ಭಾರತದಲ್ಲಿ ಇನ್ನು ಅಗಾಧ ಸಂಪತ್ತಿದೆ ಎಂದು ಗೂಗಲ್-ಫೇಸ್‌ಬುಕ್‌ಗೆ ತಿಳಿಸಿದ್ದು ಯಾರು ಗೊತ್ತಾ..?

ಒಂದೇ ಒಂದು ವರ್ಷದಲ್ಲಿ ಭಾರತದ ಕಡೆಗೆ ತಿರುಗಿಯೂ ನೋಡದ ದೈತ್ಯ ಕಂಪನಿಗಳೆಲ್ಲವೂ ಭಾರತಕ್ಕಾಗಿ ಹೊಸ ಸೇವೆಗಳನ್ನು ನೀಡಲು, ಭಾರತೀಯರಿಗಾಗಿಯೇ ವಿಶೇಷ ಸೇವೆಗಳನ್ನು ಆಯೋಜಿಸಲು ಮುಂದಾಗಿವೆ.

|

ಒಂದೇ ಒಂದು ವರ್ಷದಲ್ಲಿ ಜಗತ್ತಿನಲ್ಲಿ ಭಾರತದ ಸ್ಥಾನವನ್ನೇ ಬದಲಾಯಿಸಿದ ಕೀರ್ತಿ ರಿಲಯನ್ಸ್ ಮಾಲೀಕ ಮುಖೇಶ್ ಅಂಬಾನಿಗೆ ಸಲ್ಲುತ್ತದೆ. ಕೇವಲ ಒಂದೇ ಒಂದು ವರ್ಷದಲ್ಲಿ ಭಾರತದ ಕಡೆಗೆ ತಿರುಗಿಯೂ ನೋಡದ ದೈತ್ಯ ಕಂಪನಿಗಳೆಲ್ಲವೂ ಭಾರತಕ್ಕಾಗಿ ಹೊಸ ಸೇವೆಗಳನ್ನು ನೀಡಲು, ಭಾರತೀಯರಿಗಾಗಿಯೇ ವಿಶೇಷ ಸೇವೆಗಳನ್ನು ಆಯೋಜಿಸಲು ಮುಂದಾಗಿವೆ. ಭಾರತದಲ್ಲಿ ಇನ್ನು ಅಗಾಧ ಸಂಪತ್ತಿದೆ ಎನ್ನುವುದನ್ನು ಮನಗಂಡಿವೆ.

ಭಾರತದಲ್ಲಿ ಇನ್ನು ಅಗಾಧ ಸಂಪತ್ತಿದೆ ಎಂದು ಗೂಗಲ್-ಫೇಸ್‌ಬುಕ್‌ಗೆ ತಿಳಿಸಿದ್ದು ಯಾರು

ಓದಿರಿ: ಈ ಆಪ್ ಡೌನಲೋಡ್ ಮಾಡಿಕೊಂಡರೆ ಏರ್‌ಟೆಲ್‌ನಿಂದ 60 GB ಡೇಟಾ ಫ್ರಿ

ಮೊಬೈಲ್ ಡೇಟಾ ಬಳಕೆಯಲ್ಲಿ ಇದೇ 155ನೇ ಸ್ಥಾನದಲ್ಲಿದ್ದ ಭಾರತಕ್ಕೆ ಜಿಯೋ ಮೊದಲ ಸ್ಥಾನ ದೊರಕಿಸಿಕೊಟ್ಟಿದೆ ಎಂದರೆ ತಪ್ಪಾಗುದಿಲ್ಲ. ಒಂದೇ ಒಂದು ವರ್ಷದಲ್ಲಿ ಭಾರತದ ಇಷ್ಟು ಅಭಿವೃದ್ಧಿಯನ್ನು ಕಾಣಲಿದೆ ಎನ್ನುವದನ್ನು ಯಾರು ಊಹಿಸಿರಲಿಲ್ಲ. ಆದರೆ ಜಿಯೋ ತನ್ನ ಬಳಕೆದಾರಿಗೆ ಉಚಿತ ಮತ್ತು ಕಡಿಮೆ ಬೆಲೆಗೆ ಸೇವೆಯನ್ನು ನೀಡಿ. ಈ ಸಾಧನೆಗೆ ಸಾಕ್ಷಿಯಾಗಿದೆ.

ಯೂಟ್ಯೂಬ್, ಫೇಸ್‌ಬುಕ್‌ ಮತ್ತು ವಾಟ್ಸ್ ಆಪ್‌ನಲ್ಲಿ ನಾವೇ ಮೊದಲು:

ಯೂಟ್ಯೂಬ್, ಫೇಸ್‌ಬುಕ್‌ ಮತ್ತು ವಾಟ್ಸ್ ಆಪ್‌ನಲ್ಲಿ ನಾವೇ ಮೊದಲು:

ಕಡಿಮೆ ದರದಲ್ಲಿ ಡೇಟಾವನ್ನು ನೀಡಿದ ಜಿಯೋ, ಈಗ ವಿಶ್ವದಲ್ಲೇ ಅತಿಹೆಚ್ಚು ಗೂಗಲ್‌, ಯೂಟ್ಯೂಬ್, ಫೇಸ್‌ಬುಕ್‌ ಮತ್ತು ವಾಟ್ಸ್ ಆಪ್‌ ಬಳಕೆದಾರರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಭಾರತಕ್ಕೆ ಮೊದಲನೇ ಸ್ಥಾನವನ್ನು ತಂದುಕೊಟ್ಟಿದೆ.

ತಿಂಗಳಿಗೆ ಜಿಯೋದಿಂದ 100 ಕೋಟಿ GB 4G ಡೇಟಾ ಪೂರೈಕೆ:

ತಿಂಗಳಿಗೆ ಜಿಯೋದಿಂದ 100 ಕೋಟಿ GB 4G ಡೇಟಾ ಪೂರೈಕೆ:

ಈ ಮೊದಲು ದೇಶದಲ್ಲಿ ಒಂದು ತಿಂಗಳಿಗೆ ಎಲ್ಲಾ ಕಂಪನಿಗಳ ಬಳಕೆದಾರರು ಬಳಸುವ ಒಟ್ಟು ಡೇಟಾ 20 ಕೋಟಿ GB ಆಗಿತ್ತು. ಆದರೆ ಒಂದು ಜಿಯೋ ಇಂದು ತಿಂಗಳಿಗೆ 100 ಕೋಟಿ GBಗೂ ಹೆಚ್ಚು ಡೇಟಾವನ್ನು ತನ್ನ ಬಳಕೆದಾರರಿಗೆ ಪೂರೈಕೆ ಮಾಡುತ್ತಿದ್ದು, ಇಷ್ಟು ಪ್ರಮಾಣದ ಡೇಟಾವನ್ನು ಪೂರೈಸುತ್ತಿರುವ ವಿಶ್ವದ ಮೊದಲ ಟೆಲಿಕಾಂ ಕಂಪನಿ ಇದಾಗಿದೆ.

ಪ್ರತಿ ತಿಂಗಳಿಗೆ ಡೇಟಾ ಬಳಕೆ ಈಗ 150 ಕೋಟಿ GB:

ಪ್ರತಿ ತಿಂಗಳಿಗೆ ಡೇಟಾ ಬಳಕೆ ಈಗ 150 ಕೋಟಿ GB:

ಜಿಯೋ ಆರಂಭಕ್ಕೂ ಮುನ್ನ ದೇಶದಲ್ಲಿ 20 ಕೋಟಿ GB ಮೊಬೈಲ್‌ ಡೇಟಾ ಬಳಕೆಯಾಗುತ್ತಿತ್ತು. ಆದರೆ ಈಗ ಈ ಪ್ರಮಾಣ 150ಕೋಟಿ GBಗೆ ತಲುಪಿದೆ. ಇದರಲ್ಲಿ 125 ಕೋಟಿಗೂ ಅಧಿಕ GB ಡೇಟಾವನ್ನು ಜಿಯೊ ಗ್ರಾಹಕರೇ ಬಳಸುತ್ತಿದ್ದಾರೆ. ದೇಶದ ಇತರೆ ಟೆಲಿಕಾಂ ಸಂಸ್ಥೆಗಳಿಗೆ ಹೋಲಿಸಿದೆ ಇದು ಐದು ಪಟ್ಟು ಹೆಚ್ಚು ಎನ್ನಲಾಗಿದೆ.

ಡೇಟಾ ದರ ಕಡಿಮೆ:

ಡೇಟಾ ದರ ಕಡಿಮೆ:

ಜಿಯೋ ಆರಂಭಕ್ಕೂ ಮುನ್ನ ದೇಶದಲ್ಲಿ 1GB ಡೇಟಾಕ್ಕೆ ರೂ.200 ವರೆಗೂ ದರವನ್ನು ವಿಧಿಸಲಾಗುತ್ತಿತ್ತು. ಆದರೆ ಜಿಯೋ ಆರಂಭದ ನಂತರದಲ್ಲಿ ಇದೇ ರೂ.200ಕ್ಕೆ 20GB ವೇಗದ ಡೇಟಾ ಬಳಕೆದೊರೆಯುತ್ತಿದೆ ಎಂದರೆ ಅದಕ್ಕೆ ಪ್ರಮುಖ ಕಾರಣ ಜಿಯೋ. ಜಿಯೋ ತಾನು ಮಾತ್ರವೇ ಕಡಿಮೆ ಬೆಲೆಗೆ ಡೇಟಾವನ್ನು ನೀಡುವುದಲ್ಲದೇ ಬೇರೆ ಕಂಪನಿಗಳಿಂದಲೂ ಕಡಿಮೆ ಬೆಲೆಗೆ ಸೇವೆಯನ್ನು ನೀಡುವಂತೆ ಮಾಡಿದೆ.

ಭಾರತಕ್ಕೆ ವಿಶೇಷ ಸೇವೆ:

ಭಾರತಕ್ಕೆ ವಿಶೇಷ ಸೇವೆ:

ಗೂಗಲ್ ಹಾಗೂ ಫೇಸ್‌ಬುಕ್ ಗಳು ನಮ್ಮ ದೇಶದಲ್ಲಿರುವ ಅಂತರ್ಜಾಲ ಮಾರುಕಟ್ಟೆಯನ್ನು ಬಳಸಿಕೊಳ್ಳಲು ವಿಶೇಷ ಸೇವೆಗಳನ್ನು ನೀಡುತ್ತಿವೆ. ಅಲ್ಲದೇ ಭಾರತೀಯರಿಗೆ ಹೊಸ ಸೇವೆಗಳನ್ನು ಆರಂಭಿಸಲು ಸ್ಪರ್ಧೆಯನ್ನು ಆರಂಭಿಸಿವೆ.

Best Mobiles in India

English summary
Jio has completed one year. The 4G service was publicly launched on September 5 last year. That was the day when its SIM became available. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X