Subscribe to Gizbot

2018ರಲ್ಲಿಯೂ ನಡೆಯಲಿದೆ 'ಜಿಯೋ' ಆರ್ಭಟ!!..ಮತ್ತೆ ಮೂರು ತಿಂಗಳು ಉಚಿತ ಸೇವೆ?

Written By:

2017 ವರ್ಷ ಮುಗಿದು ಹೊಸ ವರ್ಷ ಪ್ರಾರಂಭಕ್ಕೆ ಜಿಯೋವಿನ ಮತ್ತೊಂದು ಬಂಪರ್ ಸುದ್ದಿ ಹೊರಬಿದ್ದಿದೆ.!! ನೂತನ ವರ್ಷಕ್ಕೆ ಜಿಯೋ ಮತ್ತೊಂದು ಕೊಡುಗೆ ನೀಡಲು ಮುಂದಾಗಿದ್ದು, ಜಿಯೋ ಶೀಘ್ರದಲ್ಲಿಯೇ ಜಿಯೋ ಡಿಟಿಹೆಚ್ ಮತ್ತು ಫೈಬರ್ ನೆಟ್ ಅನ್ನು ಪ್ರಾರಂಭಿಸುತ್ತದೆ ಎಂದು ಜಿಯೋ ಮೂಲಗಳಿಂದ ಮಾಧ್ಯಮಗಳಿಗೆ ಮಾಹಿತಿ ಸಿಕ್ಕಿದೆ.!!

ಗ್ರಾಹಕರಿಗೆ ಈಗಾಗಲೇ ಅಗ್ಗದ ದರದಲ್ಲಿ ಇಂಟರ್‌ನೆಟ್ ಸೇವೆ ನೀಡುತ್ತಿರುವ ಜಿಯೋ 2018 ರಲ್ಲಿ ಡಿಶ್ ಟಿವಿ ಮತ್ತು ಫೈಬರ್ ನೆಟ್ ಪ್ರಾರಂಭಿಸಲಿದೆ. ಇನ್ನು ಪ್ರಾರಂಭಿಕ ಕೊಡುಗೆಳಾಗಿ ಈ ಸೇವೆಗಳನ್ನು ಉಚಿತವಾಗಿ 3 ಅಥವಾ 6 ತಿಂಗಳ ಕಾಲ ಒದಗಿಸಲಾಗುತ್ತದೆ ಎಂದು ಪ್ರಮುಖ ಇಂಗ್ಲೀಷ್ ಮಾಧ್ಯಮಗಳು ವರದಿ ಮಾಡಿವೆ.!!

2018ರಲ್ಲಿಯೂ ನಡೆಯಲಿದೆ 'ಜಿಯೋ' ಆರ್ಭಟ!!..ಮತ್ತೆ ಮೂರು ತಿಂಗಳು ಉಚಿತ ಸೇವೆ?

ಇನ್ನು ಜಿಯೋ ಡಿಟಿಹೆಚ್ ಮತ್ತು ಜಿಯೋ ಫೈಬರ್ ಪ್ಲಾನ್ ಬಗ್ಗೆ ಮಾಹಿತಿ ಲೀಕ್ ಆದ ತಕ್ಷಣವೇ ಇತರ ಟೆಲಿಕಾಂಗಳಿಗೆ ನಡುಕ ಉಂಟಾಗಿದ್ದು, ಲೀಕ್ ಆಗಿರುವ ಮಾಹಿತಿಯಂತೆ ಜಿಯೋ ಫೈಬರ್ ಮತ್ತು ಜಿಯೋ ಡಿಶ್ ಏನೆಲ್ಲಾ ಆಫರ್ ಹೊಂದಿದೆ.? ಲೀಕ್ ಆಗಿರುವ ಮಾಹಿತಿಗಳೇನು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೊಸ ವರ್ಷಕ್ಕೆ ಮತ್ತೊಂದು Jio Surprise Cashback ಆಫರ್!!
1 GBPS ವೇಗದ ಇಂಟರ್‌ನೆಟ್!!

1 GBPS ವೇಗದ ಇಂಟರ್‌ನೆಟ್!!

ಮೂರು ತಿಂಗಳ ಉಚಿತ ಜಿಯೋ ಫೈಬರ್ ಬ್ರಾಡ್‌ಬ್ಯಾಂಡ್ ಡೇಟಾವನ್ನು ಜಿಯೋ 1 GBPS ವೇಗದಲ್ಲಿ ನೀಡುತ್ತಿದೆ.!! ಜಿಯೋ ಫೈಬರ್ ಬ್ರಾಡ್‌ಬ್ಯಾಂಡ್ ಮೂರು ತಿಂಗಳು ಉಚಿತವಾದರೂ ಪ್ರತಿ ತಿಂಗಳು 100GB ಸ್ಪೀಡ್ ಡೇಟಾ ಲಭ್ಯವಿದೆ. ನಂತರ ಕಡಿಮೆ ವೇಗೆದಲ್ಲಿ ಡೇಟಾ ಕಾರ್ಯನಿರ್ವಹಿಸುತ್ತದೆ.!!

4K ಗುಣಮಟ್ಟದಲ್ಲಿ ಬ್ರಾಡ್‌ಬ್ಯಾಂಡ್!!

4K ಗುಣಮಟ್ಟದಲ್ಲಿ ಬ್ರಾಡ್‌ಬ್ಯಾಂಡ್!!

