ವೊಡಾಫೋನ್‌ನ ಹೊಸ ಪ್ಲಾನ್‌..! ಜಿಯೋ, ಏರ್‌ಟೆಲ್‌ಗೆ ಬಿಗ್‌ ಶಾಕ್‌..!

By GizBot Bureau
|

ವೊಡಾಫೋನ್ ಸಂಸ್ಥೆ ತನ್ನ ಪ್ರೀಪೇಡ್ ಆಫರ್ ಗಳ ಬಗ್ಗೆ ಪುನರ್ ಪರಿಶೀಲನೆ ನಡೆಸುತ್ತಿದೆ. ಹೌದು ಇತ್ತೀಚೆಗೆ ಟೆಲಿಕಾಂ ಆಪರೇಟರ್ ಗಳ ನಡುವಿನ ಸ್ಪರ್ಧೆ ಹೆಚ್ಚಾಗುತ್ತದೆ. ಅವರೊಂದು ಆಫರ್ ಬಿಟ್ಟರೆ ತಾನೊಂದು ಆಫರ್ ಕೊಡಬೇಕು ಎಂಬ ಜಿದ್ದಾಜಿದ್ಧಿ ಟೆಲಿಕಾಂ ಆಪರೇಟರ್ ಗಳ ನಡುವೆ ಸೃಷ್ಟಿಯಾಗಿದೆ. ಒಟ್ಟಾರೆ ಇದು ಗ್ರಾಹಕರನ್ನು ಸೆಳೆಯುವ ತಂತ್ರಗಾರಿಕೆಯಾಗಿದೆ.

ರಿಯಲನ್ಸ್ ಜಿಯೋ ಮತ್ತು ಭಾರತೀ ಏರ್ ಟೆಲ್ ನೀಡಿದ ಕಠಿಣ ಸ್ಪರ್ಧೆಯ ಕಾರಣದಿಂದಾಗಿ ವೊಡಾಫೋನ್ ಸಂಸ್ಥೆ ತನ್ನ ಪ್ರೀಪೇಡ್ ಆಫರ್ ಗಳ ಬಗ್ಗೆ ಸಮಾಲೋಚನೆ ನಡೆಸಿದೆ.ಹಾಗಾಗಿ ಹೊಸದೊಂದು 159 ರೂಪಾಯಿಯ ರೀಚಾರ್ಜ್ ಪ್ಲಾನ್ ನ್ನು ಬಿಡುಗಡೆಗೊಳಿಸಿದೆ. ಅಷ್ಟೇ ಅಲ್ಲ ಹೊಸದಾಗಿ 168 ದಿನಗಳ 597 ರುಪಾಯಿಯ ರೀಚಾರ್ಜ್ ಜೊತೆಗೆ ವ್ಯಾಲಿಡಿಟಿ ಆಫರ್ ಇರುವ ಪ್ಲಾನ್ ನ್ನು ಕೂಡ ಪರಿಚಯಿಸಿದೆ. ಇದು ಏರ್ ಟೆಲ್ ನ ರುಪಾಯಿ 597 ರುಪಾಯಿ ರೀಚಾರ್ಜ್ ಪ್ಲಾನ್ ಗೆ ಸ್ಪರ್ಧೆಯೊಡ್ಡುವಂತೆಯೇ ಇದೆ.ಯಾಕೆಂದರೆ ಹೆಚ್ಚು ಕಡಿಮೆ ಏರ್ ಟೆಲ್ ರೀತಿಯ ಆಫರ್ ಗಳು ವಡಾಫೋನಿನ ಈ ಪ್ಲಾನ್ ನಲ್ಲೂ ಲಭ್ಯವಿದೆ.

ವೊಡಾಫೋನ್‌ನ ಹೊಸ ಪ್ಲಾನ್‌..! ಜಿಯೋ, ಏರ್‌ಟೆಲ್‌ಗೆ ಬಿಗ್‌ ಶಾಕ್‌..!

ಆದರೆ ಕೆಲವೊಂದು ಸಣ್ಣಪುಟ್ಟ ವ್ಯತ್ಯಾಸಗಳು, ಹೋಲಿಕೆಗಳು ಇದ್ದೇ ಇದೆ. 597 ರುಪಾಯಿ ವೊಡಾಫೋನ್ ರೀಚಾರ್ಜ್ ಪ್ಲಾನ್ ನ ವ್ಯಾಲಿಟಿಡಿಯು ಫೀಚರ್ ಫೋನ್ ಗಳಿಗೆ ಮತ್ತು ಸ್ಮಾರ್ಟ್ ಫೋನ್ ಬಳಕೆದಾರರಿಗೆ ವಿಭಿನ್ನವಾಗಿರುತ್ತದೆ. ಆದರೆ ಜಿಯೋ ಸಂಸ್ಥೆಯಿಂದ ಇದೇ ರೀತಿಯ ವ್ಯಾಲಿಡಿಟಿ ಮತ್ತು ಡಾಟಾ ಬೆನಿಫಿಟ್ ಇರುವ ಯಾವುದೇ ಆಫರ್ ಗಳು ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ.

