Subscribe to Gizbot

ಜಿಯೋಗೆ ಮತ್ತೊಂದು ವಿಶ್ವ ಕಿರೀಟ!..ಏನಂತ ಗೊತ್ತಾದ್ರೆ ಖುಷಿಪಡ್ತಿರಾ!!

Written By:

ತಿಂಗಳಿಗೆ 100 ಕೋಟಿ ಜಿಬಿಗೂ ಹೆಚ್ಚು ಡೇಟಾ ಪೂರೈಕೆ ಮತ್ತು ನಿರ್ವಹಣೆ ಮಾಡುತ್ತಿರುವ ವಿಶ್ವದ ಮೊದಲ ಹಾಗೂ ಏಕೈಕ ಎಕ್ಸಾಬೈಟ್ ಟೆಲಿಕಾಂ ಜಾಲ ಎಂಬ ಕಿರೀಟ ಜಿಯೋಗೆ ಒಲಿದಿದೆ.!! ಹೌದು, ಕೇವಲ ಒಂದೇ ವರ್ಷದಲ್ಲಿ ಜಿಯೋ ಪ್ರಪಂಚದ ಬೆಸ್ಟ್‌ ಟೆಲಿಕಾಂಗಳಲ್ಲೊಂದು ಹೆಸರು ಮಾಡಿದೆ.!!

ಕಳೆದ ಸೆಪ್ಟೆಂಬರ್‌ನಲ್ಲಿ 4G Volte ನೆಟ್‌ವರ್ಕ್‌ನೊಂದಿಗೆ ಕಾರ್ಯಾರಂಭಿಸಿದ ರಿಲಯನ್ಸ್ ಜಿಯೋ ಈಗ ದೇಶದ ಅತಿದೊಡ್ಡ ಮತ್ತು ಸಂಪೂರ್ಣ ಎಲ್‌ಟಿಇ ಪ್ರಸಾರ ವ್ಯಾಪ್ತಿಯನ್ನು ಹೊಂದಿರುವ ಮೊಬೈಲ್‌ ನೆಟ್‌ವರ್ಕ್‌ ಆಗಿದೆ.!! ಕೇವಲ ಒಂದೇ ವರ್ಷದಲ್ಲಿ ದೇಶದ ಅತಿದೊಡ್ಡ ಮೊಬೈಲ್‌ ನೆಟ್‌ವರ್ಕ್‌ ಸಂಸ್ಥೆಯಾಗಿ ಬೆಳೆದುನಿಂತು ಎಲ್ಲರನ್ನು ಬೆರಗುಗೊಳಿಸಿದೆ.!!

ಹಾಗಾದರೆ, ಜಿಯೋ ದೇಶದ ಅತಿದೊಡ್ಡ ಮೊಬೈಲ್‌ ನೆಟ್‌ವರ್ಕ್‌ ಸಂಸ್ಥೆಯಾಗಿ ಬೆಳೆದಿದ್ದು ಹೇಗೆ? ಭವಿಷ್ಯದ ಜಿಯೋ ಹೇಗಿರಲಿದೆ? ಜಿಯೋಗೆ ಸೇರುತ್ತಿರುವ ಗ್ರಾಹಕರ ಸಂಖ್ಯೆ ಎಷ್ಟು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
5 ಪಟ್ಟು ಹೆಚ್ಚು ಜಾಲ!!

5 ಪಟ್ಟು ಹೆಚ್ಚು ಜಾಲ!!

ದೇಶದ ಇತರೆ ಟೆಲಿಕಾಂ ಸಂಸ್ಥೆಗಳಿಗೆ ಹೋಲಿಸಿದರೆ ಜಿಯೊ ಜಾಲ ಐದು ಪಟ್ಟು ಹೆಚ್ಚಾಗಿದೆ.! ಜಿಯೋ ಎಲ್‌ಟಿಇ ನೆಟ್‌ವರ್ಕ್‌ ವ್ಯಾಪ್ತಿ 800 ಮೆಗಾಹರ್ಟ್ಸ, 1800 ಮೆಗಾಹರ್ಟ್ಸ್, ಹಾಗೂ 2300 ಮೆಗಾಹರ್ಟ್ಸ್ ಬ್ಯಾಂಡ್‌ಗಳವರೆಗೆ ಇದೆ.!! ಹಾಗಾಗಿ, ಪ್ರಸ್ತುತ 13ಕೋಟಿ ಅಧಿಕ ಜನ ಜಿಯೊ ಸಂಪರ್ಕ ಹೊಂದಿದ್ದಾರೆ.!!

250 ಕೋಟಿ ನಿಮಿಷ ವಾಯ್ಸ್‌ ಟ್ರಾಫಿಕ್‌

250 ಕೋಟಿ ನಿಮಿಷ ವಾಯ್ಸ್‌ ಟ್ರಾಫಿಕ್‌

ಟೆಲಿಕಾಂನಲ್ಲಿಯೇ ಮೊದಲು ಉಚಿತ ಕರೆಗಳ ಸೌಲಭ್ಯವನ್ನು ಜಿಯೋ ನೀಡುತ್ತಿರುವುದರಿಂದ ಪ್ರತಿದಿನ 250 ಕೋಟಿ ನಿಮಿಷಕ್ಕೂ ಹೆಚ್ಚು ವಾಯ್ಸ್‌ ಟ್ರಾಫಿಕ್‌ ಅನ್ನು ಜಿಯೊ ನಿರ್ವಹಣೆ ಮಾಡುತ್ತಿದೆ. ಇನ್ನು 20 ರೂಪಾಯಿಗಿಂತ ಕಡಿಮೆ ದರದಲ್ಲಿ 1ಜಿಬಿ ಡೇಟಾ ದೊರೆಯುತ್ತಿದೆ.

ವೇಗದಲ್ಲಿ ಮೊದಲು ಜಿಯೋ!!

ವೇಗದಲ್ಲಿ ಮೊದಲು ಜಿಯೋ!!

ಇಷ್ಟು ದಿವಸ ಭಾರತದಲ್ಲಿ ಹೈ ಸ್ಪೀಡ್ ಡೇಟಾ ಒದಗಿಸುತ್ತಿದ್ದ ಏರ್‌ಟೆಲ್ ಅನ್ನು ಜಿಯೋ ಹಿಂದೆಹಾಕಿದೆ.!! ವೇಗದಲ್ಲಿ ಜಿಯೊ ನೆಟ್‌ವರ್ಕ್‌ ಅಗ್ರಸ್ಥಾನದಲ್ಲಿ ಇದೆ ಎಂದು ದೂರಸಂಪರ್ಕ ಜಾಲಗಳ ಗುಣಮಟ್ಟ ಪರೀಕ್ಷಿಸುವ ಟ್ರಾಯ್‌ ಸ್ಪೀಡ್‌ಟೆಸ್ಟ್‌ ಅಂತರ್ಜಾಲ ತಾಣ ತಿಳಿಸಿದೆ.!!

ಮೊಬೈಲ್ ಬಳಕೆ ಸಮಯ ಹೆಚ್ಚು!!

ಮೊಬೈಲ್ ಬಳಕೆ ಸಮಯ ಹೆಚ್ಚು!!

ಜಿಯೊದಿಂದಾಗಿ ವಕ್ತಿಯೊಬ್ಬ ವ್ಯಕ್ತಿ ವಾರದಲ್ಲಿ ಟಿ.ವಿ ವೀಕ್ಷಿಸುವ ಸಮಯಕ್ಕಿಂತ ಮೊಬೈಲ್ ಬಳಸಲು ತೆಗೆದುಕೊಳ್ಳುವ ಸಮಯ ಏಳು ಪಟ್ಟು ಹೆಚ್ಚಾಗಿದೆ.!! ಅತ್ಯಂತ ಕಡಿಮೆ ಬೆಲೆಯಲ್ಲಿ ಡೇಟಾ ದೊರೆತ ಪರಿಣಾಮ ಎಲ್ಲರೂ ಮೊಬೈಲ್ ಮೂಲಕವೇ ಸಮಯ ಕಳೆಯಲು ಶುರುಮಾಡಿಕೊಂಡಿದ್ದಾರೆ.!!

ಸೆಕೆಂಡಿಗೆ 7 ಗ್ರಾಹಕ ಜಿಯೋಗೆ!!

ಸೆಕೆಂಡಿಗೆ 7 ಗ್ರಾಹಕ ಜಿಯೋಗೆ!!

ರಿಲಯನ್ಸ್ ಜಿಯೋ ಮಾರುಕಟ್ಟೆಗೆ ಕಾಲಿಟ್ಟ ಕೇವಲ 170 ದಿನದಲ್ಲಿ 10 ಕೋಟಿ ಗ್ರಾಹಕರು ಜಿಯೊ ನೆಟ್‌ವರ್ಕ್‌ಗೆ ಸೇರ್ಪಡೆಯಾಗಿದ್ದಾರೆ.!! ಅಂದರೆ, ಪ್ರತಿ ಸೆಕೆಂಡ್‌ಗೆ 7 ಜನ ಗ್ರಾಹಕರು ಜಿಯೋ ಬಳಕೆದಾರರಾಗಿದ್ದು, ಈ ಮೂಲಕ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿದ ಮೊದಲ ಟೆಲಿಕಾಂ ಆಗಿ ಜಿಯೋ ದಾಖಲೆ ಮಾಡಿದೆ.!!

ಓದಿರಿ:ದರಸಮರ ಎಫೆಕ್ಟ್..ಆಫರ್‌ಗಳನ್ನು ಚೇಂಜ್ ಮಾಡಿದ ಜಿಯೋ!..ಇಲ್ಲಿದೆ ಡಿಟೇಲ್ಸ್!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Reliance Jio is the only network in India with complete 4G connectivity to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot