''ಜಿಯೋ ಪ್ರಾರಂಭಿಸಲು ಇದೇ ಕಾರಣವಾಗಿತ್ತು'': ಇಶಾ ಅಂಬಾನಿ!

|

ಕಳೆದ ದಶಕದಲ್ಲಿ ಮೊಬೈಲ್ ಮತ್ತು ಅಂತರ್ಜಾಲ ತಂತ್ರಜ್ಞಾನಗಳ ಬೆಳವಣಿಗೆ ತ್ವರಿತ ಮತ್ತು ಗಮನಾರ್ಹವಾಗಿದೆ. ಇದು ಮಹಿಳೆಯರನ್ನು ಸಬಲೀಕರಣಗೊಳಿಸಲು, ಮಾಹಿತಿ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಅವಕಾಶದೊಂದಿಗೆ ಜನರ ಜೀವನವನ್ನು ಪರಿವರ್ತಿಸಲು, ಆರ್ಥಿಕ ಸೇರ್ಪಡೆಗೆ ಸಹಾಯ ಮಾಡಲು ಮತ್ತು ಜೀವನ ಗುಣಮಟ್ಟ ಹೆಚ್ಚಿಸುವ ಸೇವೆಗಳು ಹಾಗೂ ಹೆಚ್ಚು ಉದ್ಯೋಗಾವಕಾಶಗಳನ್ನು ಒದಗಿಸಲು ಆಶ್ಚರ್ಯಕರ ಅವಕಾಶವನ್ನು ನೀಡುತ್ತದೆ. ''ಜಿಯೋ ಪ್ರಾರಂಭಿಸಲು ಇದೇ ಕಾರಣವಾಗಿತ್ತು'' ಎಂದು ರಿಲಯನ್ಸ್ ಜಿಯೋ ಇನ್‌ಫೋಕಾಮ್ ನಿರ್ದೇಶಕಿ ಇಶಾ ಅಂಬಾನಿ ಅವರು ಹೇಳಿದ್ದಾರೆ.

''ಜಿಯೋ ಪ್ರಾರಂಭಿಸಲು ಇದೇ ಕಾರಣವಾಗಿತ್ತು'': ಇಶಾ ಅಂಬಾನಿ!

ಹೌದು, ಡಿಜಿಟಲ್ ಒಳಗೊಳ್ಳುವಿಕೆಯ ಬಗ್ಗೆ ಜಿಯೋ ತನ್ನ ಗಮನ ಕೇಂದ್ರೀಕರಿಸಿರುವ ಬಗ್ಗೆ ಮಾತನಾಡಿದ ರಿಲಯನ್ಸ್ ಜಿಯೋ ಇನ್‌ಫೋಕಾಮ್ ನಿರ್ದೇಶಕಿ ಇಶಾ ಅಂಬಾನಿ, "ಕಳೆದ ದಶಕದಲ್ಲಿ ಮೊಬೈಲ್ ಮತ್ತು ಅಂತರಜಾಲ ತಂತ್ರಜ್ಞಾನಗಳ ಬೆಳವಣಿಗೆ ತ್ವರಿತ ಮತ್ತು ಗಮನಾರ್ಹವಾಗಿದೆ. ಇದು ಮಹಿಳೆಯರನ್ನು ಸಬಲೀಕರಣಗೊಳಿಸಲು, ಮಾಹಿತಿ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಅವಕಾಶದೊಂದಿಗೆ ಜನರ ಜೀವನವನ್ನು ಪರಿವರ್ತಿಸಲು, ಆರ್ಥಿಕ ಸೇರ್ಪಡೆಗೆ ಸಹಾಯ ಮಾಡಲು ಮತ್ತು ಜೀವನ ಗುಣಮಟ್ಟ ಹೆಚ್ಚಿಸುವ ಸೇವೆಗಳು ಹಾಗೂ ಉದ್ಯೋಗಾವಕಾಶಗಳನ್ನು ನೀಡುತ್ತದೆ ಎಂದು ಹೇಳಿದ್ದಾರೆ.

ಡಿಜಿಟಲ್ ಜಗತ್ತಿನ ಬಳಕೆಯಲ್ಲಿ ಲಿಂಗ ಅಂತರವನ್ನು ಕಡಿಮೆಮಾಡುವ ಹಾಗೂ ಭಾರತೀಯ ಮಹಿಳೆಯರಲ್ಲಿ ಡಿಜಿಟಲ್ ಸಾಕ್ಷರತೆಯನ್ನು ಬಳಸುವ ಉದ್ದೇಶದಿಂದ ಜಿಎಸ್‌ಎಂಎಯ 'ಕನೆಕ್ಟೆಡ್ ವುಮೆನ್ ಇನಿಶಿಯೇಟಿವ್' ಜೊತೆಗೆ ಕೈಜೋಡಿಸಿರುವುದಾಗಿ ಪ್ರಪಂಚದ ಅತಿದೊಡ್ಡ ಮೊಬೈಲ್ ಡೇಟಾ ನೆಟ್‌ವರ್ಕ್ ಆದ ಜಿಯೋ ಇಂದು ಘೋಷಿಸಿದೆ. ಜೀವನಮಟ್ಟ ಸುಧಾರಿಸುವ ಡಿಜಿಟಲ್ ಸೇವೆಗಳ ಪ್ರಯೋಜನವನ್ನು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಳ್ಳುವುದನ್ನು ಸಾಧ್ಯವಾಗಿಸಲು ಜಿಯೋ ಹಾಗೂ ಜಿಎಸ್‌ಎಂಎ ಒಟ್ಟಾಗಿ ಕೆಲಸಮಾಡಲಿವೆ ಎಂದು ಸಂಸ್ಥೆ ತಿಳಿಸಿದೆ.

''ಜಿಯೋ ಪ್ರಾರಂಭಿಸಲು ಇದೇ ಕಾರಣವಾಗಿತ್ತು'': ಇಶಾ ಅಂಬಾನಿ!

ಮೊಬೈಲ್ ಹಾಗೂ ಅಂತರಜಾಲ ತಂತ್ರಜ್ಞಾನದ ಬಳಕೆಯಲ್ಲಾಗಿರುವ ಹೆಚ್ಚಳದಿಂದ ಜನರು ತೊಡಗಿಸಿಕೊಳ್ಳುವ, ಶಿಕ್ಷಣ ಹಾಗೂ ಮನರಂಜನೆ ಪಡೆಯುವ ವಿಧಾನ ಬದಲಾಗಿದೆ. ಆದರೆ ಡಿಜಿಟಲ್ ಕ್ರಾಂತಿಯು ಎಲ್ಲರಿಗೂ ಲಭ್ಯವಿಲ್ಲದೆ, ಎಲ್ಲರ ಕೈಗೂ ಎಟುಕದೆ, ಎಲ್ಲರನ್ನೂ ಒಳಗೊಳ್ಳದೆ ಉಳಿದಿರುವುದರಿಂದ ಭಾರತೀಯರ ಮೊಬೈಲ್ ಬಳಕೆಯಲ್ಲಿ ಲಿಂಗ ಅಂತರ ಹಾಗೆಯೇ ಉಳಿದುಕೊಂಡಿದೆ. ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡುವ ಮೂಲಕ ಈ ಅಂತರವನ್ನು ಕಡಿಮೆಮಾಡಲು ತಾನು ಬದ್ಧವಾಗಿರುವುದಾಗಿ ಎಂದು ಜಿಯೋ ಹೇಳಿದೆ.

ಮೊಬೈಲ್ ನಂಬರ್ ಬದಲಿಸುವಾಗ ಹುಷಾರ್!..ಈ ಸುದ್ದಿ ಭಯ ಹುಟ್ಟಿಸುತ್ತಿದೆ!ಮೊಬೈಲ್ ನಂಬರ್ ಬದಲಿಸುವಾಗ ಹುಷಾರ್!..ಈ ಸುದ್ದಿ ಭಯ ಹುಟ್ಟಿಸುತ್ತಿದೆ!

