ಸ್ವದೇಶಿ 5G ನೆಟ್‌ವರ್ಕ್‌ ಪರಿಚಯಿಸುವುದಾಗಿ ಜಿಯೋ ಘೋಷಣೆ!

|

ಜಿಯೋ, ಭಾರತದ ಟೆಲಿಕಾಂ ವಲಯದಲ್ಲಿ ಮತ್ತೇ ಸಂಚಲನ ಮೂಡಿಸಿದೆ. ಭಾರತದ ಟೆಲಿಕಾಂ ವಲಯಕ್ಕೆ 5Gಯನ್ನು ಪರಿಚಯಿಸುವ ಮಾತುಗಳನ್ನ ಆಡಿದೆ. ಸದ್ಯ ಭಾರತದಲ್ಲಿ ಸ್ವದೇಶಿ 5G ಪರಿಚಯಿಸಲಿದ್ದೇವೆ ಎಂದು ರಿಲಾಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಘೋಷಿಸಿದ್ದಾರೆ. ದೇಶದಲ್ಲಿ ಲಭ್ಯವಿರುವ ತಂತ್ರಜ್ಞಾನ ಹಾಗೂ ಅವಕಾಶಗಳನ್ನ ಬಳಸಿಕೊಂಡು ಜಿಯೋ 5G ಯನ್ನು ನಾವು ಪರಿಚಯಿಸುತ್ತೇವೆ ಎಂದು ಹೇಳಿದ್ದಾರೆ. ಅಲ್ಲದೆ ಜಿಯೋ ಸಂಸ್ಥೆಯಲ್ಲಿ ಗೂಗಲ್ 33,000 ಕೋಟಿ ರೂಪಾಯಿ ಹೂಡಿಕೆ ಮಾಡಲಿದ್ದು ರಿಲಾಯನ್ಸ್ ಇಂಡಸ್ಟ್ರೀಸ್ ಟೆಕ್ನಾಲಜಿಯಲ್ಲಿ ಸಂಸ್ಥೆಯ ಶೇ.7.7 ರಷ್ಟು ಪಾಲುದಾರಿಕೆ ಪಡೆಯಲಿದೆ ಎಂದು ಘೋಷಿಸಿದ್ದಾರೆ.

ರಿಲಾಯನ್ಸ್

ಹೌದು, ಜು.15 ರಂದು ನಡೆದ ರಿಲಾಯನ್ಸ್ ಇಂಡಸ್ಟ್ರೀಸ್‌ ಸಾಮಾನ್ಯ ಸಭೆಯಲ್ಲಿ ರಿಲಾಯನ್ಸ್‌ ಮುಖ್ಯಸ್ಥ ಮುಖೇಶ್ ಅಂಬಾನಿ, 2021 ರ ವೇಳೆಗೆ ಗೂಗಲ್ ಸಹಯೋಗದಲ್ಲಿ ಭಾರತದಲ್ಲೇ 5 ಜಿ ನೆಟ್ವರ್ಕ್ ಗೆ ಬೆಂಬಲಿಸುವ ಸ್ಮಾರ್ಟ್ ಫೋನ್ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಅಲ್ಲದೆ ಜಿಯೋ ದೇಶಿಯ 5G ಟೆಲಿಕಾಂ ಸೊಲ್ಯೂಷನ್ ಅನ್ನು ಅಭಿವೃದ್ಧಿಪಡಿಸಿದ್ದು, 5G ಸ್ಪೆಕ್ಟ್ರಮ್ ಲಭ್ಯವಾದ ಬೆನ್ನಲ್ಲೇ ಜಿಯೋ ಅಭಿವೃದ್ಧಿಪಡಿಸಿರುವ 5G ಟೆಲಿಕಾಂ ಸೊಲ್ಯೂಷನ್ ಸಹ ಪರೀಕ್ಷೆಗೆ ಸಿದ್ಧವಾಗಲಿದೆ, ಎಂದಿದ್ದಾರೆ. ಹಾಗಾದ್ರೆ ಜಿಯೋ ಮುಖ್ಯಸ್ಥ ಹೇಳಿದ್ದೇನು? ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜಿಯೋ

ಸದ್ಯ ಜಿಯೋ ಹೇಳಿರುವಂತೆ ಗೂಗಲ್ ಹಾಗೂ ಜಿಯೋ ಜೊತೆಗೂಡಿ 2021 ರ ವೇಳೆಗೆ ಅಗ್ಗದ ದರದ 5G ಸ್ಮಾರ್ಟ್ ಫೋನ್ ಗಳನ್ನು ತಯಾರಿಸಲಿವೆ. ಇಲ್ಲಿವರೆಗೂ ಜಿಯೋ 100 ಮಿಲಿಯನ್ ಜಿಯೋ ಫೋನ್ ಗಳನ್ನು ಮಾರಾಟ ಮಾಡಿದ್ದು, ಸಾಮಾನ್ಯ ಜನರ ಮೊಬೈಲ್ ಅನ್ನು ಸ್ಮಾರ್ಟ್ ಗೆ ಆಪ್‌ಗ್ರೇಡ್‌ ಆಗಲು ಜಿಯೋ ಮುಂದಾಗಿದೆ. ಇದೇ ಕಾರಣಕ್ಕೆ ಜಿಯೋ ಪ್ರಾರಂಭಿಕ ಬೆಲೆಯಲ್ಲಿಯೇ 4G ಅಥವಾ 5G ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಲಿದ್ದೇವೆ. ಇದಕ್ಕಾಗಿ ಗೂಗಲ್ ಹಾಗೂ ಜಿಯೋ ಪಾಲುದಾರಿಕೆ ಮಾಡಿಕೊಂಡಿದ್ದು, ಆಂಡ್ರಾಯ್ಡ್ ಆಧರಿತ ಸ್ಮಾರ್ಟ್ ಫೋನ್ ಆಪರೇಟಿಂಗ್ ಸಿಸ್ಟಮ್ ನ್ನು ತಯಾರಿಸಲಿವೆ ಎಂದು ಸಂಸ್ಥೆಯ 43 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅಂಬಾನಿ ಘೋಷಿಸಿದ್ದಾರೆ.

ಜಿಯೋ

ಇನ್ನು ಜಿಯೋ ಪ್ರಧಾನಿ ನರೇಂದ್ರ ಮೋದಿಯವರ "ಆತ್ಮನಿರ್ಭಾರ ಭಾರತ್" ಅಭಿಯಾನಕ್ಕೆ ಅನುಗುಣವಾಗಿ ಸ್ವದೇಶಿ 5G ಪರಿಹಾರವನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಹೇಳಿದ್ದಾರೆ. ಇದಕ್ಕಾಗಿ ಜಿಯೋ 5G ಸಲ್ಯೂಶನ್‌ ಅನ್ನು ಭಾರತದಲ್ಲಿ ಮೊದಲಿನಿಂದ ತಯಾರಿಸಲಾಗಿದ್ದು, ಇದು ಜಿಯೋ ಭಾರತದಲ್ಲಿ ವಿಶ್ವ ದರ್ಜೆಯ 5G ಸೇವೆಯನ್ನು ಪ್ರಾರಂಭಿಸಲು ಅನುವು ಮಾಡಿಕೊಡಲಿದೆ. ಇದಲ್ಲದೆ 5G ಸ್ಪೆಕ್ಟ್ರಮ್ ಲಭ್ಯವಾದ ತಕ್ಷಣ ಈ 5G ಪರಿಹಾರವು ಪ್ರಯೋಗಗಳಿಗೆ ಸಿದ್ಧವಾಗಲಿದೆ ಎನ್ನಲಾಗ್ತಿದೆ. ಅಲ್ಲದೆ ಜಿಯೋ 5G ಸಲ್ಯೂಶನ್‌ ಅನ್ನು ಜಾಗತಿಕವಾಗಿ ಇತರ ಟೆಲಿಕಾಂ ಆಪರೇಟರ್‌ಗಳಿಗೆ ರಫ್ತು ಮಾಡಲು ಕಂಪನಿಯು ಯೋಜಿಸಿದೆ.

ಜಿಯೋ

ಸದ್ಯ ಜಿಯೋ ಕಂಪನಿಯು ‘ಮೇಡ್ ಇನ್ ಇಂಡಿಯಾ' 5 ಜಿ ನೆಟ್‌ವರ್ಕ್ ಅನ್ನು ಪ್ರಾರಂಭಿಸಲು ಸಜ್ಜಾಗಿದ್ದು,ಇದು 100% ಸ್ವದೇಶಿ ತಂತ್ರಜ್ಞಾನ ಮತ್ತು ಸಲ್ಯೂಶನ್‌ ಅನ್ನು ಬಳಸುತ್ತದೆ" ಎನ್ನಲಾಗ್ತಿದೆ.ಇದಕ್ಕಾಗಿ ಮುಖೇಶ್‌ ಅಂಬಾನಿ ಇದನ್ನು ‘ಮೇಡ್ ಇನ್ ಇಂಡಿಯಾ' 5G ಸಲ್ಯೂಶನ್‌ ಎಂದು ಹೆಸರಿಸಿದ್ದಾರೆ. ಅಲ್ಲದೆ ಇದು ಆಲ್-ಐಪಿ ನೆಟ್‌ವರ್ಕ್ ಆರ್ಕಿಟೆಕ್ಚರ್ ಆಗಿರುವುದರಿಂದ 4G ಯಿಂದ 5G ಗೆ ಅಪ್‌ಗ್ರೇಡ್ ಮಾಡುವುದು ತುಂಬಾ ಸುಲಭ ಎಂದು ಅವರು ಭರವಸೆ ನೀಡಿದ್ದಾರೆ.

Most Read Articles
Best Mobiles in India

English summary
At the company’s 43rd annual general meeting (AGM), Mukesh Ambani said Reliance Jio has designed and developed a complete 5G solution from scratch.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X