Just In
Don't Miss
- News
ಹೈದರಾಬಾದ್ ಘಟನೆ ನಂತರ ಮಹಿಳೆಯರ ಸುರಕ್ಷತೆಗೆ ನಮ್ಮ ಮೆಟ್ರೋ ಕ್ರಮ
- Automobiles
ಟ್ರೈಬರ್ ಕಾರಿಗೆ ಭರ್ಜರಿ ಬೇಡಿಕೆ- ಕಾರು ಮಾರಾಟದಲ್ಲಿ 5ನೇ ಸ್ಥಾನಕ್ಕೇರಿದ ರೆನಾಲ್ಟ್
- Movies
ಅತ್ಯಾಚಾರಿಗಳ ಎನ್ ಕೌಂಟರ್: ಉಪ್ರೇಂದ ಟ್ವೀಟ್ ವಿರುದ್ಧ ನೆಟ್ಟಿಗರ ಆಕ್ರೋಶ
- Sports
ಐಎಸ್ಎಲ್: ನಾರ್ತ್ ಈಸ್ಟ್-ಎಟಿಕೆಗೆ ಡ್ರಾವನ್ನು ಜಯವಾಗಿಸಲು ಸೂಕ್ತ ಕಾಲ
- Finance
ಸರ್ಕಾರ ನೆರವು ಕೊಡದಿದ್ರೆ ವೊಡಾಫೋನ್-ಐಡಿಯಾ ಮುಚ್ಚಬೇಕು: ಕೆ.ಎಂ. ಬಿರ್ಲಾ
- Lifestyle
ಶನಿವಾರದ ದಿನ ಭವಿಷ್ಯ 07-12-2019
- Education
JEE Main Admit Card 2020: ಜೆಇಇ ಜನವರಿ ಪ್ರಮುಖ ಪರೀಕ್ಷೆಯ ಪ್ರವೇಶ ಪತ್ರ ಪ್ರಕಟ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಜಿಯೋ ಸೆಟ್‌ಟಾಪ್‌ಬಾಕ್ಸ್ ಖರೀದಿಸಿರೆ ಇವೆಲ್ಲಾ ಫ್ರೀ..! ಫ್ರೀ..! ಫ್ರೀ..!
ರಿಲಾಯನ್ಸ್ ಜಿಯೋ ಫೈಬರ್ ಅಧಿಕೃತವಾಗಿ ದೇಶದಲ್ಲಿ ವಾಣಿಜ್ಯ ಸೇವೆಯನ್ನು ಆರಂಭಿಸಿದೆ. ಈಗಾಗಲೇ ಕಂಪನಿ ಬ್ರಾಂಡ್‌ಬ್ಯಾಂಡ್ ಯೋಜನೆಗಳ ಜೊತೆಗೆ ಅನೇಕ ಉಚಿತ ಪ್ರಯೋಜನಗಳನ್ನು ನೀಡಿದೆ. ಜಿಯೋ ಫೈಬರ್ ಸ್ವಾಗತ ಕೊಡುಗೆಯ ಭಾಗವಾಗಿ ಜಿಯೋ 4ಕೆ ಸೆಟ್-ಟಾಪ್ ಬಾಕ್ಸ್ ಸೇರಿ ಹಲವು ಪ್ರಯೋಜನಗಳನ್ನು ಗ್ರಾಹಕರು ಪಡೆಯಲಿದ್ದಾರೆ.

ಜಿಯೋ 4ಕೆ ಸೆಟ್-ಟಾಪ್ ಬಾಕ್ಸ್ ಒಟಿಟಿ ಆಪ್‌ಗಳು ಮತ್ತು ಕೇಬಲ್ ಟಿವಿ ಎರಡನ್ನೂ ಬೆಂಬಲಿಸುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ. ಒಟಿಟಿ ಆಪ್‌ಗಳ ಹೊರತಾಗಿ ಸೆಟ್-ಟಾಪ್ ಬಾಕ್ಸ್ ಜಿಯೋ ಸಾವನ್ ಮತ್ತು ಜಿಯೋ ಸಿನೆಮಾದಂತಹ ಆಪ್‌ಗಳನ್ನು ಬೆಂಬಲಿಸುತ್ತದೆ ಎಂದು ಕಂಪನಿ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ. ಸೆಟ್-ಟಾಪ್ ಬಾಕ್ಸ್ ಜೊತೆ ಜಿಯೋ ಏನು ನೀಡುತ್ತದೆ ಎಂಬುದರ ಬಗ್ಗೆ ನಿಮಗೆ ಸಂದೇಹವಿದ್ದರೆ, ನಿಮ್ಮ ಅನುಮಾನಗಳಿಹೆ ಇಲ್ಲಿದೆ ಉತ್ತರ.

ಒಟಿಟಿ ಪ್ಲಾಟ್‌ಫಾರ್ಮ್
ಇತರ ಸೆಟ್-ಟಾಪ್ ಬಾಕ್ಸ್‌ಗಳಂತೆ ಜಿಯೋ 4ಕೆ ಎಸ್‌ಟಿಬಿ ಕೂಡ ಕೇಬಲ್ ಟಿವಿ ಮತ್ತು ಒಟಿಟಿ ಕಂಟೆಂಟ್ ನೀಡಲು ಸಮರ್ಥವಾಗಿದೆ. ಸೆಟ್-ಟಾಪ್ ಬಾಕ್ಸ್ ಅನ್ನು ಟಿವಿ ಪ್ಲಸ್ ಅಪ್ಲಿಕೇಶನ್‌ನೊಂದಿಗೆ ಕೂಡಿಸಲಾಗಿದ್ದು, ಜಿಯೋ ಫೈಬರ್ ಬ್ರಾಡ್‌ಬ್ಯಾಂಡ್ ಸಂಪರ್ಕದ ಮೂಲಕ ಲೈವ್ ಟಿವಿ ಚಾನೆಲ್‌ಗಳನ್ನು ವೀಕ್ಷಿಸಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ.

ಕೇಬಲ್ ಟಿವಿ
ಆರಂಭದಲ್ಲಿ ಹೇಳಿದಂತೆ, ಕಂಪನಿಯು ದೇಶಾದ್ಯಂತ ಸ್ಥಳೀಯ ಕೇಬಲ್ ಆಪರೇಟರ್‌ಗಳನ್ನು ಜಿಯೋ ಸೆಟ್-ಟಾಪ್ ಬಾಕ್ಸ್‌ನೊಂದಿಗೆ ಜೋಡಿಸಲು ಕೆಲಸ ಮಾಡುತ್ತಿದೆ. 4ಕೆ ಸೆಟ್-ಟಾಪ್ ಬಾಕ್ಸ್ ಮೂಲಕ ಕೇಬಲ್ ಟಿವಿ ಸೇವೆಯನ್ನು ಒದಗಿಸಲು ಡೆನ್ ನೆಟ್‌ವರ್ಕ್ಸ್, ಹ್ಯಾಥ್‌ವೇ ಸೇರಿ ಹಲವು ಎಲ್‌ಸಿಒಗಳಲ್ಲಿ ಕಂಪನಿ ಪಾಲುದಾರಿಕೆಯನ್ನು ಹೊಂದಿದೆ. ಈ ಕಲ್ಪನೆ ಅನುಷ್ಠಾನವಾಗುವವರೆಗೆ, ನಾವು ಪ್ರತ್ಯೇಕ ಕೇಬಲ್ ಟಿವಿ ಸೇವೆ ಬಳಸಬೇಕಾಗುತ್ತದೆ.

ಒಟಿಟಿ ಆಪ್‌ಗಳು
ರಿಲಯನ್ಸ್ ಜಿಯೋ 4ಕೆ ಎಸ್‌ಟಿಬಿ ಸ್ಮಾರ್ಟ್ ಸೆಟ್-ಟಾಪ್ ಬಾಕ್ಸ್ ಆಗಿರುವುದರಿಂದ ಟಿವಿ ಪ್ಲಸ್, ಜಿಯೋ ಸಾವನ್, ಜಿಯೋ ಸಿನೆಮಾ ಮತ್ತು ಇತರ ಒಟಿಟಿ ಆಪ್‌ಗಳು ಪ್ರೀಲೊಡೆಡ್ ಆಗಿರಲಿವೆ. ಇಷ್ಟೇ ಅಲ್ಲದೆ, Zee5, ಹಾಟ್‌ಸ್ಟಾರ್, ಸನ್NXT ಮತ್ತು ಹೆಚ್ಚಿನ ಒಟಿಟಿ ಆಪ್‌ಗಳನ್ನು ಒದಗಿಸಲು ಜಿಯೋ ಸಿದ್ಧವಾಗಿದೆ. ಗಮನಾರ್ಹವಾಗಿ, ಚಂದಾದಾರಿಕೆಯ ಯೋಜನೆಯ ಮೇಲೆ ಒಟಿಟಿ ವಿಷಯವು ಬದಲಾಗುತ್ತದೆ.

ವಿವಿಧ ಯೋಜನೆಗಳು
ನಿರ್ದಿಷ್ಟವಾಗಿ ಹೇಳುವುದಾದರೆ, ಜಿಯೋ ಫೈಬರ್ ಬ್ರೋಂಜ್ ಪ್ಲಾನ್ 699 ರೂ. ಆಗಿದ್ದು, ಮೂರು ತಿಂಗಳ ಅವಧಿಗೆ ಜಿಯೋ ಸಾವನ್ ಮತ್ತು ಜಿಯೋ ಸಿನೆಮಾ ಚಂದಾದಾರಿಕೆಯನ್ನು ನೀಡುತ್ತದೆ. ಮತ್ತೊಂದೆಡೆ, ಜಿಯೋ ಫೈಬರ್ ಸಿಲ್ವರ್ ಪ್ಲಾನ್ ಬೆಲೆ 849 ರೂ. ಆಗಿದ್ದು, ಒಟಿಟಿ ಅಪ್ಲಿಕೇಶನ್‌ಗಳ ಜೊತೆಗೆ ಮೂರು ತಿಂಗಳ ಅವಧಿಗೆ ಜಿಯೋ ಸಾವನ್ ಮತ್ತು ಜಿಯೋ ಸಿನೆಮಾ ಸೇವೆ ಸಿಗುತ್ತದೆ. ಇನ್ನು, ಇತರೆ ಎಲ್ಲಾ ಯೋಜನೆಗಳನ್ನು ಗಮನಿಸಿದರೆ ಒಂದು ವರ್ಷದ ಚಂದಾದಾರಿಕೆ ಜೊತೆ ಎಲ್ಲಾ ಒಟಿಟಿ ಅಪ್ಲಿಕೇಶನ್‌ಗಳನ್ನು ಉಚಿತವಾಗಿ ನೀಡುತ್ತವೆ.

ಧ್ವನಿ ನಿಯಂತ್ರಣ ರಿಮೋಟ್
ಜಿಯೋ ಸೆಟ್-ಟಾಪ್ ಬಾಕ್ಸ್ ಸ್ಮಾರ್ಟ್ ರಿಮೋಟ್‌ನೊಂದಿಗೆ ಸಂಯೋಜಿಸಲ್ಪಟ್ಟಿದೆ, ಇದು ಧ್ವನಿ ನಿಯಂತ್ರಣ ಬೆಂಬಲವನ್ನು ಹೊಂದಿದೆ. ಲೈವ್ ಟಿವಿ ಬಟನ್ ಅನ್ನು ಹೊಂದಿದ್ದು, ಬಳಕೆದಾರರು ಕೇಬಲ್ ಟಿವಿ ಸೇವೆ ಅಥವಾ ಲೈವ್ ಟಿವಿ ಅಪ್ಲಿಕೇಶನ್ ಅನ್ನು ತ್ವರಿತವಾಗಿ ಪ್ರಾರಂಭಿಸಲು ರಿಮೋಟ್ ಅನುವು ಮಾಡಿಕೊಡುತ್ತದೆ.

ಇತರ ಫೀಚರ್‌ಗಳು
ಜಿಯೋ ಸೆಟ್-ಟಾಪ್ ಬಾಕ್ಸ್ ಪ್ಲೇ, ರಿವೈಂಡ್ ಮತ್ತು ವಿರಾಮ ಮುಂತಾದ ಫೀಚರ್‌ಗಳೊಂದಿಗೆ ಬರುತ್ತದೆ. ಇಷ್ಟೆಲ್ಲಾ ಫೀಚರ್‌ಗಳು ಇದ್ದರೂ, ವೆಬ್‌ನಿಂದ ವಿಡಿಯೋ ಸ್ಟ್ರೀಮ್ ಮಾಡುವ ಟಿವಿ ಪ್ಲಸ್ ಆಪ್‌ನೊಂದಿಗೆ ಮಾತ್ರ ಕಾರ್ಯನಿರ್ವಹಿಸುತ್ತದೆ ಎಂಬ ಊಹಾಪೋಹಗಳಿವೆ.
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090