ವೊಡಾಫೋನ್ ಆಫರ್ ನಲ್ಲಿ ಏನೇನಿದೆ?

ವೊಡಾಫೋನ್ ಆಫರ್ ನಲ್ಲಿ ಏನೇನಿದೆ?

ಹೊಸ 597 ರುಪಾಯಿಯ ವೊಡಾಫೋನ್ ರೀಚಾರ್ಜ್ ಪ್ಲಾನ್ ನಲ್ಲಿ 10ಜಿಬಿ 4ಜಿ ಡಾಟಾ, 100 ಎಸ್ಎಂಎಸ್ ಗಳು ಪ್ರತಿ ದಿನ, ಅನಿಯಮಿತ ಲೋಕಲ್ ಕಾಲ್, ಎಸ್ ಟಿಡಿ, ಮತ್ತು ಭಾರತದಾದ್ಯಂತ ರೋಮಿಂಗ್ ಕರೆಗಳು ಉಚಿತವಾಗಿರುತ್ತದೆ. ಸ್ಮಾರ್ಟ್ ಫೋನ್ ಬಳಕೆದಾರರಿಗೆ ಇದರ ವ್ಯಾಲಿಡಿಟಿಯು 112 ದಿನಗಳಾಗಿದೆ ಮತ್ತು ಫೀಚರ್ ಫೋನ್ ಗಳಿಗೆ ಇದರ ವ್ಯಾಲಿಡಿಟಿಯು 168 ದಿನಗಳಾಗಿರುತ್ತದೆ.

ಇದಿಷ್ಟನ್ನು ಹೊರತು ಪಡಿಸಿ ವೊಡಾಫೋನ್ ನಲ್ಲಿ 250 ಮಿನಿಟ್ಸ್ ಪ್ರತಿ ದಿನ ಅನಿಯಮಿತ FUP ಕರೆಗಳನ್ನು ಮಾಡಲು ಅವಕಶವಿದೆ. 1,000 ನಿಮಿಷ ಪ್ರತಿ ವಾರಕ್ಕೆ ಮತ್ತು 100 ಯೂನಿಕ್ ನಂಬರ್ ಗಳಿಗೆ ವ್ಯಾಲಿಡಿಟಿ ಸಮಯದಲ್ಲಿ ಕರೆಗಳನ್ನು ಮಾಡಬಹುದು.ಭಾರತದಾದ್ಯಂತ 4ಜಿ ಸರ್ಕಲ್ ಗಳಲ್ಲಿ ಈ ಪ್ಲಾನ್ ವ್ಯಾಲಿಡ್ ಆಗಿರುತ್ತದೆ ಮತ್ತು ವೆಬ್ ಸೈಟ್ ಮತ್ತು ಆಪ್ ಗಳಲ್ಲಿ ಲೈವ್ ಆಗಿರುತ್ತದೆ.

ಏರ್ ಟೆಲ್ ಆಫರ್ ನಲ್ಲಿ ಏನಿದೆ?

ಏರ್ ಟೆಲ್ ಆಫರ್ ನಲ್ಲಿ ಏನಿದೆ?

ಎಸ್ಎಂಎಸ್ ಪ್ರತಿದಿನ ಉಚಿತ, ಯಾವುದೇ FUP ಇಲ್ಲದೆ 168 ದಿನಗಳವರೆಗೆ ಅನಿಯಮಿತ ಕರೆಗಳನ್ನು ಸ್ಮಾರ್ಟ್ ಫೋನ್ ಬಳಕೆದಾರರಿಗೆ ಆಫರ್ ಮಾಡುತ್ತದೆ. ಈ ಏರ್ ಟೆಲ್ ರೀಚಾರ್ಜ್ ಆಫರ್ ನ ಬೆಲೆ 597 ರುಪಾಯಿಗಳು. ಫೀಚರ್ ಫೋನ್ ಗಳಿಗೆ ಹೆಚ್ಚಿನ ವ್ಯಾಲಿಡಿಟಿಯನ್ನು ನೀಡುತ್ತದೆಯಾ ಅಥವಾ ಇಲ್ಲವಾ ಎಂಬ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಆದರೆ ಈ ಪ್ಲಾನ್ ಕೆಲವು ನಿರ್ಧಿಷ್ಟ ಆಯ್ಕೆಯ ಪ್ರದೇಶಗಳಲ್ಲಿ ಮಾತ್ರ ಲಭ್ಯವಿದೆ.

ವೊಡಾಫೋನ್ ಮತ್ತು ಏರ್ ಟೆಲ್ ನ ಈ ಆಫರ್ ಗಳನ್ನು ನೋಡಿದರೆ ಜಿಯೋ 999 ರುಪಾಯಿ ರೀಚಾರ್ಜ್ ಪ್ಲಾನ್ ಜೊತೆ ಈ ಎರಡೂ ಟೆಲಿಕಾಂ ಆಪರೇಟರ್ ಗಳು ಸ್ಪರ್ಧೆ ನೀಡುವ ಉದ್ದೇಶವನ್ನು ಹೊಂದಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.

ಜಿಯೋ ಆಫರ್ ನಲ್ಲಿ ಏನಿದೆ?

ಜಿಯೋ ಆಫರ್ ನಲ್ಲಿ ಏನಿದೆ?

ಜಿಯೋ 999 ರುಪಾಯಿ ರೀಚಾರ್ಜ್ ಪ್ಲಾನ್ ನಲ್ಲಿ ಅನಿಯಮಿತ ವಾಯ್ಸ್ ಕಾಲಿಂಗ್, 100 ಎಸ್ ಎಂಎಸ್ ಗಳು ಪ್ರತಿದಿನ ಉಚಿತವಾಗಿ ನೀಡುತ್ತದೆ. ಆದರೆ ಜಿಯೋ ಪ್ಲಾನ್ 90 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. ಆದರೆ 60ಜಿಬಿ 4ಜಿ ಡಾಟಾವನ್ನು ನೀಡುತ್ತದೆ. ಜಿಯೋ ಪ್ಲಾನ್ ಎಲ್ಲಾ ಮಾರುಕಟ್ಟೆಗಳಲ್ಲೂ ಲಭ್ಯವಿದೆ.

ಒಂದು ವೇಳೆ ನೀವು ಕಡಿಮೆ ಬೆಲೆಯ ಯಾವುದಾದರೂ ಪ್ಲಾನ್ ಬಗ್ಗೆ ಹುಡುಕಾಡುತ್ತಿದ್ದರೆ ಇತ್ತೀಚೆಗೆ ಬಿಡುಗಡೆಗೊಂಡಿರುವ 159 ರುಪಾಯಿ ರಿಚಾರ್ಜ್ ಪ್ಲಾನ್ ಲಭ್ಯವಿದೆ. ಇದು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. 28ಜಿಬಿ ಡಾಟಾ, ಅನಿಯಮಿತ ವಾಯ್ಸ್ ಕರೆಗಳು , 100 ಎಸ್ ಎಂಎಸ್ ಪ್ರತಿದಿನ ಉಚಿತವಾಗಿ ವ್ಯಾಲಿಡಿಟಿ ಇರುವವರೆಗೆ ಲಭ್ಯವಿರುತ್ತದೆ.28ಜಿಬಿ ಡಾಟಾ ಬೆನಿಫಿಟ್ 28 ದಿನಗಳಿಗೆ ಲಭ್ಯವಾಗುತ್ತದೆ ಅಂದರೆ ಪ್ರತಿದಿನ 1ಜಿಬಿ ಡಾಟಾ ಉಚಿತವಾಗಿ ಜಿಯೋ ಪ್ಲಾನ್ ನಲ್ಲಿ ಸಿಗುತ್ತದೆ.

ವೊಡಾಫೋನ್ ಎಸ್ಎಂಎಸ್ ಪ್ಯಾಕ್ ವಿಭಿನ್ನ

ವೊಡಾಫೋನ್ ಎಸ್ಎಂಎಸ್ ಪ್ಯಾಕ್ ವಿಭಿನ್ನ

ವೊಡಾಫೋನ್ ವಿಭಿನ್ನ ಎಸ್ಎಂಎಸ್ ಬೆನಿಫಿಟ್ ಗಳನ್ನು ವಿಭಿನ್ನ ಸೈಕಲ್ ನಲ್ಲಿ ನೀಡುತ್ತದೆ. ಕೆಲವು ಕಡೆ ಇದು 100 ಎಸ್ ಎಂಎಸ್ ಪ್ರತಿದಿನ ಉಚಿತ ಎಂದು ಕೊಟ್ಟರೆ, ಇನ್ನು ಕೆಲವು ಕಡೆ ಸಂಪೂರ್ಣ ಪ್ಲಾನ್ ನಲ್ಲಿ 100 ಎಸ್ಎಂಎಸ್ ಉಚಿತವೆಂಬ ಆಫರ್ ಇದೆ. ಕೆಲವು ಆಫರ್ ಗಳಲ್ಲಿ ಎಸ್ ಎಂಎಸ್ ಬೆನಿಫಿಟ್ ಇರುವುದೇ ಇಲ್ಲ.

Best Mobiles in India

English summary
Jio, Airtel in Its Sights, Vodafone Launches Rs. 597 Recharge With 168-Day Validity. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X