TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
'ಬಿಎಸ್ಎನ್ಎಲ್'ನಿಂದ ಇತಿಹಾಸದಲ್ಲೇ ಯಾರೂ ನೀಡದ ಮೊಟ್ಟ ಮೊದಲ ಭರ್ಜರಿ ಆಫರ್!!
ಜಿಯೋ ಸೇರಿದಂತೆ ಖಾಸಾಗಿ ಟೆಲಿಕಾಂ ಕಂಪೆನಿಗಳ 4G ಆರ್ಭಟಕ್ಕೆ ನಲುಗಿರುವ ಸರ್ಕಾರಿ ನಿಯಮಿತ ಟೆಲಿಕಾಂ ಸಂಸ್ಥೆ 'ಬಿಎಸ್ಎನ್ಎಲ್' ಇದೀಗ ಯಾರೂ ಊಹಿಸಲಾಗದಂತಹ ಭರ್ಜರಿ ಆಫರ್ ಒಂದನ್ನು ಪ್ರಕಟಿಸಿದೆ. ಇತ್ತೀಚಿಗೆ ಸಂಸ್ಥೆಯ ಗ್ರಾಹಕರ ಸಂಖ್ಯೆ ಇಳಿಕೆಯಾಗುತ್ತಿರುವುದರಿಂದ ತನ್ನ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಬಿಎಸ್ಎನ್ಎಲ್ ಭರ್ಜರಿ ಆಫರ್ ನೀಡುವ ಮೂಲಕ ಟೆಲಿಕಾಂನಲ್ಲಿ ಗೇಮ್ ಚೇಂಜರ್ ಆಗಲು ಹೊರಟಿದೆ.
ಹೌದು, ಟೆಲಿಕಾಂಗೆ ಜಿಯೋ ಕಾಲಿಟ್ಟ ಬಳಿಕ ಅನೇಕ ಕಂಪೆನಿಗಳ ಗ್ರಾಹಕರು ಜಿಯೋದತ್ತ ವಾಲಿದ್ದರು. ಇದಾದ ನಂತರ ಬಳಕೆದಾರರನ್ನು ಉಳಿಸಿಕೊಳ್ಳಲು ಮತ್ತು ಹೊಸ ಗ್ರಾಹಕರನ್ನು ಸೆಳೆಯಲು ಜಿಯೋದೊಂದಿಗೆ ಎಲ್ಲಾ ಟೆಲಿಕಾಂ ಕಂಪೆನಿಗಳು ಪೈಪೋಟಿಗೆ ಇಳಿದು ಜಿಯೋ ನೀಡುವ ಆಫರ್‌ಗಳಿಗೆ ಸಮನಾಗಿ ಆಫರ್ ಪ್ರಕಟಿಸಿದ್ದವು. ಆದರೆ, ಇದೀಗ ಬಿಎಸ್ಎನ್ಎಲ್ ಮಾತ್ರ ಜಿಯೋಗೆ ಸೆಡ್ಡು ಹೊಡೆದು ಮೂರು ಪಟ್ಟು ಹೆಚ್ಚು ಡೇಟಾ ಆಫರ್ ನೀಡಿ ಗಮನಸೆಳೆದಿದೆ.
ಪ್ರಸ್ತುತ ಭಾರತದ ಟೆಲಿಕಾಂನಲ್ಲಿ ಗೇಮ್ ಚೇಂಜರ್ ಆಗಿರುವ ಜಿಯೋ ಇಲ್ಲಿಯವರೆಗೂ ಅತ್ಯಂತ ಕಡಿಮೆ ಬೆಲೆಗೆ ಹೆಚ್ಚು ಡೇಟಾ ಪ್ಲಾನ್ ನೀಡುವಲ್ಲಿ ಇಲ್ಲಿಯವರೆಗೂ ಮೊದಲ ಸ್ಥಾನದಲ್ಲೇ ಇತ್ತು. ಆದರೆ, ಈಗ ಇದೀಗ ಬಿಎಸ್‌ಎನ್‌ಎಲ್ ಇತಿಹಾಸದಲ್ಲೇ ಯಾರೂ ನೀಡದಂತಹ ಮೊಟ್ಟ ಮೊದಲ ಆಫರ್ ಅನ್ನು ಪ್ರಕಟಿಸಿದೆ. ಹಾಗಾದರೆ, ಬಿಎಸ್ಎನ್ಎಲ್' ನೀಡಿರುವ ಯಾರೂ ಊಹಿಸಲಾಗದಂತಹ ಆ ಭರ್ಜರಿ ಆಫರ್ ಯಾವುದು ಎಂಬುದನ್ನು ಮುಂದೆ ಓದಿ ತಿಳಿಯಿರಿ.
ಜಿಯೋ vS ಬಿಎಸ್ಎನ್ಎಲ್
ಜಿಯೋ ಎಫೆಕ್ಟ್ ಬಿಎಸ್ಎನ್ಎಲ್ ಗ್ರಾಹಕರ ಮೇಲೂ ಹೆಚ್ಚು ಪ್ರಭಾವ ಬೀರಿತ್ತು. ಹಾಗಾಗಿ, ಬಳಕೆದಾರರನ್ನು ಉಳಿಸಿಕೊಳ್ಳಲು ಜಿಯೋದೊಂದಿಗೆ ಬಿಎಸ್ಎನ್ಲ್ ಪೈಪೋಟಿಗೆ ಇಳಿದಿದೆ. ಅದರಂತೆ ತನ್ನ ಜನಪ್ರಿಯ ಪ್ಲಾನ್ನಲ್ಲಿ ಭಾರೀ ಬದಲಾವಣೆ ಮಾಡುವ ಮೂಲಕ ಜಿಯೋ ಹಾಗೂ ಇತರೆ ಕಂಪೆನಿಗಳಿಗೆ ಸೆಡ್ಡು ಹೊಡೆಯಲು ಸಕಲ ತಯಾರಿಯಲ್ಲಿದೆ ಬಿಎಸ್ಎನ್ಎಲ್.
