Just In
- 50 min ago
ಕೇಂದ್ರ ಬಜೆಟ್ 2023: ಪ್ಯಾನ್ ಕಾರ್ಡ್ ಬಳಕೆದಾರರೇ ಇಲ್ಲಿ ಗಮನಿಸಿ!
- 1 hr ago
ಕೇಂದ್ರ ಬಜೆಟ್ 2023: ತಂತ್ರಜ್ಞಾನ ವಲಯಕ್ಕೆ ನೀಡಿರುವ ಕೊಡುಗೆಗಳ ಪೂರ್ಣ ಮಾಹಿತಿ ಇಲ್ಲಿದೆ
- 1 hr ago
ಗೂಗಲ್ ಪಿಕ್ಸಲ್ 6a ಫೋನ್ಗೆ ಸಖತ್ ಡಿಸ್ಕೌಂಟ್; ಈ ಅವಕಾಶ ಮತ್ತೆ ಸಿಗಲ್ಲ!
- 2 hrs ago
Budget 2023: ಸಾಂಪ್ರದಾಯಿಕ ಶೈಲಿಯ ಬಜೆಟ್ ಮಂಡನೆಗೆ ಫುಲ್ ಸ್ಟಾಪ್; ಟ್ಯಾಬ್ ಮೂಲಕ ಮಂಡನೆ
Don't Miss
- News
Budget 2023: ಚಿನ್ನ, ಬೆಳ್ಳಿ, ವಜ್ರಗಳ ಬೆಲೆ ಮತ್ತೆ ದುಬಾರಿ- ಆಭರಣ ಪ್ರಿಯರಿಗೆ ಬಿಗ್ ಶಾಕ್
- Automobiles
ತಮ್ಮ ಹೊಸ ಐಷಾರಾಮಿ ಮರ್ಸಿಡಿಸ್ ಕಾರಿನಲ್ಲಿ ಮಗಳೊಂದಿಗೆ ಕಾಣಿಸಿಕೊಂಡ ಜನಪ್ರಿಯ ನಟ
- Sports
ಇವರಿಬ್ಬರು ಭವಿಷ್ಯದ ಸೂಪರ್ಸ್ಟಾರ್ಗಳು: ಅನಿಲ್ ಕುಂಬ್ಳೆ ಹೆಸರಿಸಿದ ಆಟಗಾರರು ಯಾರು ಗೊತ್ತಾ?
- Finance
Union Budget 2023: ನಿರ್ದಿಷ್ಟ ಸರ್ಕಾರಿ ಏಜೆನ್ಸಿಗಳ ಎಲ್ಲ ಡಿಜಿಟಲ್ ವ್ಯವಸ್ಥೆ ವ್ಯಾಪ್ತಿಗೆ PAN, ಏನಿದು ತಿಳಿಯಿರಿ
- Movies
ಘೋಸ್ಟ್ ಚಿತ್ರದ ಶಿವಣ್ಣನ ವಿಂಟೇಜ್ ಪೋಸ್ಟರ್ 1983ರ ಅಮೆರಿಕನ್ ಚಿತ್ರದ ಕಾಪಿ!
- Lifestyle
ಫೆಬ್ರವರಿ ತಿಂಗಳಿನಲ್ಲಿ ಈ 5 ರಾಶಿಯವರಿಗೆ ಲಕ್ಷ್ಮಿ ಕೃಪೆಯಿದೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಐಟೆಲ್‌ನಿಂದ ಅತಿ ಕಡಿಮೆ ಬೆಲೆಯ ಫೋನ್ ಲಾಂಚ್! ಭಾರತದ 12 ಭಾಷೆಗಳಿಗೆ ಬೆಂಬಲ!
ಐಟೆಲ್ ಕಂಪೆನಿ ಫೀಚರ್ ಫೋನ್ ಮಾರುಕಟ್ಟೆಯಲ್ಲಿ ಇಂದಿಗೂ ತನ್ನ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದೆ. ಸ್ಮಾರ್ಟ್‌ಫೋನ್‌ಗಳ ಆರ್ಭಟದ ನಡುವೆಯೂ ಐಟೆಲ್ ಕಂಪೆನಿ ಅತಿ ಕಡಿಮೆ ಬೆಲೆಯ ಫೀಚರ್ ಫೋನ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ಭಾರತದಲ್ಲಿಯೇ ತಯಾರಿಸಿರುವ ಹೊಸ ಐಟೆಲ್ ಮ್ಯಾಜಿಕ್ ಎಕ್ಸ್ ಪ್ರೊ 4G ಫೋನ್ ಬಿಡುಗಡೆ ಮಾಡಿದೆ. ಈ ಫೋನ್ ಭಾರತದ 12 ಸ್ಥಳೀಯ ಭಾಷೆಗಳನ್ನು ಬೆಂಬಲಿಸಲಿದೆ. ಇದು 2,500mAh ಬ್ಯಾಟರಿಯನ್ನು ಒಳಗೊಂಡಿದೆ.

ಹೌದು, ಐಟೆಲ್ ಕಂಪೆನಿ ಭಾರತದಲ್ಲಿ ಹೊಸ ಐಟೆಲ್ ಮ್ಯಾಜಿಕ್ ಎಕ್ಸ್ ಪ್ರೊ 4G ಫೋನ್ ಪರಿಚಯಿಸಿದೆ. ಈ ಫೋನ್ ಎಂಟು ಡಿವೈಸ್‌ಗಳೊಂದಿಗೆ ಹಾಟ್‌ಸ್ಪಾಟ್ ಕನೆಕ್ಟಿವಿಟಿ ಬೆಂಬಲವನ್ನು ಪಡೆದಿದೆ. ಇದು ನೀಲಿ ಮತ್ತು ಕಪ್ಪು ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇನ್ನು ಈ ಫೋನ್ ಕೇವಲ 2,999ರೂ. ಬೆಲೆಯಲ್ಲಿ ಬರಲಿದೆ. ಇದು ಎಫ್‌ಎಂ ರೇಡಿಯೊ, ಪ್ರೀ ಲೋಡ್ ಮಾಡಿದ ಹಾಡುಗಳು ಮತ್ತು 74 ಮಿಲಿಯನ್ ಹಾಡುಗಳ ಸ್ಟೋರೇಜ್ ಅನ್ನು ಹೊಂದಿದೆ. ಹಾಗಾದ್ರೆ ಈ ಫೀಚರ್ ಫೋನ್ ಏನೆಲ್ಲಾ ವಿಶೇಷತೆ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಐಟೆಲ್ ಮ್ಯಾಜಿಕ್ ಎಕ್ಸ್ ಪ್ರೊ 4G ಫೋನ್ 2.4 ಇಂಚಿನ ಕ್ಯೂವಿಜಿಎ ಸ್ಕ್ರೀನ್ ಹೊಂದಿದೆ. ಈ ಫೀಚರ್ ಫೋನ್‌ನಲ್ಲಿ ಹಿಂಭಾಗದಲ್ಲಿ ವಿಜಿಎ ರಿಯರ್ ಕ್ಯಾಮೆರಾ ಕೂಡ ಪಡೆದಿದೆ. ಇದು ಸ್ಪಷ್ಟವಾದ ಧ್ವನಿ ಕರೆಗಳಿಗಾಗಿ VOLTE ಗೆ ಬೆಂಬಲವನ್ನು ನೀಡಲಿದೆ. ಜೊತೆಗೆ ಇದು ಭಾರತದ ಸ್ಥಳೀಯ ಹನ್ನೇರಡು ಭಾಷೆಗಳಿಗೆ ಬೆಂಬಲವನ್ನು ನೀಡಲಿದೆ. ಇದರಲ್ಲಿ ಇಂಗ್ಲಿಷ್, ಹಿಂದಿ, ಗುಜರಾತಿ, ತೆಲುಗು, ತಮಿಳು, ಕನ್ನಡ, ಮಲಯಾಳಂ, ಪಂಜಾಬಿ, ಬಂಗಾಳಿ, ಒರಿಯಾ, ಅಸ್ಸಾಮೀಸ್, ಮತ್ತು ಉರ್ದು ಸೇರಿದಂತೆ ಹಲವು ಭಾಷೆಗಳು ಸೇರಿವೆ.

ಐಟೆಲ್ ಮ್ಯಾಜಿಕ್ ಎಕ್ಸ್ ಪ್ರೊ 4G ಫೋನ್ 2,500mAh ಸಾಮರ್ಥ್ಯದ ಬ್ಯಾಟರಿಯನ್ನು ಬೆಂಬಲಿಸಲಿದೆ. ಈ ಫೋನ್‌ನ ಬಾಕ್ಸ್‌ನಲ್ಲಿ ಚಾರ್ಜರ್ ಮತ್ತು ಹ್ಯಾಂಡ್ಸ್ ಫ್ರೀ ಹೆಡ್‌ಸೆಟ್ ಅನ್ನು ಕೂಡ ನೀಡಲಾಗುತ್ತದೆ. ಇದಲ್ಲದೆ ಈ ಫೋನ್ ಎಫ್‌ಎಂ ರೇಡಿಯೊ, ಪ್ರಿಲೋಡ್ ಮ್ಯೂಸಿಕ್ ಮತ್ತು 74 ಮಿಲಿಯನ್ ಮ್ಯೂಸಿಕ್ ಲೈಬ್ರರಿಯಿಂದ ಆನ್‌ಲೈನ್ ಆಲಿಸುವಿಕೆಯನ್ನು ನೀಡುವ ಬೂಮ್ ಪ್ಲೇ ಮ್ಯೂಸಿಕ್ ಅಪ್ಲಿಕೇಶನ್ ಒಳಗೊಂಡಿದೆ. ಇದಲ್ಲದೆ ಈ ಫೋನ್‌ನಲ್ಲಿ ಎಂಟು ಫ್ರೀ ಲೋಡ್ ಮಾಡಿದ ಗೇಮ್‌ಗಳನ್ನು ಮತ್ತು ಕಿಂಗ್ ಸೌಂಡ್ ಅಸಿಸ್ಟೆಂಟ್ ಅನ್ನು ಒಳಗೊಂಡಿದೆ.

ಈ ಫೋನ್ ಬೆಲೆ ಭಾರತದಲ್ಲಿ 2,999ರೂ. ಆಗಿದ್ದು, ನೀಲಿ ಮತ್ತು ಕಪ್ಪು ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇದು ಆನ್‌ಲೈನ್ ಮತ್ತು ಆಫ್‌ಲೈನ್ ಚಿಲ್ಲರೆ ಪಾಲುದಾರ ಚಾನೆಲ್‌ಗಳ ಮೂಲಕ ಲಭ್ಯವಾಗಲಿದೆ. ಇನ್ನು ಈ ಫೋನ್ ಎರಡು ವರ್ಷಗಳ ಗ್ಯಾರಂಟಿ ಸರ್ವಿಸ್‌ನೊಂದಿಗೆ ಬರಲಿದೆ.

ಇದಲ್ಲದೆ, ಐಟೆಲ್ ಕಂಪೆನಿ ಇತ್ತೀಚಿಗೆ ಭಾರತದಲ್ಲಿ ಹೊಸ ಐಟೆಲ್ ವಿಷನ್ 3 ಟರ್ಬೊ ಫೋನ್ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ 6.6 ಇಂಚಿನ HD+ IPS ವಾಟರ್‌ಡ್ರಾಪ್ ಡಿಸ್‌ಪ್ಲೇಯನ್ನು ಹೊಂದಿದ. ಈ ಡಿಸ್‌ಪ್ಲೇ 720 x 1600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಇದು 1.6GHz ಆಕ್ಟಾ-ಕೋರ್ ಚಿಪ್‌ಸೆಟ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಈ ಫೋನ್ ಅನ್ನು 20 ನಿಮಿಷಗಳ ಫ್ಲ್ಯಾಶ್ ಚಾರ್ಜಿಂಗ್‌ನೊಂದಿಗೆ 3 ಗಂಟೆಗಳ ಟಾಕ್ ಟೈಂ ನೀಡಲಿದೆ ಎನ್ನಲಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್ ಡೀಪ್ ಓಷನ್ ಬ್ಲೂ, ಜ್ಯುವೆಲ್ ಬ್ಲೂ ಮತ್ತು ಮಲ್ಟಿ ಗ್ರೀನ್ ಕಲರ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470