ಏರ್‌ಟೆಲ್‌, ವಿ, ಜಿಯೋ ಬಳಕೆದಾರರು ಈ ಪ್ಲ್ಯಾನ್‌ನಿಂದ ದೂರ ಸರಿಯಬಹುದು!

|

ಜಿಯೋ, ಏರ್‌ಟೆಲ್‌ ಹಾಗೂ ವಿ ಟೆಲಿಕಾಂಗಳು ಗ್ರಾಹಕರನ್ನು ಸೆಳೆಯಲು ಹಲವು ರೀತಿಯ ಸರ್ಕಸ್‌ ನಡೆಸುತ್ತಿವೆ. ಈ ನಿಟ್ಟಿನಲ್ಲಿ ಐಪಿಎಲ್ ಕ್ರಿಕೆಟ್‌ ಮ್ಯಾಚ್‌ಗಳು ಶುರುವಾದಾಗ ಕೆಲವೊಂದು ಪ್ರೀಪೇಯ್ಡ್‌ ಯೋಜನೆಗಳ ಜೊತೆಗೆ ಹೆಚ್ಚುವರಿಯಾಗಿ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಚಂದಾದಾರಿಕೆಯನ್ನು ಉಚಿತವಾಗಿ ಲಭ್ಯ ಮಾಡುತ್ತವೆ. ಮೂರು ಟೆಲಿಕಾಂ ಸಂಸ್ಥೆಗಳು ಸಹ ಈ ರೀತಿಯ ಕೊಡುಗೆ ಘೋಷಿಸುತ್ತವೆ. ಈ ಮೂಲಕ ಕ್ರಿಕೆಟ್ ಪ್ರಿಯ ಗ್ರಾಹಕರನ್ನು ಸೆಳೆಯುತ್ತವೆ. ಆದ್ರೆ ಈಗ ನಿರ್ಧಾರವೇ ಬದಲಾಗಿದೆ.

ಟೆಲಿಕಾಂಗಳು

ಹೌದು, ಜಿಯೋ, ಏರ್‌ಟೆಲ್‌ ಹಾಗೂ ವಿ ಟೆಲಿಕಾಂಗಳು ಐಪಿಎಲ್‌ ಮ್ಯಾಚ್‌ಗಳು ಮುಗಿಯುತ್ತಿದ್ದಂತೆ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಚಂದಾದಾರಿಕೆ ಪ್ಲ್ಯಾನ್‌ಗಳಿಂದ ಬಳಕೆದಾರರು ದೂರ ಸರಿದು ಬಿಡುವ ಸಾಧ್ಯತೆ ಗಳು ಹೆಚ್ಚಿವೆ. ಟೆಲಿಕಾಂ ಕಂಪನಿ ಗಳು ಹಿಂದೆ ಸರಿದರೇ, ಅದರ ನೇರ ಪರಿಣಾಮ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಮೇಲೆ ಬೀಳುವ ಸಾಧ್ಯತೆ ಗಳು ಅಧಿಕ.

ಹಾಟ್‌ಸ್ಟಾರ್‌

ಟೆಲಿಕಾಂ ಸಂಸ್ಥೆಗಳು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಚಂದಾದಾರಿಕೆ ಸೌಲಭ್ಯ ನೀಡಿದಾಗ, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಆಪ್‌ (Disney+ Hotstar) ಬಳಕೆದಾರರಲ್ಲಿಯೂ ಹೆಚ್ಚಳ ಆಗುತ್ತದೆ. ಈಗ ಐಪಿಎಲ್‌ ಮುಗಿದಿದೆ ಹೀಗಾಗಿ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ 20 ಮಿಲಿಯನ್ ಚಂದಾದಾರರನ್ನು ಕಳೆದುಕೊಳ್ಳಬಹುದು ಎಂದು ಟೆಲಿಕಾಂ ಟಾಕ್‌ ವರದಿ ಮಾಡಿದೆ. ಹಾಗಾದರೇ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಚಂದಾದಾರಿಕೆಯ ಪ್ಲ್ಯಾನ್‌ ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಏರ್‌ಟೆಲ್‌ 599ರೂ. ಪ್ರಿಪೇಯ್ಡ್‌ ಪ್ಲ್ಯಾನ್‌

ಏರ್‌ಟೆಲ್‌ 599ರೂ. ಪ್ರಿಪೇಯ್ಡ್‌ ಪ್ಲ್ಯಾನ್‌

ಏರ್‌ಟೆಲ್‌ 599ರೂ. ಪ್ರೀಪೇಯ್ಡ್‌ ಪ್ಲ್ಯಾನ್‌ ನಿಮಗೆ 28 ದಿನಗಳ ವ್ಯಾಲಿಡಿಟಿಯನ್ನು ನೀಡಲಿದೆ. ಈ ಅವಧಿಯಲ್ಲಿ ಅನಿಯಮಿತ ವಾಯಿಸ್‌ ಕರೆ ಹಾಗೂ ಪ್ರತಿದಿನ 3GB ಡೇಟಾ ಪ್ರಯೋಜನ ಪಡೆಯಬಹುದು. ಜೊತೆಗೆ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ ಸೌಲಭ್ಯ ಕೂಡ ಲಭ್ಯವಾಗಲಿದೆ. ಇನ್ನು ಈ ಪ್ಲಾನ್‌ನಲ್ಲಿ ನಿಮಗೆ ಒಂದು ವರ್ಷದ ಅವಧಿಯ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಚಂದಾದಾರಿಕೆ ದೊರೆಯಲಿದೆ.

ಏರ್‌ಟೆಲ್‌ 499ರೂ. ಪ್ರಿಪೇಯ್ಡ್‌ ಪ್ಲಾನ್

ಏರ್‌ಟೆಲ್‌ 499ರೂ. ಪ್ರಿಪೇಯ್ಡ್‌ ಪ್ಲಾನ್

ಏರ್‌ಟೆಲ್‌ 499ರೂ. ಪ್ರಿಪೇಯ್ಡ್‌ ಪ್ಲಾನ್ ನಲ್ಲಿ ನೀವು ಒಂದು ವರ್ಷದ ಅವಧಿಗೆ ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆ ಪ್ರಯೋಜನ ಸಿಗಲಿದೆ. ಇದಲ್ಲದೆ ಈ ಪ್ಲಾನ್‌ನಲ್ಲಿ ದಿನಕ್ಕೆ 2GB ಡೇಟಾ ಪ್ರಯೋಜನ ಮತ್ತು ಅನಿಯಮಿತ ಕರೆ ಪ್ರಯೋಜನ ಲಭ್ಯವಾಗಲಿದೆ. ಈ ಪ್ಲಾನ್‌ ನಿಮಗೆ 28 ದಿನಗಳ ಮಾನ್ಯತೆಯನ್ನು ನೀಡುತ್ತದೆ.

ವಿ ಟೆಲಿಕಾಂ 601ರೂ. ಪ್ರಿಪೇಯ್ಡ್‌ ಪ್ಲಾನ್‌

ವಿ ಟೆಲಿಕಾಂ 601ರೂ. ಪ್ರಿಪೇಯ್ಡ್‌ ಪ್ಲಾನ್‌

ವೊಡಾಫೋನ್ ಐಡಿಯಾ ಟೆಲಿಕಾಂನ 601ರೂ. ಪ್ರಿಪೇಯ್ಡ್‌ ಪ್ಲಾನ್‌ ಒಂದು ವರ್ಷದವರೆಗೆ ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆ ನೀಡಲಿದೆ. ಇದು ಅನಿಯಮಿತ ಕರೆ, ದಿನನಿತ್ಯ 3GB ಡೇಟಾ ಹಾಗೂ ಡೈಲಿ 100 SMS ಪ್ರಯೋಜನ ನೀಡಲಿದೆ. ಇನ್ನು ಈ ಪ್ರಿಪೇಯ್ಡ್‌ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ.

ವಿ ಟೆಲಿಕಾಂ 499ರೂ. ಪ್ರಿಪೇಯ್ಡ್‌ ಪ್ಲಾನ್‌

ವಿ ಟೆಲಿಕಾಂ 499ರೂ. ಪ್ರಿಪೇಯ್ಡ್‌ ಪ್ಲಾನ್‌

ವಿ ಟೆಲಿಕಾಂ 499 ರೂ. ಪ್ರಿಪೇಯ್ಡ್‌ ಪ್ಲಾನ್‌ 28 ದಿನಗಳ ಮಾನ್ಯತೆಯನ್ನು ಹೊಂದಿದೆ. ಈ ಅವಧಿಯಲ್ಲಿ ದೈನಂದಿನ 2GB ಡೇಟಾವನ್ನು ನೀಡುತ್ತದೆ. ಅಲ್ಲದೆ ಬಳಕೆದಾರರು ಅನಿಯಮಿತ ಧ್ವನಿ ಕರೆಗಳು ಹಾಗೂ ದಿನಕ್ಕೆ 100 SMS ಪ್ರಯೋಜನ ಪಡೆಯಲಿದ್ದಾರೆ. ಇನ್ನು ಈ ಯೋಜನೆಯು ಒಂದು ವರ್ಷದ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆ ಯನ್ನು ನೀಡಲಿದೆ.

ಜಿಯೋ 601 ರೂ. ಪ್ರಿಪೇಯ್ಡ್‌ ಪ್ಲಾನ್‌

ಜಿಯೋ 601 ರೂ. ಪ್ರಿಪೇಯ್ಡ್‌ ಪ್ಲಾನ್‌

ಜಿಯೋ ಟೆಲಿಕಾಂ 601 ರೂ. ಪ್ರಿಪೇಯ್ಡ್‌ ಪ್ಲಾನ್‌ ನಲ್ಲಿ ನಿಮಗೆ ಒಂದು ವರ್ಷದ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಚಂದಾದಾರಿಕೆಯನ್ನು ನೀಡಲಿದೆ. ಈ ಪ್ಲಾನ್‌ 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ನೀಡಲಿದೆ. ಈ ಸಮಯದಲ್ಲಿ ಪ್ರತಿದಿನ 3GB ಡೇಟಾ ಪ್ರಯೋಜನವನ್ನು ಪಡೆಯಬಹುದು. ಅಲ್ಲದೆ ಅನಿಯಮಿತ ಕರೆ ಪ್ರಯೋಜನ ಹಾಗೂ ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ.

ಜಿಯೋ 499ರೂ.ಪ್ರಿಪೇಯ್ಡ್‌ ಪ್ಲಾನ್‌

ಜಿಯೋ 499ರೂ.ಪ್ರಿಪೇಯ್ಡ್‌ ಪ್ಲಾನ್‌

ಜಿಯೋದ 499 ರೂ. ಬೆಲೆಯ ಪ್ರಿಪೇಯ್ಡ್ ಕೂಡ ಸೇರಿದೆ. ಈ ಪ್ಲಾನ್‌ನಲ್ಲಿ ಅನಿಯಮಿತ ಧ್ವನಿ ಕರೆಗಳು, ದಿನಕ್ಕೆ 100 SMS ಮತ್ತು ದೈನಂದಿನ 2GB ಡೇಟಾ ಪ್ರಯೋಜನ ದೊರೆಯಲಿದ್ದು, 28 ದಿನಗಳ ಮಾನ್ಯತೆಯ ಹೊಂದಿದೆ. ಇದಲ್ಲದೆ ಈ ಪ್ಲಾನ್‌ನಲ್ಲಿ ಒಂದು ವರ್ಷದ Disney+ Hotstar ಮೊಬೈಲ್ ಚಂದಾದಾರಿಕೆ ಯನ್ನು ಒಳಗೊಂಡಿದೆ.

ಜಿಯೋ 4,199ರೂ. ಪ್ರೀಪೇಯ್ಡ್‌ ಪ್ಲ್ಯಾನ್

ಜಿಯೋ 4,199ರೂ. ಪ್ರೀಪೇಯ್ಡ್‌ ಪ್ಲ್ಯಾನ್

ಸೌಲಭ್ಯಗಳು ರಿಲಾಯನ್ಸ್‌ ಜಿಯೋ ಟೆಲಿಕಾಂನ 4,199ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಒಂದು ವಾರ್ಷಿಕ ಅವಧಿಯ ಯೋಜನೆ ಆಗಿದೆ. ಈ ಯೋಜನೆಯು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಪ್ರತಿದಿನ 3 GB ಡೇಟಾ ಪ್ರಯೋಜನ ಗಳು ಗ್ರಾಹಕರಿಗೆ ಲಭ್ಯವಾಗಲಿದ್ದು, ಪೂರ್ಣ ವ್ಯಾಲಿಡಿಟಿ ಅವಧಿಗೆ 1095 GB ಡೇಟಾ ಸೌಲಭ್ಯ ಸಿಗಲಿದೆ. ಹಾಗೆಯೇ ಜಿಯೋ ಸೇರಿದಂತೆ ಇತರೆ ನೆಟವರ್ಕ್‌ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಇದರೊಂದಿಗೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಚಂದಾದಾರಿಕೆ ಲಭ್ಯ.

ಏರ್‌ಟೆಲ್‌ನ 3359ರೂ. ಪ್ರೀಪೇಯ್ಡ್‌ ಪ್ಲಾನ್ ಪ್ರಯೋಜನಗಳು

ಏರ್‌ಟೆಲ್‌ನ 3359ರೂ. ಪ್ರೀಪೇಯ್ಡ್‌ ಪ್ಲಾನ್ ಪ್ರಯೋಜನಗಳು

ಏರ್‌ಟೆಲ್‌ ಟೆಲಿಕಾಂನ ಈ ಪ್ರೀಪೇಯ್ಡ್‌ ಪ್ಲ್ಯಾನ್ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಪ್ರತಿದಿನ 2 GB ಡೇಟಾ ಪ್ರಯೋಜನ ಗಳು ಗ್ರಾಹಕರಿಗೆ ಲಭ್ಯ ವಾಗಲಿವೆ. ಏರ್‌ಟೆಲ್‌ ಸೇರಿದಂತೆ ಇತರೆ ನೆಟವರ್ಕ್‌ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಹೆಚ್ಚುವರಿ ಯಾಗಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಸದಸ್ಯತ್ವ, ಏರ್‌ಟೆಲ್ X stream ಪ್ರೀಮಿಯಂ, ವಿಂಕ್ ಮ್ಯೂಸಿಕ್, ಫಾಸ್ಟ್‌ ಟ್ಯಾಗ್ ಕ್ಯಾಶ್‌ಬ್ಯಾಕ್ ಸೇವೆಗಳು ಲಭ್ಯ.

Most Read Articles
Best Mobiles in India

English summary
Jio, Airtel, Vi Customers Might Shy Away from Disney+ Hotstar Plans Now: Details.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X