ಜಿಯೋಗಿಂತ ಮೂರು ಪಟ್ಟು ಡೇಟಾ
ಇದೇ ಮೊದಲ ಬಾರಿಗೆ ಟೆಲಿಕಾಂ ಕಂಪೆನಿಯೊಂದು ಜಿಯೋ ನೀಡುತ್ತಿರುವ ಆಫರ್ ಬೆಲೆಯಲ್ಲೇ ಜಿಯೋಗಿಂತ ಮೂರು ಪಟ್ಟು ಡೇಟಾ ನೀಡಿ ಗಮನಸೆಳೆದಿದೆ. 399 ರೂ.ಗಳಿಗೆ ಜಿಯೋ ಪ್ರತಿದಿನ 1.5GB ಡೇಟಾ ಮತ್ತು ಅನಿಯಮಿತ ಕರೆ ಹಾಗೂ 100 ಎಸ್ಎಂಎಸ್ಗಳನ್ನು ನೀಡುತ್ತಿದ್ದರೆ, ಬಿಎಸ್‌ಎನ್‌ಎಲ್ ಇದಕ್ಕಿಂತ ಮೂರು ಪಟ್ಟು ಹೆಚ್ಚು ಡೇಟಾ ನೀಡಿ ಗಮನಸೆಳೆದಿದೆ.
399 ರೂ.ಗೆ 237GB ಡೇಟಾ
ಬಿಎಸ್ಎನ್ಎಲ್ ಈ ಹಿಂದೆ ಪ್ರಸ್ತುತಪಡಿಸಿದ 399 ರೂ.ನ ಪ್ಲಾನ್ನಲ್ಲಿ ಭಾರೀ ಬದಲಾವಣೆ ತಂದಿದ್ದು, ಈ ಹಿಂದೆ 399 ರೂ.ಯೋಜನೆಯಲ್ಲಿ ಪ್ರತಿದಿನ 1GB ಡೇಟಾ ಮಾತ್ರ ನೀಡುತ್ತಿತ್ತು. ಆದರೆ ಈಗ ತನ್ನ ಡೇಟಾ ಪ್ಲಾನ್ ಬದಲಿಸಿರುವ ಬಿಎಸ್ಎನ್ಎಲ್, ಇನ್ಮುಂದೆ ಪ್ರತಿದಿನ 3.21GB ಡೇಟಾ ಒದಗಿಸಲಿದೆ. ಇದರಿಂದ 399 ರೂ.ಗಳಿಗೆ ಒಟ್ಟು 237.54GB ಡೇಟಾ ಗ್ರಾಹಕರಿಗೆ ಲಭ್ಯವಿದೆ.
ಜನವರಿ 31ರ ವರೆಗೆ ಆಫರ್!
ಬಿಎಸ್ಎನ್ಎಲ್ನ ಬದಲಾದ 399 ರೂ.ಪ್ಲಾನ್ ಇದೇ ಜನವರಿ 31ರ ವರೆಗೆ ಮಾತ್ರ ಲಭ್ಯವಿದೆ. ಈ ಆಫರ್‌ನಲ್ಲಿ 399 ರೂ.ಗಳಿಗೆ 74 ದಿನಗಳ ವ್ಯಾಲಿಡಿಟಿಯಲ್ಲಿ ಪ್ರತಿದಿನ 3.21GB ಡೇಟಾ, ಉಚಿತ ಕರೆ, ಎಸ್‌ಎಂಎಸ್ ಸೇರಿದಂತೆ ಗ್ರಾಹಕರಿಗೆ ಒಟ್ಟು 237.54 ಜಿಬಿ ಡೇಟಾ ನೀಡುತ್ತಿದೆ. ಇದು ಇತಿಹಾಸದಲ್ಲೇ ಯಾರೂ ನೀಡದ ಅತ್ಯುತ್ತಮ ಡೇಟಾ ರೀಚಾರ್ಜ್ ಪ್ಲಾನ್ ಕೂಡ ಆಗಿದೆ.
4G ತರುವ ಮೊದಲೇ ಯುದ್ದ ಶುರು!!
2019ರ ಆರಂಭದಲ್ಲೇ ಮೊದಲ ಹಂತದಲ್ಲಿ ಕರ್ನಾಟಕ, ಗುಜರಾತ್, ಮಧ್ಯಪ್ರದೇಶ, ಛತ್ತೀಸ್ಗಢ, ಗೋವಾ, ತಮಿಳುನಾಡು, ಆಂಧ್ರಪ್ರದೇಶ, ಕೇರಳ ಮತ್ತು ಮಹಾರಾಷ್ಟ್ರದಲ್ಲಿ 4G ಸೇವೆಯನ್ನು ಪ್ರಾರಂಭಿಸುವುದಾಗಿ ಬಿಎಸ್ಎನ್ಎಲ್ ತಿಳಿಸಿದೆ. ಹಾಗಾಗಿ. 4G ಸೇವೆ ನೀಡುವ ಮೊದಲೇ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಇಂತಹದೊಂದು ಭರ್ಜರಿ ಆಫರ್ ನೀಡುತ್ತಿದೆ ಎಂದು ಹೇಳಲಾಗಿದೆ.