Subscribe to Gizbot

26 ರೂಪಾಯಿಗೆ 1 GB ಏರ್‌ಟೆಲ್ 4G ಇಂಟರ್‌ನೆಟ್..!!

Written By:

ಇನ್ನೇನು ಮಾರ್ಚ್ 31 ಕ್ಕೆ ಜಿಯೋ ಉಚಿತ ಆಫರ್ ಮುಗಿಯುತ್ತಿದ್ದು, ಜಿಯೋವನ್ನು ತುಳಿಯಲು ಏರ್‌ಟೆಲ್‌ ಹೊಸ ಹೊಸ ತಂತ್ರಗಳನ್ನು ಹಾಕಿಕೊಳ್ಳುತ್ತಿದೆ. ಇಷ್ಟು ದಿವಸ ಜಿಯೋ ನೀಡಿದ ಏಟಿಗೆ ತಿರುಗೇಟು ನೀಡಲು ಹೊಸ ಏರ್‌ಟೆಲ್ ಗ್ರಾಹಕರಿಗೆ ಕೇವಲ 26 ರೂಪಾಯಿಗೆ 1 GB 4G ಇಂಟರ್‌ನೆಟ್ ನೀಡುತ್ತಿದೆ.!!

ಹೇಗಾದರೂ ಮಾಡಿ ಮಾರುಕಟ್ಟೆಯಿಂದ ಜಿಯೋವನ್ನು ಓಡಿಸಬೇಕು ಎಂದು ಪಣತಟ್ಟಿರುವ ಏರ್‌ಟೆಲ್, ಹೊಸದಾಗಿ 4G ಸ್ಮಾರ್ಟ್‌ಫೋನ್ ಖರೀದಿಸದವರಿಗೆ ಕೇವಲ 26 ರೂಪಾಯಿಗೆ 1 GB 4G ಇಂಟರ್‌ನೆಟ್ ಆಫರ್ ನೀಡಿದೆ. 259 ರೂಪಾಯಿಗಳ ರೀಚಾರ್ಜ್ ಮಾಡಿಸಿದರೆ ಹೊಸ ಏರ್‌ಟೆಲ್ ಗ್ರಾಹಕರು 10GB 4G ಇಂಟರ್‌ನೆಟ್ ಪಡೆಯಬಹುದಾಗಿದೆ.

26 ರೂಪಾಯಿಗೆ 1 GB ಏರ್‌ಟೆಲ್ 4G ಇಂಟರ್‌ನೆಟ್..!!

ನಿಮ್ಮ ಜೀವನದ ಕೆಟ್ಟ ನೆನಪುಗಳನ್ನು ಮರೆಯುವಂತಿದ್ದರೆ? ಹೌದು,ಇದು ಸಾಧ್ಯ!!

259 ರೂಪಾಯಿಗಳನ್ನು ರೀಚಾರ್ಜ್ ಮಾಡಿದರೆ ತಕ್ಷಣವೇ 1GB ಇಂಟರ್‌ನೆಟ್ ನೇರವಾಗಿ ಗ್ರಾಹಕರ ಖಾತೆಗೆ ಸೇರಲಿದ್ದು, ಇನ್ನು ಉಳಿದ 9GB ಡೇಟಾ ಪಡೆಯಲು ನೂತನ ಸ್ಮಾರ್ಟ್‌ಫೋನ್‌ ಗ್ರಾಹಕರು ಮೈಏರ್‌ಟೆಲ್ ಆಪ್‌ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕಿದೆ.

26 ರೂಪಾಯಿಗೆ 1 GB ಏರ್‌ಟೆಲ್ 4G ಇಂಟರ್‌ನೆಟ್..!!

ಮಾರ್ಚ್ 31 ರ ನಂತರ ಜಿಯೋ ಗ್ರಾಹಕರು ಪ್ರತಿ ತಿಂಗಳು 303 ರೂಪಾಯಿಗಳ ರೀಚಾರ್ಜ್‌ ಮಾಡಿಸಬೇಕಿದ್ದು, ಈಗ ಜಿಯೋ ಪಾಲಾಗಿರುವ ಏರ್‌ಟೆಲ್ ಗ್ರಾಹಕರನ್ನು ಸೇರಿದಂತೆ ಹೆಚ್ಚು ಗ್ರಾಹಕರನ್ನು ಸೆಳೆಯಲು ಏರ್‌ಟೆಲ್ ಈ ಆಫರ್ ನೀಡಿದೆ. ಹಾಗಾಗಿ, ಜಿಯೋ ಗ್ರಾಹಕರು ಇದೀಗ ಏರ್‌ಟೆಲ್ ಕಡೆ ವಾಲಬಹುದು.!!

English summary
Bharti Airtel BSE -1.58 % has introduced offers that allow consumers to avail mobile data for as low as Rs 26 per GB. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot