ಜಿಯೋ, ವಿ, ಏರ್‌ಟೆಲ್‌ ಟೆಲಿಕಾಂನ ಈ ಪ್ಲ್ಯಾನ್‌ಗಳಲ್ಲಿ ಇನ್ಮುಂದೆ SMS ಅಲಭ್ಯ!

|

ಭಾರತೀಯ ಟೆಲಿಕಾಂ ಖಾಸಗಿ ಆಪರೇಟರ್‌ಗಳಾದ ಜಿಯೋ, ಏರ್‌ಟೆಲ್‌ ಮತ್ತು ವಿ ಟೆಲಿಕಾಂ ಗ್ರಾಹಕರ ಸಂಖ್ಯೆ ಹೆಚ್ಚಿಸಿಕೊಳ್ಳಲು ಭಿನ್ನ ಯೋಜನೆಗಳನ್ನು ಪರಿಚಯಿಸಿವೆ. ದೈಲಿ ಡೇಟಾ, ಎಸ್‌ಎಮ್‌ಎಸ್‌, ದೀರ್ಘ ವ್ಯಾಲಿಡಿಟಿ ಸೇರಿದಂತೆ ಹೆಚ್ಚುವರಿ ಸೌಲಭ್ಯಗಳನ್ನು ಒದಗಿಸಿವೆ. ಹಾಗೆಯೇ ಕಡಿಮೆ ಬೆಲೆಯಿಂದ ದುಬಾರಿ ಬೆಲೆಯವರೆಗೂ ಹಲವು ಭಿನ್ನ ಪ್ರೀಪೇಯ್ಡ್‌ ಯೋಜನೆಗಳ ಆಯ್ಕೆ ಹೊಂದಿವೆ. ಆದರೆ ಇದೀಗ ಕೆಲವು ಅಗ್ಗದ ಪ್ಲ್ಯಾನ್‌ಗಳಲ್ಲಿ ಉಚಿತ ಎಸ್‌ಎಮ್‌ಎಸ್‌ ಸೇವೆ ಒದಗಿಸಲ್ಲ.

ಐಡಿಯಾ

ಹೌದು, ವೊಡಾಫೋನ್ ಐಡಿಯಾ, ಏರ್‌ಟೆಲ್‌ ಹಾಗೂ ಜಿಯೋ ಟೆಲಿಕಾಂಗಳು 100ರೂ. ಒಳಗಿನ ಪ್ರೀಪೇಯ್ಡ್‌ ಯೋಜನೆಗಳಲ್ಲಿ ಈಗ ಉಚಿತ ಎಸ್‌ಎಮ್‌ಎಸ್‌ ಸೇವೆಗಳನ್ನು ಒದಗಿಸಲ್ಲ. ಎಂಟ್ರಿ ಲೆವೆಲ್ ಪ್ರೀಪೇಯ್ಡ್‌ ಯೋಜನೆಗಳ ಬಳಕೆದಾರರಿಗೆ ಎಸ್‌ಎಮ್‌ಎಸ್‌ ಸೇವೆ ಅಲಭ್ಯ ಇರಲಿದೆ. ಎಸ್‌ಎಮ್‌ಎಸ್‌ ಸೇವೆ ಸ್ಥಗಿತವು ಚಂದಾದಾರರಿಗೆ ಹೊರೆ ಎನಿಸಲಿದೆ. ಹೀಗಾಗಿ ಜಿಯೋ, ಏರ್‌ಟೆಲ್‌ ಹಾಗೂ ವಿ ಟೆಲಿಕಾಂಗಳ ಅಗ್ಗದ ಪ್ರಿಪೇಯ್ಡ್ ರೀಚಾರ್ಜ್‌ಗಳಲ್ಲಿ ಗ್ರಾಹಕರಿಗೆ ಅನಿಯಮಿತ ವಾಯಿಸ್ ಕರೆ ಮತ್ತು ಹೈ-ಸ್ಪೀಡ್ ಡೇಟಾ ಪ್ರಯೋಜನ ಮಾತ್ರ ದೊರೆಯಲಿದೆ.

ಪ್ರಿಪೇಯ್ಡ್

ಜಿಯೋ ಟೆಲಿಕಾಂನ 98ರೂ. ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ ಅತ್ಯಂತ ಕಡಿಮೆ ಬೆಲೆಯ ಯೋಜನೆ ಆಗಿದೆ. ಇದು ಪ್ರತಿದಿನ 1.5GB ಹೈಸ್ಪೀಡ್ ಡೇಟಾ ಮತ್ತು ಅನಿಯಮಿತ ವಾಯಿಸ್ ಕರೆಗಳನ್ನು ಒಳಗೊಂಡಿದೆ. ಹಾಗೆಯೇ ಈ ಯೋಜನೆಯು 14 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತದೆ. ಹಾಗೆಯೇ ಜಿಯೋ 39ರೂ. ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ 1.4GB ಹೈ-ಸ್ಪೀಡ್ ಡೇಟಾ ಆಕ್ಸೆಸ್ ಮತ್ತು 14 ದಿನಗಳವರೆಗೆ ಅನಿಯಮಿತ ವಾಯಿಸ್ ಕರೆಗಳು ಸೌಲಭ್ಯ ಪಡೆದಿದೆ. ಆದಾಗ್ಯೂ, ಇದು ಜಿಯೋ ಫೋನ್ ಗ್ರಾಹಕರಿಗೆ ಸೀಮಿತವಾಗಿದೆ ಮತ್ತು ಸಾಮಾನ್ಯ ಬಳಕೆದಾರರಿಗೆ ಲಭ್ಯವಿಲ್ಲ.

ವ್ಯಾಲಿಡಿಟಿ

ವಿ ಟೆಲಿಕಾಂನ ಎಂಟ್ರಿ ಲೆವೆಲ್‌ ಯೋಜನೆಗಳಲ್ಲಿ ಒಂದಾದ 49ರೂ. ಪ್ರಿಪೇಯ್ಡ್ ಪ್ಲಾನ್ ಅದರ ಅಗ್ಗದ ಆಯ್ಕೆಯಾಗಿದೆ. ಈ ಯೋಜನೆಯು 100MB ಡೇಟಾ ಪ್ರಯೋಜನ ಪಡೆದಿದೆ. ಹಾಗೆಯೇ ಈ ಪ್ಲ್ಯಾನ್ 28 ದಿನಗಳ ವ್ಯಾಲಿಡಿಟಿ ಸೌಲಭ್ಯವನ್ನು ಹೊಂದಿದೆ. ಅಲ್ಲದೇ 38ರೂ.ಗಳ ಟಾಕ್‌ಟೈಮ್ ಅನ್ನು ಪಡೆದುಕೊಮಡಿದೆ. ವಿ ಪ್ಯಾಕ್ ಸ್ಥಳೀಯ ಮತ್ತು ರಾಷ್ಟ್ರೀಯ ಕರೆಗಳನ್ನು ಪ್ರತಿ ಸೆಕೆಂಡಿಗೆ 2.5 ಪೈಸೆ ಮಾಡುತ್ತದೆ.

ಡೇಟಾ

ಏರ್‌ಟೆಲ್‌ ಟೆಲಿಕಾಂ ಇತ್ತೀಚಿಗೆ ತನ್ನ ಅಗ್ಗದ 49ರೂ. ರೀಚಾರ್ಜ್ ಪ್ಲ್ಯಾನ್‌ ಅನ್ನು ನಿಲ್ಲಿಸಿತು. ಹೀಗಾಗಿ ಸದ್ಯ ಏರ್‌ಟೆಲ್‌ನಲ್ಲಿ 79ರೂ. ಪ್ರೀಪೇಯ್ಡ್‌ ಯೋಜನೆ ಕಡಿಮೆ ದರದ ಯೋಜನೆ ಆಗಿದೆ. ಈ ಯೋಜನೆಯು 64ರೂ. ಗಳ ಟಾಕ್‌ಟೈಮ್‌ ಪ್ರಯೋಜನ ಪಡೆದಿದ್ದು, 200MB ಡೇಟಾ ಸೌಲಭ್ಯವನ್ನು ಒಳಗೊಂಡಿದೆ.

ಎಸ್‌ಎಂಎಸ್

ಟೆಲಿಕಾಂ ಆಪರೇಟರ್‌ಗಳು ತಮ್ಮ ಬಳಕೆದಾರರ ಸರಾಸರಿ ಆದಾಯವನ್ನು ಹೆಚ್ಚಿಸಲು (ARPU) ತಮ್ಮ ಅಗ್ಗದ ಪ್ರೀಪೇಯ್ಡ್‌ ಯೋಜನೆಗಳಲ್ಲಿ ಎಸ್‌ಎಮ್‌ಎಸ್‌ ಪ್ರಯೋಜನಗಳನ್ನು ಇನ್ನು ಮುಂದೆ ನೀಡುವುದಿಲ್ಲ ಎಂದು ಹೇಳಿವೆ. ಗ್ರಾಹಕರು ಟೆಕ್ಟ್ಸ್ ಮೆಸೆಜ್‌ ಕಳುಹಿಸಲು ಬಯಸಿದರೆ ಹೆಚ್ಚುವರಿ ಎಸ್‌ಎಂಎಸ್ ಪ್ಯಾಕ್ ಅನ್ನು ಆಯ್ಕೆ ಮಾಡಬೇಕಿದೆ ಅಥವಾ ಹೆಚ್ಚಿನ ಮೌಲ್ಯದ ಯೋಜನೆಯನ್ನು ರೀಚಾರ್ಜ್ ಮಾಡಿಕೊಳ್ಳಬೇಕಿದೆ.

Best Mobiles in India

English summary
Jio, Airtel, Vi No Longer Provide SMS Benefits With These Prepaid Plans.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X