ಜಿಯೋ ಹೊಸ ಆಲ್‌-ಇನ್‌-ಒನ್ ಪ್ಲ್ಯಾನ್‌ಗಳು ಜಾರಿ : ಬೆಲೆ ಕೇಳಿ ಥಂಡಾ ಹೊಡೆದ ಗ್ರಾಹಕ!

|

ಸದ್ಯ ದೇಶದ ಟೆಲಿಕಾಂ ವಲಯದಲ್ಲಿ ಖಾಸಗಿ ಟೆಲಿಕಾಂ ಕಂಪನಿಗಳು ಪ್ರೀಪೇಡ್ ಪ್ಲ್ಯಾನ್‌ಗಳ ಬೆಲೆ ಏರಿಕೆ ಮಾಡುವ ನಿರ್ಧಾರ ಮಾಡಿರುವುದು ತಿಳಿದ ಸಂಗತಿಯೇ ಆಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಏರ್‌ಟೆಲ್, ವೊಡಾಫೋನ್ ಸಂಸ್ಥೆಗಳು ದರ ಹೆಚ್ಚಳ ಮಾಡಿವೆ. ಹಾಗೆಯೇ ಜನಪ್ರಿಯ ರಿಲಾಯನ್ಸ್ ಜಿಯೋ ಸಹ ಈಗ ಹೊಸ ಆಲ್-ಇನ್-ಒನ್ ಪ್ರಿಪೇಯ್ಡ್ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಹೊಸ ಪ್ಲ್ಯಾನ್‌ಗಳು ಗ್ರಾಹಕರ ಮೂಗಿಗೆ ತುಪ್ಪ ಸವರಿದಂತಿವೆ.

ಜಿಯೋ ಸಂಸ್ಥೆ

ಹೌದು, ಜಿಯೋ ಸಂಸ್ಥೆಯು ಇದೀಗ ಒಟ್ಟು 11 ಪ್ರಿಪೇಯ್ಡ್ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಜಿಯೋ ಸಂಸ್ಥೆಯ ಹೊಸ ಆಲ್‌-ಇನ್‌-ಪ್ಲ್ಯಾನ್‌ಗಳು ಕರೆ ಮತ್ತು ಡೇಟಾ ಪ್ರಯೋಜನಗಳನ್ನು ಒಳಗೊಂಡಿವೆ. ಅವುಗಳಲ್ಲಿ ಆರಂಭಿಕ ದರವು 129 ರೂ.ಆಗಿರುವುದು ಗಮನಾರ್ಹವಾಗಿ. ಇನ್ನು 1699ರೂ.ಗಳಿಗೆ ಲಭ್ಯವಿದ್ದ ವಾರ್ಷಿಕ ಪ್ಲ್ಯಾನ್‌ ಇದೀಗ 2,199ರೂ.ಗಳಿಗೆ ಏರಿಕೆ ಕಂಡಿದೆ. ಅಂದಹಾಗೇ ಈ ಹೊಸ ದರಗಳು ಇದೇ ಡಿಸೆಂಬರ್ 6 ರಿಂದ ಜಾರಿಗೆ ಬರಲಿವೆ. ಹಾಗಾದರೇ ಜಿಯೋದ ಹೊಸ ಆಲ್‌-ಇನ್‌-ಪ್ಲ್ಯಾನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

