ಜೆಬಿಎಲ್‌ನಿಂದ ಹೊಸ ಗೇಮಿಂಗ್‌ ಹೆಡ್‌ಫೋನ್‌ ಬಿಡುಗಡೆ;..ಬೆಲೆ ಎಷ್ಟು?

|

ಜನಪ್ರಿಯ ಆಡಿಯೋ ಕಂಪೆನಿಯಾದ ಜೆಬಿಎಲ್‌ ಆಗಾಗ್ಗೆ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿರುತ್ತದೆ. ಅದರಂತೆ ಇದೀಗ ಜೆಬಿಎಲ್‌ ಹೊಸದಾಗಿ ಕ್ವಾಂಟಮ್ 350 ವೈರ್‌ಲೆಸ್ ಗೇಮಿಂಗ್ ಹೆಡ್‌ಫೋನ್‌ ಬಿಡುಗಡೆ ಮಾಡಿದೆ. ಗೇಮಿಂಗ್‌ ಪ್ರಿಯರಿಗೆ ಈ ನೂತನ ಹೆಡ್‌ಫೋನ್‌ ಖಂಡಿತಾ ಇಷ್ಟವಾಗಲಿದೆ. ಇನ್ನು ಈ ನೂತನ ಡಿವೈಸ್‌ ಬಜೆಟ್ ಬೆಲೆಯಲ್ಲಿ ಕಾಣಿಸಿಕೊಂಡಿದೆ.

ಹೆಡ್‌ಫೋನ್‌ನ

ಈ ಕ್ವಾಂಟಮ್ 350 ವೈರ್‌ಲೆಸ್ ಗೇಮಿಂಗ್ ಹೆಡ್‌ಫೋನ್‌ನ ಪ್ರಮುಖ ವಿಶೇಷತೆ ಎಂದರೆ ಒಮ್ಮೆ ಚಾರ್ಜ್‌ ಮಾಡಿದರೆ ಬರೋಬ್ಬರಿ 22 ಗಂಟೆಗಳ ವರೆಗೆ ಬಳಕೆ ಮಾಡಬಹುದು. ಹಾಗೆಯೇ ವೇಗದ ಚಾರ್ಜಿಂಗ್‌ ವ್ಯವಸ್ಥೆ ಒಳಗೊಂಡಿದೆ. ಅಷ್ಟೇ ಅಲ್ಲ ಈ ಡಿವೈಸ್‌ ಕೇವಲ 5 ನಿಮಿಷ ಚಾರ್ಜ್‌ ಮಾಡಿದರೆ ಬರೋಬ್ಬರಿ 1 ಗಂಟೆಗಳ ವರೆಗೆ ಬ್ಯಾಟರಿ ಬ್ಯಾಕ್‌ಅಪ್‌ ಒದಗಿಸಲಿದೆ ಎಂದು ಕಂಪನಿ ಹೇಳಿದೆ.

ಹೆಡ್‌ಫೋನ್

ಮಾರುಕಟ್ಟೆಯಲ್ಲಿ ಈ ಹೆಡ್‌ಫೋನ್ ಬೆಲೆ 8,499 ರೂ. ಗಳಿಗೆ ಲಭ್ಯ ಇದೆ. ಹಗುರವಾದ ರಚನೆಯನ್ನು ಇದು ಪಡೆದಿದ್ದು, ಧರಿಸಲು ಸುಲಭ ಮತ್ತು ಕಂಫರ್ಟ್‌ ಆಗಿದೆ. ಇದರೊಂದಿಗೆ ಈ ಸಾಧನವು USB ವೈರ್‌ಲೆಸ್ ಡಾಂಗಲ್ ಆಯ್ಕೆಯನ್ನು ಪಡೆದುಕೊಂಡಿದ್ದು, ಇದರ ಮೂಲಕ ಚಾರ್ಜ್‌ ಮಾಡಬಹುದು. ಹಾಗೆಯೇ 40mm ಡ್ರೈವರ್‌ಗಳು ವಾಯ್ಸ್ ಫೋಕಸ್ ಡಿಟ್ಯಾಚೇಬಲ್ ಬೂಮ್ ಮೈಕ್ರೊಫೋನ್ ನ್ನು ಇದು ಹೊಂದಿದೆ. ಹಾಗಿದ್ರೆ ಈ ಡಿವೈಸ್‌ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.

ಈ ಗೇಮಿಂಗ್ ಹೆಡ್‌ಫೋನ್‌ ಫೀಚರ್ಸ್

ಈ ಗೇಮಿಂಗ್ ಹೆಡ್‌ಫೋನ್‌ ಫೀಚರ್ಸ್

ಈ ಹೆಡ್‌ಫೋನ್‌ ಗೇಮಿಂಗ್‌ ಪ್ರಿಯರಿಗಂತೂ ಅತ್ಯಂತ ನೆಚ್ಚಿನ ಸಾಧನವಾಗಲಿದೆ. ಇದು ಅತ್ಯಂತ ವಿಶಿಷ್ಟವಾದ ಹೆಡ್‌ಫೋನ್ ಆಗಿದ್ದು, ಈ ಹೆಡ್‌ ಫೋನ್‌ 2.4GHz ನ ವೈರ್‌ಲೆಸ್ ಸಂಪರ್ಕವನ್ನು ಹೊಂದಿದೆ. ಗೇಮಿಂಗ್ ಆಡುವಾಗ ಉತ್ತಮ ಅನುಭವ ನೀಡಲಿದೆ. ಜೊತೆಗೆ ನೈಜ ಗೇಮಿಂಗ್‌ ಲೋಕಕ್ಕೆ ನಿಮ್ಮನ್ನು ಕರೆದೊಯ್ಯಲಿದೆ. ಅಷ್ಟರ ಮಟ್ಟಿಗೆ ಇದನ್ನು ತಯಾರು ಮಾಡಲಾಗಿದೆ. ಈ ಕಾರಣಕ್ಕೆ ಬೆಲೆಯಲ್ಲಿ ಸ್ವಲ್ಪ ಹೆಚ್ಚಾದರೂ ಅದಕ್ಕೆ ತಕ್ಕಂತೆ ಕೆಲಸ ನಿರ್ವಹಿಸಲಿದೆ.

ಜೆಬಿಎಲ್‌

ಈ ಹೆಡ್‌ಫೋನ್‌ ಜೆಬಿಎಲ್‌ ಕ್ವಾಂಟಮ್ 300 ಹೆಡ್‌ಫೋನ್‌ಗಳ ವೈರ್‌ಲೆಸ್ ಆವೃತ್ತಿಯಾಗಿದೆ. ಇದು 3.5mm ವೈರ್ಡ್ ಸಂಪರ್ಕವನ್ನು ಹೊಂದಿದ್ದು, ಯುಎಸ್‌ಬಿ ಡಾಂಗಲ್‌ ಮೂಲಕ ಪಿಸಿಗಳು ಮತ್ತು ಕನ್ಸೋಲ್‌ಗಳಿಗೆ ಅನುಕೂಲಕರ ವೈರ್‌ಲೆಸ್ ಸಂಪರ್ಕದ ಪ್ರಯೋಜನಗಳನ್ನು ನೀಡುತ್ತದೆ. ಹಾಗೆಯೇ ಈ ಸಾಧನವು ಕೇವಲ 252 ಗ್ರಾಂ ತೂಕವನ್ನು ಪಡೆದುಕೊಂಡಿದೆ. ಧರಿಸಿದಾಗ ಕಂಫರ್ಟ್‌ ಅನುಭವ ನೀಡಲಿದೆ.

ಹೆಡ್‌ಸೆಟ್

ಈ ಹೆಡ್‌ಸೆಟ್ 40 ಎಂಎಂ ಡ್ರೈವರ್‌ಗಳನ್ನು ಹೊಂದಿದ್ದು, ಕಂಪನಿಯ ಕ್ವಾಂಟಮ್ ಸೌಂಡ್ ಸಿಗ್ನೇಚರ್ ಮತ್ತು ಕ್ವಾಂಟಮ್ ಸರೌಂಡ್ ಟೆಕ್ ಅನ್ನು ಹೊಂದಿರುವುದು ವಿಶೇಷ. ಅದೆಲ್ಲಕ್ಕಿಂತ ಮಿಗಿಲಾಗಿ ಕಿವಿಗೆ ಯಾವುದೇ ತೊಂದರೆ ಆಗಬಾರದು ಎಂದು ಇಯರ್ ಕುಶನ್‌ಗಳನ್ನು ಲೆದರ್‌ನಿಂದ ಮಾಡಲಾಗಿದ್ದು, ರಿಚ್‌ ಲುಕ್‌ ನೀಡುತ್ತದೆ.

ಚಾರ್ಜ್ ವೈಶಿಷ್ಟ್ಯ

ಇದಕ್ಕೆ ಸ್ಪೀಡ್ ಚಾರ್ಜ್ ವೈಶಿಷ್ಟ್ಯ ಇದ್ದು, 5 ನಿಮಿಷದ ಚಾರ್ಜ್‌ನಲ್ಲಿ 60 ನಿಮಿಷಗಳ ಪ್ಲೇಬ್ಯಾಕ್ ಇರಲಿದೆ. ಯುಎಸ್‌ಬಿ ಟೈಪ್-ಸಿ ಮೂಲಕ ಗೇಮ್‌ ಆಡುವಾಗಲೂ ಬಳಕೆದಾರರು ಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಮೊದಲೇ ತಿಳಿಸಿದಂತೆ ಒಮ್ಮೆ ಚಾರ್ಜ್‌ ಮಾಡಿದರೆ 22 ಗಂಟೆಗಳ ಪ್ಲೇಬ್ಯಾಕ್ ಇರಲಿದೆ. ಇದರ ಮತ್ತೊಂದು ವಿಶೇಷತೆ ಉತ್ತಮ ಧ್ವನಿ ಗುಣಮಟ್ಟಕ್ಕಾಗಿ ಡಿಟ್ಯಾಚೇಬಲ್, ಡೈರೆಕ್ಟರಿ ವಾಯ್ಸ್‌ ಫೋಕಸ್ ಬೂಮ್ ಮೈಕ್ರೊಫೋನ್ .

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಮೊದಲೇ ತಿಳಿಸಿದಂತೆ ಇದರ ಬೆಲೆ 8,499ರೂ. ಆಗಿದ್ದು, ಗೇಮಿಂಗ್‌ ಪ್ರಿಯರು ಸುಲಭವಾಗಿ ಇದನ್ನು ಕೊಂಡುಕೊಳ್ಳಬಹುದು. ಜೆಬಿಎಲ್‌ ಆನ್‌ಲೈನ್ ಸ್ಟೋರ್ ಸೇರಿದಂತೆ ದೇಶದ ಇತರೆ ಆನ್‌ಲೈನ್ ಸ್ಟೋರ್ಸ್‌ ಹಾಗೂ ಆಫ್‌ಲೈನ್ ಸ್ಟೋರ್‌ಗಳಲ್ಲಿ ಮಾರಾಟಕ್ಕೆ ಲಭ್ಯವಾಗಿದೆ.

ಕ್ವಾಂಟಮ್ 300 ಫೀಚರ್ಸ್‌

ಕ್ವಾಂಟಮ್ 300 ಫೀಚರ್ಸ್‌

ಇತ್ತೀಚೆಗೆ ಜೆಬಿಎಲ್‌ ಕಂಪೆನಿ ಭಾರತದಲ್ಲಿ ಕ್ವಾಂಟಮ್ 300 ನ್ನು ಬಿಡುಗಡೆ ಮಾಡಿತ್ತು. ಇದು ಸಹ ಮಾರುಕಟ್ಟೆಯಲ್ಲಿ ಭಾರೀ ಹೆಸರು ಮಾಡಿದೆ. 50mm ನಿಯೋಡೈಮಿಯಮ್ ಡ್ರೈವರ್‌ಗಳು JBL ಕ್ವಾಂಟಮ್ ಸೌಂಡ್ ಸಿಗ್ನೇಚರ್‌ ನ್ನು ಹೆಚ್ಚಿಸಿವೆ. ವಿಶೇಷವಾಗಿ ವಿನ್ಯಾಸಗೊಳಿಸಲಾದ ಧ್ವನಿ ಕರ್ವ್ ಇದರಲ್ಲಿದೆ. ಹಾಗೆಯೇ ಸ್ಪಷ್ಟ ಸಂವಹನಕ್ಕಾಗಿ ಫ್ಲಿಪ್-ಅಪ್ ವಾಯ್ಸ್ ಫೋಕಸ್ ಡೈರೆಕ್ಷನಲ್ ಬೂಮ್ ಮೈಕ್ ಇದರಲ್ಲಿದೆ.

Best Mobiles in India

English summary
JBL Quantum 350 wireless gaming headphones launched with Big battery backup.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X