ಜಿಯೋ ಫೈಬರ್ ಟು ದಿ ಹೋಮ್ (ಎಫ್‌ಟಿಟಿಹೆಚ್) ಬ್ರಾಡ್ ಬ್ಯಾಂಡ್ ಸೇವೆಯು 4K ಗುಣಮಟ್ಟದಲ್ಲಿ ದೊರೆಯಲಿದೆ.ಒಂದು ತಿಂಗಳ ವ್ಯಾಲಿಡಿಟಿ ಮುಗಿದ ನಂತರ ಮತ್ತೆ 100GB ಡೇಟಾ ಆಫರ್ ಲಭ್ಯವಾಗುತ್ತದೆ. ಹೀಗೆ ಪ್ರತಿತಿಂಗಳಂತೆ ಮೂರು ತಿಂಗಳು ಜಿಯೋ ಫೈಬರ್ ನೆಟ್ ಸೇವೆ ಉಚಿತವಾಗಿರಲಿದೆ.!!

100GB ಡೇಟಾಗೆ 500 ರೂ.!!

100GB ಡೇಟಾಗೆ 500 ರೂ.!!

ಜಿಯೋ ಫೈಬರ್ ಉಚಿತ ಸೇವೆ ಕೊನೆಯಾದ ನಂತರದ ಆಫರ್ ಬಗ್ಗೆಯೂ ಸಹ ಮಾಹಿತಿ ಹೊರಬಿದ್ದಿದೆ. 100GB ಡೇಟಾಗೆ 500 ರೂ ಹಣ ಪಾವತಿ ಮಾಡಿ ನಂತರ ಜಿಯೋ ಬ್ರಾಡ್‌ಬ್ಯಾಂಡ್ ಸೇವೆಯನ್ನು ಬಳಕೆ ಮಾಡಿಕೊಳ್ಳಬಹುದು ಎಂದು ಮಾಧ್ಯಮಗಳು ವರದಿ ಮಾಡಿವೆ.!!

ಮೂರು ತಿಂಗಳು ಉಚಿತ ಡಿಟಿಹೆಚ್!!

ಮೂರು ತಿಂಗಳು ಉಚಿತ ಡಿಟಿಹೆಚ್!!

ಜಿಯೋ ಸಿಮ್ ರೀತಿಯಲ್ಲಿಯೇ ಜಿಯೋ ಡಿಟಿಹೆಚ್ ಸಹ ಮೂರು ತಿಂಗಳ ಉಚಿತ ಪ್ರಮೋಷನಲ್ ಆಫರ್ ಅನ್ನು ಹೊಂದಿರುತ್ತದೆ ಎನ್ನಲಾಗಿದೆ. ಆದರೆ, ಜಿಯೋ ಡಿಟಿಹೆಚ್ ಸೇವೆ ಸಂಪರ್ಕ ಪಡೆಯಲು 1000 ದಿಂದ 1500 ರೂಪಾಯಿಗಳನ್ನು ಮೊದಲು ಪಾವತಿಸಬೇಕಾಗುತ್ತದೆ ಎನ್ನುತ್ತಿವೆ ವರದಿಗಳು.!!

ಏಕಕಾಲದಲ್ಲಿ ಜಿಯೋ ಡಿಟಿಹೆಚ್!!

ಏಕಕಾಲದಲ್ಲಿ ಜಿಯೋ ಡಿಟಿಹೆಚ್!!

ಉತ್ತರ ಭಾರತ, ದಕ್ಷಿಣ ಭಾರತ, ಪೂರ್ವ ಭಾರತ ಮತ್ತು ಪಶ್ಛಿಮ ಭಾರತ ಎಂದು ಜಿಯೋ ಡಿಟಿಹೆಚ್ ಸೇವೆಯನ್ನು ವಿಂಗಡನೆ ಮಾಡಲಾಗಿದ್ದು, ಏಕಕಾಲದಲ್ಲಿ ಜಿಯೋ ಡಿಟಿಹೆಚ್ ಸೇವೆಯನ್ನು ದೇಶದೆಲ್ಲೇಡೆ ಪರಿಚಯಿಸಲಾಗುತ್ತಿದೆ ಎಂದು ತಿಳಿದುಬಂದಿದೆ.!!

ಬೆಸಿಕ್ ಪ್ಲಾನ್ ಅನ್ನು ಕೇವಲ 99 ರೂ!!

ಬೆಸಿಕ್ ಪ್ಲಾನ್ ಅನ್ನು ಕೇವಲ 99 ರೂ!!

ಸ್ಥಳೀಯ ಭಾಷೆಗಳಿಗೆ ಹೆಚ್ಚು ಮಹತ್ವ ನೀಡಲು ಜಿಯೋ ಮುಂದಾಗಿದೆ. ಇದಲ್ಲದೆ ಕಡಿಮೆ ಬೆಲೆಯಲ್ಲಿ ಡಿಟಿಹೆಚ್ ಸೇವೆಯನ್ನು ಆರಂಭಿಸಲಿದ್ದು, ಬೆಸಿಕ್ ಪ್ಲಾನ್ ಅನ್ನು ಕೇವಲ ರೂ.99ಕ್ಕೆ ನೀಡಲಿದೆ. ಜೊತೆಗೆ ಮೈ ಪ್ಲಾನ್ ಮತ್ತು ಫ್ಯಾಮಿಲಿ ಪ್ಲಾನ್‌ಗಳು ಸಹ ಜಿಯೋ ಡಿಟಿಹೆಚ್ ಸೇವೆಯಲ್ಲಿರಲಿವೆ.!!

ಓದಿರಿ:ಮೊದಲ ಐಫೋನ್ ಮಾಡಿದ ಜಾದೂವನ್ನು ಮತ್ತೆ ಮಾಡಿದ್ದು 'ಐಫೋನ್ 10'!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Jio's Happy New Year offer !. JIO will be free again for 3 months in 2018. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot