ಜಿಯೋ 5G ಎಲ್ಲೆಲ್ಲಿ ಲಭ್ಯ?..ನಿಮ್ಮ ಫೋನಿನಲ್ಲಿ 5G ಆಕ್ಟಿವ್ ಮಾಡುವುದು ಹೇಗೆ?

|

ದೇಶದ ಟೆಲಿಕಾಂ ವಲಯದಲ್ಲಿ ನಂಬರ್‌ ಒನ್‌ ಸ್ಥಾನದಲ್ಲಿ ಕಾಣಿಸಿಕೊಂಡಿರುವ ರಿಲಯನ್ಸ್‌ ಜಿಯೋ ಟೆಲಿಕಾಂ ಈಗಾಗಲೇ 5G ಸೇವೆಯನ್ನು ಪರಿಚಯಿಸಿದೆ. ಜಿಯೋ ತನ್ನ ಬಳಕೆದಾರರಿಗೆ ಆಹ್ವಾನದ ಆಧಾರದ ಮೇಲೆ 5G ಕನೆಕ್ಷನ್ ಅನ್ನು ನೀಡುತ್ತಿದ್ದು, ತನ್ನ 5G ಸೇವೆಗೆ ಜಿಯೋ ಟ್ರೂ 5G (Jio True 5G) ಎಂದು ಕರೆದಿದೆ. ದೇಶದ ಕೆಲವು ಪ್ರಮುಖ ನಗರಗಳಲ್ಲಿ ಜಿಯೋ ಟ್ರೂ 5G ಪ್ರಾರಂಭವಾಗಿದೆ.

ಬೆಂಗಳೂರು, ದೆಹಲಿ

ಹೌದು, ಜಿಯೋ ಟೆಲಿಕಾಂ ಬೆಂಗಳೂರು, ದೆಹಲಿ ಎನ್‌ಆರ್‌ಸಿ, ಮುಂಬೈ, ವಾರಣಾಸಿ, ಅಹಮದಾಬಾದ್ ಸೇರಿದಂತೆ ಇತರೆ ಸುಮಾರು 50 ಭಾರತೀಯ ನಗರಗಳಲ್ಲಿ 5G ನೆಟ್‌ವರ್ಕ್‌ ಅನ್ನು ಶುರು ಮಾಡಿದೆ. ಹಾಗಾದರೆ ಜಿಯೋ ಟ್ರೂ 5G (Jio True 5G) ಲಭ್ಯವಿರುವ ನಗರಗಳು ಯಾವುವು? ಜಿಯೋ ಟ್ರೂ 5G ಆಕ್ಟಿವ್ ಮಾಡುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಜಿಯೋ ಟ್ರೂ 5G ಸೇವೆ ಪಡೆದ ನಗರಗಳ ಲಿಸ್ಟ್‌ ಇಲ್ಲಿದೆ

ಜಿಯೋ ಟ್ರೂ 5G ಸೇವೆ ಪಡೆದ ನಗರಗಳ ಲಿಸ್ಟ್‌ ಇಲ್ಲಿದೆ

* ದೆಹಲಿ
* ಬೆಂಗಳೂರು
* ಮುಂಬೈ
* ವಾರಣಾಸಿ
* ಕೋಲ್ಕತ್ತಾ
* ಹೈದರಾಬಾದ್
* ಚೆನ್ನೈ
* ನಾಥದ್ವಾರ

ನೋಯ್ಡಾ

* ಪುಣೆ
* ಗುರುಗ್ರಾಮ
* ನೋಯ್ಡಾ
* ಘಾಜಿಯಾಬಾದ್
* ಫರಿದಾಬಾದ್
* ಗುಜರಾತ್‌ನ 33 ಜಿಲ್ಲಾ ಕೇಂದ್ರಗಳಲ್ಲಿ.

ಪ್ಯಾನ್‌ ಇಂಡಿಯಾ ಕವರೇಜ್‌

ಪ್ಯಾನ್‌ ಇಂಡಿಯಾ ಕವರೇಜ್‌

ಇತ್ತೀಚಿಗೆ ನಡೆದ ರಿಲಯನ್ಸ್ ಜಿಯೋ ಟೆಲಿಕಾಂನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ, ಜಿಯೋ, 2022 ರ ಅಂತ್ಯದ ವೇಳೆಗೆ ಭಾರತದ ಪ್ರಮುಖ ನಗರಗಳಲ್ಲಿ 5G ಅನ್ನು ನಿಯೋಜಿಸುವುದಾಗಿ ಘೋಷಿಸಿತು. ಇದಲ್ಲದೆ, ಡಿಸೆಂಬರ್ 2023 ರ ವೇಳೆಗೆ ಜಿಯೋ ಟ್ರೂ 5G (Jio True 5G) ಸೇವೆಯನ್ನು ಪ್ಯಾನ್‌ ಇಂಡಿಯಾ ಕವರೇಜ್ ಮಾಡುವ ಗುರಿಯನ್ನು ಒಳಗೊಂಡಿದೆ.

ಜಿಯೋ ಟ್ರೂ 5G ಆಕ್ಟಿವ್ ಮಾಡುವುದು ಹೇಗೆ?

ಜಿಯೋ ಟ್ರೂ 5G ಆಕ್ಟಿವ್ ಮಾಡುವುದು ಹೇಗೆ?

- ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ 'ಸೆಟ್ಟಿಂಗ್ಸ್' ಆಪ್ ತೆರೆಯಿರಿ.
- 'ಮೊಬೈಲ್ ನೆಟ್‌ವರ್ಕ್‌' ಗೆ ಆಯ್ಕೆಗೆ ಹೋಗಿ.
- ಈಗ ಜಿಯೋ ಸಿಮ್ ಆಯ್ಕೆ ಮಾಡಿ.
- ಈಗ 'ಆದ್ಯತೆಯ ನೆಟ್‌ವರ್ಕ್ ಪ್ರಕಾರ' ಆಯ್ಕೆಯನ್ನು ಟ್ಯಾಪ್ ಮಾಡಿ.
- ಬಳಿಕ, 5G ನೆಟ್‌ವರ್ಕ್‌ ಪ್ರಕಾರವನ್ನು ಆಯ್ಕೆ ಮಾಡಿ.

ಜಿಯೋ 5G ವೆಲ್‌ಕಮ್‌ ಆಫರ್

ಜಿಯೋ 5G ವೆಲ್‌ಕಮ್‌ ಆಫರ್

ಜಿಯೋ 5G ಸಂಪರ್ಕವನ್ನು ಆಹ್ವಾನದ ಆಧಾರದ ಮೇಲೆ ನೀಡುತ್ತಿರುವುದರಿಂದ, 5G ಸೌಲಭ್ಯ ಪಡೆದ ಸ್ಮಾರ್ಟ್‌ಫೋನ್‌ಗಳೊಂದಿಗೆ 5G ಸೇವೆ ಲಭ್ಯವಿರುವ ನಗರಗಳಲ್ಲಿನ ಬಳಕೆದಾರರು ಆಹ್ವಾನವನ್ನು ಪಡೆಯುತ್ತಾರೆ. 5G ಆಹ್ವಾನವನ್ನು ಪಡೆದ ನಂತರ, ಜಿಯೋ ಬಳಕೆದಾರರು ಸಕ್ರಿಯ ರೀಚಾರ್ಜ್‌ಗಳು/ಯೋಜನೆಗಳಲ್ಲಿ ಚಾಲ್ತಿ ಇರುವ ಅರ್ಹತೆಗಳೊಂದಿಗೆ ಅನಿಯಮಿತ 5G ಡೇಟಾವನ್ನು ಬಳಸಲು ಸಾಧ್ಯವಾಗುತ್ತದೆ. ಹೆಚ್ಚುವರಿ ಅನಿಯಮಿತ 5G ಡೇಟಾವು ಸಕ್ರಿಯ ಮೂಲ ಯೋಜನೆಯ ವ್ಯಾಲಿಡಿಟಿ ವರೆಗೂ ಮಾನ್ಯವಾಗಿರುತ್ತದೆ. ಜಿಯೋ ಪ್ರಕಾರ, 239ರೂ ಅಥವಾ ಅದಕ್ಕಿಂತ ಹೆಚ್ಚಿನ ಸಕ್ರಿಯ ಯೋಜನೆಯನ್ನು ಹೊಂದಿರುವ ಗ್ರಾಹಕರು 5G ಸೇವೆಗಳನ್ನು ಮಾತ್ರ ಬಳಸಲು ಸಾಧ್ಯವಾಗುತ್ತದೆ.

ಜಿಯೋ ಹ್ಯಾಪಿ ನ್ಯೂ ಇಯರ್‌ ಆಫರ್‌

ಜಿಯೋ ಹ್ಯಾಪಿ ನ್ಯೂ ಇಯರ್‌ ಆಫರ್‌

ಹೊಸ ವರ್ಷದ ಪ್ರಯುಕ್ತ ಜಿಯೋ ಟೆಲಿಕಾಂ 2023ರೂ. ಪ್ರೀಪೇಯ್ಡ್‌ ಪ್ಲಾನ್ ಲಾಂಚ್ ಮಾಡಿದೆ. ಈ ಯೋಜನೆಯು ದೀರ್ಘಾವಧಿಯ ಯೋಜನೆ ಆಗಿದ್ದು, 252 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಪ್ರತಿದಿನ 2.5 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿದ್ದು, ಒಟ್ಟಾರೇ ಪೂರ್ಣ ವ್ಯಾಲಿಡಿಟಿ ಅವಧಿಗೆ 630GB ಡೇಟಾ ಪ್ರಯೋಜನ ಸಿಗಲಿದೆ. ಹಾಗೆಯೇ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ, ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಹೆಚ್ಚುವರಿ ಯಾಗಿ ಜಿಯೋ ಟಿವಿ, ಜಿಯೋ ಸಿನಿಮಾ ಹಾಗೂ ಇತರೆ ಆಪ್‌ಗಳು ಲಭ್ಯ.

Best Mobiles in India

English summary
Jio 5G available cities in india: How to Activate 5G in Your Phone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X