಿರಲಿದೆ.

ಬೆಂಗಳೂರಿನ ವಿದ್ಯುತ್ ಸಮಸ್ಯೆಗೆ ಬ್ರೇಕ್ ಹಾಕಲಿದೆ ಈ ಆಪ್‌...!

ಈ ಸ್ಮಾರ್ಟ್ ಫೋನಿನಲ್ಲಿ ಸ್ನಾಪ್ ಡ್ರಾಗನ್ 625 ಪ್ರೋಸೆಸರ್ ಕಾಣಬಹುದಾಗಿದೆ. ಇದು ಫೋನಿನ ಕಾರ್ಯಚರಣೆಯನ್ನು ಉತ್ತಮ ಪಡಿಸಲಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಇರುವ ಟ್ರೆಂಡ್ ಅನುಸಾರವಾಗಿಯೇ ಈ ಹೊಸ ಫೋನ್ ಲಾಂಚ್ ಆಗಲಿದೆ ಎನ್ನಲಾಗಿದೆ.

ಮಾರುಕಟ್ಟೆಯಲ್ಲಿ ನೋಟ್ 4 ಸೃಷ್ಠಿಸಿದ ಇತಿಹಾಸವನ್ನು ಮತ್ತೇ ನೋಟ್ 5 ಸೃಷ್ಟಿಸಲಿದೆ ಎನ್ನಲಾಗಿದೆ. ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್ ಅನ್ನು ಹುಟ್ಟಿಹಾಕಲಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಶಿಸುತ್ತಿದ್ದಾರೆ. ಬೆಲೆಗಳ ಕುರಿತಂತೆ ಯಾವುದೇ ಮಾಹಿತಿಯೂ ಲೀಕ್ ಆಗಿದೆ.

English summary
Xiaomi Redmi Note 5 is expected to be launched in January 2018 and the complete specifications of the device were also leaked online several times. Now, there is a fresh information that the Redmi Note 5 could have been launched with the moniker – the Redmi 5 Plus earlier this month.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot