JBLನಿಂದ ವಿಶ್ವದ ಮೊದಲ ‘Transformable’ ಇಯರ್‌ಬಡ್ಸ್‌ ಲಾಂಚ್‌!

|

ಜೆಬಿಎಲ್‌ ಕಂಪೆನಿ ಮ್ಯೂಸಿಕ್‌ ಪ್ರಿಯರ ನೆಚ್ಚಿನ ಬ್ರ್ಯಾಂಡ್‌ ಎನಿಸಿಕೊಂಡಿದೆ. ಜೆಬಿಎಲ್‌ ಕಂಪೆನಿ ಪರಿಚಯಿಸಿರುವ ಇಯರ್‌ಬಡ್ಸ್‌, ಸ್ಪೀಕರ್‌ಗಳಿಗೆ ಭಾರತದಲ್ಲಿ ಉತ್ತಮ ಬೇಡಿಕೆ ಇದೆ. ಇದೇ ಕಾರಣಕ್ಕೆ ಜಿಬಿಎಲ್‌ ಕಂಪೆನಿ ಕೂಡ ವಿವಿಧ ಶ್ರೇಣಿಯ ಸ್ಪೀಕರ್‌ಗಳು, ಸ್ಮಾರ್ಟ್‌ ಇಯರ್‌ಬಡ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ತನ್ನ ಹೊಸ ಜೆಬಿಎಲ್‌ ಟ್ಯೂನ್ ಫ್ಲೆಕ್ಸ್ ಇಯರ್‌ಬಡ್ಸ್‌ ಅನ್ನು ಲಾಂಚ್‌ ಮಾಡಿದೆ. ಇದು ವಿಶ್ವದ ಮೊದಲ ಟ್ರಾನ್ಸಫರ್ ಮೆಬಲ್ (transformable) ಟ್ರೂ ವಾಯರ್‌ಲೆಸ್‌ ಸ್ಟಿರಿಯೋ ಎಂದು ಹೇಳಲಾಗಿದೆ.

ಜಿಬಿಎಲ್‌

ಹೌದು, ಜಿಬಿಎಲ್‌ ಕಂಪೆನಿ ವಿಶ್ವದ ಮೊದಲ transformable ಇಯರ್‌ಬಡ್ಸ್‌ ಟ್ಯೂನ್ ಫ್ಲೆಕ್ಸ್ ಅನ್ನು ಪರಿಚಯಿಸಿದೆ. ಇದು ಆರು ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌ ಟ್ಯೂನಿಂಗ್‌ ಮೋಡ್‌ಗಳನ್ನು ಒಳಗೊಂಡಿದೆ. ಜೊತೆಗೆ ಬಳಕೆದಾರರಿಗೆ ತೆರೆದ ಮತ್ತು ಸೀಲ್ಡ್‌ ಮಾಡಿದ ಇಯರ್‌ ಟಿಪ್ಸ್‌ಗಳನ್ನು ವೇರ್‌ ಮಾಡುವುದಕ್ಕೆ ಹಾಘೂ ನಾಯ್ಸ್‌ ಕ್ಯಾನ್ಸಲೇಶನ್‌ ಎಕ್ಸ್‌ಪಿರಿಯನ್ಸ್‌ ಅನ್ನು ಕಸ್ಟಮೈಸ್ ಮಾಡಲು ಅನುಮತಿಸುತ್ತದೆ. ಇನ್ನು ಮೂರು ಗಾತ್ರದ ಆಯ್ಕೆಗಳಲ್ಲಿ ಸೀಲಿಂಗ್ ಇಯರ್ ಟಿಪ್ಸ್ ಅನ್ನು ಸೇರಿಸಲಾಗಿದೆ ಎಂದು ಜೆಬಿಎಲ್‌ ಕಂಪೆನಿ ಹೇಳಿದೆ. ಹಾಗಾದ್ರೆ ಈ ಇಯರ್‌ಬಡ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

JBL ಟ್ಯೂನ್‌ ಫ್ಲೆಕ್ಸ್‌

JBL ಟ್ಯೂನ್‌ ಫ್ಲೆಕ್ಸ್‌ ಇಯರ್‌ಬಡ್ಸ್‌ ಹೊಸ ಮಾದರಿಯ ವಿನ್ಯಾಸವನ್ನು ಹೊಂದಿದೆ. ಜೆಬಿಎಲ್‌ ಹೆಡ್‌ಫೋನ್ ಅಪ್ಲಿಕೇಶನ್ ಅನ್ನು ಬಳಸುವುದರಿಂದ, ಬಳಕೆದಾರರು ಮುಕ್ತ ಮತ್ತು ಸೀಲ್ಡ್‌ ವಿನ್ಯಾಸದ ನಡುವೆ ಸುಲಭವಾಗಿ ಬದಲಾಯಿಸಲು ಅವಕಾಶ ನೀಡಲಿದೆ. ಅಲ್ಲದೆ 'ಸೌಂಡ್ ಫಿಟ್' ಅನ್ನು ಬಳಸಿಕೊಂಡು ಒಟ್ಟಾರೆ ಅನುಭವವನ್ನು ಕಸ್ಟಮೈಸ್ ಮಾಡಲು ಸಾಧ್ಯವಾಗಲಿದೆ. ಇನ್ನು ಈ ಇಯರ್‌ಬಡ್ಸ್‌ 24 ಗಂಟೆಗಳ ಹೆಚ್ಚುವರಿ ಬ್ಯಾಟರಿ ಅವಧಿಯನ್ನು ನೀಡುವ ಚಾರ್ಜಿಂಗ್ ಕೇಸ್‌ನೊಂದಿಗೆ ಬರಲಿದೆ. ಇದು ಸಿಂಗಲ್‌ ಚಾರ್ಜ್‌ನಲ್ಲಿ ಎಂಟು ಗಂಟೆಗಳ ಮ್ಯೂಸಿಕ್‌ ಪ್ಲೇ ಟೈಂ ನೀಡಲಿದೆ.

ಇಯರ್‌ಬಡ್ಸ್‌

ಈ ಇಯರ್‌ಬಡ್ಸ್‌ 'ಡ್ಯುಯಲ್ ಕನೆಕ್ಟ್' ಫೀಚರ್ಸ್‌ ಅನ್ನು ಹೊಂದಿದೆ. ಇದು ಬಳಕೆದಾರರಿಗೆ ಪ್ರತಿ ಇಯರ್‌ಬಡ್ ಅನ್ನು ಪ್ರತ್ಯೇಕವಾಗಿ ಕನೆಕ್ಟ್‌ ಮಾಡಲು ಅನುವು ಮಾಡಿಕೊಡಲಿದೆ. ಈ ಇಯರ್‌ಬಡ್ಸ್‌ ಒಟ್ಟು ನಾಲ್ಕು ಮೈಕ್ರೊಫೋನ್‌ಗಳೊಂದಿಗೆ ಬರುತ್ತದೆ. ಇದರಲ್ಲಿ ಎರಡು ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌ ಮೈಕ್ರೊಫೋನ್‌ಗಳಾಗಿವೆ. ಅಲ್ಲದೆ, ಟ್ಯೂನ್ ಫ್ಲೆಕ್ಸ್ ಫೀಚರ್ಸ್‌ ಗೂಗಲ್ ಅಸಿಸ್ಟೆಂಟ್ ಮೂಲಕ ಹ್ಯಾಂಡ್ಸ್-ಫ್ರೀ ಕಂಟ್ರೋಲ್‌ ಅನ್ನು ಹೊಂದಿದ್ದು, ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

JBL ಟ್ಯೂನ್ ಫ್ಲೆಕ್ಸ್

JBL ಟ್ಯೂನ್ ಫ್ಲೆಕ್ಸ್ ಬಳಕೆದಾರರಿಗೆ JBL ಹೆಡ್‌ಫೋನ್ ಅಪ್ಲಿಕೇಶನ್ ಬಳಸಿಕೊಂಡು ಟಚ್‌ ಕಂಟ್ರೋಲ್‌ ಫೀಚರ್ಸ್‌ಗಳನ್ನು ಕಸ್ಟಮೈಸ್‌ ಮಾಡಬಹುದಾಗಿದೆ. ಇದರಿಂದ ಬಳಕೆದಾರರ ಅನುಭವವನ್ನು ತಿಳಿಯಬಹುದಾಗಿದೆ. ಇನ್ನು ಈ ಇಯರ್‌ಬಡ್ಸ್‌ IPX4 ಪ್ರಮಾಣೀಕೃತವಾಗಿದ್ದು, ಮಳೆ ಮತ್ತು ವ್ಯಾಯಾಮದ ಸಮಯದಲ್ಲಿಯೂ ಕೂಡ ಬಳಕೆಗೆ ಸೂಕ್ತವಾಗಿವೆ. ಸದ್ಯ ಇದು ಫ್ಲಿಪ್‌ಕಾರ್ಟ್ ಮತ್ತು ಜೆಬಿಎಲ್ ವೆಬ್‌ಸೈಟ್‌ಗಳಲ್ಲಿ ಕಪ್ಪು ಬಣ್ಣದ ಆಯ್ಕೆಯಲ್ಲಿ ಲಭ್ಯವಿದೆ. ಇದರ ಬೆಲೆ ಪ್ರಸ್ತುತ 6,999ರೂ. ಆಗಿದೆ.

ಜೆಬಿಎಲ್‌

ಇನ್ನು ಜೆಬಿಎಲ್‌ ಕಂಪೆನಿ ಇತ್ತೀಚಿಗೆ ಭಾರತದಲ್ಲಿ JBL ಲೈವ್ ಪ್ರೊ 2 ಇಯರ್‌ಫೋನ್‌ ಪರಿಚಯಿಸಿದೆ. ಇದು ಟ್ರೂಲಿ ವಾಯರ್‌ಲೆಸ್‌ ಸ್ಟಿರಿಯೋ ಇಯರ್‌ಫೋನ್‌ ಆಗಿದೆ. ಈ ಇಯರ್‌ಫೋನ್‌ ಸ್ಮಾರ್ಟ್ ಆಂಬಿಯೆಂಟ್, 40 ಗಂಟೆಗಳ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ. ಇದಲ್ಲದೆ ಪರಿಪೂರ್ಣ ವಾಯ್ಸ್‌ ಕಾಲ್‌ ಗುಣಮಟ್ಟಕ್ಕಾಗಿ 6 ​​ಮೈಕ್ರೊಫೋನ್‌ಗಳನ್ನು ಒಳಗೊಂಡಿದೆ. ಇದರಲ್ಲಿ ಟ್ರೂಲಿ ಅಡಾಪ್ಟಿವ್ ನಾಯ್ಸ್ ಕ್ಯಾನ್ಸಲಿಂಗ್ TWS ಅನ್ನು ಹೊಂದಿದೆ. ಇನ್ನು ಈ ಇಯರ್‌ಫೋನ್‌ಗಳು ಗೂಗಲ್ ಫಾಸ್ಟ್ ಜೋಡಿಯನ್ನು ಸಹ ಬೆಂಬಲಿಸುತ್ತವೆ.

ಇಯರ್‌ಫೋನ್‌

JBL ಲೈವ್ ಪ್ರೊ 2 ಇಯರ್‌ಫೋನ್‌ ಸ್ಟಿಕ್ ವಿನ್ಯಾಸವನ್ನು ಹೊಂದಿದೆ. ಇದು JBL ನ ಸಿಗ್ನೇಚರ್ ಸೌಂಡ್‌ ಅನ್ನು ತಲುಪಿಸುವ 11 ಡೈನಾಮಿಕ್ ಆಡಿಯೋ ಡ್ರೈವರ್‌ಗಳನ್ನು ಹೊಂದಿದೆ. ಇನ್ನು ಈ ಇಯರ್‌ಫೋನ್‌ ಟ್ರೂಲಿ ಅಡಾಪ್ಟಿವ್ ನಾಯ್ಸ್‌ ಕ್ಯಾನ್ಸ್‌ಲೇಶನ್‌ ಅನ್ನು ಹೊಂದಿದೆ. ಅಲ್ಲದೆ ಅಗತ್ಯ ಎನಿಸಿದಾಗ ಬ್ಯಾಕ್‌ಗ್ರೌಂಡ್‌ ಸೌಂಡ್‌ ಬರುವಂತೆ ಮಾಡಲು ಆಂಬಿಯೆಂಟ್‌ ಸೌಂಡ್‌ ಬೆಂಬಲವನ್ನು ಕೂಡ ಒಳಗೊಂಡಿದೆ. ಈ ಇಯರ್‌ಬಡ್ಸ್‌ ಶಬ್ದ ಮತ್ತು ಗಾಳಿ ಪ್ರತ್ಯೇಕತೆಯ ಟೆಕ್ನಾಲಜಿಯನ್ನು ಹೊಂದಿರುವ 6 ಮೈಕ್ರೊಫೋನ್‌ಗಳನ್ನು ಹೊಂದಿವೆ.

Best Mobiles in India

Read more about:
English summary
JBL has launched first ‘Transformable’ TWS earbuds in the world

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X