ಮೊಬೈಲ್ ಅಂತರಜಾಲ ಹಾಗೂ ಮೊಬೈಲ್ ಹಣಕಾಸು ಸೇವೆಗಳನ್ನು ಬಳಸುವಲ್ಲಿ ಮಹಿಳೆಯರು ಎದುರಿಸುವ ಅಡೆತಡೆಗಳನ್ನು ನಿವಾರಿಸಲು, 'ಕನೆಕ್ಟೆಡ್ ವಿಮೆನ್ ಇನಿಶಿಯೇಟಿವ್' ಅಂಗವಾಗಿ ವಿಶ್ವದೆಲ್ಲೆಡೆಯ ಮೊಬೈಲ್ ಆಪರೇಟರುಗಳು ಹಾಗೂ ಅವರ ಸಹಭಾಗಿಗಳೊಡನೆ ಜಿಎಸ್‌ಎಂಎ ಕೆಲಸಮಾಡುತ್ತದೆ. ಈ ಮೂಲಕ ಅಸಂಖ್ಯ ಮಹಿಳೆಯರ ಬದುಕನ್ನು ಬದಲಾಯಿಸಿ ಸಮಾಜೋ-ಆರ್ಥಿಕ ಅನುಕೂಲಗಳನ್ನು ನೀಡುವುದರ ಜೊತೆಗೆ, ಜಿಎಸ್‌ಎಂಎ ಹಾಗೂ ಸರ್ವಿಸ್ ಪ್ರೊವೈಡರುಗಳು ಮೊಬೈಲ್ ಉದ್ದಿಮೆಗೆ ಗಣನೀಯವಾದ ಹೊಸ ಮಾರುಕಟ್ಟೆ ಅವಕಾಶವನ್ನೂ ತೆರೆದಿಡುತ್ತಿದ್ದಾರೆ.

ಶಿಯೋಮಿ ರೆಡ್‌ಮಿ ಕೆ20 ಮತ್ತು ರೆಡ್‌ಮಿ ಕೆ20 ಪ್ರೊ ನಡುವಿನ ವ್ಯತ್ಯಾಸಗಳು ಯಾವುವು?ಶಿಯೋಮಿ ರೆಡ್‌ಮಿ ಕೆ20 ಮತ್ತು ರೆಡ್‌ಮಿ ಕೆ20 ಪ್ರೊ ನಡುವಿನ ವ್ಯತ್ಯಾಸಗಳು ಯಾವುವು?

ಮೊದಲ ಬಾರಿಗೆ ಮೊಬೈಲ್ ಬಳಸುತ್ತಿರುವ ಅನೇಕರಿಗೆ ಡಿಜಿಟಲ್ ಜೀವನವನ್ನು ಪರಿಚಯಿಸುತ್ತಿರುವ, ಭಾರತದ ಸ್ವಂತ ಸ್ಮಾರ್ಟ್‌ಫೋನ್ ಆದ ಜಿಯೋಫೋನ್ ಡಿಜಿಟಲ್ ಒಳಗೊಳ್ಳುವಿಕೆಯ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ತಿಂಗಳಿಗೆ 49 ರೂಪಾಯಿಗಳ ($ 1 ಕ್ಕಿಂತ ಕಡಿಮೆ) ಸಾಟಿಯಿಲ್ಲದ ಬೆಲೆಯಲ್ಲಿ ಅಪರಿಮಿತ ಧ್ವನಿ ಮತ್ತು ಡೇಟಾ ಸೇವೆಗಳೊಂದಿಗೆ, 501 ರೂಪಾಯಿಗಳಲ್ಲಿ (ಅಂದಾಜು $ 7) ಲಭ್ಯವಿರುವ ಜಿಯೋಫೋನ್, ಡಿಜಿಟಲ್ ಸೇವೆಗಳನ್ನು ಪ್ರಯತ್ನಿಸುವ ಅವಕಾಶ ಹಾಗೂ ಪ್ರೋತ್ಸಾಹವನ್ನು ಹೆಚ್ಚುಹೆಚ್ಚು ಜನರಿಗೆ ನೀಡುತ್ತಿದೆ.

Best Mobiles in India

English summary
Jio furthers its commitment to reduce gender gap in digital adoption. Isha Ambani has a plan to empower women, digitally, with some help from Jio. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X