ಐಟೆಲ್‌ ಮ್ಯಾಜಿಕ್‌ 2 4G ಫೋನ್‌ ಬಿಡುಗಡೆ!ಹಾಟ್‌ಸ್ಪಾಟ್‌ ಬೆಂಬಲ ವಿಶೇಷತೆ!

|

ಟೆಕ್‌ ವಲಯದಲ್ಲಿ ಸ್ಮಾರ್ಟ್‌ಫೋನ್‌ಗಳ ಭರಾಟೆ ನಡುವೆಯೂ ಫೀಚರ್‌ ಫೋನ್‌ಗಳು ಕೂಡ ತಮ್ಮ ಜನಪ್ರಿಯತೆ ಉಳಿಸಿಕೊಂಡಿವೆ. ಈಗಲೂ ಸಹ ಫೀಚರ್‌ ಫೋನ್‌ಗಳನ್ನು ಖರೀದಿಸುವ ಮಂದಿ ಇದ್ದಾರೆ. ಇದೇ ಕಾರಣಕ್ಕೆ ಹಲವು ಕಂಪೆನಿಗಳು ಫೀಚರ್‌ ಫೋನ್‌ಗಳನ್ನು ಪರಿಚಯಿಸುತ್ತಾ ಬಂದಿವೆ. ಸದ್ಯ ಇದೀಗ ಐಟೆಲ್ ಕಂಪೆನಿ ತನ್ನ ಮೊದಲ 4G ಫೀಚರ್ ಫೋನ್ ಮ್ಯಾಜಿಕ್ 2 4G ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಫೋನ್‌ 4G ಸಂಪರ್ಕ ಮತ್ತು 8 ಸಾಧನಗಳಿಗೆ ಹಾಟ್‌ಸ್ಪಾಟ್ ಟೆಥರಿಂಗ್ ಅನ್ನು ಒಳಗೊಂಡಿದೆ.

ಐಟೆಲ್‌

ಹೌದು, ಐಟೆಲ್‌ ಕಂಪೆನಿ ಹೊಸ ಮ್ಯಾಜಿಕ್‌ 2 4G ಫೀಚರ್‌ ಫೋನ್‌ ಅನ್ನು ಭಾರತದಲ್ಲಿ ಲಾಂಚ್‌ ಮಾಡಿದೆ. ಇದು ದೇಶದ ರಿಲಯನ್ಸ್ ಜಿಯೋ ಸಂಸ್ಥೆಯ ಜಿಯೋಫೋನ್ ಮಾದರಿಯನ್ನು ಒಳಗೊಂಡಿದೆ. ಆದರೆ ಜಿಯೋಫೋನ್ ಹಾಟ್‌ಸ್ಪಾಟ್ ಟೆಥರಿಂಗ್ ವೈಶಿಷ್ಟ್ಯದೊಂದಿಗೆ ಬರುವುದಿಲ್ಲ. ಜಿಯೋಟಿವಿಯಂತಹ ಜಿಯೋ ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ಒಳಗೊಂಡಿದೆ. ಇನ್ನು ಐಟೆಲ್‌ ಸಂಸ್ಥೆಯ ಮ್ಯಾಜಿಕ್‌ 2 4G ಫೋನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಐಟೆಲ್

ಐಟೆಲ್ ಮ್ಯಾಜಿಕ್ 2 4G ಫೋನ್‌ 2.4-ಇಂಚಿನ ಕ್ಯೂವಿಜಿಎ ​​3 ಡಿ ಬಾಗಿದ ಪ್ರದರ್ಶನವನ್ನು ಹೊಂದಿದೆ. ಇದು 128MB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದ್ದು, ಮೈಕ್ರೊ ಎಸ್ಡಿ ಕಾರ್ಡ್ ಮೂಲಕ 64GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾದ ಅವಕಾಶವನ್ನು ಪಪಡೆದುಕೊಂಡಿದೆ. ಜೊತೆಗೆ ಈ ಫೋನ್‌ 1,900mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು ಬಳಕೆದಾರರಿಗೆ 24 ದಿನಗಳ ಬ್ಯಾಟರಿ ಬ್ಯಾಕಪ್ ಅನ್ನು ಒದಗಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಫೋನ್‌