28 ದಿನಗಳ ವ್ಯಾಲಿಡಿಟಿ ಪ್ಲ್ಯಾನ್‌ಗಳು

28 ದಿನಗಳ ವ್ಯಾಲಿಡಿಟಿ ಪ್ಲ್ಯಾನ್‌ಗಳು

ಜಿಯೋ 199ರೂ, 249ರೂ ಮತ್ತು 349ರೂ.ಗಳ ಬೆಲೆಯ ಮೂರು ಹೊಸ ಪ್ಲ್ಯಾನ್‌ಗಳನ್ನು ಪರಿಚಯಿಸಿದ್ದು, ಇವು ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿವೆ. ಈ ಮೂರು ಪ್ಲ್ಯಾನ್‌ಗಳು ಜಿಯೋ ಟು ಜಿಯೋ ಕರೆ ಉಚಿತ ಹಾಗೂ ಇತರೆ ಟೆಲಿಕಾಂಗಳಿಗೆ 1000 ನಿಮಿಷಗಳ ಉಚಿತ ಕರೆ ಮಿತಿಯ ಸೌಲಭ್ಯ ಹೊಂದಿವೆ. ಇನ್ನು 199ರೂ,ಪ್ಲ್ಯಾನ್‌ ಪ್ರತಿದಿನ 1.5GB, 249ರೂ.ಪ್ಲ್ಯಾನ್ ಪ್ರತಿದಿನ 2GB ಮತ್ತು 349ರೂ.ಪ್ಲ್ಯಾನ್ ಪ್ರತಿದಿನ 3GB ಡೇಟಾ ಲಭ್ಯವಾಗಲಿದೆ.

56 ದಿನಗಳ ವ್ಯಾಲಿಡಿಟಿ ಪ್ಲ್ಯಾನ್‌ಗಳು

56 ದಿನಗಳ ವ್ಯಾಲಿಡಿಟಿ ಪ್ಲ್ಯಾನ್‌ಗಳು

ಜಿಯೋ 399ರೂ ಮತ್ತು 444ರೂ.ಗಳ ಬೆಲೆಯ ಎರಡು ಹೊಸ ಪ್ಲ್ಯಾನ್‌ಗಳನ್ನು ಪರಿಚಯಿಸಿದ್ದು, ಇವು ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿವೆ. ಈ ಎರಡು ಪ್ಲ್ಯಾನ್‌ಗಳು ಜಿಯೋ ಟು ಜಿಯೋ ಕರೆ ಉಚಿತ ಹಾಗೂ ಇತರೆ ಟೆಲಿಕಾಂಗಳಿಗೆ 2000 ನಿಮಿಷಗಳ ಉಚಿತ ಕರೆ ಮಿತಿಯ ಸೌಲಭ್ಯ ಹೊಂದಿವೆ. ಇನ್ನು 399ರೂ ಪ್ಲ್ಯಾನ್‌ ಪ್ರತಿದಿನ 1.5GB ಮತ್ತು 444ರೂ.ಪ್ಲ್ಯಾನ್ ಪ್ರತಿದಿನ 2GB ಡೇಟಾ ಪ್ರಯೋಜನ ಪಡೆದಿವೆ.

84 ದಿನಗಳ ವ್ಯಾಲಿಡಿಟಿ ಪ್ಲ್ಯಾನ್‌ಗಳು

84 ದಿನಗಳ ವ್ಯಾಲಿಡಿಟಿ ಪ್ಲ್ಯಾನ್‌ಗಳು

ಜಿಯೋ 84 ದಿನಗಳ ವ್ಯಾಲಿಡಿಟಿ ಎರಡು ಹೊಸ ಪ್ಲ್ಯಾನ್‌ಗಳನ್ನು ಬಿಡುಗಡೆ ಮಾಡಿದ್ದು, ಅವುಗಳು ಕ್ರಮವಾಗಿ 555ರೂ ಮತ್ತು 599ರೂ.ಗಳ ಬೆಲೆಯನ್ನು ಹೊಂದಿವೆ. ಈ ಎರಡು ಪ್ಲ್ಯಾನ್‌ಗಳು ಸಹ ಜಿಯೋ ಟು ಜಿಯೋ ಕರೆ ಉಚಿತ ಹಾಗೂ ಇತರೆ ಟೆಲಿಕಾಂಗಳಿಗೆ 3000 ನಿಮಿಷಗಳ ಉಚಿತ ಕರೆ ಮಿತಿಯ ಸೌಲಭ್ಯ ಹೊಂದಿವೆ. ಅವುಗಳಲ್ಲಿ 555ರೂ. ಪ್ಲ್ಯಾನಿನಲ್ಲಿ ಪ್ರತಿದಿನ 1.5GB ಲಭ್ಯವಾದರೇ, 599ರೂ.ಪ್ಲ್ಯಾನಿನಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ಸಿಗಲಿದೆ.

365 ದಿನಗಳ ವ್ಯಾಲಿಡಿಟಿ ಪ್ಲ್ಯಾನ್‌

365 ದಿನಗಳ ವ್ಯಾಲಿಡಿಟಿ ಪ್ಲ್ಯಾನ್‌

ಜಿಯೋ ಹೊಸದೊಂದು ವಾರ್ಷಿಕ (365 ದಿನಗಳು) ಪ್ರೀಪೇಡ್‌ ಪ್ಲ್ಯಾನ್‌ ರಿಲೀಸ್ ಮಾಡಿದ್ದು, ಈ ಪ್ಲ್ಯಾನ್‌ 2199ರೂ. ಪ್ರೈಸ್‌ನಲ್ಲಿದೆ. ಗ್ರಾಹಕರಿಗೆ ಈ ಅವಧಿಯಲ್ಲಿ ಜಿಯೋ ಟು ಜಿಯೋ ಉಚಿತ ಕರೆ ಹಾಗೂ ಇತರೆ ಟೆಲಿಕಾಂಗಳಿಗೆ ಒಟ್ಟು 12000 ನಿಮಿಷಗಳ ಉಚಿತ ಕರೆಯ ಮಿತಿಯ ಸೌಲಭ್ಯ ಸಿಗಲಿದೆ. ಇನ್ನು ಪ್ರತಿದಿನ 1.5GB ಡೇಟಾ ಪ್ರಯೋಜನ ದೊರೆಯಲಿದೆ.

ಇತರೆ ಅಗ್ಗದ ಪ್ಲ್ಯಾನ್‌ಗಳು

ಇನ್ನು ಜಿಯೋ ಕೆಲವು ಆಕರ್ಷಕ ಪ್ರೀಪೇಡ್‌ ಪ್ಲ್ಯಾನ್‌ಗಳನ್ನು ಸಹ ಪರಿಚಯಿಸಿದ್ದು, ಅವುಗಳು 129ರೂ, 329ರೂ ಮತ್ತು 1299ರೂ.ಗಳ ಬೆಲೆಯಲ್ಲಿವೆ. ಇವುಗಳಲ್ಲಿ 129ರೂ,ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿ ಪಡೆದಿದೆ. ಇನ್ನು ಈ ಪ್ಲ್ಯಾನ್ ಪೂರ್ಣ ಅವಧಿಗೆ 2GB ಡೇಟಾ, ಇತರೆ ಟೆಲಿಕಾಂಗಳಿಗೆ 1000 ನಿಮಿಷಗಳ ಉಚಿತ ಕರೆ ಪ್ರಯೋಜನ ಹೊಂದಿದೆ. ಹಾಗೆಯೇ 329ರೂ .ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಹೊಂದಿದ್ದು, 3000 ಉಚಿತ ಕರೆ ಮಿತಿ ಪಡೆದಿದೆ. ಹಾಗೂ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 6GB ಡೇಟಾ ಪ್ರಯೋಜನ ಒದಗಿಸಲಿದೆ. ಇನ್ನು 1299ರೂ. ಪ್ಲ್ಯಾನ್ 365 ದಿನಗಳ ವಾಯ್ದೆ ಹೊಂದಿದ್ದು, 12000 ನಿಮಿಷಗಳ ಉಚಿತ ಕರೆ(ಇತರೆ ನೆಟವರ್ಕ) ಸೌಲಭ್ಯ ಇದೆ. ಹಾಗೂ ಪೂರ್ಣ ಅವಧಿಗೆ ಒಟ್ಟು 6GB ಡೇಟಾ ಪ್ರಯೋಜನ ಲಭ್ಯ. ಈ ಅಗ್ಗದ 3 ಪ್ಲ್ಯಾನ್‌ಗಳು ಹೆಚ್ಚು ಡೇಟಾ ಬಯಸುವ ಗ್ರಾಹಕರಿಕೆ ಸೂಕ್ತ ಅನಿಸುವುದಿಲ.

Best Mobiles in India

English summary
Reliance Jio on Wednesday announced revised all-in-one plans for its subscribers. The revised plans will come into effect on December 6, 2019. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X