ಇನ್ನು ಈ ಫೋನ್‌ 1.3 ಮೆಗಾಪಿಕ್ಸೆಲ್ ರಿಯರ್‌ ಕ್ಯಾಮೆರಾ ಹೊಂದಿದ್ದು, ಫ್ಲ್ಯಾಷ್‌ನೊಂದಿಗೆ ಜೋಡಿಸಲ್ಪಟ್ಟಿದೆ. ಇದು ರೆಕಾರ್ಡಿಂಗ್, ಆಟೋ ಕಾಲ್ ರೆಕಾರ್ಡರ್, ಒನ್-ಟಚ್ ಮ್ಯೂಟ್ ಮತ್ತು 8 ಪೂರ್ವ ಲೋಡ್ ಮಾಡಲಾದ ಆಟಗಳೊಂದಿಗೆ ವೈರ್‌ಲೆಸ್ ಎಫ್‌ಎಂ ವೈಶಿಷ್ಟ್ಯದೊಂದಿಗೆ ಬರುತ್ತದೆ.ಕನೆಕ್ಟಿವಿಟಿ ಆಯ್ಕೆಗಳಲ್ಲಿ 2G, 3G, 4G, ವೈ-ಫೈ ಮತ್ತು ಬ್ಲೂಟೂತ್ ವಿ 2 ಅನ್ನು ಬೆಂಬಲಿಸಲಿದೆ.

ಹಾಟ್‌ಸ್ಪಾಟ್

ಇದು ವೈಫೈ ಮತ್ತು ಹಾಟ್‌ಸ್ಪಾಟ್ ಟೆಥರಿಂಗ್ ಬೆಂಬಲದೊಂದಿಗೆ ಬರುತ್ತದೆ. ಅಲ್ಲದೆ ಒಂದು ಸಮಯದಲ್ಲಿ ಎಂಟು ಸಾಧನಗಳೊಂದಿಗೆ ತನ್ನ ಹಾಟ್‌ಸ್ಪಾಟ್‌ ಸಂಪರ್ಕವನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇದಲ್ಲದೆ ಐಟೆಲ್ ಮ್ಯಾಜಿಕ್ 2 4G ಕಂಪನಿಯ ಸ್ವಂತ ಕಿಂಗ್ ವಾಯ್ಸ್ ವೈಶಿಷ್ಟ್ಯದೊಂದಿಗೆ ಬರುತ್ತದೆ. ಇದು ಮೂಲತಃ ಒಳಬರುವ ಕರೆಗಳು, ಸಂದೇಶಗಳು, ಮೆನು ಮತ್ತು ಹೆಚ್ಚಿನದನ್ನು ಪ್ರಕಟಿಸುವ ಸ್ಪೀಚ್ ಸಾಫ್ಟ್‌ವೇರ್ ಟೆಕ್ಸ್ಟ್‌ ಆಗಿದೆ.

ಮ್ಯಾಜಿಕ್ 2 4G

ಐಟೆಲ್ ಮ್ಯಾಜಿಕ್ 2 4G ಫೋನ್‌ ಭಾರತದಲ್ಲಿ 2,349 ರೂ.ಬೆಲೆಯನ್ನು ಹೊಂದಿದೆ. ಪ್ರಸ್ತುತ ಆಫ್‌ಲೈನ್ ಮಳಿಗೆಗಳ ಮೂಲಕ ಲಭ್ಯವಿದೆ. ಈ ಫೋನ್‌ ಅನ್ನು ಕಪ್ಪು ಮತ್ತು ನೀಲಿ ಬಣ್ಣದ ಆಯ್ಕೆಗಳಲ್ಲಿ ಲಭ್ಯಗೊಳಿಸಲಾಗುತ್ತಿದೆ. ಇನ್ನು ಈ ಫೋನ್‌ 100 ದಿನಗಳ ಬದಲಿ ಖಾತರಿ, 12 ತಿಂಗಳ ಗ್ಯಾರಂಟಿ ಮತ್ತು ಖರೀದಿಯ 365 ದಿನಗಳಲ್ಲಿ ಒಂದು-ಬಾರಿ ಪರದೆಯ ಬದಲಿಯೊಂದಿಗೆ ಬರುತ್ತದೆ.

Best Mobiles in India

English summary
itel has launched its first 4G feature phone, dubbed the Magic 2 4G. The device is targeted at feature phone consumers who are looking for an upgrade.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X